Flash News

ಮಂಗಳೂರು | ಅಬ್ದುಲ್ ಶಕೀಲ್ ಚಾರಿಟೇಬಲ್ ಟ್ರಸ್ಟ್ ನಿಂದ ‘ಕುರಾನ್ ಕಿರಾತ್’ ರಾಷ್ಟ್ರಮಟ್ಟದ ಸ್ಪರ್ಧೆ: 50 ದೇಶಗಳ ಸ್ಪರ್ಧಿಗಳು ಭಾಗಿ

ಮಂಗಳೂರು: ಪವಿತ್ರ ಕುರಾನ್ ಪಠಣದ ಮಹತ್ವವನ್ನು ಯುವಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಮಂಗಳೂರಿನಲ್ಲಿ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಕುರಾನ್ ಕಿರಾತ್ ರಾಷ್ಟ್ರಮಟ್ಟದ ಸ್ಪರ್ಧೆ ನಡೆಯಿತು. ರಾಷ್ಟ್ರಮಟ್ಟದ ಸ್ಪರ್ಧೆಗೆ ದೇಶಾದ್ಯಂತ ಭಾರಿ ಸ್ಪಂದನೆ ದೊರಕಿದ್ದು, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಒಟ್ಟು 2,252 ಮಂದಿ ಸ್ಪರ್ಧಿಗಳು ಆನ್‌ಲೈನ್ ಮೂಲಕ ತಮ್ಮ ಕಿರಾತ್ ವಿಡಿಯೋಗಳನ್ನು ಕಳುಹಿಸಿದ್ದರು. ಅವುಗಳಲ್ಲಿ ತಾಂತ್ರಿಕ ಪರಿಶೀಲನೆ ಮತ್ತು ತಜ್ಞ ನ್ಯಾಯಾಧೀಶರ ಮೌಲ್ಯಮಾಪನದ ಬಳಿಕ 50 ಸ್ಪರ್ಧಿಗಳನ್ನು ಅಂತಿಮ ಹಂತಕ್ಕೆ ಆಯ್ಕೆ ಮಾಡಲಾಗಿತ್ತು. ಈ ಆಯ್ಕೆಯಾದ ಸ್ಪರ್ಧಿಗಳು ಮಂಗಳೂರಿನ ಇಂಡಿಯನ್ ಕನ್ವೆನ್ಶನ್ […]

ವಿಮಾನ ದುರಂತಕ್ಕೂ ಮೊದಲೇ ಅಜಿತ್ ಪವಾರ್ ಸಾವಿನ ಅಪ್‌ಡೇಟ್? ಅಸಲಿ ವಿಷಯವೇ ಬೇರೆ!

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಹಾಗೂ ಎನ್‌ಸಿಪಿ ಮುಖ್ಯಸ್ಥ ಅಜಿತ್‌ ಪವಾರ್‌ ಅವರು ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ಬುಧವಾರ (ಜನವರಿ 28) ಬೆಳಿಗ್ಗೆ ಸಂಭವಿಸಿದ ವಿಮಾನ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಅವರೊಂದಿಗೆ, ಪ್ರಯಾಣಿಸುತ್ತಿದ್ದ ಇನ್ನೂ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಆತಂಕಕಾರಿ ಸಂಗತಿಯೊಂದು ಹರಿದಾಡುತ್ತಿದೆ. ‘ದುರಂತ ಸಂಭವಿಸುವ ಮೊದಲೇ, ಆನ್‌ಲೈನ್‌ ಮಾಹಿತಿಕೋಶ ‘ವಿಕಿಪಿಡಿಯಾ’ದಲ್ಲಿ ಅಜಿತ್‌ ಅವರ ಸಾವಿನ ಮಾಹಿತಿ ಅಪ್‌ಡೇಟ್‌ ಆಗಿತ್ತು. ಹಾಗಾಗಿ, ಅಪಘಾತ ಸಂಭವಿಸಲಿದೆ ಎಂಬುದು ಗೊತ್ತಾಗಿತ್ತು ಅಥವಾ ಇದೊಂದು ಪಿತೂರಿ ಇದ್ದಿರಬಹುದು’ ಎಂದು ಆರೋಪಿಸಲಾಗುತ್ತಿದೆ. 2019ರ ವಿಧಾನಸಭೆ […]

