Flash News

ಉಡುಪಿ | ಅಕ್ರಮ ಕಸಾಯಿಖಾನೆ ಪ್ರಕರಣಕ್ಕೆ ತಿರುವು; ಗೋವು ನೀಡಿದ್ದೇ ಸಂಘಪರಿವಾರದ ಕಾರ್ಯಕರ್ತ ಶಿವಪ್ರಸಾದ್..!

ಕಸಾಯಿಖಾನೆಯ ಮನೆಯನ್ನು ಸರಕಾರ ಮುಟ್ಟುಗೋಲು ಹಾಕಬೇಕು ಎಂದು ಆಗ್ರಹಿಸಿದ್ದ ಬಜರಂಗದಳ..!

ಉಡುಪಿ: ಕಸಾಯಿಖಾನೆಗೆ ದನ ಮತ್ತು ಕರುವನ್ನು ಮಾರಾಟ ಮಾಡಿದ ಆರೋಪದಲ್ಲಿ ಸ್ಥಳೀಯ ಸಂಘ ಪರಿವಾರದ ಕಾರ್ಯಕರ್ತನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ನಲ್ಲೂರಿನ ಶಿವಪ್ರಸಾದ್(28) ಬಂಧಿತ ಆರೋಪಿ.

ನ.12ರಂದು ನಲ್ಲೂರಿನ ಮನೆಯೊಂದಕ್ಕೆ ದಾಳಿ ನಡೆಸಿದ ಕಾರ್ಕಳ ಗ್ರಾಮಾಂತರ ಪೊಲೀಸರು ಅಕ್ರಮವಾಗಿ ಕಸಾಯಿಖಾನೆ ನಡೆಸುತ್ತಿದ್ದ ಆರೋಪದಲ್ಲಿ ಅಶ್ರಫ್ ಅಲಿ ಹಾಗೂ ಆತನ ಪತ್ನಿಯನ್ನು ಬಂಧಿಸಿದ್ದರು. ಈ ಬಗ್ಗೆ ವಿಶ್ವ ಹಿಂದೂ ಪರಿಷತ್, ಬಜರಂಗ ದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ದನಕರುವನ್ನು ಕಳವು ಮಾಡಿ ತಂದು ಕಡಿದು ಮಾಂಸ ಮಾಡಲಾಗಿದೆ. ಈ ಅಕ್ರಮ ಕಸಾಯಿಖಾನೆಯ ಮನೆಯನ್ನು ಸರಕಾರ ಮುಟ್ಟುಗೋಲು ಹಾಕಬೇಕು ಎಂದು ಆಗ್ರಹಿಸಿದ್ದರು.

ತನಿಖೆ ಚುರುಕುಗೊಳಿಸಿದ ಪೊಲೀಸರು ಆರೋಪಿಗಳನ್ನು ವಿಚಾರಣೆ ನಡೆಸಿದ್ದು, ಈ ವೇಳೆ ಅವರು ಈ ದನ ಮತ್ತು ಕರುವನ್ನು ಸಂಘ ಪರಿವಾರದ ಕಾರ್ಯಕರ್ತ ಶಿವಪ್ರಸಾದ್ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾರೆ. ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ಶಿವಪ್ರಸಾದ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.