Flash News

ಕೇರಳದಲ್ಲಿ ಕಾನೂನು ಸುವ್ಯವಸ್ಥೆಗೆ ಬೆದರಿಕೆ: SDPI, ಜಮಾತ್, ಸಂಘಟನೆಗಳ ಪಾತ್ರ ಪ್ರಶ್ನಿಸಿದ ಅಮಿತ್ ಶಾ!

‘PFI ನಿಷೇಧಿಸುವಾಗ LDF ಮತ್ತು UDF ವಿರೋಧಿಸಿಲ್ಲ, ನಾನು ದೇಶಾದ್ಯಂತ ಎಲ್ಲಿಗೆ ಹೋದರೂ ಸ್ಪಷ್ಟವಾಗಿ ಹೇಳುತ್ತೇನೆ‘ ತಿರುವನಂತಪುರಂ: ಕೇರಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಸದ್ಯಕ್ಕೆ ಶಾಂತವಾಗಿರಬಹುದು ಆದರೆ ಅನೇಕ ಬೆದರಿಕೆಗಳು ನಿಧಾನವಾಗಿ ಹೊರಹೊಮ್ಮುತ್ತಿದ್ದು, ಭವಿಷ್ಯದಲ್ಲಿ ಅಪಾಯಕಾರಿಯಾಗಬಹುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಹೇಳಿದ್ದಾರೆ. ಮಲಯಾಳಂನ ಪ್ರಮುಖ ಪತ್ರಿಕೆ ಕೇರಳ ಕೌಮುದಿ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ಕೆಲವು ಸಂಘಟನೆಗಳ ಪಾತ್ರವನ್ನು ಪ್ರಶ್ನಿಸಿದರು ಮತ್ತು ಅವರು ನಿಜವಾಗಿಯೂ ಜನರನ್ನು ಸುರಕ್ಷಿತವಾಗಿರಿಸಲು ಸಾಧ್ಯವೇ? ಸಹಬಾಳ್ವೆಯಲ್ಲಿ ನಂಬಿಕೆಯಿಲ್ಲದವರು […]

ಮಂಗಳೂರು ಮೂಲದ ಟೆಕ್ಕಿ ಶರ್ಮಿಳಾ ಸಾವಿನ ಪ್ರಕರಣಕ್ಕೆ ಟ್ವಿಸ್ಟ್: ತನಿಖೆಯಲ್ಲಿ ಕೊಲೆ ರಹಸ್ಯ ಬಯಲು

ಬೆಂಗಳೂರು: ರಾಮಮೂರ್ತಿ ನಗರ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ್ದ ಸಾಫ್ಟ್‌ವೇರ್​ ಉದ್ಯೋಗಿ ಶರ್ಮಿಳಾ ನಿಗೂಢ ಸಾವು ಪ್ರಕರಣಕ್ಕೆ ಇದೀಗ ಮಹತ್ವದ ತಿರುವು ಸಿಕ್ಕಿದೆ. ಆರಂಭದಲ್ಲಿ ನಿಗೂಢ ಸಾವೆಂದು ಪರಿಗಣಿಸಲಾಗಿದ್ದ ಈ ಪ್ರಕರಣ, ಪೊಲೀಸರ ತನಿಖೆ ವೇಳೆ ಹತ್ಯೆಯೆಂದು ದೃಢಪಟ್ಟಿದೆ. ಶರ್ಮಿಳಾ ಕೊಲೆಯಾಗಿರುವುದು ತನಿಖೆಯಿಂದ ದೃಢಪಟ್ಟಿದ್ದು, 18 ವರ್ಷದ ಯುವಕ ಕರ್ಣಲ್ ಕುರೈ ಈ ಕೃತ್ಯ ಎಸಗಿರುವುದು ಬಯಲಾಗಿದೆ. ಸುಬ್ರಮಣ್ಯ ಲೇಔಟ್‌ನಲ್ಲಿ ಶರ್ಮಿಳಾ ವಾಸವಿದ್ದ ಮನೆಯ ಎದುರು ಮನೆಯಲ್ಲಿ ನೆಲೆಸಿದ್ದ ಕರ್ಣಲ್ ಕುರೈ, ಶರ್ಮಿಳಾರನ್ನು ಏಕಪಕ್ಷೀಯವಾಗಿ ಪ್ರೀತಿಸುತ್ತಿದ್ದನು. ಆದರೆ, ಈ […]

