Flash News

ಜೋಡಿಗಳಿಬ್ಬರ ದೈಹಿಕ ಸಂಪರ್ಕದ ವಿಡಿಯೋ ಸೋರಿಕೆ: ಸ್ನೇಹಿತನ ಮೇಲೆ ದೂರಿದ ಜೋಡಿ

ಸೋಶಿಯಲ್​​ ಮೀಡಿಯಾದ ಸೋಗಿನಲ್ಲಿ, ಜೋಡಿಗಳಿಬ್ಬರ ದೈಹಿಕ ಸಂಪರ್ಕದ ವಿಡಿಯೋ ಇನ್ಸ್ಟಾಗ್ರಾಮ್​​ ನಲ್ಲಿ ಸೋರಿಕೆಯಾಗಿದೆ. ಇದೀಗ ಈ ಜೋಡಿಗಳು ಪೇಚಿಗೆ ಸಿಲುಕಿಕೊಂಡಿದ್ದಾರೆ.

ಸೋಫಿಕ್ ಎಸ್‌ಕೆ ಮತ್ತು ಡಸ್ತು ಸೋನಾಲಿ ಎಂಬ ಇನ್ಸ್ಟಾಗ್ರಾಮ್​​​ ಕ್ರಿಯೆಟರ್​ ಇದೀಗ ವಿವಾದಕ್ಕೆ ಸಿಲುಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಈ ವಿಡಿಯೋವನ್ನು ಅವರೇ ಹಂಚಿಕೊಂಡು, ಸ್ನೇಹಿತನ ಮೇಲೆ ದೂರಿದ್ದಾರೆ ಎಂದು ಹೇಳಲಾಗಿದೆ. ಇನ್ಸ್ಟಾಗ್ರಾಮ್​​​ ಕಂಟೆಂಟ್ ಕ್ರಿಯೆಟರ್​ಗಳಾಗಿರುವ ಬಂಗಾಳಿಯ ಸೋಫಿಕ್ ಎಸ್‌ಕೆ ಮತ್ತು ದುಸ್ತು ಸೋನಾಲಿ ಸುಮಾರು ಫಾಲೋವರ್ಸ್​​ಗಳನ್ನು ಹೊಂದಿದ್ದಾರೆ. ಇದರಲ್ಲಿ ಸೋಫಿಕ್ ಎಸ್‌ಕೆ 5 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ದುಸ್ತು ಸೋನಾಲಿ ಜತೆ ಸೇರಿ ಹಲವು ವೈರಲ್​​ ಕಂಟೆಂಟ್​​ಗಳನ್ನು ಮಾಡಿದ್ದಾರೆ. ಸಾಮಾಜಿಕ ಜಾಲತಾಣದ ಬೇರೆ ಬೇರೆ ವೇದಿಕೆಯಲ್ಲೂ ಇವರು ಕೆಲವೊಂದು ಟ್ರೆಂಡ್​​​​ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.

ದುಸ್ತು ಸೋನಾಲಿ ಕೂಡ ಇನ್ಸ್ಟಾಗ್ರಾಮ್​​ನಲ್ಲಿ 312,000 ಅನುಯಾಯಿಗಳನ್ನು ಹೊಂದಿದ್ದು, ಇಲ್ಲಿಯವರೆಗೆ ಇನ್ಸ್ಟಾದಲ್ಲಿ 130 ಪೋಸ್ಟ್​​​ಗಳನ್ನು ಹಂಚಿಕೊಂಡಿದ್ದಾರೆ. ದುಸ್ತು ಸೋನಾಲಿ ಹಂಚಿಕೊಳ್ಳುವ ಎಲ್ಲ ವಿಡಿಯೋದಲ್ಲೂ ಸೋಫಿಕ್ ಎಸ್‌ಕೆ ಕಾಣಿಸಿಕೊಳ್ಳುತ್ತಾರೆ. ಇನ್ನು ಸೋಫಿಕ್ ಎಸ್‌ಕೆ ಮತ್ತು ದುಸ್ತು ಸೋನಾಲಿ ಅವರ ಖಾಸಗಿ ವಿಡಿಯೋವೊಂದನ್ನು ಉದ್ದೇಶಪೂರಕವಾಗಿ ಅವರೇ ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇದೀಗ ಈ ವಿಡಿಯೋ ಎಲ್ಲ ಕಡೆ ವೈರಲ್​​ ಆದ್ಮೇಲೆ, ತಮ್ಮ ಸ್ನೇಹಿತನ ಮೇಲೆ ದೂರಿದ್ದಾರೆ.

ಸೋಫಿಕ್ ಎಸ್‌ಕೆ ಮತ್ತು ದುಸ್ತು ಸೋನಾಲಿ ತಮ್ಮ ಖಾಸಗಿ ವಿಡಿಯೋವನ್ನು ವೈರಲ್​​ ಮಾಡಿದ ಸ್ನೇಹಿತನ ಮೇಲೆ ಸೈಬರ್ ಅಪರಾಧ ಘಟಕ ಮತ್ತು ಇತರ ಅಧಿಕಾರಿಗಳಿಗೆ ದೂರು ನೀಡಿದ್ದೇವೆ ಎಂದು ಹೇಳಿದ್ದಾರೆ. ಆತನ ಸಹೋದರಿ ಮತ್ತು ಆಕೆಯ ಪತಿ ಸೇರಿದಂತೆ ಆತನ ಕುಟುಂಬದ ವಿರುದ್ಧ ಪ್ರಕರಣಗಳನ್ನು ದಾಖಲಿಸುವುದಾಗಿಯೂ ಅವರು ಹೇಳಿದ್ದಾರೆ. ಇದಲ್ಲದೆ, ಆ ವೀಡಿಯೊ ತನ್ನ ಜೀವನವನ್ನು ಹಾಳುಮಾಡಿದೆ. ಹೊರಗಡೆ ಮುಖ ತೋರಿಸಲಾಗುತ್ತಿಲ್ಲ ಎಂದು ಹೇಳಿದ್ದಾರೆ.

ಸೋಶಿಯಲ್​​ ಮೀಡಿಯಾದಲ್ಲಿ ಸೋಫಿಕ್ ಎಸ್‌ಕೆ ಹೀಗೆ ಹೇಳಿದ್ದಾರೆ. “ಈ ವಿಡಿಯೋ ನನ್ನ ಬಳಿಯೂ ಇರಲಿಲ್ಲ. ನನ್ನ ಗೆಳತಿ ದುಸ್ತು ಸೋನಾಲಿ ಬಳಿ ಇತ್ತು. ನಮ್ಮ ಫೋನ್​​​ನ ಪಾಸ್‌ವರ್ಡ್‌ಗಳನ್ನು ತಿಳಿದಿದ್ದ ಸ್ನೇಹಿತರೊಬ್ಬರು ಇದನ್ನು ಮಾಡಿದ್ದಾರೆ. ಅವರು ನಂಬಿಕೆ ದ್ರೋಹ ಮಾಡಿದ್ದಾರೆ. ಫೋನ್​​ನಿಂದ ವಿಡಿಯೋ ತೆಗೆದು ನಮ್ಮನ್ನು ಬ್ಲ್ಯಾಕ್‌ಮೇಲ್ ಮಾಡಲು ಬಳಸಿದ್ದಾರೆ. ನಮ್ಮ ಮೇಲಿನ ಕೋಪಕ್ಕೆ ಅವರು ಹೀಗೆ ಮಾಡಿದ್ದಾರೆ” ಎಂದು ಹೇಳಿದ್ದಾರೆ.