Flash News

ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಅನುಮೋದನೆ ಅಗತ್ಯವಿಲ್ಲ: ಸಂಚಲನ ಸೃಷ್ಟಿಸಿದ ಮೋಹನ್ ಭಾಗವತ್ ಹೇಳಿಕೆ

ಪಾಟ್ನಾ: ಭಾರತವು ಹಿಂದೂ ರಾಷ್ಟ್ರ ಮತ್ತು ಅದು ವಾಸ್ತವ ಸತ್ಯ ಆಗಿರುವುದರಿಂದ ಯಾವುದೇ ಸಾಂವಿಧಾನಿಕ ಅನುಮೋದನೆ ಅಗತ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಬಿಹಾರದ ಮುಜಫರ್‌ಪುರದಲ್ಲಿ ಸಾಮಾಜಿಕ ಸಾಮರಸ್ಯ ವಿಚಾರ ಸಂಕಿರಣ ಮತ್ತು ಸಂವಾದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶವು ಈಗಾಗಲೇ ಒಂದಾಗಿರುವುದರಿಂದ ಹಿಂದೂ ರಾಷ್ಟ್ರವೆಂದು ಘೋಷಿಸುವ ಅಗತ್ಯವಿಲ್ಲ ಎಂದು ಹೇಳಿದರು. ಸಮಾಜದಲ್ಲಿ ವೈವಿಧ್ಯತೆ ಇದೆ, ವಿಭಜನೆಯಲ್ಲ. ಬ್ರಿಟಿಷರು ವಿಭಜನೆಗಳನ್ನು ವಿಸ್ತರಿಸಿದರು. ನಾವು ಆ ವಿಭಜನೆಯನ್ನು ನಿವಾರಿಸಿ ಹಿಂದೂ […]

ಮಂಗಳೂರಿನ ಟೆಕ್ಕಿ ಶರ್ಮಿಳಾ ಹತ್ಯೆ ಕೇಸಲ್ಲಿ ಟ್ವಿಸ್ಟ್; ಕೊಲೆಗಾರನ ಉದ್ದೇಶವೇ ಬೇರೆಯಾಗಿತ್ತು!

ಬೆಂಗಳೂರು: ಸಿಲಿಕಾನ್ ಸಿಟಿಯ ರಾಮಮೂರ್ತಿ ನಗರದಲ್ಲಿ ನಡೆದಿದ್ದ ಮಂಗಳೂರಿನ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ (ಟೆಕ್ಕಿ) ಶರ್ಮಿಳಾ ಅವರ ನಿಗೂಢ ಸಾವಿನ ಪ್ರಕರಣಕ್ಕೆ ಈಗ ಆಘಾತಕಾರಿ ತಿರುವು ಸಿಕ್ಕಿದೆ. ಆರಂಭದಲ್ಲಿ ಅಗ್ನಿ ಅವಘಡದಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಭಾವಿಸಲಾಗಿದ್ದ ಈ ಪ್ರಕರಣ, ಈಗ ಅತ್ಯಾ*ಚಾರ ಯತ್ನ ಮತ್ತು ಬರ್ಬರ ಕೊಲೆ ಎಂಬುದು ಪೊಲೀಸ್ ತನಿಖೆಯಲ್ಲಿ ಸಾಬೀತಾಗಿದೆ. ಆರೋಪಿ 18 ವರ್ಷದ ವಿದ್ಯಾರ್ಥಿ ಕರ್ನಲ್ ಕುರೈ ತನ್ನ ವಿಕೃತಿಯನ್ನು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ. ಆರೋಪಿ ಕರ್ನಲ್ ಕುರೈ ಮೃತ ಶರ್ಮಿಳಾ […]

ಸ್ವಾತಂತ್ರ, ಸಮಾನತೆ ಮತ್ತು ಭಾತೃತ್ವದ ಮೇಲೆ ನಿಂತ ಸಂವಿಧಾನದ ನೆರಳಿನಲ್ಲಿ ಮುನ್ನಡೆಯೋಣ: ಫಾರೂಕ್ ಫರಂಗಿಪೇಟೆ ಕರೆ

