Flash News

“ನೀನ್ ನೋಕುಲಾ, ಖಾಲಿ ನೋಕು”: ಗಿಫ್ಟ್ ಪಡೆದು ಕೈಕೊಟ್ಟ ಕಿಲಾಡಿ ಲವರ್; ಆಶಿಕ್ ಸಾವಿನ ಕೇಸ್‌ನಲ್ಲಿ ಪ್ರೇಯಸಿ ಸೇರಿ ಮೂವರ ವಿರುದ್ಧ FIR

ಮಂಗಳೂರು: ಈದ್ ಹಬ್ಬದ ದಿನವೇ ಮಂಗಳೂರಿನಲ್ಲಿ ಯುವಕ ಆತ್ಮ*ಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ರೋಚಕ ಟ್ವಿಸ್ಟ್ ಸಿಕ್ಕಿದ್ದು, ಯುವಕ ಪ್ರೀತಿಸುತ್ತಿದ್ದ ಹುಡುಗಿ ಹಾಗೂ ಆಕೆಯ ತಾಯಿ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಮಂಗಳೂರಿನ ಮೂಡುಶೆಡ್ಡೆಯ ಎದುರುಪದವು ನಿವಾಸಿ 22 ವರ್ಷದ ಮೊಹಮ್ಮದ್ ಆಶಿಕ್ ಮಾರ್ಚ್‌ 21ರಂದು ಸಾವಿಗೆ ಶರಣಾಗಿದ್ದರು. ಈ ಪ್ರಕರಣ ಸಂಬಂಧ ತನಿಖೆ ನಡೆಸಿದ ಪೊಲೀಸರು ಯುವಕನ ಕುಟುಂಬದವರ ದೂರಿನ ಮೇರೆಗೆ ಆತ ಪ್ರೀತಿಸುತ್ತಿದ್ದ ಹುಡುಗಿ ಹಾಗೂ ಆಕೆಯ ತಾಯಿ ಸೇರಿದಂತೆ ಮೂವರ ವಿರುದ್ಧ […]

ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಫೈರೋಜ್ ಪಠಾಣ್​ ಬರ್ಬರ ಹತ್ಯೆ!, ಏಪ್ರಿಲ್​ 24ಕ್ಕೆ ನಿಗದಿಯಾಗಿತ್ತು ಮದುವೆ

ಧಾರವಾಡ: ಅವಳಿ ನಗರದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದುದ್ದು, ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದ ಫೈರೋಜ್ ಪಠಾಣ್​ನನ್ನು ಧಾರವಾಡ ನಗರದ ಹಾಶ್ಮಿ ನಗರದಲ್ಲಿರುವ ಅವರ ಮನೆಯಲ್ಲಿ ಬರ್ಬರವಾಗಿ ಹತ್ಯೆಗೈಯಲಾಗಿದೆ. ಶುಕ್ರವಾರ ರಾತ್ರಿ ಆತನ ಮನೆಗೆ ನುಗ್ಗಿದ ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರು ಮಂದಿ ಸೇರಿ ಈ ಕೃತ್ಯವನ್ನೆಸಗಿದ್ದಾರೆ ಎನ್ನಲಾಗಿದೆ. ಇಬ್ಬರು ಆರೋಪಿಗಳು ಪೊಲೀಸ್ ವಶಕ್ಕೆ!ಮೊಹಮ್ಮದ್ ಶಾ […]

