Flash News

ಕಚೇರಿಯಲ್ಲೇ ಡಿಜಿಪಿ ರಾಮಚಂದ್ರ ರಾವ್‌ ರಾಸಲೀಲೆ ವೈರಲ್‌: 47 ಸೆಕೆಂಡ್‌ನ ವಿಡಿಯೋದಲ್ಲಿ ಏನಿದೆ?

ಬೆಂಗಳೂರು: ಕಚೇರಿಯಲ್ಲಿರುವಾಗಲೇ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ರಾಮಚಂದ್ರ ರಾವ್‌ (DGP Ramachandra Rao) ರಾಸಲೀಲೆ ವಿಡಿಯೋ ಈಗ ವೈರಲ್‌ ಆಗಿದೆ.

ಸಮವಸ್ತ್ರದಲ್ಲಿರುವಾಗಲೇ ರಾಮಚಂದ್ರರಾವ್ ತನ್ನ ಕಚೇರಿಯ ಒಳಗಡೆಯೇ ಮಹಿಳೆಯನ್ನು ತಪ್ಪಿಕೊಂಡಿದ್ದಾರೆ. 4-5 ತಿಂಗಳಲ್ಲಿ ರಾಮಚಂದ್ರ ರಾವ್‌ ಪೊಲೀಸ್‌ ಇಲಾಖೆಯಿಂದ ನಿವೃತ್ತರಾಗಲಿದ್ದರು. ನಿವೃತ್ತರಾಗುವ ಸಮಯದಲ್ಲೇ ಅವರು ರಹಸ್ಯ ಕ್ಯಾಮೆರಾದ ಮುಂದೆ ಬೆತ್ತಲಾಗಿದ್ದಾರೆ.

ರಾಮಚಂದ್ರರಾವ್ ಅವರ ರಾಸಲೀಲೆ ವಿಡಿಯೋ ಬಿಡುಗಡೆ ಆಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಸರ್ಕಾರ ಯಾವ ರೀತಿಯ ಕ್ರಮವನ್ನು ಕೈಗೊಳ್ಳಲಿದೆ ಎಂಬ ಕುತೂಹಲ ಹೆಚ್ಚಾಗಿದೆ.

ರಾಮಚಂದ್ರ ರಾವ್ ಅವರು ಇದು ‘ಎಡಿಟೆಡ್ ವಿಡಿಯೋ’ ಎಂದು ಸಮರ್ಥಿಸಿಕೊಂಡಿದ್ದರೂ, ವಿಡಿಯೋದಲ್ಲಿರುವ ಅವರ ಹಾವಭಾವಗಳು, ಮುತ್ತು ಕೊಡುವ ದೃಶ್ಯಗಳು ಮತ್ತು ಅವರು ಕುಳಿತಿರುವ ಕಚೇರಿಯ ಹಿನ್ನೆಲೆ ಅಸಲಿಯತ್ತನ್ನು ಸಾರುತ್ತಿವೆ.

ಸಮವಸ್ತ್ರದ ಘನತೆಯನ್ನು ಮಣ್ಣುಪಾಲು ಮಾಡಿದ ಈ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಮಹಿಳಾ ಸಂಘಟನೆಗಳು ಮತ್ತು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ವಿಡಿಯೋದಲ್ಲಿ ಏನಿದೆ? : ಅಸಹ್ಯದ ಪರಮಾವಧಿ
ಇದೀಗ ಬಿಡುಗಡೆಯಾಗಿರುವ ಈ 47 ಸೆಕೆಂಡ್‌ನ ವಿಡಿಯೋ ತುಣುಕಿನಲ್ಲಿ ಖಾಕಿ ಸಮವಸ್ತ್ರಧಾರಿ ರಾಮಚಂದ್ರ ರಾವ್ ಅವರ ವಿಕೃತಿಯ ಪರಾಕಾಷ್ಠೆ ಅಡಗಿದೆ.ಈ ವಿಡಿಯೋದಲ್ಲಿ ಒಬ್ಬರು ಸೀರೆ ಉಟ್ಟ ಮಹಿಳೆಯರು ಹಾಗೂ ಇಬ್ಬರು ಚೂಡಿದಾರ ಧರಿಸಿದ ಯುವತಿಯರು ಕಾಣಿಸಿಕೊಂಡಿದ್ದಾರೆ. ಇವರಲ್ಲಿ ಒಬ್ಬರು ಪ್ರಸಿದ್ಧ ಮಾಡೆಲ್ ಎಂದು ಗುರುತಿಸಲಾಗಿದೆ.

