Flash News

ಪ್ರಿಯಕರನನ್ನು ಮನೆಗೆ ಕರೆಸಿ ಖಾಸಗಿ ಅಂಗ ಕತ್ತರಿಸಿದ ಮಹಿಳೆ!

ಮುಂಬಯಿ: ನಗರದಲ್ಲಿ ಮಹಿಳೆಯೊಬ್ಬಳು ಹೊಸ ವರ್ಷದ ಪಾರ್ಟಿಯ ನೆಪದಲ್ಲಿ ತನ್ನ ಪ್ರೇಮಿಯನ್ನು ಮನೆಗೆ ಆಹ್ವಾನಿಸಿ ಆತನ ಖಾಸಗಿ ಅಂಗವನ್ನೇ ಕತ್ತರಿಸಿದ ಬೆಚ್ಚಿ ಬೀಳುವ ಘಟನೆ ಬೆಳಕಿಗೆ ಬಂದಿದೆ.

ವಕೋಲಾ ಪೊಲೀಸರ ಪ್ರಕಾರ, 25 ವರ್ಷದ ಆರೋಪಿ ಮಹಿಳೆಯು 42 ವರ್ಷದ ಪುರುಷನ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ ಗಂಭೀರ ಹಲ್ಲೆ ಪ್ರಕರಣ ದಾಖಲಿಸಲಾಗಿದೆ. ಈ ಘಟನೆ ಸಾಂತಾಕ್ರೂಜ್ ಪೂರ್ವದ ಕಲಿನಾದಲ್ಲಿ ನಡೆದಿದೆ.

ಸಂತ್ರಸ್ತೆ ಮತ್ತು ಆರೋಪಿ ಸುಮಾರು ಏಳು ವರ್ಷಗಳಿಂದ ಸಂಬಂಧದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಅವಧಿಯಲ್ಲಿ, ಮಹಿಳೆ ಪದೇ ಪದೇ ತನ್ನನ್ನು ಮದುವೆಯಾಗುವಂತೆ ಆ ವ್ಯಕ್ತಿಯನ್ನು ಕೇಳಿಕೊಂಡಿದ್ದು ಆದರೆ ಆತ ಪ್ರತಿ ಬಾರಿಯೂ ನಿರಾಕರಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಹೊಸ ವರ್ಷದ ಆಚರಣೆಯ ನೆಪದಲ್ಲಿ, ಮಹಿಳೆ ಆ ವ್ಯಕ್ತಿಯನ್ನು ತನ್ನ ಮನೆಗೆ ಆಹ್ವಾನಿಸಿದಳು. ಈ ವೇಳೆಯೂ ಮದುವೆಯಾಗಲು ನಿರಾಕರಿಸಿದ್ದರಿಂದ ಮಹಿಳೆ ಕೆರಳಿ ಕೋಪದಿಂದ ತೀವ್ರ ಹೆಜ್ಜೆ ಇಟ್ಟಿದ್ದಾಳೆ ಎನ್ನಲಾಗಿದೆ.

ಗುರುವಾರ ಬೆಳಗಿನ ಜಾವ ಜಗಳ ನಡೆದಿದ್ದು, ನಂತರ ಮಹಿಳೆ ಹರಿತವಾದ ಆಯುಧದಿಂದ ವ್ಯಕ್ತಿ ಮೇಲೆ ಹಲ್ಲೆ ನಡೆಸಿ, ಆತನ ಖಾಸಗಿ ಅಂಗವನ್ನು ಕತ್ತರಿಸಿದ್ದಾಳೆ ಎಂದು ತಿಳಿದು ಬಂದಿದೆ.

ಗಂಭೀರ ಗಾಯಗಳಾಗಿದ್ದರೂ, ಪುರುಷ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದ. ಸಹೋದರನಿಗೆ ಮಾಹಿತಿ ನೀಡಿದ್ದು ಬಳಿಕ ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಆರೋಪಿ ಮಹಿಳೆ ಪ್ರಸ್ತುತ ತಲೆಮರೆಸಿಕೊಂಡಿದ್ದು, ಆಕೆಯ ಪತ್ತೆಗೆ ಹಲವಾರು ತಂಡಗಳನ್ನು ರಚಿಸಲಾಗಿದೆ.