Flash News

ದುಬೈ: ಇರಾನ್ ದಾಳಿಯ ವೀಡಿಯೋ ಹಂಚಿಕೊಂಡರೆ 50 ಲಕ್ಷ ರೂ. ದಂಡ

ಇತ್ತೀಚೆಗೆ ದುಬೈ ಮೇಲೆ ನಡೆದ ಇರಾನ್ ಡ್ರೋನ್ ದಾಳಿಗಳು ಆತಂಕ ಮೂಡಿಸಿವೆಯಾದರೂ, ಈ ಘಟನೆಯ ನೈಜ ಚಿತ್ರಣ ಹೊರಜಗತ್ತಿಗೆ ಹೆಚ್ಚು ರವಾನೆಯಾಗುತ್ತಿಲ್ಲ. ದಾಳಿಯ ದೃಶ್ಯಗಳು, ವಿಡಿಯೊಗಳು ಅಥವಾ ‘ರೀಲ್ಸ್’ಗಳನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರೆ ಬರೋಬ್ಬರಿ ಸುಮಾರು 50 ಲಕ್ಷ ರೂ. ದಂಡ ವಿಧಿಸಲಾಗುವುದು ಎಂದು ದುಬೈ ಸರ್ಕಾರ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ​ತೈಲ ಆಧಾರಿತ ಆರ್ಥಿಕತೆಯಿಂದ ಹೊರಬಂದು ಪ್ರವಾಸೋದ್ಯಮ, ವಾಣಿಜ್ಯ ಹಾಗೂ ರಿಯಲ್ ಎಸ್ಟೇಟ್ ಕ್ಷೇತ್ರಗಳತ್ತ ದುಬೈ ಮುಖ ಮಾಡಿದೆ. ಭವಿಷ್ಯದ ಆರ್ಥಿಕ ಭದ್ರತೆಗಾಗಿ ದುಬೈ […]

ಇರಾನ್‌ ಪ್ರತೀಕಾರ: ಇಸ್ರೇಲ್‌ಗೆ ನುಗ್ಗಿದ ಮಿಸೇಲ್, ಹಲವು ಕಟ್ಟಡಗಳು ಉಡೀಸ್, 9 ಮಂದಿ ಖಲ್ಲಸ್

ಟೆಲ್ ಅವೀವ್: ಮಧ್ಯ ಇಸ್ರೇಲ್‌ನ ಬೈತ್ ಶೆಮೇಶ್ ನಗರದ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 9 ಮಂದಿ ಮೃತಪಟ್ಟಿದ್ದು, 27 ಜನರು ಗಾಯಗೊಂಡಿದ್ದಾರೆ. ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು aljazeera.com ವರದಿ ಮಾಡಿದೆ. ಮ್ಯಾಗೆನ್ ಡೇವಿಡ್ ಆಡಮ್ ಆಂಬ್ಯುಲೆನ್ಸ್ ಸೇವೆಯ ಪ್ರಕಾರ, ಜೆರುಸಲೇಂನ ಪಶ್ಚಿಮಕ್ಕೆ 30 ಕಿಮೀ ದೂರದಲ್ಲಿರುವ ಮಧ್ಯ ಇಸ್ರೇಲ್‌ನ ಬೈತ್ ಶೆಮೇಶ್ ನಗರದಲ್ಲಿ ಇರಾನಿನ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 9 ಮಂದಿ ಮೃತಪಟ್ಟಿದ್ದಾರೆ. ಇಸ್ರೇಲ್ ಸೇನೆಯು ಟೆಲಿಗ್ರಾಮ್‌ನಲ್ಲಿ ನೀಡಿದ […]

