ಸನಾತನ ಹಿಂದೂ ಧರ್ಮದ ಪ್ರಚಾರ ನಿಲ್ಲಿಸಲು ನಿರ್ಧರಿಸಿದ್ದೇನೆ: ಹರ್ಷ ರಿಚಾರಿಯಾ

ಜಬಲ್ಪುರ: ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭ ಮೇಳದಲ್ಲಿ ಕಾಣಿಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಪ್ರಭಾವಿ ಮಾಡೆಲ್ ಮತ್ತು ವೃತ್ತಿಪರ ನಿರೂಪಕಿ ಹರ್ಷ ರಿಚಾರಿಯಾ ‘ಸನಾತನ ಧರ್ಮದ ಪ್ರಚಾರವನ್ನು ನಿಲ್ಲಿಸಲು ನಿರ್ಧರಿಸಿದ್ದೇನೆ’ ಎಂದು ಹೇಳಿದ್ದಾರೆ. “ಎಲ್ಲರೂ ಹಿಂದೂ ರಾಷ್ಟ್ರದ ಬಗ್ಗೆ ಮಾತನಾಡುತ್ತಾರೆ. ಆದರೆ ಇದನ್ನು ಪ್ರಚಾರ ಮಾಡಲು ಮುಂದೆ ಬರುವ ಯಾವುದೇ ಯುವಕನಿಗೆ ವಿರೋಧ ವ್ಯಕ್ತವಾಗುತ್ತದೆ” ಎಂದು 31 ರ ಹರೆಯದ ಹರ್ಷ ರಿಚಾರಿಯಾ ಅವರು ಜಬಲ್ಪುರದಲ್ಲಿ ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ನರ್ಮದಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿದ […]
ಬೆಳ್ತಂಗಡಿ | ಬಾವಿಗೆ ಬಿದ್ದಾಗ ಜೀವಂತವಿದ್ದ ಬಾಲಕ, ಕೊಲೆಯಾದ ಶಂಕೆಯಲ್ಲಿ ಪ್ರಕರಣ ದಾಖಲು; ಪೋಸ್ಟ್ ಮಾರ್ಟಮ್ ವರದಿಯಲ್ಲಿ ಏನಿದೆ?

ಮಂಗಳೂರು: ಬೆಳ್ತಂಗಡಿ ಠಾಣೆ ವ್ಯಾಪ್ತಿಯ ಓಡಿಲ್ನಾಳ ಗ್ರಾಮದ ಬಾಲಕ ಸುಮಂತ್ (15) ನಿಗೂಢ ಸಾವಿನ ಪ್ರಕರಣದಲ್ಲಿ ಪೋಸ್ಟ್ ಮಾರ್ಟಮ್ ವರದಿ ಆಧರಿಸಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದು ಬೆಳ್ತಂಗಡಿ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆಗೆ ನಾಲ್ಕು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಶವದ ಪೋಸ್ಟ್ ಮಾರ್ಟಮ್ ಪರೀಕ್ಷೆಯ ಪ್ರಾಥಮಿಕ ವರದಿಯ ಪ್ರಕಾರ, ಬಾಲಕ ಕೆರೆಯಲ್ಲಿ ಮುಳುಗುವ ಸಮಯದಲ್ಲಿ ಜೀವಂತನಾಗಿದ್ದ ಎಂಬ ಮಾಹಿತಿ ಇದೆ. ಅಲ್ಲದೆ, ನೀರಿನಲ್ಲಿ ಮುಳುಗಿದ್ದೇ ತಕ್ಷಣದ ಸಾವಿಗೆ ಕಾರಣವಾಗಿರುತ್ತದೆ ಎಂದು ತಿಳಿಸಿದೆ. ತಲೆಯ ಮೇಲಿರುವ ಗಾಯಗಳು ಮಂದ ಬಲದ […]
ಜೈಲೂಟ ತಿಂದರೂ ಬಿಡದ ಹಳೇ ಚಾಳಿ: 2 ತಿಂಗಳ ಹಿಂದಷ್ಟೇ ಬಿಡುಗಡೆಯಾಗಿ ಮತ್ತೆ ಡ್ರಗ್ ದಂಧೆಗಿಳಿದ ಯುವತಿಯ ಬಂಧನ

