ಅಡುಗೆಕೋಣೆಯ ಎಕ್ಸಾಸ್ಟ್ ಫ್ಯಾನ್ ಕಿಂಡಿಯಲ್ಲಿ ಲಾಕ್ ಆದ ಕಳ್ಳ: ಗೃಹಚಾರ ಬಿಡಿಸಿದ ಪೊಲೀಸರು

ರಾಜಸ್ಥಾನ: ಕಳ್ಳತನಕ್ಕೆ ಯತ್ನಿಸಿದ ಕಳ್ಳನೋರ್ವ ಮನೆಯ ಅಡುಗೆಕೋಣೆಯ ಎಕ್ಸಾಸ್ಟ್ ಫ್ಯಾನ್ ಕಿಂಡಿಯಲ್ಲಿ ಸಿಲುಕಿಕೊಂಡಿರುವ ವಿಚಿತ್ರ ಘಟನೆಯೊಂದು ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ನಿವಾಸಿ ಸುಭಾಷ್ ಕುಮಾರ್ ರಾವತ್ ಅವರ ಮನೆಯಲ್ಲೇ ಕಳ್ಳತನ ಯತ್ನ ನಡೆದಿದ್ದು ಸುಭಾಷ್ ಕುಮಾರ್ ದಂಪತಿ ಜನವರಿ 3 ರಂದು ಪ್ರವಾಸಕ್ಕೆ ತೆರಳಿದ್ದರು. ಇದನ್ನು ಬಂಡವಾಳ ಮಾಡಿಕೊಂಡ ಕಳ್ಳರು ಮನೆಯಲ್ಲಿ ಯಾರೂ ಇಲ್ಲದೇ ಇರುವುದನ್ನು ಗಮನಿಸಿ ಕಳ್ಳತನಕ್ಕೆ ಹೊಂಚು ಹಾಕಿದ್ದಾರೆ ಅದರಂತೆ ಇಬ್ಬರು ಯುವಕರು ಕಳ್ಳತನಕ್ಕೆ ಬಂದಿದ್ದು ಅದರಲ್ಲಿ ಓರ್ವ ಅಡುಗೆ ಕೋಣೆಯ ಎಕ್ಸಾಸ್ಟ್ […]
ಮೊಬೈಲ್ ಚಾರ್ಜರ್ ಯಾವಾಗಲೂ ಕಪ್ಪು ಅಥವಾ ಬಿಳಿ ಬಣ್ಣದಲ್ಲಿ ಏಕಿರುತ್ತೆ?, ಶೇ.90 ರಷ್ಟು ಜನರಿಗೆ ಈ ಕಾರಣವೇ ಗೊತ್ತಿಲ್ಲ

ಇತ್ತೀಚಿನ ದಿನಗಳಲ್ಲಿ ಮೊಬೈಲ್‌ನಂತೆಯೇ ಮೊಬೈಲ್ ಚಾರ್ಜರ್‌ಗಳು ಸಹ ನಮ್ಮ ದೈನಂದಿನ ಜೀವನದ ಪ್ರಮುಖ ಭಾಗವಾಗಿದೆ. ಆದರೆ ಹೆಚ್ಚಿನ ಚಾರ್ಜರ್‌ಗಳು ಕಪ್ಪು ಅಥವಾ ಬಿಳಿ ಬಣ್ಣದಲ್ಲಿ ಮಾತ್ರ ಏಕೆ ಲಭ್ಯವಿದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?. ಇದು ಕಾಕತಾಳೀಯವಲ್ಲ, ಆದರೆ ಇದರ ಹಿಂದೆ ವೈಜ್ಞಾನಿಕ, ಪ್ರಾಯೋಗಿಕ ಮತ್ತು ಆರ್ಥಿಕ ಕಾರಣಗಳಿವೆ. ಕಪ್ಪು ಬಣ್ಣದ ಚಾರ್ಜರ್‌ಗಳನ್ನು ಮುಖ್ಯವಾಗಿ ಆಯ್ಕೆ ಮಾಡಲಾಗುತ್ತದೆ. ಏಕೆಂದರೆ ಕಪ್ಪು ಬಣ್ಣವು ಇತರ ಬಣ್ಣಗಳಿಗಿಂತ ಉತ್ತಮವಾಗಿ ಶಾಖವನ್ನು ಹೀರಿಕೊಳ್ಳುತ್ತದೆ. ಹಳೆಯ ಚಾರ್ಜರ್‌ಗಳು ಹೆಚ್ಚಿನ ಶಾಖವನ್ನು ಉತ್ಪಾದಿಸುವ ಸ್ಟೆಪ್‌ಡೌನ್ […]
ಮೋದಿ, ಅಮಿತ್ ಶಾಗೆ ಸಮಾಧಿ ಅಗೆಯುತ್ತೇವೆ: JNUವಿನಲ್ಲಿ ವಿವಾದಾತ್ಮಕ ಘೋಷಣೆ

ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧ ವಿದ್ಯಾರ್ಥಿಗಳು ವಿವಾದಾತ್ಮಕ ಘೋಷಣೆಗಳನ್ನು ಕೂಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೆಹಲಿ ಗಲಭೆಯ ಆರೋಪಿಗಳಾದ ಉಮರ್ ಖಾಲಿದ್ ಮತ್ತು ಶಾರ್ಜಿಲ್ ಇಮಾಮ್‌ಗೆ ಜಾಮೀನು ನಿರಾಕರಿಸಿದ ಸುಪ್ರೀಂ ಕೋರ್ಟ್ ತೀರ್ಪನ್ನು ವಿರೋಧಿಸಿ ರಾತ್ರಿ ವಿದ್ಯಾರ್ಥಿಗಳು ಪ್ರತಿಭಟಿಸಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಜೆಎನ್‌ಯು ನೆಲದಲ್ಲಿ ಮೋದಿ, ಶಾ ಅವರ ಸಮಾಧಿ ಅಗೆಯುತ್ತೇವೆ ಎಂದು ಘೋಷಣೆ ಕೂಗಿದ್ದಾರೆ. ದೆಹಲಿ ಸಚಿವ […]
ಮೊಹಮ್ಮದ್ ಶಮಿಗೂ ತಟ್ಟಿದ SIR: ವೇಗಿಗೆ ಎಲೆಕ್ಷನ್ ಆಫೀಸರ್ಸ್ ಬುಲಾವ್!

ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಮೊಹಮ್ಮದ್ ಶಮಿ ಸದ್ಯ ಸಿಕ್ಕಾಪಟ್ಟೆ ಬ್ಯುಸಿ. ಆದ್ರೆ ಈಗ ಅವರಿಗೆ ಆಟದ ಜೊತೆ ಮತ್ತೊಂದು ಕೆಲಸ ಬಂದಿದೆ. ಕೋಲ್ಕತ್ತಾದ ಅಧಿಕಾರಿಗಳು ಶಮಿಗೆ ಅರ್ಜೆಂಟ್ ಆಗಿ ಎಸ್‌ಐಆರ್ ಪರಿಶೀಲನೆಗೆ ಹಾಜರಾಗುವಂತೆ ಹೇಳಿದ್ದಾರೆ. ವಿಚಾರಣೆಗೆ ಬರುವಂತೆ ಬುಲಾವ್ ಬಂದಿರೋದ್ರಿಂದ, ಫಾರಂ ತುಂಬುವಾಗ ಆದ ಸಣ್ಣ ಎಡವಟ್ಟು ಈಗ ಶಮಿಯನ್ನ ಆಫೀಸ್ ಮೆಟ್ಟಿಲು ಹತ್ತುವಂತೆ ಮಾಡಿದೆ. ಏನಪ್ಪಾ ಇದು ವಿಷ್ಯ ಅಂತೀರಾ? ಇಲ್ಲಿದೆ ಡೀಟೇಲ್ಸ್. ಅಸಲಿಗೆ ಸೋಮವಾರಾನೇ ಜಾದವ್‌ಪುರದ ಶಾಲೆಯೊಂದರಲ್ಲಿ ಶಮಿ ಮತ್ತು ಅವರ ಸಹೋದರ […]
ಗುಡ್ ಬೈ ಹೇಳುತ್ತಿದೆ ನೆಚ್ಚಿನ ಟೊಯೋಟಾ ಇನ್ನೋವಾ ಕ್ರೈಸ್ಟಾ ಕಾರು: ಸ್ಥಗಿತಕ್ಕೆ ಕಾರಣವೇನು?

ಭಾರತದಲ್ಲಿ ಟೋಯೋಟಾ ಇನ್ನೋವಾ ಕ್ರೈಸ್ಟಾ ಕಾರಿನ ಜನಪ್ರಿಯತೆ ಬಿಡಿಸಿ ಹೇಳಬೇಕಾಗಿಲ್ಲ. ರಾಜಕಾರಣಿಗಳು, ಉದ್ಯಮಿಗಳಿಂದ ಹಿಡಿದು ಸಾಮಾನ್ಯ ಕಾರು ಹೊಂದಿರುವ ಕುಟುಂಬಕ್ಕೂ ಇನ್ನೋವಾ ಕ್ರೈಸ್ಟಾ ಕಾರು ಅಚ್ಚು ಮೆಚ್ಚು. ರಸ್ತೆಯಲ್ಲಿ ಒಮ್ಮೆ ಕಣ್ಣಾಡಿಸಿದರೆ ಸಾಕು ಎಲ್ಲೆಡೆ ಕ್ರೈಸ್ಟಾ ಕಾರು ಗಮನಿಸಬಹುದು. ಆದರೆ ಇದೇ ಇನ್ನೋವಾ ಕ್ರೈಸ್ಟಾ ಕಾರು ಸ್ಥಗಿತಗೊಳ್ಳುತ್ತಿದೆ. ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಟೋಯೋಟಾ ಇನ್ನೋವಾ ಕ್ರೈಸ್ಟಾ ಕಾರು 2027, ಮಾರ್ಚ್ 1 ರಿಂದ ಕ್ರೈಸ್ಟಾ ಕಾರು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ. 2026ರಿಂದ ಉತ್ಪಾದನೆ ಹಂತ ಹಂತವಾಗಿ ಕಡಿತಗೊಳ್ಳಲಿದೆ. ಇಷ್ಟೇ ಅಲ್ಲ […]
ಕೈ ಮುರಿದು, ಕಣ್ಣಿಗೆ ಚಾಕು ಇರಿದ ಪತ್ನಿ: ಪೊಲೀಸ್ ಠಾಣೆಗೆ ಓಡೋಡಿ ಬಂದ ರೌಡಿಶೀಟರ್

