ಕೋಗಿಲು ಲೇಔಟ್ ಮನೆ ಧ್ವಂಸ ಕಾರ್ಯಾಚರಣೆಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ಬೆಂಬಲ

ಬೆಂಗಳೂರು: ಬೆಂಗಳೂರಿನಲ್ಲಿ ಕರ್ನಾಟಕ ಸರ್ಕಾರ ನಡೆಸುತ್ತಿರುವ ಕೋಗಿಲು ಲೇಔಟ್ನ ಕಟ್ಟಡ ಧ್ವಂಸ ಕಾರ್ಯಾಚರಣೆಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸುವ ಮೊದಲು ಅವರ ನಿವಾಸಕ್ಕೆ ನೋಟಿಸ್ ನೀಡಲಾಗಿದೆ ಮತ್ತು ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಕೇರಳದ ತಿರುವನಂತಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಶಿ ತರೂರ್, ಕರ್ನಾಟಕ ಸರ್ಕಾರ ಕೋಗಿಲು ಲೇಔಟ್ನಲ್ಲಿ ಧ್ವಂಸ ಕಾರ್ಯಾಚರಣೆಯನ್ನು ಮುಂದುವರಿಸಲು ಎರಡು ಕಾರಣಗಳನ್ನು ಪಟ್ಟಿ ಮಾಡಿದ್ದಾರೆ. “ಮೊದಲನೆಯದಾಗಿ, ಆ ಭೂಮಿ ಸರ್ಕಾರಕ್ಕೆ ಸೇರಿದ್ದು, ಜನರು ಅಲ್ಲಿ […]
ನನಗೆ 6 ಮಕ್ಕಳು, ನಿಮ್ಮನ್ನು ತಡೆದವರ‍್ಯಾರು?; ಬಿಜೆಪಿ ನಾಯಕಿ ವಿರುದ್ಧ ಓವೈಸಿ ವಾಗ್ದಾಳಿ

ನವದೆಹಲಿ: ರಾಷ್ಟ್ರದ ಭದ್ರತೆ ದೃಷ್ಟಿಯಿಂದ ಹಿಂದೂಗಳು ಕುಟುಂಬದಲ್ಲಿ ಜನಸಂಖ್ಯೆ ಹೆಚ್ಚಿಸಲು 4 ಮಕ್ಕಳನ್ನಾದ್ರೂ ಹೊಂದಬೇಕು ಎಂದಿದ್ದ ಬಿಜೆಪಿ ನಾಯಕಿ ನವನೀತ್ ರಾಣಾ ವಿರುದ್ಧ AIMIM ಮುಖ್ಯಸ್ಥ ಅಸದುದ್ದೀನ್ ಓವೈಸಿ ವಾಗ್ದಾಳಿ ನಡೆಸಿದ್ದಾರೆ. ನನಗೆ ಆರು ಮಕ್ಕಳಿದ್ದಾರೆ, ನೀವು ನಾಲ್ಕು ಮಕ್ಕಳನ್ನು ಹೊಂದುವುದನ್ನು ತಡೆಯುವವರು ಯಾರು? ಎಂದು ಅವರು ಪ್ರಶ್ನಿಸಿದ್ದಾರೆ. ಮಹಾರಾಷ್ಟ್ರದಲ್ಲಿ, ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರು ಪಂಚಾಯತ್ ಚುನಾವಣೆಗಳಲ್ಲಿ ಸ್ಪರ್ಧಿಸಲು ಅವಕಾಶವಿಲ್ಲ. ತೆಲಂಗಾಣದಲ್ಲಿಯೂ ನಿಯಮವನ್ನು ಬದಲಾಯಿಸಲಾಗಿದೆ. ಇದೇ ವೇಳೆ, ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು […]
ದೆಹಲಿ ಗಲಭೆ ಪ್ರಕರಣ | ಗುಲ್ಫಿಶಾ ಫಾತಿಮಾ, ಮೀರಾನ್, ಶಿಫಾಗೆ ಜಾಮೀನು

