ಕೊಯಮತ್ತೊರು: ತಮಿಳುನಾಡಿನ ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿ ಭಾನುವಾರ ನಡೆದ ಮಹಾಶಿವರಾತ್ರಿ ಆಚರಣೆಯಲ್ಲಿ ಧುರಂಧರ ನಟಿ ಸಾರಾ ಅರ್ಜುನ್, ತಮನ್ನಾ ಭಾಟಿಯಾ, ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ ಮತ್ತು ಮೌನಿ ರಾಯ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಭಾಗವಹಿಸಿದ್ದರು.
ಸಾರಾ ಅರ್ಜುನ್, ತಮನ್ನಾ ಮತ್ತು ಶ್ರೀನಿಧಿ ಕುಣಿದು ಕುಪ್ಪಳಿಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.
ಹೀಗೆ ವೈರಲ್ ಆದ ವಿಡಿಯೋಗಳಲ್ಲಿ ತಮನ್ನಾ ಭಾಟಿಯಾ, ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದು, ಸಾರಾ ಅರ್ಜುನ್ ಮತ್ತಿತರ ಭಕ್ತರೊಂದಿಗೆ ಡ್ಯಾನ್ಸ್ ಮಾಡುತ್ತಾ ಎಂಜಯ್ ಮಾಡುತ್ತಿದ್ದಾರೆ. ಮತ್ತೊಂದು ವೀಡಿಯೊದಲ್ಲಿ ಸಾರಾ ಅರ್ಜುನ್ ಮತ್ತು ಶ್ರೀನಿಧಿ ಶೆಟ್ಟಿ ಅದ್ಬುತ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ.
ಇಶಾ ಫೌಂಡೇಶನ್ ಹಂಚಿಕೊಂಡಿರುವ ವೀಡಿಯೊದಲ್ಲಿ, ನಿಮ್ಮೆಲ್ಲರಿಗೂ ಮಹಾಶಿವರಾತ್ರಿಯ ಶುಭಾಶಯಗಳು. ಅತ್ಯಂತ ಸುಂದರವಾದ ಸಮಯ ಕಳೆದಿದ್ದೇನೆ ಎಂದು ಶ್ರಿನಿಧಿ ಶೆಟ್ಟಿ ಹೇಳುವುದು ಕಾಣಿಸುತ್ತಿದೆ. ನಾನು ಎಚ್ಚರವಾಗಿರುವವರೆಗೂ ಸಾಧ್ಯವಾಗುವಷ್ಟು ನೃತ್ಯ ಮಾಡಲು ಪ್ರಯತ್ನಿಸುತ್ತೇನೆ ಎಂದು ತಮನ್ನಾ ವಿಡಿಯೋದಲ್ಲಿ ಹೇಳಿದ್ದಾರೆ.
#WATCH | Actors Tamannaah Bhatia, Sara Arjun attended the Mahashivratri 2026 celebrations at the Isha Yoga Centre in Coimbatore, Tamil Nadu pic.twitter.com/Vw6QE75Drt
— ANI (@ANI) February 16, 2026