Mangaluru: ಬಾಂಗ್ಲಾ ಪ್ರಜೆ ಎಂದು ಆರೋಪಿಸಿ ವಲಸೆ ಕಾರ್ಮಿಕನ ಮೇಲೆ ಹಲ್ಲೆ.. ಪ್ರಕರಣ ದಾಖಲು

ಮಂಗಳೂರು: ಜಾರ್ಖಂಡ್ ಮೂಲದ ವಲಸೆ ಕಾರ್ಮಿಕನನ್ನು ಬಾಂಗ್ಲಾದೇಶಿ ಪ್ರಜೆ ಎಂದು ಆರೋಪಿಸಿ, ನಾಲ್ವರು ವ್ಯಕ್ತಿಗಳು ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿ ಹಲ್ಲೆ ನಡೆಸಿದ ಘಟನೆ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ಆರೋಪಿಗಳನ್ನು ಕೂಳೂರು ನಿವಾಸಿಗಳಾದ ಸಾಗರ್, ಧನುಷ್, ಲಾಲು ಯಾನೆ ರತೀಶ್, ಮೋಹನ್ ಎಂದು ಗುರುತಿಸಲಾಗಿದೆ. ಜಾರ್ಖಂಡ್ ಮೂಲದ ದಿಲ್‌ಜಾನ್ ಅನ್ಸಾರಿ ಕಳೆದ 10–15 ವರ್ಷಗಳಿಂದ ವಲಸೆ ಕಾರ್ಮಿಕನಾಗಿ ಜೀವನ ನಡೆಸುತ್ತಿದ್ದು, ಸ್ಥಳೀಯರಾದ ಈ ನಾಲ್ವರು ಆರೋಪಿಗಳು ಸತತವಾಗಿ “ನೀನು ಬಾಂಗ್ಲಾದೇಶದ […]

ಸುಟ್ಟು ಕರಕಲಾದ ಸ್ಥಿತಿಯಲ್ಲಿ ಬಿಜೆಪಿ ಮಾಜಿ ಕಾರ್ಪೊರೇಟರ್​ ಶವ ಪತ್ತೆ; ಅಸಲಿಗೆ ನಡೆದಿದ್ದೇನು?

ದಾವಣಗೆರೆ: ಕಾರಿನಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಬಿಜೆಪಿ‌ ಮಾಜಿ ಕಾರ್ಪೊರೇಟರ್ ಶವ ಪತ್ತೆಯಾಗಿದೆ. ಇದು ದಾವಣಗೆರೆಯ 43ನೇ ವಾರ್ಡ್ ಮಾಜಿ ಕಾರ್ಪೊರೇಟರ್ ಸಂಕೋಳ್ ಚಂದ್ರಶೇಖರ್ (Sankol Chandrasekhar)​ ಮೃತ ದೇಹ ಎಂದು ಗುರುತಿಸಲಾಗಿದೆ. ಚಂದ್ರಶೇಖರ್ ಸಾವು ಹಲವು ಅನುಮಾನಕ್ಕೆ ಕಾರಣವಾಗಿದೆ. ಅತ್ತ ಮಾಜಿ ಕಾರ್ಪೊರೇಟರ್​ನ ಇಬ್ಬರು ಮಕ್ಕಳು ಆತ್ಮಹತ್ಯೆಗೆ (Suicide) ಯತ್ನಿಸಿರುವ ಘಟನೆ ಕೂಡ ನಡೆದಿದೆ. ದಾವಣಗೆರೆ ಹೊರವಲಯ ಹದಡಿ ರಸ್ತೆಯ ಬಳಿಯ ತೋಟದ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಮಾಜಿ ಕಾರ್ಪೊರೇಟರ್ ಮೃತ ದೇಹ […]

ಬೆಂಗಳೂರು | ರಕ್ತದಾನದ ಬಗ್ಗೆ ಜನರಲ್ಲಿ ಹೆಚ್ಚು ಜಾಗೃತಿ ಮೂಡಿಸುವ ಅವಶ್ಯಕತೆ ಇದೆ: ಭಾನು ಪ್ರಕಾಶ್

ಬ್ಯಾರಿ ಕೂಟ ಹಿನ್ನೆಲೆ: ಬಿಸಿಸಿ, ಬ್ಲಡ್ ಡೋನರ್ಸ್, ನಾರಾಯಣ ಹೃದಯಾಲಯದ ಸಹಯೋಗದೊಂದಿಗೆ ರಕ್ತದಾನ ಶಿಬಿರ ರಕ್ತದಾನ ಮಹಾದಾನ. ರಕ್ತದಾನದ ಬಗ್ಗೆ ಹಲವರಲ್ಲಿ ಬಹಳಷ್ಟು ಆತಂಕವಿದೆ. ರಕ್ತ ಕೊಟ್ಟರೆ ದೇಹದಲ್ಲಿ ರಕ್ತ ಕಡಿಮೆ ಆಗಬಹುದು ಎಂದು ಹಲವು ಮಂದಿ ರಕ್ತ ನೀಡುವುದಕ್ಕೆ ಹಿಂಜರಿಯುತ್ತಾರೆ. ಈ ಭಯ, ಆತಂಕ ಹೋಗಲಾಡಿಸಬೇಕಾದರೆ ರಕ್ತದಾನದ ಬಗ್ಗೆ ಜನರಲ್ಲಿ ಹೆಚ್ಚು ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ನಾರಾಯಣ ಹೃದಯಾಲಯ ಬ್ಲಡ್‌ ಬ್ಯಾಂಕ್ ವಿಭಾಗದ ಮುಖ್ಯಸ್ಥರಾದ ಭಾನು ಪ್ರಕಾಶ್ ತಿಳಿಸಿದರು. ಅವರು ಬ್ಯಾರಿಸ್ ಸೆಂಟ್ರಲ್ […]