►ಉಮರ್ ಖಾಲಿದ್, ಶರ್ಜಿಲ್ ಇಮಾಮ್’ಗೆ ಜಾಮೀನು ನಿರಾಕರಣೆ ಹೊಸದಿಲ್ಲಿ: 2020 ದಿಲ್ಲಿ ಗಲಭೆಗೆ ಸಂಬಂಧಿಸಿದ ಪಿತೂರಿ ಪ್ರಕರಣದಲ್ಲಿ ಯುಎಪಿಎಯಡಿ ಬಂಧಿತ ಉಮರ್ ಖಾಲಿದ್, ಶರ್ಜಿಲ್ ಇಮಾಮ್‌ಗೆ ಸುಪ್ರೀಂ ಕೋರ್ಟ್ ಜಾಮೀನು ನಿರಾಕರಿಸಿದೆ. ಉಮರ್ ಖಾಲಿದ್, ಶರ್ಜೀಲ್ ಇಮಾಮ್ ಜಾಮೀನು ನಿರಾಕರಿಸಿದರೆ ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಮೊಹಮ್ಮದ್ ಸಮೀರ್ ಖಾನ್, ಶಾದಾಬ್ ಅಹ್ಮದ್, ಶಿಫಾ ಉರ್ ರೆಹಮಾನ್ ಸುಪ್ರೀಂಕೋರ್ಟ್ 12 ಷರತ್ತು ವಿಧಿಸಿ ಜಾಮೀನು ನೀಡಿದೆ. ದಿಲ್ಲಿ ಗಲಭೆಗೆ ಸಂಬಂಧಿಸಿದ ಪಿತೂರಿ ಪ್ರಕರಣದಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) […]
ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟ ಪ್ರತಾಪ್ ಸಿಂಹ? ಇದುವೇ ಇವರ ವಿಧಾನಸಭಾ ಕ್ಷೇತ್ರ!

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮಾಜಿ ಸಂಸದರಾದ ಪ್ರತಾಪ್ ಸಿಂಹ ಇದೀಗ ರಾಜ್ಯ ರಾಜಕಾರಣದತ್ತ ಮುಖ ಮಾಡಿದ್ದಾರೆ. ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡುವ ಮೂಲಕ ತಮ್ಮ ಮುಂದಿನ ರಾಜಕೀಯ ಜೀವನದ ಕರ್ತವ್ಯ ಪಥ ಯಾವುದು ಎಂಬುದರ ಮಾಹಿತಿಯನ್ನು ನೀಡಿದ್ದಾರೆ. ಕೆಲ ತಿಂಗಳ ಹಿಂದೆಯಷ್ಟೇ ಸ್ಥಳೀಯ ಪತ್ರಿಕೆಗೆ ಸಂದರ್ಶನ ನೀಡಿದ್ದ ಪ್ರತಾಪ್ ಸಿಂಹ, ರಾಜ್ಯ ರಾಜಕಾರಣಕ್ಕೆ ಬರುತ್ತಿರುವ ಮಾಹಿತಿಯನ್ನು ನೀಡಿದ್ದಾರೆ. ಮೈಸೂರು ಜಿಲ್ಲೆಯಲ್ಲಿನ ವಿಧಾನಸಭಾ ಕ್ಷೇತ್ರದಿಂದಲೇ ರಾಜ್ಯ ರಾಜಕಾರಣ ಆರಂಭಿಸುತ್ತೇನೆ ಎಂದಿದ್ದರು. ಆದ್ರೆ ಯಾವ ವಿಧಾನಸಭಾ ಕ್ಷೇತ್ರ ಎಂಬುದರ […]
ಸುಳ್ಯ | ಬಿಜೆಪಿ ಮುಖಂಡನ ಸೋದರನ ಪತ್ನಿ ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ; ಸಾವಿನಲ್ಲಿ ಸಂಶಯ..!

ಪುತ್ತೂರು: ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಕೊಡಿಯಾಲ ಗ್ರಾಮದ ಆರ್ವಾರ ಎಂಬಲ್ಲಿ ತಾಯಿ ತನ್ನ ಮೂರು ವರ್ಷದ ಮಗುವಿನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ತನ್ನ ಮಗಳ ಸಾವಿನಲ್ಲಿ ಸಂಶಯ ಇದೆಯೆಂದು ಯುವತಿ ತಾಯಿ ದೂರು ನೀಡಿದ್ದು ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಯತೀಶ್ ಆರ್ವಾರ್ ಅವರ ಸೋದರ ಹರೀಶ್ ಎಂಬವರ ಪತ್ನಿ ಮಧುಶ್ರೀ (34) ಮತ್ತು ಆಕೆಯ ಪುತ್ರಿ ಧೃತಿ (3) ಮೃತಪಟ್ಟವರು. ಮಧುಶ್ರೀ ಪುತ್ತೂರಿನ […]
ಶೀಘ್ರವೇ ಎನ್‌ಡಿಎ ತೆಕ್ಕೆಗೆ ತಮಿಳುನಾಡು, ಪ.ಬಂಗಾಳ: ಅಮಿತ್ ಶಾ ಭವಿಷ್ಯ