ಸಮವಸ್ತ್ರದಲ್ಲಿಯೇ ಅಧಿಕೃತ ಕುರ್ಚಿಯಲ್ಲಿ ಕುಳಿತಿರುವ ಈ ಅಧಿಕಾರಿ, ಮಹಿಳೆಯರನ್ನು ತನ್ನತ್ತ ಎಳೆದಾಡಿ ತಬ್ಬಿಕೊಳ್ಳುವುದು ವಿಡಿಯೋದಲ್ಲಿದೆ.

ಅತ್ಯಂತ ಆಘಾತಕಾರಿ ಎಂದರೆ, ಅಧಿಕಾರಿಯ ಎದುರು ನಿಂತಿದ್ದ ಮಹಿಳೆಯ ಎದೆಯ ಭಾಗಕ್ಕೆ ಮುತ್ತು ಕೊಡುವುದು, ಮತ್ತೊಬ್ಬರೊಂದಿಗೆ ಲಿಪ್‌ಲಾಕ್ (ಮುತ್ತು) ಮಾಡುವ ದೃಶ್ಯಗಳು ಸೆರೆಯಾಗಿವೆ.

ಮಹಿಳೆಯರ ಖಾಸಗಿ ಭಾಗಗಳನ್ನು ಮುಟ್ಟುವುದು ಹಾಗೂ ಸೀರೆಯ ಒಳಗೆ ಕೈ ಹಾಕಿ ವಿಕೃತಿ ಮೆರೆದಿರುವುದು ಕಂಡುಬಂದಿದ್ದು, ಇಡೀ ಪೊಲೀಸ್ ಇಲಾಖೆಯೇ ತಲೆ ತಗ್ಗಿಸುವಂತಿದೆ.

ವಿಡಿಯೋದಲ್ಲಿರುವ ಮಹಿಳೆಯರ ಮುಖಗಳನ್ನು ಬ್ಲರ್ ಮಾಡಲಾಗಿದ್ದರೂ, ಇದು ಒಬ್ಬರಲ್ಲದೆ ಹಲವರೊಂದಿಗೆ ನಡೆಸಿದ ‘ಸರಣಿ ರಾಸಲೀಲೆ’ ಎಂಬುದು ಸ್ಪಷ್ಟವಾಗುತ್ತಿದೆ. ಕಚೇರಿಯ ಕೆಲಸದ ನಿಮಿತ್ತ ಬಂದವರನ್ನು ಅಥವಾ ಉದ್ದೇಶಪೂರ್ವಕವಾಗಿ ಕರೆಸಿಕೊಂಡವರನ್ನು ಈ ರೀತಿ ಬಳಸಿಕೊಳ್ಳಲಾಗಿದೆಯೇ ಎಂಬ ಅನುಮಾನ ಕಾಡುತ್ತಿದೆ.


ಈ ಹಿಂದೆ ಚಿನ್ನ ಕಳ್ಳ ಸಾಗಾಣಿಕೆಯ ಪ್ರಕರಣದಲ್ಲಿ ಪುತ್ರಿ ರನ್ಯ ರಾವ್‌ಗೆ ಶಿಷ್ಟಾಚಾರ ಉಲ್ಲಂಘಿಸಿ ವಿಮಾನ ನಿಲ್ದಾಣದಲ್ಲಿ ವಿಐಪಿ ಟ್ರೀಟ್‌ಮೆಂಟ್‌ ನೀಡಿದ್ದಕ್ಕೆ ಸುದ್ದಿಯಾಗಿದ್ದರು.