ಟೆಹ್ರಾನ್: ಇರಾನ್‌ನ ಧಾರ್ಮಿಕ ಪ್ರಮುಖರ ಸಭೆಯು ಅಯತೊಲ್ಲಾ ಅಲಿ ಖಮೇನಿಯ ಪುತ್ರ ಮೊಜ್ತಬಾ ಖಮೇನಿ ಅವರನ್ನು ಹೊಸ ಸರ್ವೋಚ್ಚ ನಾಯಕನನ್ನಾಗಿ ಆಯ್ಕೆ ಮಾಡಿದೆ ಎಂದು ಇರಾನ್ ಇಂಟರ್‌ನ್ಯಾಷನಲ್ ಮೂಲಗಳು ಮಂಗಳವಾರ ವರದಿ ಮಾಡಿದೆ.
ಮಾಧ್ಯಮದ ವರದಿ ಪ್ರಕಾರ, 56 ರ ಹರೆಯದ ಮೊಜ್ತಬಾ ಅವರನ್ನು ದೇಶದ ನಿಯಂತ್ರಣ ವಹಿಸಿಕೊಳ್ಳಲು ಆಯ್ಕೆ ಮಾಡಲಾಗಿದ್ದು, ಅವರು ಅಲಿ ಖಮೇನಿಯವರ ಎರಡನೇ ಪುತ್ರ ಮತ್ತು ವೀಕ್ಷಕರು ಅವರನ್ನು ಸಂಭಾವ್ಯ ಉತ್ತರಾಧಿಕಾರಿಯಾಗಿ ದೀರ್ಘಕಾಲದಿಂದ ಪರಿಗಣಿಸುತ್ತಿದ್ದರು.
ತಂದೆ ಅಮೆರಿಕ-ಇಸ್ರೇಲಿ ಜಂಟಿ ದಾಳಿಯ ಅಲೆಯಲ್ಲಿ ಹತ್ಯೆಗೀಡಾದ ಕೆಲವೇ ದಿನಗಳ ನಂತರ ಮೊಜ್ತಬಾ ಅವರಿಗೆ ಸಿಕ್ಕ ಬಡ್ತಿ ರಾಜಕೀಯವಾಗಿ ಸೂಕ್ಷ್ಮವಾಗಿರಬಹುದು. ಮಧ್ಯಪ್ರಾಚ್ಯದಲ್ಲಿ ದೊಡ್ಡ ಮಟ್ಟದ ಸಶಸ್ತ್ರ ಸಂಘರ್ಷ ಯಾವ ಮಟ್ಟಕ್ಕೆ ಹೋಗಬಹುದು ಎಂಬುದೂ ಪ್ರಶ್ನೆಯಾಗಿದೆ.
ಇಸ್ಲಾಮಿಕ್ ಗಣರಾಜ್ಯದಲ್ಲಿ ಬಹಳ ಹಿಂದಿನಿಂದಲೂ ಆನುವಂಶಿಕ ಆಡಳಿತವನ್ನು ಟೀಕಿಸುತ್ತಾ ವ್ಯಾಪಕ ಪ್ರತಿಭಟನೆಗಳೂ ನಡೆದಿವೆ. ರಾಜಪ್ರಭುತ್ವಕ್ಕೆ ಹೆಚ್ಚು ನ್ಯಾಯಯುತ ಪರ್ಯಾಯವೆಂದು ತನ್ನನ್ನು ತಾನು ಬಿಂಬಿಸಿಕೊಂಡಿದ್ದು ತಂದೆಯಿಂದ ಮಗನಿಗೆ ಅಧಿಕಾರ ನೀಡಿರುವ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುವ ಸಾಧ್ಯತೆಗಳಿವೆ.ದೇಶದೊಳಗೆ ಮತ್ತಷ್ಟು ಆಕ್ರೋಶ ಭುಗಿಲೇಳುವ ಸಾಧ್ಯತೆಗಳಿವೆ.