ಅಯೋಧ್ಯೆ ರಾಮಮಂದಿರದ ಒಳಗೆ ನುಗ್ಗಿ ನಮಾಜ್‌ ಮಾಡಲು ಯತ್ನಿಸಿದ ವ್ಯಕ್ತಿ!

ಅಯೋಧ್ಯೆ: ಅಯೋಧ್ಯೆಯ ರಾಮ ಮಂದಿರ ಸಂಕೀರ್ಣದ ಭದ್ರತಾ ವ್ಯವಸ್ಥೆಗಳನ್ನು ಉಲ್ಲಂಘಿಸಿ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿದ್ದಾಗ ಇಬ್ಬರು ವ್ಯಕ್ತಿಗಳು ಹಾಗೂ ಒಬ್ಬ ಯುವತಿಯನ್ನು ಭದ್ರತಾ ಪಡೆಗಳು ಬಂಧಿಸಿರುವ ಘಟನೆ ನಡೆದಿದೆ. ಮೂಲಗಳ ಪ್ರಕಾರ, ಒಬ್ಬ ಯುವಕ ರಾಮ ಮಂದಿರ ಸಂಕೀರ್ಣದ ದಕ್ಷಿಣದ ಗೋಡೆಯ ಪ್ರದೇಶದಲ್ಲಿ ನಮಾಜ್ ಮಾಡಲು ಯತ್ನಿಸಿದ್ದ. ಕಾಶ್ಮೀರಿ ಮೂಲದ ಯುವಕ ಎಂದು ಗುರುತಿಸಲಾಗಿದೆ. ಪ್ರತ್ಯಕ್ಷದರ್ಶಿಗಳು ಮತ್ತು ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಲಾಗಿದ್ದು, ಭದ್ರತಾ ಸಿಬ್ಬಂದಿ ಯುವಕನನ್ನು ತಡೆದಾಗ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದ್ದ ಎಂದು ಹೇಳಲಾಗುತ್ತಿದೆ. ಇದರ […]

ಆಟೋಪೈಲಟ್‌ನಲ್ಲಿಯೇ ಓಡಿದರೂ ವಿಕಸಿತ ಭಾರತ ಆಗೋದು ಖಚಿತ; ಮೋದಿ ನಾಯಕತ್ವದ ಬಗ್ಗೆ ಅಜಿತ್ ದೋವಲ್ ಮಾತು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಎಂತಹ ಬಲಿಷ್ಠ ಹಂತಕ್ಕೆ ತಂದಿದ್ದಾರೆ ಎಂದರೆ ಇದೀಗ ಆಟೋಪೈಲಟ್‌ನಲ್ಲಿಯೇ ಓಡಿದರೂ ವಿಕಸಿತ ಭಾರತ ಆಗುವುದು ಖಚಿತ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹೇಳಿದ್ದಾರೆ. ಅಭಿವೃದ್ಧಿ ಹೊಂದಿದ ಭಾರತ ಯುವ ನಾಯಕರ ಸಂವಾದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಅವರು ಯುವಜನರೊಂದಿಗೆ ಸಂವಾದ ನಡೆಸಿದರು. ಯುವಕರನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಭವಿಷ್ಯ ಯುವಜನರು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಮೇಲೆ ಅವಲಂಬಿತವಾಗಿದೆ. ಇಂದು ಎಲ್ಲವೂ ಬದಲಾಗಿರಬಹುದು, ಆದರೆ ಒಂದು ವಿಷಯ […]

