Flash News

‘ಗೋದ್ರಾ ಮೀಟ್ಸ್ ಗಾಝಾ’: ಇಸ್ರೇಲ್ ಭೇಟಿಯ ವೇಳೆ ನೆತನ್ಯಾಹು ತಬ್ಬಿಕೊಂಡ ಮೋದಿ ವಿರುದ್ಧ ನಟ ಕಿಶೋರ್ ಕುಮಾರ್ ಕಿಡಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಇಸ್ರೇಲ್ ಭೇಟಿ ಮುಗಿಸಿ ವಾಪಸ್ಸಾಗಿದ್ದಾರೆ. ಫೆ.25ರಂದು ಬುಧವಾರದಂದು ಎರಡು ದಿನಗಳ ಇಸ್ರೇಲ್ ಭೇಟಿಗಾಗಿ ತೆರಳಿದ್ದ ಪ್ರಧಾನಿ ಮೋದಿಯವರನ್ನು ಟೆಲ್ಅವೀವ್ ನ ಬೆನ್ ಗ್ಯುರಿಯನ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ವೇಳೆ ಸ್ವಾಗತಿಸಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ವಾಗತಿಸಿ ತಬ್ಬಿಕೊಂಡಿರುವ ಫೋಟೋ ವೈರಲ್ ಆಗಿದೆ.

ಇಸ್ರೇಲ್ ಭೇಟಿಯ ವೇಳೆ ಮೋದಿಯವರು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಪರಸ್ಪರ ತಬ್ಬಿಕೊಂಡಿರುವ ಫೋಟೋವನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿರುವ ನಟ ಕಿಶೋರ್ ಕುಮಾರ್ ಅವರು Godhra meets Gaza… ಗಾಝಾವನ್ನು ಭೇಟಿಯಾದ ಗೋದ್ರಾ ಎಂಬ ಶೀರ್ಷಿಕೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಜೊತೆಗೆ Power on their minds ( ಅವರ ಮನಸ್ಸಿನಲ್ಲಿ ಅಧಿಕಾರವಿದೆ) Hatred in their hearts ( ಅವರ ಹೃದಯಗಳಲ್ಲಿ ದ್ವೇಷವಿದೆ) Blood on their hands (ಅವರ ಕೈಗಳಲ್ಲಿ ರಕ್ತವಿದೆ) ಎಂದು ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ಈ ಪೋಸ್ಟ್‌ ಗೆ ಪ್ರತಿಕ್ರಿಯಿಸಿರುವ Kiran Suresh ಎಂಬ ಸಾಮಾಜಿಕ ಜಾಲತಾಣ ಬಳಕೆದಾರರು “Hatred is not in their heart, it’s in your heart Kishore Kumar Huli (ದ್ವೇಷ ಅವರ ಹೃದಯದಲ್ಲಿಲ್ಲ, ಅದು ನಿಮ್ಮ ಹೃದಯದಲ್ಲಿದೆ ಕಿಶೋರ್ ಕುಮಾರ್ ಹುಲಿ), ಎಂದಿದ್ದಾರೆ. ಇದಲ್ಲದೆ ಇನ್ನೂ ಹಲವು ಆಕ್ಷೇಪಗಳು ವ್ಯಕ್ತವಾಗಿವೆ.