ಬ್ರೆಜಿಲ್: ಆಧುನಿಕ ನಾಗರಿಕತೆಯ ಯಾವುದೇ ಪರಿಚಯವಿಲ್ಲದೆ, ದಟ್ಟ ಅಮೆಜಾನ್ ಮಳೆಕಾಡಿನ ಮಧ್ಯೆ ಬದುಕುತ್ತಿರುವ ರಹಸ್ಯ ಬುಡಕಟ್ಟು ಜನಾಂಗವೊಂದರ ಇಲ್ಲಿಯವರೆಗೆ ಯಾರೂ ಕಾಣದ ಅತ್ಯಂತ ಸ್ಪಷ್ಟವಾದ ವಿಡಿಯೋ ಈಗ ಬಿಡುಗಡೆಯಾಗಿವೆ.
ಖ್ಯಾತ ಪರಿಸರ ಸಂರಕ್ಷಣಾವಾದಿ ಮತ್ತು ಲೇಖಕ ಪಾಲ್ ರೊಸೋಲಿ ಅವರು ಈ ದೃಶ್ಯಗಳನ್ನು ಸಂಶೋಧಕ ಲೆಕ್ಸ್ ಫ್ರಿಡ್‌ಮನ್ ಅವರ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದು, ಇದು ಜಗತ್ತಿನಲ್ಲೇ ಮೊದಲ ಬಾರಿಗೆ ಸೆರೆಯಾದ ಅತ್ಯಂತ ವಿಶಿಷ್ಟ ದೃಶ್ಯ ಎಂದು ಬಣ್ಣಿಸಿದ್ದಾರೆ.
ಸುಮಾರು ಎರಡು ದಶಕಗಳಿಂದ ಅಮೆಜಾನ್ ಕಾಡುಗಳಲ್ಲಿ ಕೆಲಸ ಮಾಡುತ್ತಿರುವ ರೊಸೋಲಿ, ಈ ವಿಡಿಯೋ ತನ್ನ ಜೀವನದ ಅತ್ಯಂತ ಪ್ರಭಾವಶಾಲಿ ಅನುಭವಗಳಲ್ಲಿ ಒಂದು ಎಂದು ಹೇಳಿಕೊಂಡಿದ್ದಾರೆ. ಈ ಹಿಂದೆ ಇಂತಹ ಬುಡಕಟ್ಟು ಜನರ ವಿಡಿಯೋಗಳು ಲಭ್ಯವಿದ್ದರೂ, ಅವು ನೂರಾರು ಮೀಟರ್ ದೂರದಿಂದ ಸೆರೆಹಿಡಿದ ಅಸ್ಪಷ್ಟ ಚಿತ್ರಗಳಾಗಿದ್ದವು. ಆದರೆ ಈ ಹೊಸ ವಿಡಿಯೋದಲ್ಲಿ ಬುಡಕಟ್ಟು ಜನರ ಮುಖಭಾವ ಮತ್ತು ಅವರ ನಡವಳಿಕೆಗಳು ಅತ್ಯಂತ ಸ್ಪಷ್ಟವಾಗಿ ಗೋಚರಿಸುತ್ತಿವೆ.
ವಿಡಿಯೋ ಆರಂಭದಲ್ಲಿ ಬುಡಕಟ್ಟು ಜನಾಂಗದ ಪುರುಷರು ನದಿಯ ದಡದಲ್ಲಿ ಇರುವುದನ್ನು ಕಾಣಬಹುದು. ಕೈಯಲ್ಲಿ ಬಿಲ್ಲು-ಬಾಣಗಳನ್ನು ಹಿಡಿದು ಅತ್ಯಂತ ಜಾಗರೂಕತೆಯಿಂದ ಹೆಜ್ಜೆ ಹಾಕುವ ಅವರು, ಎದುರಿಗಿರುವ ಅಪರಿಚಿತರಿಂದ ತಮಗೆ ಅಪಾಯವಿದೆಯೇ ಎಂದು ಪರೀಕ್ಷಿಸುತ್ತಾರೆ.
ಆದರೆ, ಸಂಶೋಧಕರ ತಂಡವು ಆಹಾರವಿದ್ದ ದೋಣಿಯನ್ನು ಅವರತ್ತ ಕಳುಹಿಸಿದಾಗ, ಬುಡಕಟ್ಟು ಜನರು ತಮ್ಮ ಆಯುಧಗಳನ್ನು ಕೆಳಗಿಟ್ಟು ಆಹಾರವನ್ನು ಸ್ವೀಕರಿಸಿದ್ದಾರೆ.
“ಒಂದು ಕ್ಷಣ ಪರಿಸರ ಹಿಂಸಾತ್ಮಕವಾಗಿ ಬದಲಾಗಬಹುದು ಎಂದು ನನಗೆ ಅನಿಸಿತ್ತು. ಬಾಣ ಎಲ್ಲಿಂದ ಬರುತ್ತದೆಯೋ ಎಂಬ ಆತಂಕವಿತ್ತು” ಎಂದು ರೊಸೋಲಿ ನೆನಪಿಸಿಕೊಂಡಿದ್ದಾರೆ.
ಪ್ರಸ್ತುತ ಜಗತ್ತಿನಲ್ಲಿ ಇಂತಹ ಸುಮಾರು 200ಕ್ಕೂ ಹೆಚ್ಚು ಬುಡಕಟ್ಟು ಗುಂಪುಗಳು ಬಾಹ್ಯ ಜಗತ್ತಿನ ಸಂಪರ್ಕವಿಲ್ಲದೆ ಬದುಕುತ್ತಿವೆ ಎಂದು ಅಂದಾಜಿಸಲಾಗಿದೆ. ಇವರನ್ನು ನೇರವಾಗಿ ಸಂಪರ್ಕಿಸುವುದು ಅಪಾಯಕಾರಿಯಾದ್ದರಿಂದ ಉಪಗ್ರಹಗಳ ಮೂಲಕ ಅವರ ಮೇಲೆ ನಿಗಾ ಇಡಲಾಗುತ್ತಿದೆ.
NEW: Never-before-seen footage of an uncontacted Amazonian tribe has been released by author Paul Rosolie on Lex Fridman's show.
— Collin Rugg (@CollinRugg) January 16, 2026
The tribe was seen lowering their weapons before they were given a canoe of food.
Rosolie is a conservationist who has reportedly spent two decades… pic.twitter.com/a0WF9O2Pof



