ಮಂಗಳೂರಿನಲ್ಲಿ SDPI ಬೃಹತ್ ಶಕ್ತಿಪ್ರದರ್ಶನ: ಯುವ ಘಟಕ “YOUNG DEMOCRATS” ಅಸ್ತಿತ್ವಕ್ಕೆ

ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷರಾಗಿ ಎಂ.ಕೆ. ಫೈಝ್ ಪುನರಾಯ್ಕೆ ಮಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಇಂದು ಆಯ್ಕೆಯಾದ ನೂತನ ರಾಷ್ಟ್ರೀಯ ನಾಯಕರಿಗೆ ಅಭಿನಂದನಾ ಕಾರ್ಯಕ್ರಮ ಇಂದು ಪುರಭವನದಲ್ಲಿ ನಡೆಯಲಿದೆ. ಇದಕ್ಕೂ ಮೊದಲು ಮಂಗಳೂರು ನಗರದಲ್ಲಿ SDPI ರಣಕಹಳೆ ಮೊಳಗಿಸಿದೆ. ಮಂಗಳೂರಿನ ಅಂಬೇಡ್ಕರ್ ವೃತ್ತ (ಜ್ಯೋತಿ )ಯಿಂದ ಬೃಹತ್ ರ್‍ಯಾಲಿ ಸಾಗಿ ಬರುತ್ತಿದ್ದು, ರಾಜ್ಯದ ಮೂಲೆ ಮೂಲೆಯಿಂದ ಬಂದಿದ್ದ ಸಹಸ್ರಾರು ಕಾರ್ಯಕರ್ತರ ಸಮ್ಮುಖದಲ್ಲಿ ಎಸ್ ಡಿಪಿಐಯ ರಾಷ್ಟ್ರೀಯ ನಾಯಕರು ಹೆಜ್ಜೆ ಹಾಕಿದ್ದಾರೆ. […]
ಬೆಂಗಳೂರು | ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ವಿಕೃತ ಕಾಮಿ ಅರೆಸ್ಟ್!

“ಮಹಿಳೆಯರ ಒಳಉಡುಪು ಧರಿಸಿ ವಿಕೃತ ಆನಂದ ಪಡುತ್ತಿದ್ದ ಅಮಲ್” ಬೆಂಗಳೂರು: ಮಹಿಳೆಯರ ಒಳ ಉಡುಪುಗಳನ್ನು ಕದಿಯುತ್ತಿದ್ದ ವಿಕೃತ ಕಾಮಿಯನ್ನು ಹೆಬ್ಬಗೋಡಿಯ ವಿದ್ಯಾನಗರದಲ್ಲಿ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಕೇರಳ ಮೂಲದ ಅಮಲ್ (23) ಬಂಧಿತ ಆರೋಪಿ. ಈತ ಮನೆ ಮಹಡಿ, ಹಾಗೂ ಆಚೆ ಒಣಹಾಕಿದ್ದ ಮಹಿಳೆಯರ ಒಳ ಉಡುಪುಗಳನ್ನ ಕದಿಯುತ್ತಿದ್ದ. ಹೊರಗಡೆ ಸುತ್ತಾಡಿ ಮನೆಗಳನ್ನು ದೂರದಿಂದಲೇ ಪರಿಶೀಲನೆ ಮಾಡುತ್ತಿದ್ದ. ನಂತರ ಯಾರು ಇಲ್ಲದ ವೇಳೆ ನುಗ್ಗಿ ಒಳ ಉಡುಪುಗಳನ್ನ ಕದ್ದೊಯ್ಯುತ್ತಿದ್ದ. ಬಳಿಕ ಅವುಗಳನ್ನು ತಾನು ಧರಿಸಿಕೊಂಡು ಫೋಟೋ […]
ಸೌದಿ ಅರೇಬಿಯಾದಲ್ಲಿ ಭೀಕರ ಅಪಘಾತ; ಮಂಗಳೂರು ಮೂಲದ ಯುವಕ ಮೃತ್ಯು