ಸೌದಿ ಅರೇಬಿಯಾಕ್ಕೆ ಮತ್ತೆ ಇರಾನ್ ದಾಳಿ: ರಿಯಾದ್ ನಲ್ಲಿ ಭಾರೀ ಸ್ಫೋಟ; ಪ್ರತೀಕಾರದ ಕಿಚ್ಚು

ರಿಯಾದ್: ಸೌದಿ ಅರೇಬಿಯಾದ ರಾಜಧಾನಿ ರಿಯಾದ್ ನಗರದ ಪೂರ್ವ ಭಾಗದಲ್ಲಿ ಭಾರೀ ಸ್ಫೋಟಗಳ ಶಬ್ದಗಳು ಕೇಳಿಬಂದಿರುವುದಾಗಿ ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ ಪೂರ್ವ ರಿಯಾದ್ ನ ನಿವಾಸಿಗಳ ಪ್ರಕಾರ, ಒಂದರ ಹಿಂದೆ ಒಂದಾಗಿ ಹಲವು ದೊಡ್ಡ ಸ್ಫೋಟಗಳು ಸಂಭವಿಸಿದ್ದು, ಅದರ ನಂತರ ಆಕಾಶದಲ್ಲಿ ದಟ್ಟ ಹೊಗೆ ಆವರಿಸಿರುವುದು ಗೋಚರಿಸಿದೆ. ಎಎಫ್‌ಪಿ ವರದಿ ಪ್ರಕಾರ, ಅಲ್ಲಿನ ವರದಿಗಾರರೂ ಸ್ಫೋಟಗಳ ಶಬ್ದವನ್ನು ನೇರವಾಗಿ ಕೇಳಿದ್ದಾರೆ ಎಂದು ತಿಳಿದು ಬಂದಿದೆ ಎಂದು Aljazeera ವರದಿ ಮಾಡಿದೆ. ಘಟನೆಯ ಸ್ವರೂಪ, ಸ್ಫೋಟಗಳ […]

ಇರಾನ್ ಸರ್ವೋಚ್ಛ ನಾಯಕ ಖಮೇನಿ ಹತ್ಯೆ: ಖಚಿತಪಡಿಸಿದ ಇರಾನ್

ವಾಷಿಂಗ್ಟನ್: ಇರಾನ್ ಸರ್ವೋಚ್ಛ ನಾಯಕ ಅಯತೊಲ್ಲ ಖಮೇನಿ ಅವರನ್ನು ಹತ್ಯೆಯಾಗಿದೆ ಎಂದು ವರದಿಯಾಗಿದೆ. ಇಸ್ಲಾಮಿಕ್ ಗಣರಾಜ್ಯದ ಮೇಲೆ ಅಮೆರಿಕ-ಇಸ್ರೇಲಿ ನಡೆಸಿದ ಜಂಟಿ ದಾಳಿಯಲ್ಲಿ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಸಾವನ್ನಪ್ಪಿದ್ದಾರೆ ಎಂದು ಇರಾನ್ ಸ್ಟೇಟ್ಸ್‌ ಮೀಡಿಯಾ ಖಚಿತಪಡಿಸಿದೆ. ಈ ಬೆಳವಣಿಗೆ ಬಳಿಕ ಇರಾನ್‌ ದೇಶಾದ್ಯಂತ 40 ದಿನಗಳ ಶೋಕಾಚರಣೆ ಘೋಷಿಸಿದೆ. “ಇತಿಹಾಸದ ಅತ್ಯಂತ ದುಷ್ಟ ಜನರಲ್ಲಿ ಒಬ್ಬರಾದ ಖಮೇನಿ ಸಾವನ್ನಪ್ಪಿದ್ದಾರೆ. ಇದು ಇರಾನ್ ಜನರು ಮಾತ್ರವಲ್ಲ, ಎಲ್ಲಾ ಅಮೆರಿಕನ್ನರು ಖಮೇನಿ ಮತ್ತವರ ರಕ್ತಪಿಪಾಸು ಗುಂಪಿನಿಂದ ಕೊಲ್ಲಲ್ಪಟ್ಟ […]

ಖಮೇನಿ ಹತ್ಯೆ ದೃಢಪಡಿಸಿದ ಡೊನಾಲ್ಡ್‌ ಟ್ರಂಪ್: ಜಗತ್ತಿನ ದುಷ್ಟ ವ್ಯಕ್ತಿ ಉಸಿರು ನಿಂತಿದೆ ಎಂದ ಯುಎಸ್‌ ಅಧ್ಯಕ್ಷ!

ಟೆಹ್ರಾನ್‌: ಅಮೆರಿಕ-ಇಸ್ರೇಲ್ ಜಂಟಿ ಮಿಲಿಟರಿ ಕಾರ್ಯಾಚರಣೆಯ ಕೆಲವು ಗಂಟೆಗಳ ನಂತರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಹತ್ಯೆಯನ್ನು ದೃಢಪಡಿಸಿದ್ದಾರೆ. ಖಮೇನಿ ಸಾವು ನಿಜ ಎಂದು ಇಸ್ರೇಲ್‌ ಮಾಧ್ಯಮ ಘೋಷಣೆ ಮಾಡಿತ್ತು. ಅಮೆರಿಕ-ಇಸ್ರೇಲ್‌ ದಾಳಿಯಲ್ಲಿ ಇರಾನ್‌ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಹತ್ಯೆ.ಆಯತೊಲ್ಲಾ ಅಲಿ ಖಮೇನಿ ಹತ್ಯೆ ದೃಢಪಡಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌.ಜಗತ್ತಿನ ಅತಿ ದುಷ್ಟ ವ್ಯಕ್ತಿಯ ಉಸಿರು ನಿಂತಿದೆ ಎಂದು ಪೋಸ್ಟ್‌ ಮಾಡಿದ ಅಮೆರಿಕ ಅಧ್ಯಕ್ಷ.