ಮಂಗಳೂರು: ಸ್ವಾತಂತ್ರ, ಸಮಾನತೆ ಮತ್ತು ಭಾತೃತ್ವ ಈ ಮೂರು ಕಂಬಗಳ ಮೇಲೆ ನಿಂತ ನಮ್ಮ ಸಂವಿಧಾನದ ನೆರಳಿನಲ್ಲಿ ಮುನ್ನಡೆಯೋಣ ಎಂದು ಟುಡೇ ಫೌಂಡೇಶನ್ ನ ಅಧ್ಯಕ್ಷ, ಮಾಜಿ ಜಿಪಂ ಸದಸ್ಯ ಉಮರ್ ಫಾರೂಕ್ ಕರೆ ನೀಡಿದ್ದಾರೆ. ದ.ಕ ಜಿ.ಪಂ.ಮಾ.ಹಿ.ಪ್ರಾ. ಶಾಲೆ ಪುದು ಇಲ್ಲಿ 77ನೇ ಗಣರಾಜ್ಯೋತ್ಸವದ‌ಲ್ಲಿ ಸಂಭ್ರಮ ನಡೆಯಿತು. ಶಾಲಾ ಎಸ್ ಡಿಎಂಸಿ ಅಧ್ಯಕ್ಷ ರಮ್ಲಾನ್ ಕುಂಪನಮಜಲು ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿದ ಉಮರ್ ಫಾರೂಕ್, ಹಕ್ಕು ಕೇಳುವ ಧೈರ್ಯದ ಜೊತೆಗೆ ಕರ್ತವ್ಯ ನಿಭಾಯಿಸುವ ಶಿಸ್ತಿದ್ದಾಗ ಮಾತ್ರನಿಜಾರ್ಥದಲ್ಲಿ […]

DG-IGP ಸಲೀಂ ವಿರುದ್ಧ ಸುಳ್ಳು ಸುದ್ದಿ: ಪುನೀತ್ ಕೆರೆಹಳ್ಳಿ ವಿರುದ್ಧ ಮತ್ತೊಂದು ಪ್ರಕರಣ

ಬೆಂಗಳೂರು: ಪೊಲೀಸ್ ಮಹಾನಿರ್ದೇಶಕರು ಮತ್ತು ಇನ್ಸ್‌ಪೆಕ್ಟರ್ ಜನರಲ್ (ಡಿಜಿ ಮತ್ತು ಐಜಿಪಿ) ಎಂ.ಎ. ಸಲೀಂ ವಿರುದ್ಧ ಸುಳ್ಳು ಮಾಹಿತಿ ಹರಡಿದ ಆರೋಪದ ಮೇಲೆ ಕೊಲೆ ಆರೋಪಿ ಪುನೀತ್ ಕೆರೆಹಳ್ಳಿ ಮತ್ತು ಅವರ ಸಹಚರರ ವಿರುದ್ಧ ಸೈಬರ್ ಅಪರಾಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಳೆದ 10 ದಿನಗಳಲ್ಲಿ ಪುನೀತ್ ಕೆರೆಹಳ್ಳಿ ವಿರುದ್ಧ ದಾಖಲಾಗಿರುವ ಮೂರನೇ ಎಫ್‌ಐಆರ್ ಇದಾಗಿದೆ. ಜನವರಿ 23 ರಂದು ಎಫ್‌ಐಆರ್ ದಾಖಲಾಗಿದ್ದು, ಎಫ್ಐಆರ್ ನಲ್ಲಿ ಪುನೀತ್ ಕೆರೆಹಳ್ಳಿ ಅವರು ನಾಲ್ಕರಿಂದ ಐದು ಸಹಚರರೊಂದಿಗೆ ಜನವರಿ 22 […]

ಮೋದಿ, ಅಮಿತ್‌ ಶಾ ನಿರ್ಧಾರದಿಂದ ನಾವೆಲ್ಲ ನಿರ್ಭೀತರಾಗಿದ್ದೇವೆ: ಸದಾನಂದ ಗೌಡ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರು ತೆಗೆದುಕೊಂಡ ನಿರ್ಧಾರದಿಂದ ನಾವೆಲ್ಲ ನಿರ್ಭೀತರಾಗಿದ್ದೇವೆ ಎಂದು ಮಾಜಿ ಸಿಎಂ ಡಿ.ವಿ ಸದಾನಂದಗೌಡ ಹೇಳಿದರು. 77ನೇ ಗಣರಾಜ್ಯೋತ್ಸವದ ಅಂಗವಾಗಿ ಬಿಜೆಪಿ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಈ ವೇಳೆ, ಪ್ರಧಾನಿ ಮೋದಿ ಹಾಗೂ ಅಮಿತ್‌ ಶಾ ಅವರು ತೆಗೆದುಕೊಂಡ ದಿಟ್ಟ ನಿರ್ಧಾರದಿಂದ ಎಲ್ಲರೂ ಭಯವಿಲ್ಲದೇ ಬದುಕುತ್ತಿದ್ದೇವೆ. ಆದರೆ ನಮಗೆ ಬಾಹ್ಯ ಶಕ್ತಿಗಳಿಂದಲೇ ಹೆಚ್ಚು ಆತಂಕ ಇದೆ. ನಾವು ಯಾರಿಗೆ ಸ್ವತಂತ್ರ ರಾಷ್ಟ್ರ ಆಗಲು […]

ವಿಕಾಸ್‌ ಪುತ್ತೂರಿಗೆ ದ್ವೇಷ ಭಾಷಣ ಮಸೂದೆಯ ಅಡಿ ಪೊಲೀಸರು ನೋಟಿಸ್‌ ನೀಡಿದ್ದು ತಪ್ಪು: ಪರಮೇಶ್ವರ್‌

ಬೆಂಗಳೂರು: ಬಿಜೆಪಿ ಮುಖಂಡ ವಿಕಾಸ್‌ ಪುತ್ತೂರು ಅವರಿಗೆ ದ್ವೇಷ ಭಾಷಣ ಮಸೂದೆಯ ಅಡಿ ಪೊಲೀಸರು ನೋಟಿಸ್‌ ನೀಡಿದ್ದು ತಪ್ಪು ಎಂದು ಗೃಹ ಸಚಿವ ಪರಮೇಶ್ವರ್‌ ಹೇಳಿದ್ದಾರೆ. ಮಾಧ್ಯಮಗಳು ದ್ವೇಷ ಭಾಷಣ ಮಸೂದೆಯ ಅಡಿಯಲ್ಲಿ ಪೊಲೀಸರು ನೋಟಿಸ್‌ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಚಾರವಾಗಿ ಮಾಹಿತಿ ತರಿಸಿಕೊಳ್ಳುತ್ತೇನೆ ಎಂದು ಹೇಳಿದರು.  ಈ ಮಸೂದೆಗೆ ಇನ್ನೂ ರಾಜ್ಯಪಾಲರ ಸಹಿ ಬಿದ್ದಿಲ್ಲ. ಭಾರತೀಯ ನ್ಯಾಯ ಸಂಹಿತೆ ಅಡಿ ವಿವಿಧ ಸೆಕ್ಷನ್‌ಗಳ ಅಡಿ ನೋಟಿಸ್‌ ನೀಡಬಹುದು. ಇನ್ನೂ ಇದು […]

ರೇವಣ್ಣ ಕುಟುಂಬ ಮುಗಿಸಲು ಬಳಸಿಕೊಂಡ ಎಸ್‌ಐಟಿಗೆ ಉಡುಗೊರೆ ಕೊಟ್ಟಿದ್ದಾರೆ: ಸರ್ಕಾರದ ವಿರುದ್ಧ ಹೆಚ್‌ಡಿಡಿ ವಾಗ್ದಾಳಿ

ಹಾಸನ: ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿರುವ ನಮ್ಮ ಎದುರಾಳಿಗಳು, ರೇವಣ್ಣ ಅವರ ಕುಟುಂಬ ಮುಗಿಸಲು ಯಾವ ಎಸ್‌ಐಟಿ ಬಳಸಿಕೊಂಡಿದ್ದರೋ ಅವರಿಗೆ ಉಡುಗೊರೆ ಕೊಟ್ಟಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಹಾಸನದ ಬೂವನಹಳ್ಳಿ ಬಳಿ ನಡೆದ ಜೆಡಿಎಸ್‌ ಸಮಾವೇಶದಲ್ಲಿ ಅವರು ಮಾತನಾಡಿದರು. ಈ ವೇಳೆ, ರೇವಣ್ಣ ಅವರ ಕುಟುಂಬವನ್ನು ಮುಗಿಸಲು ಎದುರಾಳಿಗಳು ಪ್ರಯತ್ನಪಟ್ಟರು. ಈ ಜಿಲ್ಲೆಯಲ್ಲಿ ಜೆಡಿಎಸ್ ಪ್ರಬಲವಾಗಿದೆ. ಜೆಡಿಎಸ್ ಮುಗಿಸಲು ಎರಡು ಬಾರಿ ಸಮಾವೇಶ ಮಾಡಿದ್ರು. ನನಗೆ ಆನಂದ ಆಯಿತು, […]

ಬೆಳ್ತಂಗಡಿ | ಬೈಕ್ ಕಳ್ಳತನಕ್ಕೆ ಯತ್ನ ಆರೋಪ: ಇಬ್ಬರಿಗೆ ಥಳಿಸಿ ಮರಕ್ಕೆ ಕಟ್ಟಿದ ಹಾಕಿದ ಸಾರ್ವಜನಿಕರು

