Flash News

ಯುದ್ಧದ ನಡುವೆಯೇ ಇರಾನ್‌ನಲ್ಲಿ ರಣಭೀಕರ ಭೂಕಂಪ

ಟೆಹರಾನ್: ಇಸ್ರೇಲ್ ಮತ್ತು ಅಮೆರಿಕ ದಾಳಿ ತೀವ್ರಗೊಂಡಿರುವ ಹೊತ್ತಿನಲ್ಲೇ ದಕ್ಷಿಣ ಇರಾನ್ ನ ಗೆರಾಶ್ ಪ್ರಾಂತ್ಯದಲ್ಲಿ 4.3 ತೀವ್ರತೆಯ ಭೂಕಂಪನ ಸಂಭವಿಸಿದೆ. ಆದರೆ, ಈ ಭೂಕಂಪನದಲ್ಲಿ ಯಾವುದೇ ಗಮನಾರ್ಹ ಹಾನಿ ಅಥವಾ ಸಾವು ನೋವು ಆದ ಬಗ್ಗೆ ತಕ್ಷಣದಲ್ಲಿ ಯಾವುದೇ ವರದಿಯಾಗಿಲ್ಲ.

ಇರಾನಿನ ಸೇನಾ ನೆಲೆಗಳ ಮೇಲೆ ವಾಯು ದಾಳಿಗಳು ತೀವ್ರಗೊಂಡಿರುವ ವೇಳೆಯೇ ಈ ಭೂಕಂಪನ ಸಂಭವಿಸಿದೆ.

ಈಗಾಗಲೇ ಉದ್ವಿಗ್ನಗೊಂಡಿರುವ ಪ್ರಾದೇಶಿಕ ಯುದ್ಧಗಳಿಗೆ ಈ ಕಂಪನವು ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ಭೂಕಂಪದಿಂದ ಉಂಟಾದ ನಷ್ಟ, ಸಾವು-ನೋವುಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಯುಎಸ್‌-ಇಸ್ರೇಲ್‌ ಏರ್‌ಸ್ಟ್ರೈಕ್‌ಗೆ ಭಾನುವಾರ ಇರಾನಿನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯಾಯಿತು