Flash News

ಅಜೀಂ ಪ್ರೇಮ್‌ಜಿ ಸಂಸ್ಥೆಯಿಂದ ಸರ್ಕಾರಿ ಆಸ್ಪತ್ರೆಗೆ ₹4 ಸಾವಿರ ಕೋಟಿ ಒಡಂಬಡಿಕೆ

ಬೆಂಗಳೂರು: ನಾಲ್ಕು ಸಾವಿರ ಕೋಟಿ ರು. ವೆಚ್ಚದಲ್ಲಿ ಒಂದು ಸಾವಿರ ಹಾಸಿಗೆ ಸಾಮರ್ಥ್ಯದ ಮಾನವ ಬಹು ಅಂಗಾಂಗ ಕಸಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮತ್ತು ನಿರ್ವಹಣೆ ಸಂಬಂಧ ಅಜೀಂ ಪ್ರೇಮ್‌ಜಿ ಪ್ರತಿಷ್ಠಾನದೊಂದಿಗೆ ರಾಜ್ಯ ಸರ್ಕಾರ ಶನಿವಾರ ಒಡಂಬಡಿಕೆ ಮಾಡಿಕೊಂಡಿದೆ. ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಅಜೀಂ ಪ್ರೇಮ್‌ಜಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನುರಾಗ್‌ ಬಹರ್‌ ಅವರು ಒಡಂಬಡಿಕೆಗೆ ಸಹಿ ಹಾಕಿದರು. ಒಡಂಬಡಿಕೆಯಂತೆ ಪ್ರತಿಷ್ಠಾನವು ಮುಂದಿನ ಐದು ವರ್ಷಗಳಲ್ಲಿ ರಾಜೀವ್‌ಗಾಂಧಿ […]

ಮಹಾರಾಷ್ಟ್ರ ಚುನಾವಣೆಗಳಲ್ಲಿ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿದ ಓವೈಸಿಯ ಎಐಎಂಐಎಂ

ಮುಂಬೈ: ಮಹಾರಾಷ್ಟ್ರದಲ್ಲಿ ಇತ್ತೀಚಿನ ಮಹಾನಗರ ಪಾಲಿಕೆಗಳ ಚುನಾವಣೆಗಳಲ್ಲಿ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿರುವ ಅಸದುದ್ದೀನ್ ಉವೈಸಿ ನೇತೃತ್ವದ ಎಐಎಂಐಎಂ ತನ್ನ ಕಾರ್ಪೊರೇಟರ್‌ಗಳ ಬಲವನ್ನು ಬಹುತೇಕ ದ್ವಿಗುಣಗೊಳಿಸಿಕೊಂಡಿದ್ದು,ರಾಜ್ಯಾದ್ಯಂತ ನಗರ ಸ್ಥಳೀಯ ಸಂಸ್ಥೆಗಳಲ್ಲಿ ತನ್ನ ಪ್ರಾತಿನಿಧ್ಯವನ್ನು ಗಮನಾರ್ಹವಾಗಿ ವಿಸ್ತರಿಸಿಕೊಂಡಿದೆ. ಎಐಎಂಐಎಂ ರಾಜ್ಯಾದ್ಯಂತ 29 ಮನಪಾಗಳ ಪೈಕಿ ಸ್ಪರ್ಧಿಸಿದ್ದ 12 ಕಡೆಗಳಲ್ಲಿ ಒಟ್ಟು 114 ಸ್ಥಾನಗಳನ್ನು ಗಳಿಸಿದೆ. ಹಿಂದಿನ ಮುನ್ಸಿಪಲ್ ಚುನಾವಣೆಗಳಲ್ಲಿ ಅದು ಗಳಿಸಿದ್ದ 48 ಸ್ಥಾನಗಳಿಗೆ ಹೋಲಿಸಿದರೆ ಇದು ಗಣನೀಯ ಏರಿಕೆಯಾಗಿದೆ. ಪಕ್ಷವು ಛತ್ರಪತಿ ಸಂಭಾಜಿನಗರದಲ್ಲಿ ತನ್ನ ಅತ್ಯುತ್ತಮ ಪ್ರದರ್ಶನವನ್ನು ದಾಖಲಿಸಿದೆ. […]

ಉಳ್ಳಾಲ ದರ್ಗಾ ಕಮಿಟಿ | ಕೋರ್ಟ್ ಆದೇಶವನ್ನು ಉಲ್ಲಂಘಿಸಿ ಮಹಾಸಭೆ; ಕ್ರಮ ಕೈಗೊಳ್ಳದ ವಕ್ಫ್ ಮಂಡಳಿ, ಅಧಿಕಾರಿಗಳ ವಿರುದ್ಧ ಆಕ್ರೋಶ