ಪುದುಕೊಟ್ಟೈ: ‘ಪ್ರಸಕ್ತ ವರ್ಷ ನಡೆಯಲಿರುವ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಕೂಟವು ಗೆಲುವು ಸಾಧಿಸಲಿದೆ. ಈ ಎರಡೂ ರಾಜ್ಯಗಳು ಎನ್‌ಡಿಎ ತೆಕ್ಕೆಗೆ ಸೇರಲಿವೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಲ್ಲಿ ನಡೆದ ಬಿಜೆಪಿ ರ‍್ಯಾಲಿಯಲ್ಲಿ ಮಾತನಾಡಿದ ಅವರು, 2024ರಿಂದ ಬಿಜೆಪಿ–ಎನ್‌ಡಿಎ ಗೆಲುವುಗಳು, ಹರಿಯಾಣದಲ್ಲಿ ಸತತ 3ನೇ ಬಾರಿಯೂ ವಿಜಯ ಸಾಧಿಸಿದ್ದನ್ನು ಪಟ್ಟಿ ಮಾಡಿದ್ದಾರೆ. ಇದೇ ವೇಳೆ ಎನ್‌ಡಿಎ ತೆಕ್ಕೆಗೆ ಸೇರುವ ಸರದಿ ಈಗ […]
Mangaluru | ಸುಹಾಸ್ ಶೆಟ್ಟಿ ರೀತಿ ಟ್ರೀಟ್ಮೆಂಟ್: ಮುಸ್ಲಿಂ ಪೇಜ್ ಹೆಸರಲ್ಲಿ ಪ್ರಚೋದನಕಾರಿ ಪೋಸ್ಟ್ ; FIR ದಾಖಲು; ಆರೋಪಿಗಳಿಗೆ ಶೋಧ

ಮಂಗಳೂರು: ಬಜಪೆಯಲ್ಲಿ ಗೋಮಾಂಸ ಒಯ್ಯುತ್ತಿದ್ದ ತಂದೆ, ಮಗಳನ್ನು ತಡೆದ ಪ್ರಕರಣ ಸಂಬಂಧಿಸಿ ಇಬ್ಬರು ಯುವಕರ ಫೋಟೊ ಹಾಕಿ ಮಿತಿಮೀರುತ್ತಿರುವ ಸಂಘಿಗಳ ಅಟ್ಟಹಾಸ ಎಂದು ಬರೆದು ಪ್ರಚೋದನಕಾರಿ ಸಂದೇಶ ಹಾಕಿದ ಬಗ್ಗೆ ಮಂಗಳೂರು ಪೊಲೀಸರು ಸ್ವಯಂಪ್ರೇರಿತ ಕೇಸು ದಾಖಲಿಸಿದ್ದಾರೆ. ಬಜಪೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಡಿ. 27 ರಂದು ನಾರ್ಲಪದವು ಎಂಬಲ್ಲಿ ಅಬ್ದುಲ್ ಸತ್ತಾರ್ ಎಂಬಾತ ತನ್ನ ಮಗಳ ಜೊತೆಗೆ ಸ್ಕೂಟರ್ ನಲ್ಲಿ ಕೂರಿಸಿ ಅಕ್ರಮವಾಗಿ ದನದ ಮಾಂಸ ಸಾಗಾಟ ಮಾಡುತ್ತಿದ್ದ ವೇಳೆ, ಸುಮಿತ್ ಮತ್ತು ರಜತ್ ನಾಯಕ್ […]
ರಂಜಿತಾಳನ್ನು ಕೊಂದು ಎಸ್ಕೇಪ್ ಆಗಿದ್ದ ರಫೀಕ್ ಶವ ಕಾಡಿನಲ್ಲಿ ಪತ್ತೆ