ಬೆಂಗಳೂರು: ಖಾಕಿ ಭಯವಿಲ್ಲದೆ ರೌಡಿಶೀಟರ್ಗಳು ಮೇಲಿಂದ ಮೇಲೆ ಅಟ್ಟಹಾಸ ಮೆರೆಯೋದನ್ನು ನಾವು ನೋಡಿದ್ದೇವೆ, ಕೇಳಿದ್ದೇವೆ. ಜೈಲಿಗೆ ಹೋಗಿ ಶಿಕ್ಷೆ ಅನುಭವಿಸಿ ಬಂದರೂ ಕೆಲವರು ಮಾತ್ರ ಬುದ್ಧಿ ಕಲಿಯಲ್ಲ. ಕಾರಾಗೃಹದಿಂದ ಹೊರಬಂದ ಬಳಿಕವೂ ಮತ್ತದೇ ತಮ್ಮ ಹಳೇ ಚಾಳಿ ಮುಂದುವರಿಸುತ್ತಾರೆ. ಕೆಲವೊಮ್ಮೆ ಪೊಲೀಸರ ಕಣ್ಣಿಗೂ ಯಾಮಾರಿಸಿ ಓಡಾಡಿಕೊಂಡು ಇರ್ತಾರೆ. ಇಂತಹುದ್ದೇ ಸಾಲಿಗೆ ಸೇರುವ ರೌಡಿಶೀಟರ್ ಸೈಯದ್ ಅಸ್ಗರ್ ಈಗ ತಾನಾಗಿಯೇ ಪೊಲೀಸರ ಬಳಿ ಓಡೋಡಿ ಬಂದಿದ್ದಾನೆ. ಇದಕ್ಕೆಲ್ಲ ಕಾರಣ ಆತನ ಹೆಂಡತಿ ಅಂದ್ರೆ ನೀವು ನಂಬಲೇ ಬೇಕು. ಹೌದು, […]
ಮಂಗಳೂರು | ಮಹಿಳೆಗೆ ಕಿರುಕಳ ನೀಡಿದ ಆರೋಪ: ಹೆಡ್‌ಕಾನ್‌ಸ್ಟೇಬಲ್ ಸಂತೋಷ್ ಸಿ.ಜೆ. ಅಮಾನತು

ಮಂಗಳೂರು: ಮಹಿಳೆಗೆ ಕಿರುಕುಳ ನೀಡಿದ ಆರೋಪದ ಹಿನ್ನೆಲೆ ಮತ್ತು ಮಾಹಿತಿ ನೀಡದೆ ಅನಧಿಕೃತವಾಗಿ ಕರ್ತವ್ಯಕ್ಕೆ ಗೈರು ಹಾಜರಾದ ಕಾರಣ ಉಳ್ಳಾಲ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ಸಂತೋಷ್ ಸಿ.ಜೆ. ಎಂಬವರನ್ನು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಕರ್ತವ್ಯದಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. 2023ರಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಾವೂರು ಠಾಣೆಗೆ ದೂರು ನೀಡಲು ಹೋದ ಮಹಿಳೆಗೆ ಸಂತೋಷ್‌ರ ಪರಿಚಯ ಆಗಿತ್ತು. ಬಳಿಕ ಸಂತೋಷ್‌ನ ನಡವಳಿಕೆ ಬಗ್ಗೆ ಅಸಮಾಧಾನಗೊಂಡ ಮಹಿಳೆ ಕಮಿಷನರ್‌ಗೆ ದೂರು ನೀಡಿದ್ದರು. ಆ ಬಗ್ಗೆ ಕ್ಷಮೆ ಕೇಳಿದ […]
ಕೋಗಿಲು ನಿರಾಶ್ರಿತರಿಗೆ ಮನೆ ನೀಡಲು ಬಿಡಲ್ಲ: ಆರ್. ಅಶೋಕ್ ಎಚ್ಚರಿಕೆ

