ರಾಜಸ್ಥಾನ: ಕಳ್ಳತನಕ್ಕೆ ಯತ್ನಿಸಿದ ಕಳ್ಳನೋರ್ವ ಮನೆಯ ಅಡುಗೆಕೋಣೆಯ ಎಕ್ಸಾಸ್ಟ್ ಫ್ಯಾನ್ ಕಿಂಡಿಯಲ್ಲಿ ಸಿಲುಕಿಕೊಂಡಿರುವ ವಿಚಿತ್ರ ಘಟನೆಯೊಂದು ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ.
ಇಲ್ಲಿನ ನಿವಾಸಿ ಸುಭಾಷ್ ಕುಮಾರ್ ರಾವತ್ ಅವರ ಮನೆಯಲ್ಲೇ ಕಳ್ಳತನ ಯತ್ನ ನಡೆದಿದ್ದು ಸುಭಾಷ್ ಕುಮಾರ್ ದಂಪತಿ ಜನವರಿ 3 ರಂದು ಪ್ರವಾಸಕ್ಕೆ ತೆರಳಿದ್ದರು. ಇದನ್ನು ಬಂಡವಾಳ ಮಾಡಿಕೊಂಡ ಕಳ್ಳರು ಮನೆಯಲ್ಲಿ ಯಾರೂ ಇಲ್ಲದೇ ಇರುವುದನ್ನು ಗಮನಿಸಿ ಕಳ್ಳತನಕ್ಕೆ ಹೊಂಚು ಹಾಕಿದ್ದಾರೆ ಅದರಂತೆ ಇಬ್ಬರು ಯುವಕರು ಕಳ್ಳತನಕ್ಕೆ ಬಂದಿದ್ದು ಅದರಲ್ಲಿ ಓರ್ವ ಅಡುಗೆ ಕೋಣೆಯ ಎಕ್ಸಾಸ್ಟ್ ಫ್ಯಾನ್ ಕಿಂಡಿಯ ಮೂಲಕ ಒಳ ನುಸುಳಲು ಯತ್ನಿಸಿದ್ದಾನೆ ಆದರೆ ದುರದೃಷ್ಟವಶಾತ್ ಕಿಟಕಿಯಲ್ಲಿ ಒಳಗೆ ಹೋಗಲಾಗದೇ ಹೊರ ಬರಲಾಗದ ಸ್ಥಿತಿಯಲ್ಲಿ ಕಿಂಡಿಯಲ್ಲಿ ಸಿಲುಕಿಕೊಂಡಿದ್ದಾನೆ.
ಇತ್ತ ಭಾನುವಾರ (ಡಿ.4) ರಂದು ದಂಪತಿ ಮನೆಗೆ ಬಂದಿದ್ದಾರೆ ಈ ವೇಳೆ ಅವರು ಬಂದ ದ್ವಿಚಕ್ರ ವಾಹನದ ಬೆಳಕು ನೇರವಾಗಿ ಅಡುಗೆ ಕೊನೆಯ ಕಿಟಕಿಗೆ ಬಿದ್ದಿದೆ. ಈ ವೇಳೆ ಕಿಟಕಿಯಲ್ಲಿ ವ್ಯಕ್ತಿಯೊಬ್ಬನ ಕಾಲುಗಳು ನೇತಾಡುತ್ತಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಬಳಿಕ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ ಬಳಿಕ ಬಂದ ಪೊಲೀಸರು ಸ್ಥಳೀಯರ ಜೊತೆ ಸೇರಿ ಕೆಲ ಗಂಟೆಗಳ ಕಾಲ ಹರಸಾಹಸ ಪಟ್ಟು ಕಳ್ಳನನ್ನು ಹೊರತೆಗೆದಿದ್ದಾರೆ.
ಬಳಿಕ ಪೊಲೀಸರು ಯುವಕನನ್ನು ವಿಚಾರಣೆ ನಡೆಸಿದ ವೇಳೆ ತಾವು ಕಳ್ಳತನಕ್ಕೆ ಬಂದಿದ್ದು ತನ್ನ ಜೊತೆ ಇನ್ನೋರ್ವ ಬಂದಿದ್ದು ಮನೆಯವರನ್ನು ಕಂಡು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಹೇಳಿಕೊಂಡಿದ್ದಾನೆ ಅಲ್ಲದೆ ಯಾರಿಗೂ ಅನುಮಾನ ಬರಬಾರದೆಂದು ಯುವಕರು ತಾವು ಬಂದ ವಾಹನಕ್ಕೆ ಪೊಲೀಸ್ ಸ್ಟಿಕರ್ ಅಂಟಿಸಿದ್ದರು ಎಂದು ಹೇಳಿಕೊಂಡಿದ್ದಾನೆ.
A theft did was foiled after the thief got stuck in the exhaust vent of the house he was trying to enter in Kota district of Rajasthan. Later, owner alerted cops who arrived and rescued him. pic.twitter.com/SQnpIrXP3s
— Piyush Rai (@Benarasiyaa) January 6, 2026



