ದರ್ಶನ್ ಜೈಲಿಂದ ಹೊರಗೆ ಬರದಿರಲು ವಿಜಯಲಕ್ಷ್ಮೀ ಕಾರಣ ಅನ್ನೋದು ಸುಳ್ಳು ಎಂದ ಝೈದ್
ಧನ್ವೀರ್ಗೆ ವಾರ್ನಿಂಗ್ ಕೊಡೋಕೆ ದರ್ಶನ್ ಅಣ್ಣ ಹೇಳಿದರು ಎಂದು ನಟ ಝೈದ್ ಖಾನ್ ತಿಳಿಸಿದ್ದಾರೆ
ಕೊಲೆ ಪ್ರಕರಣದಲ್ಲಿ ಜೈಲಲ್ಲಿರುವ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮೀ ಹಾಗೂ ನಟ ಝೈದ್ ಖಾನ್ ಇಂದು ಭೇಟಿಯಾದರು. ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಝೈದ್ ಖಾನ್, ಧಮ್ ಇದ್ರೆ ನನ್ ಮುಂದೆ ಮಾತಾಡ್ಲಿ. ನಾನು ಜೈಲಿನಲ್ಲಿರುವಾಗ ನನ್ ಹೆಂಡ್ತಿ-ಮಕ್ಳ ಬಗ್ಗೆ ಮಾತಾಡೋಕೆ ಅವನ್ಯಾರು ಎಂದು ದರ್ಶನ್ ಗರಂ ಆಗಿದ್ದಾರೆಂದು ಹೇಳಿದರು.
ದರ್ಶನ್ ಅಣ್ಣ ಧನ್ವೀರ್ಗೆ ವಾರ್ನಿಂಗ್ ಕೊಡೋಕೆ ಹೇಳಿದ್ರು. ನಾನು ಒಳಗಡೆ ಇದ್ದಾಗ ನನ್ನ ಹೆಂಡತಿ, ಮಕ್ಕಳ ಬಗ್ಗೆ ಮಾತಾಡೋದು ತಪ್ಪು. ನನ್ನ ಫ್ಯಾಮಿಲಿ ಬಗ್ಗೆ ಮಾತಾಡೋಕೆ ಯಾರಿಗೂ ಅಧಿಕಾರ ಇಲ್ಲ. ನಾನು ಹೊರಗೆ ಬಂದ ಮೇಲೆ ಧೈರ್ಯ ಇದ್ರೆ ನನ್ನ ಮುಂದೆ ಮಾತಾಡಲಿ. ಪೋನ್ನಲ್ಲಿ ಎಲ್ಲೋ ಒಂದು ಕಡೆ ಕುತ್ಕೊಂಡು ಮಾತಾಡೋದಲ್ಲ ಎಂದು ಅಸಮಾಧಾನ ಹೊರಹಾಕಿರುವುದಾಗಿ ಝೈದ್ ತಿಳಿಸಿದರು
ಜನರಿಗೆ, ಅಭಿಮಾನಿಗಳಿಗೆ ರಾಂಗ್ ಮೆಸೇಜ್ ಕೊಡ್ತಾ ಇದ್ದಾನೆ. ಎಲ್ಲರನ್ನ ಡೈವರ್ಟ್ ಮಾಡೋ ಕೆಲಸ ಮಾಡ್ತಾ ಇದ್ದಾನೆ. ಇವ್ನು ಎಲ್ಲವನ್ನೂ ನಾನು ಮಾಡ್ದೇ ಮಾಡ್ದೇ ಅಂತಾನೆ. ಇವನನ್ನ ಕೇಳಿಕೊಂಡ ಅಕ್ಕ ಮತ್ತೆ ದರ್ಶನ್ ಅಣ್ಣ ಹೋಗಿದ್ರಾ? ಸಹಾಯ ಮಾಡಿ ಅಂತ ಅಣ್ಣ ಕೂಡ ಅವನ ಹತ್ತಿರ ಹೋಗಿಲ್ಲ. ನಾನು ಸಹಾಯ ಮಾಡ್ತೀನಿ ಅಂತ ಮನೆಗೆ ನುಗ್ಗಿ, ಮನೆ ಹಾಳು ಮಾಡ್ದಾ. ನಾವು ಎಲ್ಲರೂ ಮಾಡ್ತಾ ಇರೋದು ದರ್ಶನ್ ಅಣ್ಣನಿಗೋಸ್ಕರ. ಅವರ ಪ್ರೀತಿಸುವ ಪತ್ನಿ, ಮಗನ ಬಗ್ಗೆ ಮಾತಾಡಿದ್ರೆ ಹೇಗೆ? ಕ್ರೆಡಿಟ್ ತೆಗೆದುಕೊಳ್ಳುವ ಕೆಲಸ ಮಾಡ್ತಾ ಇದ್ದಾನೆ ಎಂದು ಧನ್ವೀರ್ ನಡೆಗೆ ಝೈದ್ ಅಸಮಾಧಾನ ಹೊರಹಾಕಿದರು.
ಜೈಲಿನಿಂದಲೇ ಧನ್ವೀರ್ ವಿರುದ್ಧ ದರ್ಶನ್ ದೂರು ನೀಡ್ತಾರೆ. ವಕೀಲರ ಜೊತೆ ಚರ್ಚೆ ಮಾಡಿದ್ದಾರೆ. ಈಗ ದೂರನ್ನ ಕೊಡ್ತಾರೆ. ನಾನೇ ಮಾತಾಡಿದ್ರೆ ಅಭಿಮಾನಿಗಳಿಗೆ ಗೊಂದಲ ಕ್ಲಿಯರ್ ಆಗುತ್ತೆ ಅಂದ್ರು. ಮಾಧ್ಯಮಗಳ ಮೂಲಕ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ. ಯಾವುದೇ ಕಾರಣಕ್ಕೂ ನೀವು ತಲೆಕೆಡಿಸಿಕೊಳ್ಳಬೇಡಿ. ಅಭಿಮಾನಿಗಳು ಧೈರ್ಯವಾಗಿ, ಆರಾಮಾಗಿ ಇರಿ ಅಂದ್ರು. ಸ್ವಲ್ಪ ದಿನ ಎಲ್ಲರೂ ಸಮಾಧಾನವಾಗಿ ಇರಿ. ಹಣಕಾಸಿನ ವಿಚಾರ ಅಣ್ಣಗೆ ದೊಡ್ಡ ಮ್ಯಾಟರ್ ಅಲ್ಲ. ಅವರು ಈಗ ಜೈಲಿನಲ್ಲಿ ಇದ್ದಾರೆ, ಅವರಿಗೆ ಕೆಲಸ ಇಲ್ಲ. ಕೆಲಸ ಮಾಡಿದ್ರೆನೇ ಅವರಿಗೆ ಹಣ ಬರೋದು. ಕೇಸ್ ನಡೆಸೋಕೆ ಲಾಯರ್ಗೆ ಹಣ ಕೊಡಬೇಕು. ಒಳ್ಳೆದು ಮಾಡ್ತೀನಿ ಅಂತ ಬಂದು ಈಗ ನಂಬಿಕೆಯೇ ಮುಳ್ಳಾಗಿದೆ ಎಂದು ಝೈದ್ ಬೇಸರ ಹೊರಹಾಕಿದರು.