ಬೆಳ್ತಂಗಡಿ : ಬೈಕ್ ಕಳ್ಳತನ ಮಾಡಿ ಪರಾರಿಯಾಗುತ್ತಿರುವ ಆರೋಪದ ಮೇರೆಗೆ ಸಾರ್ವಜನಿಕರು ಸೇರಿ ಇಬ್ಬರು ಆರೋಪಿಗಳನ್ನು ಓಡಿ ಹಿಡಿದುಕೊಂಡು ಬಂದು ಹಿಗ್ಗಾಮುಗ್ಗಾ ಥಳಿಸಿ ಬಳಿಕ ಮರಕ್ಕೆ ಕಟ್ಟಿ ಹಾಕಿ ವೇಣೂರು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಈ ಬಗ್ಗೆ ಇಬ್ಬರು ಬೈಕ್ ಕಳ್ಳತನಕ್ಕೆ ಯತ್ನಿಸಿದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ. ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ಪಳಾರಗೋಳಿ ಎಂಬಲ್ಲಿ ಜ.20 ರಂದು ಬೆಳಗ್ಗಿನ ಜಾವ 2:10 ಗಂಟೆಯಿಂದ 2.30 ಗಂಟೆಯ ಮಧ್ಯದ ಅವಧಿಯಲ್ಲಿ ಆರೋಪಿಗಳಾದ […]

ಅಂಗವಿಕಲ ಕೋಟಾದಡಿ ಸೀಟು ಪಡೆದು ಡಾಕ್ಟರ್ ಆಗಲು ಕಾಲನ್ನೇ ಕತ್ತರಿಸಿಕೊಂಡ ಭೂಪ!

ಜೌವಣಪುರ: ಮೀಸಲು ಕೋಟಾಗಳ ಅಡಿ ಶಿಕ್ಷಣ ಮತ್ತು ಉದ್ಯೋಗ ಪಡೆಯಲು ಕೆಲವರು ಕುಟಿಲೋಪಾಯಗಳನ್ನು ಮಾಡಿ ಆಮೇಲೆ ಸಿಕ್ಕು ಬಿದ್ದು ಫಜೀತಿ ಅನುಭವಿಸುವುದನ್ನು ಆಗಾಗ ನೋಡುತ್ತಿರುತ್ತೇವೆ. ಆದರೆ, ಇಲ್ಲೊಬ್ಬ ಭೂಪ, ಡಾಕ್ಟರ್ ಆಗುವ ಕನಸು ಕಂಡು ನೀಟ್ ಪರೀಕ್ಷೆಯಲ್ಲಿ ಪದೇ ಪದೇ ವಿಫಲ ಆಗುತ್ತಿದ್ದಕ್ಕೆ ಕಡೆಗೆ ಅಂಗವಿಕಲ ಕೋಟಾದಡಿ ಆದರೂ ಸೀಟು ಗಿಟ್ಟಿಸಿಕೊಳ್ಳಬೇಕೆಂದು ತನ್ನ ಜೀವಕ್ಕೇ ಸಂಚು ತಂದುಕೊಂಡಿದ್ದಾನೆ. ಉತ್ತರ ಪ್ರದೇಶದ ಲಖನೌದಿಂದ 228 ಕಿ.ಮೀ ದೂರದಲ್ಲಿರುವ ಜೌವಣಪುರ ನಗರದ ಸುರಾಜ್ ಭಾಸ್ಕರ್ ಎಂಬ 21 ವರ್ಷದ ಯುವಕ ಅಂಗವಿಕಲ […]

ಅಚಲ್ಪುರ್ ಪುರಸಭೆ: ಅಧ್ಯಕ್ಷರ ಆಯ್ಕೆಗಾಗಿ ಬಿಜೆಪಿ, ಕಾಂಗ್ರೆಸ್, ಎಐಎಂಐಎಂ ಮೈತ್ರಿ!

ನಾಗ್ಪುರ: ತಮ್ಮ ಪಕ್ಷಗಳ ಉನ್ನತ ನಾಯಕತ್ವ ಇಂತಹ ರಾಜಕೀಯ ಹೊಂದಾಣಿಕೆಗಳಿಗೆ ವಿರೋಧ ವ್ಯಕ್ತಪಡಿಸುತ್ತಿದ್ದರೂ, ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಅಚಲ್ಪುರ್ ಪುರಸಭೆಯಲ್ಲಿ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡುವ ಉದ್ದೇಶದಿಂದ ಬಿಜೆಪಿ, ಎಐಎಂಐಎಂ ಮತ್ತು ಕಾಂಗ್ರೆಸ್ ಪರಸ್ಪರ ಮೈತ್ರಿ ಮಾಡಿಕೊಂಡಿವೆ. ಅಚಲ್ಪುರ್ ಪುರಸಭೆಯಲ್ಲಿ ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ 41 ಸ್ಥಾನಗಳ ಪೈಕಿ ಕಾಂಗ್ರೆಸ್ 15 ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ 9 ಹಾಗೂ ಎಐಎಂಐಎಂ 3 ಸ್ಥಾನಗಳನ್ನು ಪಡೆದಿವೆ. ಸ್ವತಂತ್ರ ಅಭ್ಯರ್ಥಿಗಳು 10 ಸ್ಥಾನಗಳನ್ನು ಗೆದ್ದಿದ್ದು, […]