ಮಾದಕ ವಸ್ತುಗಳ ಮಾರಾಟ ಜಾಲದಲ್ಲಿ ಒಮ್ಮೆ ಜೈಲಿಗೆ ಹೋಗಿ ಬಂದರೂ ಬುದ್ಧಿ ಕಲಿಯದ ಮಹಿಳೆಯನ್ನು ಮತ್ತೆ ಪೊಲೀಸರು ಬಂಧಿಸಿದ್ದಾರೆ. ಮಾದಕ ದ್ರವ್ಯಗಳ ಮಾರಾಟ ಮಾಡುವ ಪ್ರಕರಣದಲ್ಲಿ ಈ ಹಿಂದೆ ಗೋವಾದಲ್ಲಿ ಜೈಲು ಪಾಲಾಗಿದ್ದ ಮಹಿಳೆ 2 ತಿಂಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಗೊಂಡಿದ್ದಳು. ಆದರೆ ಜೈಲೂಟ ತಿಂದು ಬಂದರೂ ಆಕೆಯ ಬುದ್ಧಿ ಬದಲಾಗಿರಲಿಲ್ಲ, ಮತ್ತೆ ಅದೇ ದಂಧೆ ಶುರು ಮಾಡಿದ ಆಕೆಯನ್ನು ಪೊಲೀಸರು ಮತ್ತೆ ಬಂಧಿಸಿ ಜೈಲಿಗಟ್ಟಿದ್ದು, ಆಕೆಯ ಬಳಿ ಇದ್ದ ಮಾರಕ ಸಿಂಥೆಟಿಕ್ ಡ್ರಗ್ ಮೆಥಾಂಫೆಟಮೈನ್ ಡ್ರಗ್ […]
ಬಿಜೆಪಿಗೆ ಮತ ಹಾಕಿ ಸಿಪಿಎಂ ಸದಸ್ಯನನ್ನು ಸೋಲಿಸಿದ ಮುಸ್ಲಿಂ ಲೀಗ್ ಸದಸ್ಯರು

ಕಾಸರಗೋಡು: ಕಾಸರಗೋಡು ಪೈವಳಿಕೆ ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಮುಸ್ಲಿಂ ಲೀಗ್ ಸದಸ್ಯರು ಬಿಜೆಪಿಗೆ ಮತ ಚಲಾಯಿಸಿದ್ದಾರೆ. ಕಾಡಂಕೋಡಿ ವಾರ್ಡ್‌ನಿಂದ ಗೆದ್ದ ಮೈಮುನತುಲ್ ಮಿಶ್ರಿಯಾ ಬಿಜೆಪಿ ಸದಸ್ಯರಿಗೆ ಮತ ಚಲಾಯಿಸಿದ್ದಾರೆ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷೆಯಾಗಿ ಬಿಜೆಪಿಯ ಸುಮನಾ ಜಿ ಭಟ್ ಗೆಲುವು ಸಾಧಿಸಿದ್ದಾರೆ. ಸಿಪಿಎಂನ ದಿನೇಶ್ವರಿ ನಾಗೇಶ್ ವಿರುದ್ಧ ಸುಮನಾ ಜಿ ಭಟ್ ಗೆಲುವು ಸಾಧಿಸಿದರು. ಸುಮನಾ ಭಟ್ ಮೂರು ಮತಗಳನ್ನು ಮತ್ತು ದಿನೇಶ್ವರಿ ನಾಗೇಶ್ ಎರಡು ಮತಗಳನ್ನು ಪಡೆದರು. […]
ಅಕ್ರಮವಾಸಿಗಳೆಂದು ಅನುಮಾನಿಸಿ ದಾಳಿ ನಡೆಸಿದರೆ ಕಾನೂನು ಕ್ರಮ: ಮಂಗಳೂರು ಪೊಲೀಸ್ ಕಮಿಷನರ್ ಎಚ್ಚರಿಕೆ