ಜೆದ್ದಾ: ಸೌದಿ ಅರೇಬಿಯಾದ ನಜ್ರಾನ್ ಅಭಾ ಹೆದ್ದಾರಿಯಲ್ಲಿ ಎರಡು ಕಾರುಗಳು ಪರಸ್ಪರ ಡಿಕ್ಕಿ ಹೊಡೆದಿದ್ದು, ಒಂದು ಕಾರಿನಲ್ಲಿದ್ದ ಇಬ್ಬರು ಮೃತರಾಗಿದ್ದು, ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ. ಮೃತರಲ್ಲಿ ಓರ್ವ ಮಂಗಳೂರು ಸಮೀಪದ ಕುಂದಾಪುರದ ನಿವಾಸಿ 25 ವರ್ಷ ಪ್ರಾಯದ ಅಮ್ಮಾರ್ ಅಹ್ಮದ್ ಶೇಖ್ ಎಂದು ತಿಳಿದು ಬಂದಿದ್ದು, ಇನ್ನೋರ್ವ ಕೇರಳದ ಯುವಕನಾಗಿದ್ದಾನೆ. ಕಾರಿನಲ್ಲಿದ್ದ ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ. ಸೌದಿ ಅರೇಬಿಯಾದ ಸೆಂಟರ್ ಪಾಯಿಂಟ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಈ ನಾಲ್ವರು ಕೆಲಸದ ನಿಮಿತ್ತ ಅಭಾಕ್ಕೆ ಪ್ರಯಾಣಿಸುತ್ತಿದ್ದರು. ಸೌದಿ ಪ್ರಜೆಯ ಕಾರಿಗೆ […]
ಬಂಟ್ವಾಳ | ಶರವೇಗದಲ್ಲಿ ಮಗುವಿನ ಜೀವ ಉಳಿಸಿದ SKSSF ಕಾರ್ಯಕರ್ತ ಇಮ್ರಾನ್ ಮಾರಿಪಳ್ಳ

ಬಂಟ್ವಾಳ: SKSSF ಕಾರ್ಯಕರ್ತ ಹಾಗೂ ಆಂಬುಲೆನ್ಸ್ ಚಾಲಕರೊಬ್ಬರು ಶರವೇಗದಲ್ಲಿ ಮಗುವಿನ ಜೀವ ಉಳಿಸಿರುವ ಅಪರೂಪದ ಘಟನೆ ಒಂದು ನಿನ್ನೆ ತಡರಾತ್ರಿ ನಡೆದಿದೆ. ಒಂದೂವರೆ ವರ್ಷದ ಮಗು ಉಸಿರಾಟದ ತೊಂದರೆ ಬಳಲುತ್ತಿದ್ದು, ಸೋಮವಾರ ರಾತ್ರಿ ಜೋರಾಗಿತ್ತು. ಕುಟುಂಬದವರು ತಕ್ಷಣ ತುಂಬೆಯ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದು ಕೊಂಡು ಹೋಗಿದ್ದಾರೆ. ಅಲ್ಲಿಯ ವೈದ್ಯರು ಮಗುವ ಸ್ಥಿತಿ ನೋಡಿ ಹೆಚ್ಚಿನ ಚಿಕಿತ್ಸೆಗೆ ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹೇಳುತ್ತಾರೆ. ಕಂಗಾಲಾಗಿದ್ದ ಕುಟುಂಬ ತಕ್ಷಣ ಇಮ್ರಾನ್ ರವರಿಗೆ ತಡ ರಾತ್ರಿ […]
ಮೈಸೂರು | ಕೋಮು ಸೂಕ್ಷ್ಮ ಉದಯಗಿರಿಯಲ್ಲಿ ಮತ್ತೊಮ್ಮೆ ಹೊತ್ತಿದ ಅಪರಾಧದ ಕಿಡಿ: ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ

ಮೈಸೂರು: ಉದಯಗಿರಿಯಲ್ಲಿ ಕಳೆದ ವರ್ಷ ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ನಡೆದಿತ್ತು. ಅಷ್ಟೇ ಅಲ್ಲದೆ ಎರಡು ದಿನಗಳ ಹಿಂದೆ ಯುವಕರು ಮಚ್ಚು, ಲಾಂಗು ಹಿಡಿದು ಓಡಾಡಿದ ವೀಡಿಯೋ ಸಹ ಭಾರಿ ಸುದ್ದಿ ಮಾಡಿತ್ತು. ಈ ಘಟನೆ ಜನರ ಮನಸ್ಸಿನಿಂದ ಮಾಸುವ ಮೊದಲೇ ಮತ್ತೊಂದು ಭೀಕರ ಘಟನೆ ಉದಯಗಿರಿಯಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಯುವಕನೊಬ್ಬನ ಕೊಲೆಯಾಗಿದ್ದು, ಮತ್ತೊಮ್ಮೆ ಮೈಸೂರಿನಲ್ಲಿ ಹಲ್ ಚಲ್ ಎಬ್ಬಿಸಿದೆ. ಇತ್ತೀಚೆಗಷ್ಟೇ ಮಚ್ಚು ಹಿಡಿದು ಓಡಾಡಿದ್ದ ಯುವಕರುಮೈಸೂರಿನ ಅಬುಜರ್ ಮಸೀದಿ ಸಮೀಪದ […]
ಹಿಂದೂ ಆಗಿದ್ದ ಎಆರ್ ರೆಹಮಾನ್ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದೇಕೆ ಗೊತ್ತೇ?

