Flash News

ಉಗ್ರಾಯುಧಮ್’ ಚಿತ್ರದ ಮುಹೂರ್ತ: ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಶ್ರೀಮುರುಳಿ

ನಟ ಶ್ರೀಮುರುಳಿ ಅವರು ನಟಿಸುತ್ತಿರುವ ಹೊಸ ಚಿತ್ರ ‘ಉಗ್ರಾಯುಧಮ್’ ನ ಮುಹೂರ್ತವು ಇಂದು (ಸೋಮವಾರ) ಬಂಡೆ ಮಹಾಕಾಳಮ್ಮ ದೇವಾಲಯದಲ್ಲಿ ನೆರವೇರಿದೆ.

  • ಚಿತ್ರತಂಡವು ತಮ್ಮ ಹೊಸ ಪ್ರಯತ್ನಕ್ಕೆ ಅಭಿಮಾನಿಗಳ ಪ್ರೀತಿ ಮತ್ತು ಬೆಂಬಲವನ್ನು ಕೋರಿದೆ.
  • ಈ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಶುಭಾಶಯ ತಿಳಿಸುತ್ತಿದ್ದಾರೆ.
  • ಶ್ರೀಮುರುಳಿಯವರು ಕೊನೆಯದಾಗಿ ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ, ಡಾ. ಸೂರಿ ನಿರ್ದೇಶಿಸಿದ್ದ ‘ಬಘೀರ’ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ಸಿನಿಮಾದಲ್ಲಿ ನಟಿ ರುಕ್ಮಿಣಿ ವಸಂತ್ ಅವರು ಶ್ರೀಮುರುಳಿಗೆ ಜೋಡಿಯಾಗಿ ನಟಿಸಿದ್ದರು.