ಬೆಂಗಳೂರು : ಅಕ್ರಮ ವಲಸಿಗರಿಗೆ ಒಂದು ಮನೆ ನೀಡಿದರೂ ಅದು ಕೆಟ್ಟ ಪರಂಪರೆಗೆ ನಾಂದಿ ಹಾಡಲಿದೆ. ಕನ್ನಡಿಗರಿಗೆ ಸೇರಿದ ಜಮೀನನ್ನು ಬಾಂಗ್ಲಾ ಜನರಿಗೆ ನೀಡಲು ಅವಕಾಶ ಮಾಡಿಕೊಡುವುದಿಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಎಚ್ಚರಿಕೆ ನೀಡಿದ್ದಾರೆ. ಸೋಮವಾರ ಕೋಗಿಲು ಕ್ರಾಸ್ ಬಳಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೆಂಗಳೂರಿಗೆ ಬೇರೆ ಬೇರೆ ಜಿಲ್ಲೆಗಳಿಂದ ಬಡವರು ಬಂದಿದ್ದಾರೆ. ಅನೇಕರು ಮನೆ ಇಲ್ಲದೆ ಪಾದಚಾರಿ ಮಾರ್ಗದಲ್ಲಿ ಮಲಗುತ್ತಿದ್ದಾರೆ. ಇಂತಹವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಾಣುವುದಿಲ್ಲ. […]
ದೇವರಾಜ ಅರಸು ಎಲ್ಲಿ? ಸಿದ್ದರಾಮಯ್ಯ ಎಲ್ಲಿ?: ವ್ಯಂಗ್ಯವಾಡಿದ ಕುಮಾರಸ್ವಾಮಿ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ದೇವರಾಜು ಅರಸು ದಾಖಲೆ ಮುರಿಯುತ್ತಾರಂತೆ. ಯಾವ ಭಾಗ್ಯಕ್ಕೆ ಇದೆಲ್ಲಾ? ರಾಜ್ಯದ ಪರಿಸ್ಥಿತಿ ನೋಡಿದರೆ ಈ ದಾಖಲೆಗೆ ಮಣ್ಣು ಹೊಯ್ದುಕೊಳ್ಳಬೇಕು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ದೀರ್ಘ ಕಾಲ ಆಡಳಿತ ನಡೆಸಿದ್ದೇನೆ ಎಂಬುದಾಗಿ ಕೊಚ್ಚಿಕೊಳ್ಳುತ್ತಿರುವ ಸಿದ್ದರಾಮಯ್ಯ, ಕೆಟ್ಟ ಆಡಳಿತಕ್ಕೆ ನಿದರ್ಶನ. ಅವರ ಆಡಳಿತದ ದಾಖಲೆಗೆ ಮಣ್ಣು ಹೊಯ್ದುಕೊಳ್ಳಬೇಕು ಎಂದು ಟೀಕಿಸಿದರು. ಉತ್ತಮ ಆಡಳಿತಕ್ಕೆ ಸಾಕ್ಷಿಯಾಗಿದ್ದ ಕರ್ನಾಟಕ […]
UAE | ಅಬುಧಾಬಿಯಲ್ಲಿ ರಸ್ತೆ ಅಪಘಾತ: ಭಾರತೀಯ ಮೂಲದ ನಾಲ್ವರು ಮೃತ್ಯು

ಅಬುಧಾಬಿ: ಶನಿವಾರ ಮುಂಜಾನೆ ಅಬುಧಾಬಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಭಾರತೀಯ ಮೂಲದ ಮೂವರು ಮಕ್ಕಳು ಹಾಗೂ ಮನೆ ಸಹಾಯಕಿಯೊಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಒಡಹುಟ್ಟಿದವರಾದ ಅವರೆಲ್ಲರೂ ತಮ್ಮ ಕುಟುಂಬದ ಮನೆ ಸಹಾಯಕಿಯೊಂದಿಗೆ ವಾಹನದಲ್ಲಿ ಪ್ರಯಾಣಿಸುವಾಗ ಅಬುಧಾಬಿ-ದುಬೈ ಹೆದ್ದಾರಿಯ ಶಹಾಮಾದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ತಕ್ಷಣವೇ ತುರ್ತು ಸೇವೆಗಳಿಗೆ ಮಾಹಿತಿ ನೀಡಿದರೂ, ಅವರೆಲ್ಲರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ. ಕೇರಳ ಮೂಲದ ಕುಟುಂಬವೊಂದಕ್ಕೆ ಸೇರಿದ ಈ ಮೂವರು ಮಕ್ಕಳು ರಾಸ್ ಅಲ್ ಖೈಮಾ ದಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. […]