ಮ್ಯೂಸಿಕ್ ಡೈರೆಕ್ಟರ್ ಎ.ಆರ್. ರೆಹಮಾನ್ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಪ್ರಸಿದ್ಧರಾಗಿದ್ದಾರೆ. ಅವರು ಅನೇಕ ಗೀತೆಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಸಂಗೀತ ಸಂಯೋಜನೆಯ ಕಾರಣಕ್ಕೆ ಅವರಿಗೆ ಆಸ್ಕರ್ ಅವಾರ್ಡ್ ಕೂಡ ಸಿಕ್ಕಿದೆ ಎಂಬುದು ವಿಶೇಷ. ಧರ್ಮದ ಕಾರಣಕ್ಕೆ ಅವರಿಗೆ ಬಾಲಿವುಡ್ನಲ್ಲಿ ಕೆಲಸ ಸಿಗುತ್ತಿಲ್ಲ ಎಂದಿದ್ದರು. ಇದು ವಿವಾದ ಆಗಿತ್ತು. ಹಾಗಾದರೆ ರೆಹಮಾನ್ ಅವರು ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರ ಗೊಂಡಿದ್ದು ಏಕೆ ಎಂಬ ವಿಷಯದ ಬಗ್ಗೆ ಇಲ್ಲಿದೆ ಮಾಹಿತಿ. ಎ.ಆರ್. ರೆಹಮಾನ್ ಧರ್ಮದಿಂದ ಮುಸ್ಲಿಂ. ಆದರೆ ಅವರು ಹಿಂದೂವಾಗಿ […]
KASARGOD | ಕಾರು ಮತ್ತು ಲಾರಿ ನಡುವೆ ಭೀಕರ ರಸ್ತೆ ಅಪಘಾತ: ಮಂಗಳೂರು ಮೂಲದ ಇಬ್ಬರು ಮೃತ್ಯು

ಕಾಸರಗೋಡು: ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ರಾಷ್ಟೀಯ ಹೆದ್ದಾರಿಯ ಚಟ್ಟಂಚಾಲ್ ತೆಕ್ಕಿಲ್ ಎಂಬಲ್ಲಿ ನಡೆದಿದೆ. ಮೃತರನ್ನು ದ.ಕ. ಜಿಲ್ಲೆಯ ಸಜಿಪ ಬೈಲಗುತ್ತು ನಿವಾಸಿ ದಿ.ಎಸ್.ಬಿ.ಮುಹಮ್ಮದ್ ಎಂಬವರ ಪುತ್ರ ಆಸಿಫ್ ಮುಹಮ್ಮದ್(41) ಮತ್ತು ನಾಟೆಕಲ್ ನಿವಾಸಿ ಅಬ್ಬಾಸ್ ಹಾಜಿ ಎಂಬವರ ಪುತ್ರ ಮುಹಮ್ಮದ್ ಶಫೀಕ್(23) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಆಸಿಫ್ ಸ್ಥಳದಲ್ಲೇ ಮೃತಪಟ್ಟಿದ್ದರೆ, ಶಫೀಕ್ ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿರುವುದಾಗಿ […]
ಚಿರಾಗ್ ಕಿರುಕುಳಕ್ಕೆ ರಿಶೇಲ ಡಿಸೋಜಾ ಆತ್ಮಹತ್ಯೆ: ಸಿಡಿದೆದ್ದ ಕ್ರಿಶ್ಚಿಯನ್ ಸಮುದಾಯ