ಮಂಗಳೂರು: ಉಳ್ಳಾಲ ಸಯ್ಯದ್ ಮದನಿ ದರ್ಗಾ ಆಡಳಿತ ಕಮಿಟಿಯ ಅವ್ಯವಹಾರದ ಬಗ್ಗೆ ಕಮಿಟಿ ಸದಸ್ಯರೇ ಹೈಕೋರ್ಟ್ ಮೆಟ್ಟಿಲೇರಿ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಅವಕಾಶ ಕೇಳಿದ್ದು, ಹೈಕೋರ್ಟ್ ಇವರ ಪರವಾಗಿ ತೀರ್ಪು ನೀಡಿದ್ದರೂ ದರ್ಗಾ ಕಮಿಟಿಯ ಪದಾಧಿಕಾರಿಗಳು ಕೋರ್ಟ್ ಆದೇಶವನ್ನು ಉಲ್ಲಂಘಿಸಿ ಮಹಾಸಭೆಯನ್ನು ಕರೆದಿದ್ದಾರೆ. ಇದು ಏಕಪಕ್ಷೀಯ ಮತ್ತು ವಕ್ಫ್ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಟಿ ಕರೆದು ಮಾತನಾಡಿದ ದರ್ಗಾ ಕಮಿಟಿ ಸದಸ್ಯ ಫಾರೂಕ್ ಯು.ಎಚ್ ಅವರು, ಉಳ್ಳಾಲ ದರ್ಗಾ ಕಮಿಟಿಯ ಅವ್ಯವಹಾರ […]

‘ನಮ್ಮ ಬಾಡಿ ನಮ್ಮ ಇಷ್ಟ, ನಾನು ಕೇರೇ ಮಾಡಲ್ಲ’, ರಚಿತಾ ರಾಮ್

ರಚಿತಾ ರಾಮ್ ಒಂದು ಮಾತು ಹೇಳಿದ್ದಾರೆ. ಅದು ಎಲ್ಲ ಹೆಣ್ಣುಮಕ್ಕಳಿಗೂ ಸ್ಪೂರ್ತಿ ನೀಡುತ್ತದೆ. ಅಷ್ಟೆ ಮೋಟಿವೇಟ್ (Motivate) ಮಾಡೋ ರೀತಿನೇ ಇದೆ. ಕಲ್ಟ್ ಚಿತ್ರದ ಟ್ರೈಲರ್ ರಿಲೀಸ್ ಇವೆಂಟ್‌ ಅಲ್ಲಿ ಕೇಳಿದ ಪ್ರಶ್ನೆಗಳಿಗೆ ರಚಿತಾ ರಾಮ್ ನೇರಾನೇರವಾಗಿಯೆ ಮಾತನಾಡಿದ್ದಾರೆ. ನಮ್ಮ ದೇಹ ನಮ್ಮ ಇಷ್ಟ. ಹೇಗಾದರೂ ಇರ್ತಿವಿ, ನಿಮಗೆ ಯಾಕೆ ಅನ್ನೋದನ್ನೆ ರಚಿತಾ (Rachita) ಹೇಳಿದ್ದಾರೆ. ಇವರ ಈ ಮಾತುಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಗಮನ ಸೆಳೆಯುತ್ತಿವೆ. ಈ ಮಾತುಗಳ ಹಿನ್ನೆಲೆ ಏನು ಅನ್ನೋದು […]

ಇಸ್ಲಾಂಗೆ ಏಕೆ ಮತಾಂತರಗೊಂಡಿದ್ದು, ಈಗಲೇ ಘರ್ ವಾಪಸಿ ಮಾಡಿದರೆ ಅವಕಾಶ ಸಿಗುತ್ತದೆ: ಎ.ಆರ್.ರೆಹಮಾನ್ ಗೆ ವಿಎಚ್‌ಪಿ ಸಲಹೆ

ಮುಂಬಯಿ: ಸಂಗೀತ ಲೋಕದ ದಿಗ್ಗಜ, ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರು ಬಾಲಿವುಡ್ ನಲ್ಲಿ ಅವಕಾಶ ವಂಚಿತರಾಗುತ್ತಿದ್ದಾರೆ ಎನ್ನುವ ಕುರಿತು ಚರ್ಚೆ ನಡೆಯುತ್ತಿರುವ ವೇಳೆ ‘ಘರ್ ವಾಪಸಿ ಮಾಡಿದರೆ ಅವರಿಗೆ ಅವಕಾಶ ಸಿಗುತ್ತದೆ’ ಎಂದು ಹಿಂದೂ ಸಂಘಟನೆಗಳು ಹೇಳಿವೆ. ”ಕಳೆದ ಎಂಟು ವರ್ಷಗಳಿಂದ ನನಗೆ ಬಾಲಿವುಡ್ ಕೆಲಸದಲ್ಲಿ ಗಣನೀಯ ಕುಸಿತ ಕಂಡುಬಂದಿದ್ದು,ಕೋಮಿನ ಕಾರಣಕ್ಕೂ ಇರಬಹುದು. ಸೃಜನಶೀಲರಲ್ಲದ ಜನರು ಈಗ ನಿರ್ಧಾರಗಳನ್ನು ನಿಯಂತ್ರಿಸುತ್ತಿದ್ದಾರೆ” ಎಂದು ರೆಹಮಾನ್ ಇತ್ತೀಚೆಗೆ ಬಿಬಿಸಿ ಏಷ್ಯನ್ ನೆಟ್‌ವರ್ಕ್ ಗೆ ನೀಡಿದ […]