ಅಜಿತ್ ಪವಾರ್ ಸಾವು: ಇತರ ಸಂಸ್ಥೆಗಳ ಮೇಲೆ ನಂಬಿಕೆಯಿಲ್ಲ, ‘ಸುಪ್ರೀಂ’ ಮೇಲ್ವಿಚಾರಣೆಯಲ್ಲಿ ವಿಮಾನ ಪತನ ತನಿಖೆಗೆ ಮಮತಾ ಆಗ್ರಹ

ಕೋಲ್ಕತ್ತಾ: ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸಾವಿನ ಬಗ್ಗೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಒತ್ತಾಯಿಸಿದ್ದಾರೆ. ಅಸ್ತಿತ್ವದಲ್ಲಿರುವ ಕಾರ್ಯವಿಧಾನಗಳ ಮೂಲಕ ಸತ್ಯ ಹೊರಬರುವುದಿಲ್ಲ. ಹೀಗಾಗಿ, ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ನಡೆಯುವ ತನಿಖೆ ಮಾತ್ರ ವಿಶ್ವಾಸಾರ್ಹವಾಗಿರುತ್ತದೆ ಎಂದು ಹೇಳಿದ್ದಾರೆ. ‘ನಾವು ಸುಪ್ರೀಂ ಕೋರ್ಟ್ ಅನ್ನು ಮಾತ್ರ ನಂಬುತ್ತೇವೆ. ಇತರ ಎಲ್ಲ ಸಂಸ್ಥೆಗಳು ಸಂಪೂರ್ಣವಾಗಿ ರಾಜಿ ಮಾಡಿಕೊಂಡಿವೆ’ ಎಂದು ಅವರು ಸಿಂಗೂರ್‌ಗೆ ತೆರಳುವ ಮೊದಲು ಇಲ್ಲಿ ಸುದ್ದಿಗಾರರಿಗೆ […]

4 ದಿನಗಳ ಹಿಂದೆಯಷ್ಟೇ ಅಜಿತ್ ಪವಾರ್ ಬಗ್ಗೆ ಸಂಜಯ್ ರಾವತ್ ಸ್ಫೋಟಕ ಹೇಳಿಕೆ ನೀಡಿದ್ದ ಬೆನ್ನಲ್ಲೇ ದುರಂತ!

ಮುಂಬೈ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಹಾಗೂ ಎನ್‌ಸಿಪಿ (ಅಜಿತ್ ಪವಾರ್ ಬಣ) ಮುಖ್ಯಸ್ಥ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ಖಾಸಗಿ ವಿಮಾನ ಬುಧವಾರ ಪತನಗೊಂಡಿದ್ದು, ಡಿಸಿಎಂ ಮೃತಪಟ್ಟಿದ್ದಾರೆ. ಅಜಿತ್ ಪವಾರ್ ಮತ್ತೆ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟಕ್ಕೆ ಮರಳಲಿದ್ದಾರೆ ಮತ್ತು ಎನ್‌ಸಿಪಿಯ ಎರಡೂ ಬಣಗಳು ಒಂದಾಗಲಿವೆ ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವತ್ ಸ್ಫೋಟಕ ಹೇಳಿಕೆ ನೀಡಿದ ಕೆಲವೇ ದಿನಗಳಲ್ಲಿ ಈ ದರುಂತ ಸಂಭವಿಸಿದೆ. ಕಳೆದ ಶನಿವಾರ (ಜ. 24) ಮಾಧ್ಯಮಗಳೊಂದಿಗೆ ಮಾತನಾಡಿದ್ದ ರಾವತ್, ಅಜಿತ್ […]