ಮಂಗಳೂರು: ಅಕ್ರಮವಾಗಿ ವಾಸಿಸುವ ಯಾರನ್ನಾದರೂ ಕಾನೂನುಬಾಹಿರವಾಗಿ ವಿಚಾರಣೆಗೆ ಒಳಪಡಿಸಲಾಗುತ್ತದೆ ಮತ್ತು ಕಾನೂನು ಪ್ರಕಾರ ಗಡೀಪಾರು ಮಾಡಲಾಗುತ್ತದೆ. ಅದೇ ವೇಳೆ ಯಾರ ಮೇಲಾದರೂ ಅನುಮಾನದ ಆಧಾರದ ಮೇಲೆ ದಾಳಿ ನಡೆಸುವವರ ವಿರುದ್ಧವೂ ಕಾನೂನು ಕ್ರಮ ವಹಿಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ. “ನಗರದ ರಾವ್ ಆಂಡ್ ರಾವ್ ಸರ್ಕಲ್ ರಿಕ್ಷಾ ಸ್ಟ್ಯಾಂಡ್ ಹಿಂಬದಿ ‘ಬಂಗಾಳಿ ಕ್ಯಾಂಟೀನ್’ ಅಂತ ಬೋರ್ಡ್ ಹಾಕಿ ಅದರ ಅಕ್ಕಪಕ್ಕ ಕೆಲವು ಅನಧಿಕೃತ ಅಂಗಡಿ ಇಟ್ಟು ವ್ಯಾಪಾರ […]
ಖಾರದ ಪುಡಿ ಎರಚಿ ಮೊಹಮ್ಮದ್ ಶಬ್ಬೀರ್ ಭೀಕರ ಹತ್ಯೆ

ಬೆಂಗಳೂರು: ಹಳೇ ದ್ವೇಷದ ಹಿನ್ನೆಲೆ ನಟೋರಿಯಸ್ ರೌಡಿ ಶೀಟರ್ ಒಬ್ಬನನ್ನು ಅಟ್ಟಾಡಿಸಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಂಗಮ್ಮನಪಾಳ್ಯ ನಿವಾಸಿ 28 ವರ್ಷದ ಮೊಹಮ್ಮದ್ ಶಬ್ಬೀರ್ ಎಂಬಾತನನ್ನು 6 ಜನ ದುಷ್ಕರ್ಮಿಗಳ ತಂಡ ನಡು ರಸ್ತೆಯಲ್ಲಿಯೇ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದೆ. ಸೋಮವಾರ ರಾತ್ರಿ ತಮ್ಮ ಸ್ನೇಹಿತನನ್ನ ಮಾತಾಡಿಸಿ ಮೊಹಮ್ಮದ್ ಶಬ್ಬೀರ್ ಸ್ನೇಹಿತರ ಜೊತೆ ಆಟೋದಲ್ಲಿ ವಾಪಸ್ ಆಗುತ್ತಿದ್ದನು. ಈ ವೇಳೆ ಮಂಗಮ್ಮನಪಾಳ್ಯ ಮುಖ್ಯ ರಸ್ತೆಯ ತಿರುವಿನಲ್ಲಿ ಆರು ಮಂದಿ ದುಷ್ಕರ್ಮಿಗಳು ಖಾರದ ಪುಡಿ […]
ಶುಕ್ರವಾರದ ನಮಾಜ್ ವರ್ಷಕ್ಕೆ 52 ಬಾರಿ ಬರುತ್ತೆ, ಹೋಳಿ ಒಮ್ಮೆ ಬರೋದು..’ ಎಂದಿದ್ದ ASP ವಿರುದ್ಧ FIR

‘ ಮೀರತ್: ಜಾಮಾ ಮಸೀದಿ ಸಮೀಕ್ಷೆಗೆ ಸಂಬಂಧಿಸಿದ ಸಂಭಾಲ್ ಹಿಂಸಾಚಾರದ ಸಂದರ್ಭದಲ್ಲಿ ಯುವಕನೊಬ್ಬನಿಗೆ ಗುಂಡು ಹಾರಿಸಿದ ಆರೋಪದ ಮೇಲೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಅನುಜ್ ಚೌಧರಿ, ಇನ್ಸ್‌ಪೆಕ್ಟರ್ ಅನುಜ್ ತೋಮರ್ ಮತ್ತು 20 ಅಪರಿಚಿತ ಪೊಲೀಸ್ ಸಿಬ್ಬಂದಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ಸಂಭಾಲ್‌ನ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಸಿಜೆಎಂ) ನ್ಯಾಯಾಲಯ ಮಂಗಳವಾರ ಆದೇಶಿಸಿದೆ. ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ವಿಭಾಂಶು ಸುಧೀರ್ ಅವರ ನ್ಯಾಯಾಲಯವು ಈ ಆದೇಶ ನೀಡಿದೆ. ಸಂಭಾಲ್‌ನ ಆಗಿನ ವೃತ್ತ ಅಧಿಕಾರಿ (ಸಿಒ) ಅನುಜ್ […]
ಜನರ ಕೊಂದು ಮೃತದೇಹ ತಿನ್ನುತ್ತಿದ್ದ ನರಭಕ್ಷಕ ಕೊನೆಗೂ ಸೆರೆ