ಮುಸ್ಲಿಂ ಎಂಬ ಕಾರಣಕ್ಕೆ ಹಿಂದಿಯಲ್ಲಿ ನನಗೆ ಆಫರ್​​ಗಳು ಬರುತ್ತಿಲ್ಲ; ಎಆರ್ ರೆಹಮಾನ್

ಎಆರ್ ರೆಹಮಾನ್ ಅವರು ಖ್ಯಾತ ಸಂಗೀತ ಸಂಯೋಜಕ. ಅವರು ಆಸ್ಕರ್ ಕೂಡ ಗೆದ್ದಿದ್ದಾರೆ. ಅವರು ಪಡೆದ ಖ್ಯಾತಿ ತುಂಬಾನೇ ದೊಡ್ಡದು. ಈಗ ರೆಹಮಾನ್ ಅವರು ನೀಡಿದ ಹೇಳಿಕೆ ಚರ್ಚೆಗೆ ಕಾರಣ ಆಗಿದೆ. ‘ಹಿಂದಿ ಚಿತ್ರರಂಗದಲ್ಲಿ ಧರ್ಮದ ಕಾರಣಕ್ಕೆ ನನಗೆ ಆಫರ್ ಸಿಗುತ್ತಿಲ್ಲ’ ಎಂಬ ಆರೋಪವನ್ನು ಅವರು ಮಾಡಿದ್ದಾರೆ. ರೆಹಮಾನ್ ಹೇಳಿಕೆಯನ್ನು ಅನೇಕರು ಟೀಕೆ ಮಾಡಿದ್ದಾರೆ. ಅವರ ಹೇಳಿಕೆ ಸರಿ ಅಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಬಿಬಿಸಿ ಏಷ್ಯನ್ ನೆಟ್ವರ್ಕ್​​ಗೆ ನೀಡಿದ ಸಂದರ್ಶನದಲ್ಲಿ ರೆಹಮಾನ್ ಮಾತನಾಡಿದರು. ‘ಕಳೆದ ಎಂಟು […]

ಪುನೀತ್ ಕೆರೆಹಳ್ಳಿ ಜಾಮೀನು ಮಂಜೂರು

ಬೆಂಗಳೂರು: ವಲಸೆ ಕಾರ್ಮಿಕರ ವಾಸಸ್ಥಳಗಳಿಗೆ ಅಕ್ರಮವಾಗಿ ಪ್ರವೇಶಿಸಿ ಬೆದರಿಕೆ ಆರೋಪದ ಮೇಲೆ ಕೊಲೆ‌ ಆರೋಪಿ ಪುನೀತ್ ಕೆರೆಹಳ್ಳಿಯನ್ನು ಪೊಲೀಸರು ನಿನ್ನೆ ಬಂಧಿಸಿದ್ದರು. ಇಂದು ನ್ಯಾಯಾಲಯ‌ ಜಾಮೀನು ಮಂಜೂರಾಗಿದೆ.

ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಯುಎಇ ಅಧ್ಯಕ್ಷರಾಗಿ ಹಿದಾಯತ್‌ ಅಡ್ಡೂರು ಪುನರಾಯ್ಕೆ

