Flash News

ಉಳ್ಳಾಲ: ವಿದ್ಯಾರ್ಥಿ ನಾಪತ್ತೆ

ಮಂಗಳೂರು: ಪಿ.ಎ ಕಾಲೇಜಿನ ವಿದ್ಯಾರ್ಥಿ ಮೊಹಮ್ಮದ್ ಶಾಮೀಲ್ ದಿನಾಂಕ: 17-04-2018ರಂದು ನಾಪತ್ತೆಯಾಗಿದ್ದಾನೆ.

ದಿನಾಂಕ 18–04-2018 ರಂದು ಶ್ರೀ ಅಬ್ದುಲ್ ಶರೀಪ್ (58) ವರ್ಷ, ವಾಸ: ಪ್ರಾಂಶುಪಾಲರು ಪಿ.ಎ ಕಾಲೇಜು ನಡುಪದವು ಕೈರಂಗಳ ಗ್ರಾಮ ಉಳ್ಳಾಲ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ ರವರು ನೀಡಿದ ದೂರಿನ ಸಾರಂಶವೇನೆಂದರೆ ಪಿರ್ಯಾದಿದಾರರು ಕಾರ್ಯನಿರ್ವಹಿಸುತ್ತಿರುವ ಪಿ,ಎ ಕಾಲೇಜಿನ ವಿದ್ಯಾರ್ಥಿಯಾದ ಮೊಹಮ್ಮದ್ ಶಾಮೀಲ್ ಪ್ರಾಯ 21 ವರ್ಷ ತಂದೆ: ಸಲೀಂ ಕೆ,ಎಮ್ ವಾಸ:16/37 ಬೈತುಲ್ ಆಯಿಶಾ ಪಚ್ಚಕಾಡ್ ಕಾಸರಗೋಡು ಪೊಸ್ಟ , ಎಂಬವರು ಸುಮಾರು 07 ವರ್ಷಗಳ ಹಿಂದೆ ಪಿ.ಎ ಕಾಲೇಜಿನ ವಿದ್ಯಾರ್ಥಿಯಾಗಿದ್ದು ದಿನಾಂಕ: 17-04-2018 ರಂದು ಸಮಯ: 11:34 ಗಂಟೆಗೆ ಕಾಲೇಜಿನ ಪಾರ್ಕಿಂಗ್ ಸ್ಥಳಕ್ಕೆ ಬಂದು ಕಾಲೇಜಿನ ಒಳಗೆ ಬರದೇ ಹಾಗೂ ಮನೆಗೂ ಹೋಗದೇ ಕಾಣೆಯಾಗಿದ್ದು. ಈ ವರೆಗೂ ಅವರ ಇರುವಿಕೆಯ ಬಗ್ಗೆ ತಿಳಿಯದೇ ಇದ್ದುದರಿಂದ ಅವರನ್ನು ಪತ್ತೆ ಮಾಡಿಕೊಡಬೇಕು ಎಂಬುದಾಗಿ ನೀಡಿದ ಲಿಖಿತ ಪಿರ್ಯಾದಿಯ ಸಾರಂಶವಾಗಿದ್ದು, ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣಾ ಮೊ.ನಂ: 83/2018, ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

ಕಾಣೆಯಾದವರ ಚಹರೆಯ ವಿವರ

  1. ಹೆಸರು ಮೊಹಮ್ಮದ್‌ ಶಾಮೀಲ್ (21)
  2. ತಂದೆ ಸಲೀಂ ಕೆ.ಎಮ್
  3. ಪ್ರಾಯ 21 ವರ್ಷ
  4. ಎತ್ತರ 168 CM
  5. ಮೈಬಣ್ಣ ಗೋಧಿ ಮೈ ಬಣ್ಣ
  6. ಚಹರೆ ಸಾದರಣ ಶರೀರ, ಕೋಲು ಮುಖ
  7. ಧರಿಸಿದ್ದ ಬಟ್ಟೆ ಕಪ್ಪು ಕುರುಚಲು ಗಡ್ಡ ಮತ್ತು ಮೀಸೆ ಹಾಗೂ ಉದ್ದ ತಲೆ ಕೂದಲು
  8. ತಿಳಿದಿರುವ ಭಾಷೆ ಮಾಲಯಾಳಂ, ಇಂಗ್ಲೀಷ್, ಹಿಂದಿ ಕಾಣೆಯಾದ ಮೊಹಮ್ಮದ್ ಶಾಮೀಲ್ ಪ್ರಾಯ: 21 ವರ್ಷ, ಎಂಬವರು ಪತ್ತೆಯಾದಲ್ಲಿ ಮಾನ್ಯ ಪೊಲೀಸ್ ಆಯುಕ್ತರ ಕಛೇರಿಯ ಮಂಗಳೂರು ನಗರ ನಿಯಂತ್ರಣ ಕೊಠಡಿಗೆ ದೂರವಾಣಿ ಸಂಖ್ಯೆ 0824-2220800 ಅಥವಾ ಕೊಣಾಜೆ ಪೊಲೀಸ್ ಠಾಣೆಯ 0824-2220536, 9091873198 ,9535247535 ನೇ ಸಂಖ್ಯೆಗೆ ಮಾಹಿತಿ ನೀಡಬೇಕಾಗಿ ಕೋರಿಕೆ.