ಕಾರವಾರ: ಕಾರವಾರ ಜೆಡಿಎಸ್ ಮುಖಂಡೆ ಪುತ್ರನ ಕಿರುಕಳಕ್ಕೆ ರಿಶೇಲ ಡಿಸೋಜಾ ಆತ್ಮಹತ್ಯೆ ಪ್ರಕರಣ ಈಗಾಗಲೇ ಗ್ರಾಮಗಳ ಮಧ್ಯೆ ವೈಮನಸ್ಸಿಗೆ ಕಾರಣವಾಗಿದೆ. ಇತ್ತೀಚೆಗೆ ಕದ್ರಾ ಪಿಎಸ್ಐಯನ್ನು ಅಮಾನತು ಕೂಡ ಮಾಡಲಾಗಿದೆ. ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡು ಇವತ್ತಿಗೆ 11ನೇ ದಿನ. ಇದುವರೆಗೂ ಆರೋಪಿಯನ್ನ ಏಕೆ ಬಂಧಿಸಿಲ್ಲ? ಇದರಲ್ಲಿ ರಾಜಕೀಯ ಪ್ರಭಾವವಿರುವುದು ಗೊತ್ತಾಗುತ್ತಿದೆ ಎಂದು ಮೃತ ಯುವತಿಯ ತಾಯಿ ರೀನಾ ಡಿಸೋಜಾ ಗಂಭೀರ ಆರೋಪ ಮಾಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರೀನಾ ಡಿಸೋಜಾ, ನನ್ನ ಮಗಳ ಪ್ರಕರಣದಲ್ಲಿ ತಪ್ಪು ಮಾಡಿದವರಿಗೆ […]
ಬೆಳಗಾವಿ: ದರ್ಗಾದ ಮೇಲೆ ಬಾಣ ಬಿಟ್ಟಂತೆ ಸನ್ನೆ ಮಾಡಿದ ಹಿಂದೂ ನಾಯಕಿ ವಿರುದ್ಧ ದೂರು ದಾಖಲು

ಬೆಳಗಾವಿ: ಸಮೀಪದ ಮಚ್ಚೆ ಗ್ರಾಮದಲ್ಲಿ ರವಿವಾರ (ಜ.18) ನಡೆದ ಅಖಂಡ ಹಿಂದೂ ಸಮ್ಮೇಳನದ ಶೋಭಾಯಾತ್ರೆ ವೇಳೆ ಹಿಂದೂ ನಾಯಕಿ ಹರ್ಷಿತಾ ಠಾಕೂರ್ ಎಂಬವರು ಪೀರನವಾಡಿಯ ಅನ್ಸಾರಿ ದರ್ಗಾದ ಬಳಿ ದರ್ಗಾದ ಕಡೆಗೆ ಬಾಣ ಬಿಟ್ಟಂತೆ ಕೈ ಸನ್ನೆ ಮಾಡಿ ತೋರಿಸುವ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆ ತಂದು ಪ್ರಚೋದನೆ ಮಾಡಿದ್ದಕ್ಕೆ ದೂರು ದಾಖಲಾಗಿದೆ. ಅನ್ಯಕೋಮಿನ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಡಿ ಮಹಾರಾಷ್ಟ್ರದ ಹಿಂದೂ ನಾಯಕಿ ಹರ್ಷಿತಾ ಠಾಕೂರ್ ಸೇರಿ ಏಳು ಜನರ ವಿರುದ್ಧ ಗ್ರಾಮೀಣ ಠಾಣೆಯಲ್ಲಿ […]
ಕಚೇರಿಯಲ್ಲೇ ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ವೈರಲ್: 47 ಸೆಕೆಂಡ್‌ನ ವಿಡಿಯೋದಲ್ಲಿ ಏನಿದೆ?

ಬೆಂಗಳೂರು: ಕಚೇರಿಯಲ್ಲಿರುವಾಗಲೇ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ರಾಮಚಂದ್ರ ರಾವ್ (DGP Ramachandra Rao) ರಾಸಲೀಲೆ ವಿಡಿಯೋ ಈಗ ವೈರಲ್ ಆಗಿದೆ. ಸಮವಸ್ತ್ರದಲ್ಲಿರುವಾಗಲೇ ರಾಮಚಂದ್ರರಾವ್ ತನ್ನ ಕಚೇರಿಯ ಒಳಗಡೆಯೇ ಮಹಿಳೆಯನ್ನು ತಪ್ಪಿಕೊಂಡಿದ್ದಾರೆ. 4-5 ತಿಂಗಳಲ್ಲಿ ರಾಮಚಂದ್ರ ರಾವ್ ಪೊಲೀಸ್ ಇಲಾಖೆಯಿಂದ ನಿವೃತ್ತರಾಗಲಿದ್ದರು. ನಿವೃತ್ತರಾಗುವ ಸಮಯದಲ್ಲೇ ಅವರು ರಹಸ್ಯ ಕ್ಯಾಮೆರಾದ ಮುಂದೆ ಬೆತ್ತಲಾಗಿದ್ದಾರೆ. ರಾಮಚಂದ್ರರಾವ್ ಅವರ ರಾಸಲೀಲೆ ವಿಡಿಯೋ ಬಿಡುಗಡೆ ಆಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಸರ್ಕಾರ ಯಾವ ರೀತಿಯ ಕ್ರಮವನ್ನು ಕೈಗೊಳ್ಳಲಿದೆ ಎಂಬ ಕುತೂಹಲ ಹೆಚ್ಚಾಗಿದೆ. […]