ಹುಬ್ಬಳ್ಳಿ: ಯಲ್ಲಾಪುರದಲ್ಲಿ ಮಹಿಳೆಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಹಮ್ಮದ್ ರಫೀಕ್ ಇಮಾಮಸಾಬ್ (30) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯಲ್ಲಾಪುರದ ರಾಮಪುರ ಕಾಡಿನಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡಿದ್ದಾನೆ. ಮೃತ ರಫೀಲ್ ಕಾಳಮ್ಮನಗರದ ನಿವಾಸಿಯಾಗಿದ್ದನು. ಶನಿವಾರದಿಂದ ಆರೋಪಿ ರಫೀಕ್ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಇದೀಗ ರಫೀಕ್ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶನಿವಾರ ಆಶ್ರಯ ನಗರ ನಿವಾಸಿ ರಂಜಿತಾ ಮಲ್ಲಪ್ಪ ಬನ್ಸೊಡೆ (30) ಎಂಬ ಮಹಿಳೆಯ ಕೊ*ಲೆಯಾಗಿತ್ತು. ರಂಜಿತಾ ಕೊಲೆ ಬಳಿಕ ಮಹಮ್ಮದ್ ರಫೀಕ್ ಎಸ್ಕೇಪ್ ಆಗಿದ್ದನು. ಕೊಲೆಯಾದ […]
ರಂಜಿತಾಳ ಕುತ್ತಿಗೆಗೆ ಚಾಕು ಇರಿದು ಕೊಂದ ಪ್ರಿಯಕರ ರಫೀಕ್!: ನಾಳೆ ಯಲ್ಲಾಪುರ ಬಂದ್‌ಗೆ ಕರೆ

ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಮತಿಹೀನ ಕೃತ್ಯವೊಂದು ನಡೆದಿದ್ದು, ಚಾಕು ಇರಿತಕ್ಕೊಳಗಾಗಿದ್ದ ಕಾಳಮ್ಮ ನಗರದ ರಂಜಿತಾ ಎಂಬ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಘಟನೆಯು ಜಿಲ್ಲೆಯಾದ್ಯಂತ ಭಾರಿ ಚರ್ಚೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದ್ದು, ಹಿಂದೂ ಸಂಘಟನೆಗಳು ಯಲ್ಲಾಪುರ ಬಂದ್‌ಗೆ ಕರೆ ನೀಡಿವೆ. ಆರೋಪಿ ರಫೀಕ್ ಎಂಬ ವ್ಯಕ್ತಿ ರಂಜಿತಾ ಎಂಬುವವರ ಕುತ್ತಿಗೆಗೆ ಚಾಕು ಹಾಕಿ ಭೀಕರವಾಗಿ ಹಲ್ಲೆ ನಡೆಸಿದ್ದ. ಇದರಿಂದಾಗಿ ಆಕೆಯ ಶ್ವಾಸಕೋಶಕ್ಕೆ ತೀವ್ರ ಗಾಯವಾಗಿತ್ತು. ತಕ್ಷಣವೇ ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಬಳಿಕ […]
ಕೆಟ್ಟ ದೃಷ್ಟಿಯಿಂದ ‘ಮುಸ್ಲಿಂ ಮಹಿಳೆ’ ಮುಟ್ಟುವವರ ಕೈ ಕತ್ತರಿಸುತ್ತೇನೆ: AIMIM ನಾಯಕ ಇಮ್ತೀಯಾಜ್ ಜಲೀಲ್!

ಜಲ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಮುಸ್ಲಿಂ ಮಹಿಳೆಯೊಬ್ಬರ ‘ಹಿಜಾಬ್’ ಎಳೆದ ವಿವಾದದ ನಡುವೆ ಮುಸ್ಲಿಂ ಮಹಿಳೆಯರನ್ನು ಕೆಟ್ಟ ಉದ್ದೇಶದಿಂದ ಮುಟ್ಟುವ ಯಾವುದೇ ವ್ಯಕ್ತಿಯ ಕೈಯನ್ನು ಕತ್ತರಿಸುವುದಾಗಿ AIMIM ನಾಯಕ ಇಮ್ತೀಯಾಜ್ ಜಲೀಲ್ ಹಾಕಿದ್ದಾರೆ. ಶುಕ್ರವಾರ ಮಹಾರಾಷ್ಟ್ರದ ಜಲ್ನಾ ನಗರದಲ್ಲಿ ರ‍್ಯಾಲಿಯಲ್ಲಿ ಮಾತನಾಡಿದ ಜಲೀಲ್, ಸೋ ಕಾಲ್ಡ್ ಜಾತ್ಯತೀತ ಪಕ್ಷಗಳು ಗೂಂಡಾಗಳು ಮತ್ತು ಕ್ರಿಮಿನಲ್ ಗಳ ಪರವಾಗಿವೆ. ಆದರೆ ಮುಸ್ಲಿಮರನ್ನು ಬೆಂಬಲಿಸಲು ಹಿಂಜರಿಯುತ್ತವೆ ಎಂದು ಆರೋಪಿಸುವ ಮೂಲಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ನಿತೀಶ್ ಕುಮಾರ್ ಅವರ […]