Dubai | ಪ್ಲಾಮ ಜುಮೇರಾ ಮೇಲೆ ಇರಾನ್ ದಾಳಿ: ಹೊತ್ತಿ ಉರಿದ ಹೋಟೆಲ್‌ಗಳು

ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಗುರಿಗಳ ಮೇಲೆ ಇರಾನ್ ದಾಳಿ ನಡೆಸಿದ ನಂತರ ಶನಿವಾರ ದುಬೈನಾದ್ಯಂತ ಸ್ಫೋಟಗಳ ಶಬ್ದಗಳು ಕೇಳಿಬಂದವು. ಈ ಮಧ್ಯೆ, ದುಬೈನ ಪಾಮ್ ಜುಮೇರಾದ ಫೇರ್‌ಮಾಂಟ್ ದಿ ಪಾಮ್ ಹೋಟೆಲ್ ಬಳಿ ಬೆಂಕಿ ಮತ್ತು ಹೊಗೆಯನ್ನು ತೋರಿಸುವ ವೀಡಿಯೊಗಳು ಕಾಣಿಸಿಕೊಂಡವು. ಪಾಮ್ ಜುಮೇರಾ ಪ್ರದೇಶದ ಕಟ್ಟಡವೊಂದರಲ್ಲಿ ನಡೆದ “ಘಟನೆ”ಗೆ ತುರ್ತು ತಂಡಗಳು ಪ್ರತಿಕ್ರಿಯಿಸಿವೆ ಎಂದು ಅಧಿಕಾರಿಗಳು ದೃಢಪಡಿಸಿದರು ಆದರೆ ಕಟ್ಟಡವು ಹೋಟೆಲ್ ಆಗಿದೆಯೇ ಎಂಬುದು ಸೇರಿದಂತೆ ಹೆಚ್ಚಿನ ವಿವರಗಳನ್ನು ನೀಡಲಿಲ್ಲ. “ಪಾಮ್ ಜುಮೇರಾ ಪ್ರದೇಶದ ಕಟ್ಟಡವೊಂದರಲ್ಲಿ ಘಟನೆ […]

ಇಸ್ರೇಲ್ ಮತ್ತು ಇರಾನ್ ಯುದ್ಧದಿಂದ ಭಾರತಕ್ಕೆ ಶಾಕ್​​: Petrol, diesel ದರ ಏರಿಕೆ ಸಾಧ್ಯತೆ?

ದೆಹಲಿ: ಪಶ್ಚಿಮ ಏಷ್ಯಾದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವೆ ಉಲ್ಬಣಿಸಿರುವ ಸಂಘರ್ಷವು ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದೆ. ಈ ಯುದ್ಧದ ಪರಿಣಾಮವಾಗಿ ಭಾರತದಲ್ಲಿ ಇಂಧನ ಬೆಲೆಗಳು ಏರಿಕೆಯಾಗಲಿವೆಯೇ ಎಂಬ ಆತಂಕ ಸಾರ್ವಜನಿಕರಲ್ಲಿ ಮನೆಮಾಡಿದೆ. ಇರಾನ್ ವಿಶ್ವದ ಪ್ರಮುಖ ತೈಲ ಉತ್ಪಾದಕ ರಾಷ್ಟ್ರಗಳಲ್ಲಿ ಒಂದಾಗಿದೆ. ಯುದ್ಧದ ಕಾರಣದಿಂದಾಗಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಭೀತಿಯಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ ಏರಿಕೆಯಾಗುತ್ತಿದೆ. ಭಾರತವು ತನ್ನ ತೈಲದ ಅಗತ್ಯದ ಶೇ. 80ಕ್ಕಿಂತ ಹೆಚ್ಚಿನ ಪಾಲನ್ನು ಆಮದು ಮಾಡಿಕೊಳ್ಳುತ್ತದೆ. […]

ಖಮೇನಿ ಕಚೇರಿ ಸಮೀಪ ಇಸ್ರೇಲ್ ದಾಳಿ: ಎಲ್ಲಿದ್ದಾರೆ ಇರಾನ್‌ನ ಪರಮೋಚ್ಚ ನಾಯಕ?

