ಫರಂಗಿಪೇಟೆ: ಬಂಟ್ವಾಳ ತಾಲೂಕು ಪುದು ಗ್ರಾಮ ಪಂಚಾಯತ್ ಸಭಾಭವನದಲ್ಲಿ ದಿನಾಂಕ 07/09/2026 ರಂದು ಪೂರ್ವಾಹ್ನ 11:30 ಗಂಟೆಗೆ ಸರಿಯಾಗಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿದ ಕರಡು ಮತದಾರರ ಪಟ್ಟಿಯನ್ನು ಓದಿ ಹೇಳುವ ಮೂಲಕ ವಿಶೇಷ ಗ್ರಾಮ ಸಭೆಯನ್ನು ನಡೆಸಲಾಯಿತು. ಸದ್ರಿ ಸಭೆಯಲ್ಲಿ ಪಂಚಾಯತ್ ಅಧ್ಯಕ್ಷರಾದ ಶ್ರೀ ರಮ್ಲಾನ್ ಮಾರಿಪಳ್ಳ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಡಾ.ಸ್ಮೃತಿ ಯು A E R O ರವರಾದ ಶ್ರೀ ನಿಸಾರ್ ಅಹ್ಮದ್ ಗ್ರಾಮ ಆಡಳಿತ ಅಧಿಕಾರಿಯವರಾದ ಶ್ರೀ ಗಣೇಶ್ ಪಂಚಾಯತ್ ಕಾರ್ಯದರ್ಶಿಯವರಾದ ಶ್ರೀಮತಿ ಕವಿತಾ ರವರು ,ಗ್ರಾಮ ಪಂಚಾಯತ್ ಸದಸ್ಯರು , ಅಂಗನವಾಡಿ ಕಾರ್ಯ ಕರ್ತೆಯರು ಹಾಗೂ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು ಸಭೆಯನ್ನು ನಾಡಗೀತೆಯೊಂದಿಗೆ ಪ್ರಾರಂಭಿಸಲಾಯಿತು. ಕಾರ್ಯದರ್ಶಿ ಅವರು ಸಭೆಯಲ್ಲಿ ಉಪಸ್ಥಿತರಿದ್ದವರನ್ನು ಸ್ವಾಗತಿಸಿದರು, ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಪ್ರಾಸ್ತಾವಿಕವಾಗಿ ಮಾತಾಡಿದರು ಅಧ್ಯಕ್ಷರು ಮಾತಾಡಿ S I R ರ ವಿಶೇಷತೆಯನ್ನು ಹಾಗೂ ಪ್ರಾಮುಖ್ಯತೆಯ ಬಗ್ಗೆ ಹಾಗೂ ವಾರ್ಡ್ ವಾರ್ ಮಾಹಿತಿಯನ್ನು ನೀಡಬೇಕಾಗಿ BLO ರವರಿಗೆ ನಿರ್ದೇಶಿಸಿದರು ಅದರಂತೆ ವಾರ್ಡುವಾರು ಕರಡು ಪಟ್ಟಿಯ ಮಾಹಿತಿಯನ್ನು ನೀಡಿದರು ಪಾರ್ಟ್ ಸಂಖ್ಯೆ ಬದಲಾದ ಬಗ್ಗೆ ಸಭೆಯಲ್ಲಿ ತಿಳಿಸಲಾಯಿತು ನಂತರ ಸಾರ್ವಜನಿಕರ SIR ಕುರಿತು ಸಂಶಯದ ಬಗ್ಗೆ ಕೇಳಿ ಮಾಹಿತಿಯನ್ನು ನೀಡಲಾಯಿತು. ಧನ್ಯವಾದ ಹಾಗೂ ರಾಷ್ಟ್ರ ಗೀತೆಯೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು



