ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್ನ (UAE) ಪ್ರಮುಖ ನಗರವಾದ ದುಬೈನಲ್ಲಿ ಶುಕ್ರವಾರ ಸ್ಫೋಟದ ಸದ್ದು ಕೇಳಿ ಬಂದಿದ್ದು, ನಗರದ ಕೇಂದ್ರ ಭಾಗದಲ್ಲಿ ದಟ್ಟ ಹೊಗೆ ಆವರಿಸಿದೆ.
ವರದಿಯ ಪ್ರಕಾರ, ಪ್ರಸಿದ್ಧ ಬುರ್ಜ್ ಖಲೀಫಾ ಕಟ್ಟಡದ ಬಳಿ ಈ ಹೊಗೆ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ.
ಕಟ್ಟಡಗಳಿಗೆ ಹಾನಿ: ದುಬೈ ಇಂಟರ್ನ್ಯಾಷನಲ್ ಫೈನಾನ್ಶಿಯಲ್ ಸೆಂಟರ್ (DIFC) ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಫೋಟದ ತೀವ್ರತೆಗೆ ಸಮೀಪದ ಕಟ್ಟಡಗಳು ಕಂಪಿಸಿವೆ. ಒಂದು ಕಟ್ಟಡದ ಮುಂಭಾಗದ ಭಾಗಕ್ಕೆ ಹಾನಿಯಾಗಿದೆ ಎಂದು ವರದಿಯಾಗಿದೆ.
ಡ್ರೋನ್ ದಾಳಿ ಭೀತಿ: ಗಾಳಿಯಲ್ಲೇ ಅತಿಕ್ರಮಣಕಾರಿ ವಸ್ತುವನ್ನು ಹೊಡೆದುರುಳಿಸಿದಾಗ ಅದರ ಅವಶೇಷಗಳು ಕಟ್ಟಡದ ಮೇಲೆ ಬಿದ್ದಿದ್ದರಿಂದ ಈ ಸಣ್ಣ ಪ್ರಮಾಣದ ಅನಾಹುತ ಸಂಭವಿಸಿದೆ ಎಂದು ದುಬೈ ಮಾಧ್ಯಮ ಕಚೇರಿ ಸ್ಪಷ್ಟಪಡಿಸಿದೆ.
ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಅಥವಾ ಗಾಯಗಳಾದ ಬಗ್ಗೆ ವರದಿಯಾಗಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಶೇಖ್ ಜಾಯೆದ್ ರಸ್ತೆಯ ಸುತ್ತಮುತ್ತಲಿನ ಪ್ರದೇಶವನ್ನು ಪೊಲೀಸರು ಬಂದ್ ಮಾಡಿದ್ದಾರೆ.
ಕಳೆದ ಗುರುವಾರವಷ್ಟೇ ಅಲ್ ಬದಾ ಪ್ರದೇಶದಲ್ಲಿ ‘ಡ್ರೋನ್ ಘಟನೆ’ ವರದಿಯಾಗಿತ್ತು. ಫೆಬ್ರವರಿ 28 ರಿಂದ ಮಧ್ಯಪ್ರಾಚ್ಯದಲ್ಲಿ ಆರಂಭವಾಗಿರುವ ಯುದ್ಧದ ಪರಿಣಾಮವಾಗಿ ಗಲ್ಫ್ ರಾಷ್ಟ್ರಗಳ ಮೇಲಿನ ದಾಳಿಗಳು ಹೆಚ್ಚುತ್ತಿದ್ದು, ದುಬೈ ಈಗ ಹೈ ಅಲರ್ಟ್ನಲ್ಲಿದೆ.
⚡️🇦🇪🇮🇷 Smoke can be seen in central Dubai, following sounds of explosions. pic.twitter.com/qHBxmdSHZo
— Awais 🐺 (@awais4226) March 13, 2026