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ವಿಮಾನ ಅಪಘಾತದಲ್ಲಿ ದುರ್ಮರಣ

ಪುಣೆ: ಬಾರಾಮತಿಯಲ್ಲಿ ಡಿಸಿಎಂ ಅಜಿತ್ ಪವಾರ್ ಅವರ ಚಾರ್ಟೆಡ್​ ವಿಮಾನ ಲ್ಯಾಂಡಿಂಗ್​ ವೇಳೆ ಅಪಘಾತಕ್ಕೀಡಾಗಿದೆ. ವಿಮಾನದಲ್ಲಿದ್ದ ಡಿಸಿಎಂ ಅಜಿತ್ ಪವಾರ್ ಸೇರಿದಂತೆ 6 ಜನರು ಸಾವನ್ನಪ್ಪಿದ್ದಾರೆ. ಬುಧವಾರ ಬೆಳಗ್ಗೆ ಈ ದುರಂತ ಸಂಭವಿಸಿದೆ. ಅಜಿತ್​ ಪವಾರ್ ಅವರೊಂದಿಗೆ​ ಅವರ ಭದ್ರತಾ ಸಿಬ್ಬಂದಿ ವಿಮಾನದಲ್ಲಿ ಇದ್ದರು ಎಂದು ಮೂಲಗಳು ದೃಢಪಡಿಸಿವೆ. ಬಾರಾಮತಿಯಲ್ಲಿ ಇಂದು ನಿಗದಿಯಾಗಿದ್ದ ರ್ಯಾಲಿಯಲ್ಲಿ ಉಪಮುಖ್ಯಮಂತ್ರಿ ಅಜಿತ್​ ಪವಾರ್​ ಪಾಲ್ಗೊಳ್ಳಬೇಕಿತ್ತು. ಅಷ್ಟರಲ್ಲಿ ಈ ಭೀಕರ ಅವಘಡ ಸಂಭವಿಸಿದೆ.

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಪತನ

ಮಹಾರಾಷ್ಟ್ರದ ಬಾರಾಮತಿಯಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗುತ್ತಿದ್ದ ವಿಮಾನ ಪತನವಾಗಿದೆ. ಗಾಯಗಳು ಅಥವಾ ಸಾವುನೋವುಗಳ ಬಗ್ಗೆ ಇನ್ನೂ ಅಧಿಕೃತ ದೃಢೀಕರಣವಿಲ್ಲ. ಈಗಾಗಲೇ ಸ್ಥಳಕ್ಕೆ ರಕ್ಷಣಾ ಅಧಿಕಾರಿಗಳು ಧಾವಿಸಿದ್ದು, ರಕ್ಷಣಾ ಕಾರ್ಯಚರಣೆಗಳು ನಡೆಯುತ್ತಿದೆ. ಪ್ರಾಥಮಿಕ ವರದಿಗಳ ಪ್ರಕಾರ ತುರ್ತು ಭೂಸ್ಪರ್ಶ ಆಗುವ ಸಂದರಭದಲ್ಲಿ ವಿಮಾನ ಪತನವಾಗಿದೆ.

RSS ಶೋಭಾಯಾತ್ರೆಯಲ್ಲಿ ಹೆಜ್ಜೆ ಹಾಕಿದ ಕಾಂಗ್ರೆಸ್ ಶಾಸಕ ಮಂತರ್ ಗೌಡ: ಚರ್ಚೆಗೆ ಗ್ರಾಸವಾಗಿರುವ ಕೇಸರಿ ನಡೆ

ಮಡಿಕೇರಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) 100 ವರ್ಷಗಳನ್ನು ಪೂರೈಸಿದ ಹಿನ್ನೆಲೆ ಕುಶಾಲನಗರದಲ್ಲಿ ಜ.25 ರಂದು ನಡೆದ ‘ಹಿಂದೂ ಸಂಗಮ’ ಕಾರ್ಯಕ್ರಮದ ಶೋಭಾಯಾತ್ರೆಯಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ.ಮಂತರ್ ಗೌಡ ಪಾಲ್ಗೊಂಡಿದ್ದು, ಇದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದಾರೆ. ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ RSS ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳ ಸಹಯೋಗದೊಂದಿಗೆ ಕುಶಾಲನಗರದಲ್ಲಿ ‘ಹಿಂದೂ ಸಂಗಮ’ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಇದರ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಶೋಭಾಯಾತ್ರೆ ತಾವರೆಕರೆ ಬಳಿಯಿಂದ ಆರಂಭಗೊಂಡು […]

ನಿಮ್ಮ ಆಟ ನಡೆಯಲ್ಲ: ಸುರ್ಜೇವಾಲ ಸಮ್ಮುಖದಲ್ಲೇ ಡಿಕೆ ಡಿಕೆ ಘೋಷಣೆ ಕೂಗಿದ ಅಭಿಮಾನಿಗಳು, ಸಿಟ್ಟಾದ ಸಿದ್ದರಾಮಯ್ಯ

ಬೆಂಗಳೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯಿದೆ (ಮನರೇಗಾ) ಹೆಸರು ಬದಲಾವಣೆ ಮಾಡಿ ಕಾಯ್ದೆ ತಿದ್ದುಪಡಿ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ರಾಜ್ಯ ಕಾಂಗ್ರೆಸ್ ನಾಯಕರು ಇಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ, ರಾಜಭವನ ಚಲೋ ನಡೆಸಿದರು. ಪ್ರತಿಭಟನೆ ವೇಳೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಬೃಹತ್ ಪ್ರತಿಭಟನೆ ನಡೆಸಿದರು. ಮನರೇಗಾ […]

Mangaluru | ಧಮ್ಕಿ ಪುಡಾರಿ ರಾಜೀವ ಗೌಡನಿಗೆ ಆಶ್ರಯ ನೀಡಿದ್ದ ಮಂಗಳೂರಿನ ಉದ್ಯಮಿ ಅರೆಸ್ಟ್..!

ಫಾರ್ಮ್ ಹೌಸ್ ನಲ್ಲಿ ಅಡಗಿಕೊಂಡಿದ್ದ ಕಾಂಗ್ರೆಸ್ ಮುಖಂಡನಿಗೆ ಡ್ರಿಲ್ ! ಮಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪೌರಾಯುಕ್ತೆಗೆ ಅವಾಚ್ಯ ನಿಂದಿಸಿ ಲಾಕ್ ಆಗಿರುವ ಕಾಂಗ್ರೆಸ್ ಮುಖಂಡ ರಾಜೀವ ಗೌಡನಿಗೆ ಮಂಗಳೂರಿನ ಫಾರ್ಮ್ ಹೌಸ್ ನಲ್ಲಿ ಆಶ್ರಯ ನೀಡಲಾಗಿತ್ತು ಎನ್ನುವ ವಿಚಾರ ತನಿಖೆಯಲ್ಲಿ ತಿಳಿದುಬಂದಿದೆ. ‌ಇದರ ಬೆನ್ನಲ್ಲೇ ಚಿಕ್ಕಬಳ್ಳಾಪುರ ಪೊಲೀಸರು ಫಾರ್ಮ್ ಹೌಸ್ ಮಾಲೀಕ ಮೈಕಲ್ ಜೋಸೆಫ್ ರೇಗೊ ಅವರನ್ನು ಬಂಧಿಸಿದ್ದಾರೆ. ರಾಜೀವ ಗೌಡ ತನ್ನ ಸಂಬಂಧಿಕರ ಕಾರಿನಲ್ಲಿ ಮಂಗಳೂರು ರೈಲು ನಿಲ್ದಾಣಕ್ಕೆ ಬಂದಿದ್ದು ಅಲ್ಲಿ ಕಾರು ಬಿಟ್ಟು ಹೋಗಿದ್ದ […]

ವಿವಾಹಿತರ ಅನೈತಿಕ ಸಂಬಂಧ ಸಾವಿನಲ್ಲಿ ಅಂತ್ಯ: ಮಹಿಳೆ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

ಚಿಕ್ಕಬಳ್ಳಾಪುರ: ವಿವಾಹವಾಗಿ ತಲಾ ಇಬ್ಬರು ಮಕ್ಕಳಿದ್ದರೂ ಅಕ್ರಮ ಸಂಬಂಧ ಹೊಂದಿದ್ದ ಜೋಡಿಯೊಂದು ದುರಂತ ಅಂತ್ಯ ಕಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ. ಸಲ್ಮಾಳನ್ನು ಚಾಕುವಿನಿಂದ ಇರಿದು ಕೊಂದು ಆಕೆಯ ಪ್ರಿಯತಮ ಬಾಬಾಜಾನ್ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಾಬಾಜಾನ್ ಯಾಕಾಗಿ ಈ ರೀತಿಯ ನಿರ್ಧಾರ ತೆಗೆದುಕೊಂಡಿದ್ದಾನೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲವಾದರೂ, ಇವರಿಬ್ಬರ ಅನೈತಿಕ ಸಂಬಂಧ ವಿಚಾರದಲ್ಲಿ ಎರಡು ಕುಟುಂಬಗಳ ಮಧ್ಯೆ ಈ ಹಿಂದೆ ಗಲಾಟೆ ಆಗಿತ್ತು ಎನ್ನಲಾಗಿದೆ. ಸಲ್ಮಾ ಚಿಕ್ಕಬಳ್ಳಾಪುರ ಜಿಲ್ಲೆ ಚೇಳೂರು ತಾಲೂಕಿನ ಗರಿಗಿರೆಡ್ಡಿಪಾಳ್ಯಾ […]