ತುಂಬೆ ಗ್ರೂಪ್ ಸ್ಥಾಪಕಾಧ್ಯಕ್ಷ ಡಾ. ತುಂಬೆ ಮೊಯಿದೀನ್ ಮುಖ್ಯ ಪೋಷಕರಾಗಿರುವ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ (BCCI) ಇದರ ವಾರ್ಷಿಕ ಮಹಾಸಭೆಯು ದುಬೈಯ ಜುಮೈರಾದ ಕ್ರೌನ್ ಪ್ಲಾಝಾ ಹೊಟೇಲಿನಲ್ಲಿ ನಡೆಯಿತು. ಈ ವಾರ್ಷಿಕ ಮಹಾಸಭೆಯಲ್ಲಿ 2026–2028ರ ಅವಧಿಗೆ ಹಿದಾಯತ್‌ ಅಡ್ಡೂರು ಅವರನ್ನು ಎರಡನೇ ಬಾರಿಗೆ ಅಧ್ಯಕ್ಷರಾಗಿ ಪುನರಾಯ್ಕೆ ಮಾಡಲಾಯಿತು. ಅವರ ನೇತೃತ್ವದಲ್ಲಿ 2025ರ ಫೆಬ್ರವರಿಯಲ್ಲಿ ದುಬೈಯಲ್ಲಿ ನಡೆದ ‘ಬ್ಯಾರಿ ಸಮ್ಮೇಳನ’ವು ಯಶಸ್ವಿಯಾಗಿ ನಡೆದು, ಹೊಸ ಇತಿಹಾಸ ಸೃಷ್ಟಿಸಿತ್ತು. ಬಿಸಿಸಿಐ ಇದರ ನೂತನ ಪ್ರಧಾನ ಕಾರ್ಯದರ್ಶಿಯಾಗಿ […]

ಭಾರತಕ್ಕೆ ಒಳ್ಳೆಯದು- ಕೆಟ್ಟದ್ದು ಸಂಭವಿಸಿದರೆ ಹಿಂದೂಗಳನ್ನು ಪ್ರಶ್ನಿಸಲಾಗುತ್ತದೆ: RSS ಮುಖ್ಯಸ್ಥ ಮೋಹನ್ ಭಾಗವತ್

ಸಂಭಾಜಿ ನಗರ: ಭಾರತಕ್ಕೆ ಏನಾದರೂ ಒಳ್ಳೆಯದು ಅಥವಾ ಕೆಟ್ಟದು ಸಂಭವಿಸಿದರೆ, ಅದಕ್ಕೆ ಹಿಂದೂಗಳನ್ನು ಪ್ರಶ್ನಿಸಲಾಗುತ್ತದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥರು, ಏಕೆಂದರೆ ಭಾರತವು ಕೇವಲ ಭೌಗೋಳಿಕ ಪ್ರದೇಶದ ಹೆಸರಲ್ಲ, ಆದರೆ ದೇಶದ ಪಾತ್ರ ನಡವಳಿಕೆ ಎಂದಿದ್ದಾರೆ.. ಹಿಂದೂ ಸಮಾಜವು ಸಾಂಪ್ರದಾಯಿಕವಾಗಿ ಎಲ್ಲರನ್ನೂ ಒಳಗೊಳ್ಳುತ್ತದೆ. ಆಚರಣೆಗಳು, ಉಡುಗೆ ತೊಡುಗೆ, ಆಹಾರ ಪದ್ಧತಿ, ಭಾಷೆ, ಜಾತಿ ಮತ್ತು ಉಪ-ಜಾತಿಗಳಲ್ಲಿ ವೈವಿಧ್ಯತೆಯನ್ನು ಒಳಗೊಂಡಿದೆ, ಹೀಗಾಗಿ ಸಂಘರ್ಷಕ್ಕೆ ಕಾರಣವಾಗಲು ಅವಕಾಶ ನೀಡುವುದಿಲ್ಲ ಎಂದು […]

ಕಾವಿ ಬಟ್ಟೆ ಉಳಿದರೆ ಮಾತ್ರ ದೇಶ ಉಳಿಯಲು ಸಾಧ್ಯ: ಶೋಭಾ ಕರಂದ್ಲಾಜೆ

ನಂಜನಗೂಡು: ಆಧ್ಯಾತ್ಮಿಕತೆ ಭಾರತ ದೇಶದ ಆತ್ಮ, ನಮ್ಮ ದೇಶದ ಸಂಸ್ಕೃತಿ ಮತ್ತು ಧರ್ಮ ಆಚಾರ, ವಿಚಾರವನ್ನು ಸಂರಕ್ಷಿಸುತ್ತಿರುವ ಕಾವಿ ಬಟ್ಟೆ ಉಳಿದರೆ ಮಾತ್ರ ದೇಶ ಉಳಿಯಲು ಸಾಧ್ಯ ಎಂದು ಕೇಂದ್ರ ಕಾರ್ಮಿಕ, ಉದ್ಯೋಗ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಶ್ರೀ ಕ್ಷೇತ್ರ ಸುತ್ತೂರಿನಲ್ಲಿ ನಡೆಯುತ್ತಿರುವ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದಲ್ಲಿ ರಾಜ್ಯಮಟ್ಟದ ಭಜನಾಮೇಳ ಮತ್ತು ದೇಶಿ ಆಟಗಳು ಸೋಬಾನೆ ಪದ ರಂಗೋಲಿ ಸ್ಪರ್ಧೆ ಉದ್ಘಾಟಿಸಿ ಅವರು […]