ನರಮೇಧ ನಡೆಸುವ ಇಸ್ರೇಲ್ ವಿಷಜಂತುಗಳಿಗೆ ತಕ್ಕ ಪಾಠ ಕಲಿಸಬೇಕು: ಮಿಯಾ ಖಲೀಫಾ ಗುಡುಗು

ಮಿಯಾ ಖಲೀಫಾ ವಿಶ್ವದ ಬಲು ಜನಪ್ರಿಯ ನೀಲಿ ಚಿತ್ರತಾರೆಯರಲ್ಲಿ ಒಬ್ಬರು. ಬಹು ಬೇಗನೇ ನಿವೃತ್ತಿ ಪಡೆದರಾದರೂ ಅವರ ಜನಪ್ರಿಯತೆ ಇಂದಿಗೂ ತಗ್ಗಿಲ್ಲ. ನೀಲಿ ಚಿತ್ರಗಳಲ್ಲಿ ನಟಿಸುವುದು ಬಿಟ್ಟ ಬಳಿಕ ಮಿಯಾ ಖಲೀಫಾ, ಇನ್​​ಸ್ಟಾಗ್ರಾಂ ಇನ್​​ಫ್ಲಯುಯೆನ್ಸರ್ ಆಗಿ, ವೆಬ್ ಕ್ಯಾಮ್ ಮಾಡೆಲ್ ಹಾಗೂ ಸ್ಪೋರ್ಟ್ ಕಮೆಂಟೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ವೆಬ್ ಕ್ಯಾಮ್ ಮಾಡೆಲಿಂಗ್​​ ಮೂಲಕ ದೊಡ್ಡ ಗಳಿಕೆಯನ್ನೇ ಮಾಡುತ್ತಿರುವ ಮಿಯಾ ಖಲೀಫಾ, ಇದೀಗ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದು, ವಿಡಿಯೋನಲ್ಲಿ ಕಣ್ಣೀರು ಹಾಕಿದ್ದಾರೆ. ಮಿಯಾ ಖಲೀಫಾ, […]

ದ್ವಿತೀಯ ಪಿಯುಸಿ ಫಲಿತಾಂಶ: ಮೊಹಮ್ಮದ್ ಝಾಹೀರ್‌ಗೆ 445 ಅಂಕ

ಮಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಮಿಲಗ್ರಿಸ್ ಕಾಲೇಜಿನ ಮೊಹಮ್ಮದ್ ಝಾಹೀರ್‌ಗೆ 445 ಅಂಕಗಳೊಂದಿಗೆ ತೇರ್ಗಡೆಗೊಂಡಿದ್ದಾರೆ. ಇವರು ಮೊಹಮ್ಮದ್ ಇಕ್ಬಾಲ್, ಝರಿನಾ ದಂಪತಿಯ ಪುತ್ರನಾಗಿದ್ದಾರೆ.

ದ್ವಿತೀಯ ಪಿಯುಸಿ ಫಲಿತಾಂಶ: ಕಣ್ಣೂರಿನ ಮೆಹನಾಝ್’ಗೆ 509 ಅಂಕ

ಮಂಗಳೂರು: 2025-26ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಸೇಂಟ್ ಆಗ್ನೆಸ್ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಮೈಮುನಾ ಮೆಹನಾಝ್ 600/509 (84%) ಅಂಕಗಳೊಂದಿಗೆ ತೇರ್ಗಡೆಗೊಂಡಿದ್ದಾರೆ. ಇವರು ಕಣ್ಣೂರಿನ ನಿವಾಸಿ, ಹಾಗೂ ಭಾರತ್ ಬೀಡಿ ಗುತ್ತಿಗೆದಾರ ನಾಸಿರ್ ಮುಹಮ್ಮದ್ ಹಾಗೂ ಜಮೀಲ ದಂಪತಿಯ ಪುತ್ರಿಯಾಗಿದ್ದಾರೆ. ಇವರ ಈ ಸಾಧನೆಗೆ ಶಿಕ್ಷಕರು ಹಾಗೂ ಕುಟುಂಬ ಸದಸ್ಯರು ಶುಭಹಾರೈಸಿದ್ದಾರೆ.

