Flash News

ಬೆಳ್ತಂಗಡಿ | ಬೈಕ್ ಕಳ್ಳತನಕ್ಕೆ ಯತ್ನ ಆರೋಪ: ಇಬ್ಬರಿಗೆ ಥಳಿಸಿ ಮರಕ್ಕೆ ಕಟ್ಟಿದ ಹಾಕಿದ ಸಾರ್ವಜನಿಕರು

ಬೆಳ್ತಂಗಡಿ : ಬೈಕ್ ಕಳ್ಳತನ ಮಾಡಿ ಪರಾರಿಯಾಗುತ್ತಿರುವ ಆರೋಪದ ಮೇರೆಗೆ ಸಾರ್ವಜನಿಕರು ಸೇರಿ ಇಬ್ಬರು ಆರೋಪಿಗಳನ್ನು ಓಡಿ ಹಿಡಿದುಕೊಂಡು ಬಂದು ಹಿಗ್ಗಾಮುಗ್ಗಾ ಥಳಿಸಿ ಬಳಿಕ ಮರಕ್ಕೆ ಕಟ್ಟಿ ಹಾಕಿ ವೇಣೂರು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಈ ಬಗ್ಗೆ ಇಬ್ಬರು ಬೈಕ್ ಕಳ್ಳತನಕ್ಕೆ ಯತ್ನಿಸಿದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.

ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ಪಳಾರಗೋಳಿ ಎಂಬಲ್ಲಿ ಜ.20 ರಂದು ಬೆಳಗ್ಗಿನ ಜಾವ 2:10 ಗಂಟೆಯಿಂದ 2.30 ಗಂಟೆಯ ಮಧ್ಯದ ಅವಧಿಯಲ್ಲಿ ಆರೋಪಿಗಳಾದ ಮಂಗಳೂರು ನಗರದ ಕುಳೂರು ನಿವಾಸಿಗಳಾದ ಮೋಯಿದ್ದಿನ್ ನಾಸೀರ್ ಹಾಗೂ ಅಬ್ದುಲ್ ಸಮದ್ ಎಂಬವರುಗಳು ನಾಯಿಗೆ ಬೈಯ್ಯುತ್ತಿದ್ದ ಬಗ್ಗೆ ದೇವಿಪ್ರಸಾದ್ ಅವರ ನೆರೆ ಮನೆಯ ಜಯ ಪೂಜಾರಿಯವರ ಹೆಂಡತಿ ಜಯ ಪೂಜಾರಿಯವರಿಗೆ ಪೋನು ಮಾಡಿ ತಿಳಿಸಿದಾಗ ನೇಮೋತ್ಸವ ಕಾರ್ಯಕ್ರಮದಲ್ಲಿದ್ದ ದೇವಿಪ್ರಸಾದ್ ಮತ್ತು ಇತರರು ಮನೆಯ ಬಳಿ ಬಂದಾಗ ಆರೋಪಿಗಳು ದೇವಿಪ್ರಸಾದ್ ರವರ ನಂಬರ್ KA-19-W-407 ಬೈಕ್ ಕಳವು ಮಾಡಿಕೊಂಡು ಹೋಗುವುದನ್ನು ಕಂಡು ಬೆನ್ನಟ್ಟಿ ತಡೆದು ನಿಲ್ಲಿಸಿದ ಸಮಯ ಆರೋಪಿಗಳು ಹಲ್ಲೆ ನಡೆಸಿ ಕೈಯಿಂದ ತಳ್ಳಿ ಕಳ್ಳತನದ ನಂತರ ತಪ್ಪಿಸಿಕೊಳ್ಳಲು ಬೈಕ್‌ ನೊಂದಿಗೆ ಓಡಲು ಯತ್ನಿಸಿದವರನ್ನು ವಿಚಾರ ತಿಳಿದು ಸುಮಾರು 25-30 ಜನರ ಗುಂಪು ಆರೋಪಿಗಳನ್ನು ಹಿಡಿದು ಮರಕ್ಕೆ ಕಟ್ಟಿಹಾಕಿತ್ತು. ಬಳಿಕ ಆರೋಪಿಗಳು ಬೈಕ್‌ ಕಳವು ಮಾಡಿ ಬೈಕ್‌ ನೊಂದಿಗೆ ತಪ್ಪಿಸಿಕೊಳ್ಳಲು ಹಲ್ಲೆಗೆ ಮುಂದಾಗಿದ್ದರು ಎನ್ನಲಾಗಿದೆ.

ಈ ಘಟನೆ ಬಗ್ಗೆ ಬೈಕ್ ಮಾಲೀಕ ದೇವಿಪ್ರಸಾದ್ ಎಂಬವರು ಜ.20 ರಂದು ನೀಡಿದ ದೂರಿನ ಮೇರೆಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಅಬ್ದುಲ್ ಸಮದ್ ಮತ್ತು ಮೊಯಿದ್ದಿನ್ ನಾಸಿರ್ ವಿರುದ್ಧ Us 303(2), 307 BNS -2023 ಯಂತೆ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ. ಘಟನೆಯ ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗುತ್ತಿದೆ.