ದುಬೈ: ಅನಿವಾಸಿ ಕನ್ನಡಿಗರ ಸಾಮಾಜಿಕ ಸಂಘಟನೆಯಾದ ದುಬೈ ಯುವಕರ ಕೂಟವಾದ ಬದ್ರಿಯಾ ಫ್ರೆಂಡ್ಸ್ ಸಂಘಟನೆಯ ವರ್ಷಂಪ್ರತಿ ನಡೆಯುವ ಕ್ರಿಡಾ ಕಾರ್ಯಕ್ರಮವು ಆದಿತ್ಯವಾರ BCC ಗ್ರೌಂಡ್ ಶಾರ್ಜಾದಲ್ಲಿ ಅದ್ಧೂರಿಯಾಗಿ ನೆರವೇರಿತು.
ಸಾಮಾಜಿಕ ಕ್ಷೇತ್ರದಲ್ಲಿ ತನ್ನದೆ ಶೈಲಿಯ ಚಾಪು ಮೂಡಿಸಿದ ಬದ್ರಿಯಾ ಫ್ರೆಂಡ್ಸ್ ಸಂಘಟನೆಯ ಈ ಕ್ರೀಡಾಕೂಟವು ಸಂಘಟನೆಯ ಕಾರ್ಯ ಪ್ರವೃತ್ತಿಗೆ ಇನ್ನಷ್ಟು ಮೆರೆಗು ನೀಡುವಂತಾಯಿತು. ಕ್ರೀಡಾ ಕೂಟದ ಪ್ರಾಯೋಜಕತ್ವವನ್ನು ಗ್ರೀನ್ ಟೀಮ್ ನವೀಕರಣ ತಾಂತ್ರಿಕ ಸಂಸ್ಥೆಯು ವಹಿಸಿಕೊಂಡಿತು.
ಫೈನಲ್ ಪಂದ್ಯದಲ್ಲಿ ಅಲ್ ದನಾ X1 ತಂಡವು ರಾಯಲ್ ಥಂಡರ್ ಕುಡ್ಲ ರನ್ನರ್ ಮಣಿಸಿ ಚಾಂಪಿಯನ್ ಪಟ್ಟಕೇರಿತು
ಕಾರ್ಯಕ್ರಮದಲ್ಲಿ ಇಬ್ರಾಹಿಂ ಗಡಿಯಾರ್ – ಗಾಡಿಯಾರ್ ಗ್ರೂಪ್ ಆಫ್ ಕಂ, ಅಬುಸಾಲಿಹ್ – ಈಗಲ್ ರಿಯಲ್ ಎಸ್ಟೇಟ್
ಅಬ್ದುಲ್ ಲತೀಫ್ ಮುಲ್ಕಿ – ಉಪಾಧ್ಯಕ್ಷರು ಬಿಸಿಎಫ್, ಅಫೀಕ್ ಹುಸೇನ್ – ಬಿಸಿಎಫ್ ಉಪಾಧ್ಯಕ್ಷರು, ನವಾಜ್ ಕೋಟೆಕರ್, ರಫೀಕ್ ಮುಲ್ಕಿ, ಖಾಸೀಂ ಭಾಯಿ, ಮೊಹಮ್ಮದ್ ಆಸಿಕ್ – ಅಧ್ಯಕ್ಷ ಬದ್ರಿಯಾ ಉಪಸ್ಥಿತರಿದ್ದರು.
ಬದ್ರಿಯಾ ಶ್ರೇಷ್ಠ ಪ್ರಶಸ್ತಿ-2025 ಹನೀಫ್ ಬಿಕರ್ಣಕಟ್ಟೆ ಮತ್ತು ನವಾಜ್ ಕೋಟೆಕರ್ ಅವರಿಗೆ ನೀಡಲಾಗಿದೆ. ಆಶಿಕ್ ಬದ್ರಿಯಾ ನಿರೂಪಿಸಿದರು.
ಹಿದಯತ್ ಅಡ್ಡೂರ್ ಬಿಸಿಸಿಐ ಅಧ್ಯಕ್ಷ, ಉದ್ಯಮಿ ಸಲೀಂ ಮೊಡಬಿದ್ರೆ, ಸಮದ್. ಬೀರಲಿ ಮೂಸಾ ಪರ್ವಾಯಿ ಮತ್ತು ಶಾಫಿ ಬಾಯಿ ಉಪಸ್ಥಿತರಿದ್ದರು.