ಬಿಜೆಪಿಯ ಸಿದ್ಧಾಂತ ಮುಸ್ಲಿಮರ ವಿರುದ್ಧವಲ್ಲ: ನಿತಿನ್ ಗಡ್ಕರಿ

ನಾಗಪುರ: ‘ಬಿಜೆಪಿಯ ಸಿದ್ಧಾಂತವು ತನ್ನ ಅನುಯಾಯಿಗಳಿಗೆ ಜಾತಿ ಮತ್ತು ಧರ್ಮವನ್ನು ಲೆಕ್ಕಿಸದೆ ಎಲ್ಲರಿಗೂ ಕೆಲಸ ಮಾಡುವಂತೆ ಕಲಿಸುತ್ತದೆ ಮತ್ತು ಅದು ಮುಸ್ಲಿಮರ ವಿರುದ್ಧವಲ್ಲ’ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಜನವರಿ 15 ರಂದು ನಾಗ್ಪುರ ಮುನ್ಸಿಪಲ್ ಕಾರ್ಪೊರೇಷನ್‌ಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟ ಪೂರ್ಣ ಬಹುಮತದೊಂದಿಗೆ ಗೆದ್ದರೆ ಜನರ ಆಶಯಗಳು ಮತ್ತು ಕನಸುಗಳು ಈಡೇರುತ್ತವೆ ಮತ್ತು ಅಭ್ಯರ್ಥಿಗಳ ಕಾರ್ಯಕ್ಷಮತೆಯನ್ನು ಅವರೇ ಖಚಿತಪಡಿಸುತ್ತಾರೆ ಎಂದು ಶುಕ್ರವಾರ ನಗರದಲ್ಲಿ ಪ್ರಚಾರ ನಡೆಸುತ್ತಿದ್ದ ಗಡ್ಕರಿ ಹೇಳಿದ್ದಾರೆ. ಮೂರು ಸಾರ್ವಜನಿಕ […]

ವಿಚ್ಛೇದಿತೆಗೆ ಬಾಳು ಕೊಡುವ ನೆಪದಲ್ಲಿ ಮಗು ಕೊಟ್ಟ: 36 ಲಕ್ಷ ಪಡೆದು ಎಸ್ಕೇಪ್‌ ಆದ ಮೋಹನ!

ಬೆಂಗಳೂರು: ವಿಚ್ಛೇದಿತ ಮಹಿಳೆಯನ್ನ ಬಣ್ಣದ ಮಾತುಗಳಿಂದ ಯಾಮಾರಿಸಿ ಬಾಳು ಕೋಡೋದಾಗಿ ಮದುವೆಯಾಗಿದ್ದ ಮೋಹನ್ ರಾಜ್ ಎಂಬಾತನ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ಚಿನ್ನಾಭರಣ ಸೇರಿ ಒಟ್ಟು 36 ಲಕ್ಷ ರೂ. ವಂಚನೆ ಮಾಡಿರುವ ಆರೋಪದ ಮೇಲೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಮೋಹನ್‌ ರಾಜ್‌ ಎಂಬಾತ ಮಹಿಳೆಗೆ ಬಾಳು ಕೊಡೋದಾಗಿ ಮದ್ವೆ ಆಗಿದ್ದ. ಮಗು ಕೂಡ ಆಗಿತ್ತು. ಆ ಬಳಿಕ ಹೊಸ ಮನೆ ಕಟ್ಟಿ ಹೊಸ ಜೀವನ ಶುರು ಮಾಡೋಣ ಅಂತಿದ್ದ ಮೋಹನ ಮಹಿಳೆಯಿಂದ ಹಣ […]

ಹಿಜಾಬ್ ಧರಿಸಿದ ಮಹಿಳೆ ಭಾರತದ ಪ್ರಧಾನಿಯಾಗುವ ದಿನ ದೂರವಿಲ್ಲ; ಅಸಾದುದ್ದೀನ್ ಓವೈಸಿ ಭವಿಷ್ಯ

ಸೋಲಾಪುರ: ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ನೀಡಿದ ಹೇಳಿಕೆ ಇದೀಗ ಭಾರಿ ಕೋಲಾಹಲ ಸೃಷ್ಟಿಸಿದೆ. ಹಿಜಾಬ್ ಧರಿಸಿದ ಮಹಿಳೆ ಭಾರತದ ಪ್ರಧಾನಿಯಾಗುವ ದಿನ ದೂರವಿಲ್ಲ ಎಂದು ಓವೈಸಿ ಹೇಳಿದ್ದಾರೆ. ಮಹಾರಾಷ್ಟ್ರದ ಸೋಲಾಪುರದಲ್ಲಿ ಮಾತನಾಡಿದ ಓವೈಸಿ, ಮಹಾಯುತಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ ಅಜಿತ್ ಪವಾರ್‌ಗೆ ಮತ ನೀಡಿದರೆ ಅದು ನೇರವಾಗಿ ಪ್ರಧಾನಿ ಮೋದಿ ಬೆಂಬಲಿಸಿದ ರೀತಿ. ಅಂದರೆ ನೀವು ವಕ್ಫ್ ವಿರುದ್ದ ಮತ ನೀಡಿದಂತೆ ಎಂದು ಹೊಸ ದಾಳ ಪ್ರಯೋಗಿಸಿದ್ದಾರೆ. ಪಾಕಿಸ್ತಾನಕ್ಕೆ ಹೋಲಿಸಿದರೆ […]