Mangaluru | ASI ಐತಪ್ಪ ಕೊಲೆ ಯತ್ನ ಪ್ರಕರಣ: ಆರೋಪಿ ಸಮೀರ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ

ಮಂಗಳೂರು: ಎಎಸ್ಸೈ ಐತಪ್ಪ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಸಮೀರ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ಆರೋಪಿ ಸಮೀರ್ ವಿರುದ್ಧ ಸಾಮೂಹಿಕ ಅತ್ಯಾಚಾರ ಸಹಿತ 14 ಪ್ರಕರಣಗಳು ದಾಖಲಾಗಿವೆ. ಈತನ ಸುಳಿವು ಪತ್ತೆಯಾದಲ್ಲಿ ಮಾಹಿತಿ ನೀಡುವಂತೆ ಕಮಿಷನರ್ ಮನವಿ ಮಾಡಿದ್ದಾರೆ. ಈ ಹಿಂದೆ ಆರೋಪಿ ಸಫ್ವಾನ್ ಎಂಬಾತನ ಮೇಲೂ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿ ಕಾನೂನು ಕ್ರಮ ಜರುಗಿಸಲಾಗಿತ್ತು ಎಂದು ಅಯುಕ್ತ […]

ಟೊಪ್ಪಿ ನೌಫಲ್ ಸಾವನ್ನು ಸಂಭ್ರಮಿಸಿದ ನೆಪ: ಟ್ಯಾಬ್ಲೆಟ್ ಆರೀಫ್ ಬರ್ಬರ ಕೊಲೆ; ಹತ್ಯೆ ನಡೆಸಿ ಪರಾರಿಯಾದ ಆರೋಪಿಗಳ ಬಂಧನ

ಮಂಗಳೂರು: ತೊಕ್ಕೋಟು ಓವರ್ ಬ್ರಿಡ್ಜ್ ಮೇಲೆ ನಡೆದ ಅರಿಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡವು ಮಹತ್ವದ ಪ್ರಗತಿ ಸಾಧಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಏಳು ಮಂದಿ ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಕೆಲ ತಿಂಗಳುಗಳ ಹಿಂದೆ ಉಪ್ಪಳದಲ್ಲಿ ಅನುಮಾನಾಸ್ಪದವಾಗಿ ಕೊಲೆಯಾದ ಬಜಾಲ್‌ನ ನೌಫಲ್ ಎಂಬಾತನ ಸಾವನ್ನು ಅರಿಫ್ ಸಂಭ್ರಮಿಸಿದ್ದೇ ಈ ಭೀಕರ ಕೊಲೆಗೆ ಮುಖ್ಯ ಕಾರಣ ಎಂದು ಹೇಳಲಾಗುತ್ತದೆ. ಈ ಸೇಡಿನ ಕೃತ್ಯಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ತಾಂತ್ರಿಕ ಮತ್ತು ಹಣಕಾಸಿನ ನೆರವು ದೊರೆತಿರುವುದು ಪೊಲೀಸರ ವಿಚಾರಣೆಯಿಂದ ದೃಢಪಟ್ಟಿದೆ. […]

ಮುಸ್ಲಿಂ ಹೆಣ್ಣು ಮಕ್ಕಳ ಜೊತೆಗೆ ಫ್ರೆಂಡ್‍ಶಿಪ್ ಮಾಡ್ಬೇಡಿ, ಬಹಳ ಡೇಂಜರ್: ಚಕ್ರವರ್ತಿ ಸೂಲಿಬೆಲೆ ವಿವಾದ

ಧಾರವಾಡ: ಮುಸ್ಲಿಂ ಹೆಣ್ಣು ಮಕ್ಕಳ ಜೊತೆಗೆ ಫ್ರೆಂಡ್‍ಶಿಪ್ ಮಾಡ್ಬೇಡಿ, ಬಹಳ ಡೇಂಜರ್ ಎಂದು ಚಕ್ರವರ್ತಿ ಸೂಲಿಬೆಲೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು, ಮುಸ್ಲಿಂ ಹೆಣ್ಣು ಮಕ್ಕಳು ಹಿಂದೂ ಹೆಣ್ಣು ಮಕ್ಕಳನ್ನು ಬಲವಂತವಾಗಿ ಮನೆಗೆ ಕರೆದುಕೊಂಡು ಹೋಗಿ ಮದ್ದು ಬರುವ ಔಷಧಿ ನೀಡುತ್ತಾರೆ. ಬಳಿಕ ಅವರ ಅಣ್ಣಂದಿರು ಲೈಂಗಿಕ ದೌರ್ಜನ್ಯ ಎಸಗುತ್ತಾರೆ ಎಂದು ಹೇಳಿದ್ದಾರೆ.

