ಮಂಗಳೂರು: ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ಆರೋಪಿಗಳ ಪೈಕಿ ರಿಯಾಜ್ ಎಚ್ . ವೈ ಎಂಬಾತನಿಗೆ ಜಾಮೀನು ಮಂಜೂರಾಗಿದೆ. ಉಚ್ಛ ನ್ಯಾಯಾಲಯ ಜಾಮೀನು ಅರ್ಜಿ ಪುರಸ್ಕರಿಸಿದೆ.
ಜುಲೈ 27 ರಂದು ಬೆಳ್ಳಾರೆ ಪೇಟೆಯಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ ನಡೆದಿತ್ತು. ಪ್ರಕರಣದಲ್ಲಿ ಒಟ್ಟು ಹತ್ತು ಮಂದಿ ಆರೋಪಿಗಳನ್ನು ರಾಜ್ಯ ಪೊಲೀಸರು ಮತ್ತು ಎನ್ ಐ ಎ ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿತ್ತು. ಈ ನಡುವೆ, ಸೆ.28ರಂದು ಪಿಎಫ್ಐ ಸಂಘಟನೆಯನ್ನು ದೇಶಾದ್ಯಂತ ನಿಷೇಧಿಸಲಾಗಿತ್ತು. ಪಿಎಫ್ಐ ನಿಷೇಧ ಹಿನ್ನೆಲೆಯಲ್ಲಿ ಆ ಸಂಘಟನೆಯಲ್ಲಿ ಗುರುತಿಸಿದ್ದ ರಾಜ್ಯ ನಾಯಕರು, ಜಿಲ್ಲಾ ನಾಯಕರನ್ನು ಪೊಲೀಸರು ಬಂಧಿಸಿದ್ದರು.