ಅಮೆರಿಕ ಹಾಗೂ ಇಸ್ರೇಲ್ ಸೇರಿ ಇರಾನ್‌ ಮೇಲೆ ಶನಿವಾರ ದಾಳಿ ನಡೆಸಿವೆ, ಇರಾನ್‌ನ ಅಣು ಯೋಜನೆ ಸಂಬಂಧ ಮಾತುಕತೆ ಮುರಿದುಬಿದ್ದ ಕಾರಣ ಈ ದಾಳಿ ನಡೆದಿದೆ. ಇರಾನ್ ರಾಜಧಾನಿ ಟೆಹರಾನ್ ಸೇರಿ ದೇಶದ ವಿವಿಧಡೆ ದಾಳಿ ನಡೆಸಲಾಗಿದೆ. ಇರಾನ್‌ನ ಪರಮೋಚ್ಚ ನಾಯಕ ಆಯತ್‌ಉಲ್ಲಾ ಖಮೇನಿ ಅವರ ನಿವಾಸ, ಕಚೇರಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆದಿವೆ. ಟೆಹ್ರಾನ್‌ನ ಉತ್ತರದ ಶೇಮಿರಾನ್‌ನಲ್ಲಿರುವ ಅಧ್ಯಕ್ಷರ ಅರಮನೆಯ ಸಮೀಪದ ಪ್ರದೇಶ, ಖಮೇನಿ ಅವರ ಕಚೇರಿಗಳ ಸಂಕೀರ್ಣದ ಮೇಲೆ ಏಳು ಕ್ಷಿಪಣಿಗಳು ದಾಳಿ ಮಾಡಿವೆ ಎಂದು […]

ಇರಾನ್ ದಾಳಿ ಬಳಿಕ ಗಲ್ಫ್‌ ನಲ್ಲಿ ಉದ್ವಿಗ್ನತೆ: ಸೌದಿ ಅರೇಬಿಯಾದ ರಿಯಾದ್‌ ನಲ್ಲಿ ಸ್ಫೋಟ, ಅಬುಧಾಬಿಯಲ್ಲಿ ಕನಿಷ್ಠ ಒಬ್ಬ ಮೃತ್ಯು

ಅಂತಾರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದ ಯುಎಇ ರಿಯಾದ್: ಸೌದಿ ಅರೇಬಿಯಾದ ರಾಜಧಾನಿ ರಿಯಾದ್ನಲ್ಲಿ ಸ್ಫೋಟಗಳು ಸಂಭವಿಸಿರುವುದಾಗಿ ಎಎಫ್ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಸ್ಫೋಟಗಳ ಸ್ವರೂಪ, ಹಾನಿ ಮತ್ತು ಕಾರಣಗಳ ಕುರಿತು ತಕ್ಷಣದ ಅಧಿಕೃತ ವಿವರಗಳು ಲಭ್ಯವಾಗಿಲ್ಲ. ಇದೇ ವೇಳೆ ಗಲ್ಫ್ ಪ್ರದೇಶದಲ್ಲಿನ ಪ್ರಮುಖ ಸೈನಿಕ ನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ಇರಾನ್ ದೃಢಪಡಿಸಿದೆ. ಖತರ್ ನಲ್ಲಿರುವ ಅಲ್-ಉದೈದ್ ವಾಯುನೆಲೆ, ಕುವೈತ್ ನ ಅಲ್-ಸಲೇಂ ವಾಯುನೆಲೆ, ಯುಎಇಯ ಅಲ್-ದಫ್ರಾ ವಾಯುನೆಲೆ ಹಾಗೂ ಬಹ್ರೇನ್‌ […]

ಜಗತ್ತಿನಲ್ಲಿ ಮೂರನೇ ಯುದ್ಧ ಆರಂಭ; ಇರಾನ್ ಮೇಲೆ ನಾವೇ ದಾಳಿ ನಡೆಸಿದ್ದೆಂದು ಘೋಷಿಸಿದ ಅಮೆರಿಕ

ನವದೆಹಲಿ, ಫೆಬ್ರವರಿ 28: ಇರಾನ್ ಮೇಲೆ ಯುದ್ಧ (Iran War) ಆರಂಭವಾಗಿದೆ. ಇಸ್ರೇಲ್ ರಕ್ಷಣಾ ಸಚಿವರು ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾವು ಇರಾನ್ ಮೇಲೆ ದಾಳಿ ಆರಂಭಿಸಿದ್ದೇವೆ ಎಂದು ಘೋಷಿಸಿದ್ದಾರೆ. ಇಷ್ಟು ದಿನ ಇಸ್ರೇಲ್​ಗೆ ಬಾಹ್ಯ ಬೆಂಬಲ ನೀಡುತ್ತಿದ್ದ ಅಮೆರಿಕ ಇದೀಗ ನೇರವಾಗಿಯೇ ಅಖಾಡಕ್ಕಿಳಿದಿದೆ. ಹೀಗಾಗಿ, ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್​ನ ಯುದ್ಧ ಆರಂಭವಾಗಿದೆ. ಇದು ಜಗತ್ತಿನಲ್ಲಿ ನಡೆಯುತ್ತಿರುವ ಮೂರನೇ ಯುದ್ಧವಾಗಿದೆ. ರಷ್ಯಾ ಮತ್ತು ಉಕ್ರೇನ್, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ ಯುದ್ಧ […]