ಮಂಗಳೂರು | ಮಸೀದಿ ಕಾಣಿಕೆ ಡಬ್ಬಿ ಕಳವು ಯತ್ನ: ಆರೋಪಿಯ ಬಂಧನ

ಸುಳ್ಯ: ಮಸೀದಿಯ ಹರಕೆ ಡಬ್ಬಿಯಿಂದ ಕಳ್ಳತನ ನಡೆಸುತ್ತಿದ್ದ ಆರೋಪಿಯನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಎಲಿಮಲೆಯಲ್ಲಿ ಸಂಭವಿಸಿದೆ. ಬಂಧಿತನನ್ನು ಆಂಧ್ರ ಪ್ರದೇಶ ಮೂಲದ ಮಹಮ್ಮದ್ ಹಾದಿಭಾಷ ಎಂದು ಗುರುತಿಸಲಾಗಿದೆ. ಎ. 6ರಂದು ಬೆಳಗ್ಗೆ ಎಲಿಮಲೆ ಮಸೀದಿಯ ಹೊರಭಾಗದಲ್ಲಿ ಶಬ್ದ ಕೇಳಿಬಂದ ಹಿನ್ನೆಲೆಯಲ್ಲಿ ಮಸೀದಿಯ ಗುರು ಹೊರಬಂದು ನೋಡಿದಾಗ ವ್ಯಕ್ತಿಯೊಬ್ಬ ಡಬ್ಬಿಯನ್ನು ಒಡೆಯುತ್ತಿರುವುದು ಕಂಡುಬಂದಿತು. ಆತನನ್ನು ಹಿಡಿಯಲು ಯತ್ನಿಸಿದರೂ ಆತ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ಎಲಿಮಲೆ ಪೇಟೆಯ ಅಡಿಕೆ ವ್ಯಾಪಾರಿ ಹ್ಯಾರಿಸ್ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದಾಗ […]

ಕರ್ನಾಟಕ ರಾಜ್ಯ ಮಾನವ ಹಕ್ಕು ಪರಿಷತ್ ಯುವ ಉಪಾಧ್ಯಕ್ಷರಾಗಿ ಸಲೀತ್ ಎಕೆ ನೇಮಕ

ರಾಷ್ಟ್ರೀಯ ಅಪರಾಧ ನಿಗ್ರಹ ಮತ್ತು ಮಾನವ ಹಕ್ಕು ಇದರ ರಾಜ್ಯ ಉಪಾಧ್ಯಕ್ಷರಾಗಿ ಮುಹಮ್ಮದ್ ಸಲೀತ್ ಎ.ಕೆ ಆಯ್ಕೆಯಾಗಿದ್ದಾರೆ. ಡಾ. ಜಾನ್ ಸ್ಯಾಮುಯೆಲ್ ಅವರು ನೇಮಕ ಮಾಡಿ ಆದೇಶಿಸಿದ್ದಾರೆ. ಸಲೀತ್ ಎ.ಕೆ ಅವರು ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯಮಿಯಾಗಿದ್ದು, ಅನೇಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ರಾಜ್ಯ ಯುವ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿರುವ ಅವರು, ಐಬಿ ವೆಲ್ಫೇರ್ ಅಸೋಸಿಯೇಷನ್‌ನ ಕಾರ್ಯಾಧ್ಯಕ್ಷರಾಗಿದ್ದು, ಬ್ಯಾರಿ ಸೆಂಟ್ರಲ್ ಕಮೀಟಿ ಬೆಂಗಳೂರು ಇದರ ಉಪಾಧ್ಯಕ್ಷರಾಗಿದ್ದಾರೆ. ಹಾಗೆಯೇ ಎಕೆ ಗ್ರೂಪ್‌ನ ಸ್ಥಾಪಕರಾಗಿದ್ದು, ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಪುತ್ತೂರು […]