Flash News

ಧಾರ್ಮಿಕ–ಸಾಮಾಜಿಕ ಸೇವೆಗೆ ಹೊಸ ಚೈತನ್ಯ: SKSSF ಮಾರಿಪಳ್ಳ ಅಧ್ಯಕ್ಷರಾಗಿ ಇಮ್ರಾನ್ ಆಯ್ಕೆ

ಮಾರಿಪಳ್ಳ: ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸೇವಾ ಕ್ಷೇತ್ರಗಳಲ್ಲಿ ಸಕ್ರಿಯವಾಗಿರುವ SKSSF ಮಾರಿಪಳ್ಳ ಘಟಕದ ನೂತನ ಸಮಿತಿಯನ್ನು ರಚಿಸಲಾಗಿದೆ. ಅಧ್ಯಕ್ಷರಾಗಿ ಇಮ್ರಾನ್ ಆಯ್ಕೆಯಾಗಿದ್ದು, ಪ್ರಧಾನ ಕಾರ್ಯದರ್ಶಿಯಾಗಿ ಲತೀಫ್ ಮಲಾರ್, ಕೋಶಾಧಿಕಾರಿಯಾಗಿ ಅಬ್ದುಲ್ಲಾ ಹಾಗೂ ವರ್ಕಿಂಗ್ ಕಾರ್ಯದರ್ಶಿಯಾಗಿ ಇಂಶಾದ್ ಆಯ್ಕೆಯಾಗಿದ್ದಾರೆ.


ಸಮುದಾಯದ ಯುವಜನರನ್ನು ಸಂಘಟಿಸಿ ಧಾರ್ಮಿಕ ಜಾಗೃತಿ, ಶೈಕ್ಷಣಿಕ ಪ್ರೋತ್ಸಾಹ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮುಂದುವರಿಸುವ ಉದ್ದೇಶದಿಂದ ನೂತನ ಸಮಿತಿ ಕಾರ್ಯನಿರ್ವಹಿಸಲಿದೆ.


ಉಪಾಧ್ಯಕ್ಷರಾಗಿ ಜಲೀಲ್, ನಿಸಾರ್ ಹಾಗೂ ನವಾಝ್; ಜೊತೆ ಕಾರ್ಯದರ್ಶಿಗಳಾಗಿ ಫವಾಝ್, ಶಾಹಿದ್ ಹಾಗೂ ಸುಹೈಲ್ ಯಮಾನಿ ಆಯ್ಕೆಯಾಗಿದ್ದಾರೆ.


ಸೆಕ್ರಟ್ರಿಯೇಟ್ ಸದಸ್ಯರಾಗಿ ಅಬ್ದುಲ್ ಸಲಾಮ್, ನವಾಝ್, ಎ. ಇಬ್ರಾಹಿಂ, ಮನ್ಸೂರ್ ಹಾಗೂ ಅಶ್ಫಾಕ್ ಫೈಝಿ, ಕ್ಲಸ್ಟರ್ ಕೌನ್ಸಿಲರ್‌ಗಳಾಗಿ ರಮ್ಲಾನ್, ಅಶ್ಫಾಕ್ ಫೈಝಿ, ನೌಫಲ್ ಹಾಗೂ ಇನಾಯತ್ ನೇಮಕಗೊಂಡಿದ್ದಾರೆ.


ನೂತನ ಸಮಿತಿಯ ನೇತೃತ್ವದಲ್ಲಿ ಮಾರಿಪಳ್ಳ SKSSF ಘಟಕವು ಮುಂದಿನ ದಿನಗಳಲ್ಲಿ ಧಾರ್ಮಿಕ, ಶೈಕ್ಷಣಿಕ ಮತ್ತು ಜನಪರ ಸೇವಾ ಕಾರ್ಯಗಳಲ್ಲಿ ಮತ್ತಷ್ಟು ಸಕ್ರಿಯವಾಗಿ ತೊಡಗಿಸಿಕೊಳ್ಳುವ ನಿರೀಕ್ಷೆಯಿದೆ.