ಕೋಲ್ಕತಾ: ನರಭೇಟೆಯಾಡುವ ಮೂಲಕ ಪಶ್ಚಿಮ ಬಂಗಾಳದಲ್ಲಿ ವ್ಯಾಪಕ ಭೀತಿ ಮೂಡಿಸಿದ್ದ ನರಭಕ್ಷಕ ವ್ಯಕ್ತಿಯನ್ನು ಪೊಲೀಸರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜನರನ್ನು ಕೊಂದು ಮೃತದೇಹವನ್ನು ಎಳೆದುಕೊಂಡು ಹೋಗಿ ತಿನ್ನುತ್ತಿದ್ದ ಖತರ್ನಾಕ್ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಫಿರ್ದೌಸ್ ಆಲಂ ಎಂದು ಗುರುತಿಸಲಾಗಿದ್ದು. ಆರೋಪಿ ಫಿರ್ದೋಸ್ ಅಪರಿಚಿತ ವ್ಯಕ್ತಿಯನ್ನು ಕೊಲೆ ಮಾಡಿ ನಂತರ ಅವನ ಮಾಂಸವನ್ನು ತಿನ್ನಲು ದೇಹವನ್ನು ಮನೆಗೆ ಎಳೆದುಕೊಂಡು ಹೋಗುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ದಿನ್ಹಾಟಾ ಉಪಜಿಲ್ಲಾ ಪೊಲೀಸ್ ಅಧಿಕಾರಿ ಧಿಮಾನ್ ಮಿತ್ರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, […]
ಮಂಗಳೂರು: ದೇಗುಲಕ್ಕೆಂದು ಹೋದ ಬಾಲಕ ಕೆರೆಯಲ್ಲಿ ಹೆಣವಾಗಿ ಪತ್ತೆ

ಮಂಗಳೂರು: ಧನುರ್ಮಾಸ ಹಿನ್ನೆಲೆ ದೇಗುಲಕ್ಕೆಂದು ಮುಜಾನೆಯೇ ಮನೆಯಿಂದ ಹೊರಟಿದ್ದ 9ನೇ ತರಗತಿಯ ಬಾಲಕನೊಬ್ಬ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ನಿವಾಸಿ ಸುಮಂತ್ (15) ಮೃತ ದುರ್ದೈವಿಯಾಗಿದ್ದು, ಬಾಲಕನ ಸಾವಿನ ಬಗ್ಗೆ ಹಲವು ಅನುಮಾನಗಳು ಮೂಡಿವೆ. ಹೀಗಾಗಿ ಎಲ್ಲಾ ಆಯಾಮಗಳಲ್ಲಿಯೂ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ. ಕುವೆಟ್ಟು ಸಮೀಪದ ಸಂಬೋಳ್ಯ ಬರಮೇಲು ನಿವಾಸಿಯಾದ ಸುಬ್ರಹ್ಮಣ್ಯ ನಾಯಕ್ ಅವರ ಮಗ ಸುಮಂತ್ ಧನುರ್ಮಾಸದ ಹಿನ್ನಲೆಯಲ್ಲಿ ಬೆಳಗ್ಗೆ 4 ಗಂಟೆಗೆ […]
Saudi Arabia | ಸಂಶಯಾಸ್ಪದವಾಗಿ ಮಹಿಳೆ ಮೃತ್ಯು

ಜೆದ್ದಾ: ಲಕ್ನೊ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಯುವತಿ ಸೌದಿ ಅರೇಬಿಯಾದ ಜೆದ್ದಾದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಆಕೆಯ ಪತಿ ಹಾಗೂ ಅತ್ತೆಮಾವಂದಿರು ವರದಕ್ಷಿಣೆಗಾಗಿ ಸುದೀರ್ಘ ಕಾಲ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿ ಪೂರ್ವನಿಯೋಜಿತವಾಗಿ ಹತ್ಯೆಗೈದಿದ್ದಾರೆ ಎಂದು ಮೃತ ಮಹಿಳೆಯ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಈ ಸಂಬಂಧ ಮೃತ ಮಹಿಳೆಯ ತಂದೆ ಶೇರ್ ಅಲಿ ಖಾನ್ ಲಕ್ನೊದಲ್ಲಿನ ಚಿನ್ಹಾಟ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ತನ್ನ ಅಳಿಯ ಮುಹಮ್ಮದ್ ಆಮೀರ್ ಖಾನ್ ಹಾಗೂ ಆತನ ಕುಟುಂಬದ ಸದಸ್ಯರು […]