Flash News

ಮುಸ್ಲಿಮರು ಸೂರ್ಯ ನಮಸ್ಕಾರ ಮಾಡಿ, ನದಿಗಳನ್ನು ಪೂಜಿಸಿದರೆ ಅವರಿಗೆ ಭಾರತದಲ್ಲಿ ಏನೂ ತೊಂದರೆ ಇಲ್ಲ: RSS ನಾಯಕ ಹೊಸಬಾಳೆ

ಲಕ್ನೋ: ಹಿಂದೂ ಧರ್ಮ ಶ್ರೇಷ್ಠವಾದದ್ದು. ಭಾರತ ನೆಲದಲ್ಲಿರುವ ಮುಸ್ಲಿಮರು ಸೂರ್ಯ ನಮಸ್ಕಾರ ಮಾಡಬೇಕು, ನದಿಗಳನ್ನು ಪೂಜಿಸಬೇಕು ಎಂದು ಹಿರಿಯ ಆರ್‌ಎಸ್‌ಎಸ್‌ ನಾಯಕ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ. ಭಾರತದಲ್ಲಿ ಮುಸ್ಲಿಮರಿಗೆ ಏನೂ ತೊಂದರೆಯಾಗುವುದಿಲ್ಲ. ನಮ್ಮ ಮುಸ್ಲಿಂ ಸಹೋದರರು ಸಹ ಸೂರ್ಯ ನಮಸ್ಕಾರ ಮಾಡಿದರೆ, ಅವರಿಗೆ ಏನೂ ಆಗಲ್ಲ. ಹಾಗಂತ ಅವರು ಮಸೀದಿಗೆ ಹೋಗುವುದನ್ನು ಯಾರೂ ತಡೆಯುವುದಿಲ್ಲ. ನಮ್ಮ ಹಿಂದೂ ಧರ್ಮ ಸರ್ವೋಚ್ಛ. ಅದು ಎಲ್ಲರ ಪರವಾಗಿದೆ ಎಂದು ಹೊಸಬಾಳೆ ಪ್ರತಿಪಾದಿಸಿದ್ದಾರೆ. ಯೋಗಾಸನಗಳ ಅನುಕ್ರಮವಾದ ಸೂರ್ಯ ನಮಸ್ಕಾರವು ವೈಜ್ಞಾನಿಕ ಮತ್ತು […]

Mangalore | ಬಾಲಪ್ರತಿಭೆ ಝೊಹಾನ್ ಓಝಿಲ್‌ಗೆ ಟ್ರಿಪಲ್ ರೆಕಾರ್ಡ್ ಗೌರವ; ಅಂತರರಾಷ್ಟ್ರೀಯ ಮಟ್ಟದಲ್ಲಿ ಮಂಗಳೂರಿಗೆ ಕೀರ್ತಿ

ಮಂಗಳೂರು: ಉರ್ವಾ ಸ್ಟೋರ್ ಅಶೋಕ್ ನಗರದ ಬಾಲಪ್ರತಿಭೆ ಝೊಹಾನ್ ಓಝಿಲ್, ಅಪೂರ್ವ ಸಾಧನೆಯ ಮೂಲಕ ಟ್ರಿಪಲ್ ರೆಕಾರ್ಡ್ ಹೋಲ್ಡರ್ ಆಗಿ ಗುರುತಿಸಿಕೊಂಡಿದ್ದು, ತಮ್ಮ ಅಸಾಧಾರಣ ಪ್ರತಿಭೆ ಮತ್ತು ವಿಶಿಷ್ಟ ಸಾಧನೆಗಳಿಗಾಗಿ ದೇಶೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಮೂರು ಪ್ರಮುಖ ದಾಖಲೆಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಝೊಹಾನ್ ಓಝಿಲ್ ಅವರಿಗೆ ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ವತಿಯಿಂದ “Super Talented Kid – One in a Million” ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದೊರಕಿದೆ. ವಿಶೇಷವಾಗಿ ಪ್ರತಿಷ್ಠಿತ […]

ಬುರ್ಖಾ ಧರಿಸದೆ ತವರಿಗೆ ಹೋದ ಪತ್ನಿ: ಇಬ್ಬರು ಪುಟ್ಟ ಹೆಣ್ಣು ಮಕ್ಕಳನ್ನು ಕೊಂದು ಹೂತು ಹಾಕಿದ ಕ್ರೂರಿ

ಲಕ್ನೋ: ತನ್ನೊಂದಿಗೆ ಜಗಳ ಮಾಡಿಕೊಂಡು ಬುರ್ಖಾ ಧರಿಸದೆ ತವರು ಮನೆಗೆ ತೆರಳಿದ ಪತ್ನಿ ಮತ್ತು ಇಬ್ಬರು ಮಕ್ಕಳ ಮೇಲೆ ಕೋಪಗೊಂಡ ವ್ಯಕ್ತಿಯೊಬ್ಬ, ಅವರು ವಾಪಸ್​ ಬಂದ ಬಳಿಕ ಮೂವರನ್ನೂ ಹತ್ಯೆ ಮಾಡಿ ಸೆಪ್ಟಿಕ್​ ಟ್ಯಾಂಕ್​​ನಲ್ಲಿ ಹೂತಿಟ್ಟ ಪ್ರಕರಣ ಇತ್ತೀಚೆಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇಲ್ಲಿನ ಕಂಡ್ಲಾ ಪೊಲೀಸ್​ ಠಾಣಾ ವ್ಯಾಪ್ತಿಯ ಗಢಿಡಾಲ್ಟ್ ಗ್ರಾಮದ ನಿವಾಸಿ ಫಾರೂಖ್​ ಹತ್ಯೆ ಕೇಸಲ್ಲಿ ಬಂಧಿತನಾದವ. ಸೊಸೆ ಮತ್ತು ಮೊಮ್ಮಕ್ಕಳು ಕಾಣೆಯಾದ ಬಗ್ಗೆ ಮಾವ (ಆರೋಪಿಯ ತಂದೆ) ನೀಡಿದ ದೂರಿನ ಆಧಾರದ […]

ಮಹಾರಾಷ್ಟ್ರ ಸರ್ಕಾರದಲ್ಲಿನ ಮೊದಲ ವಿಕೆಟ್ ಪತನ: ಸಚಿವ ಸ್ಥಾನಕ್ಕೆ ಮಾಣಿಕ್​ರಾವ್ ರಾಜೀನಾಮೆ; ಯಾವುದೇ ಕ್ಷಣದಲ್ಲಿ ಬಂಧನ ಸಾಧ್ಯತೆ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಸಚಿವ ಸಂಪುಟದ ಮೊದಲ ವಿಕೆಟ್ ಪತನವಾಗಿದೆ. ನಾಸಿಕ್ ಸೆಷನ್ಸ್ ನ್ಯಾಯಾಲಯವು ಸಚಿವ ಮಾಣಿಕ್​ರಾವ್ ಕೊಕಾಟೆ ವಿರುದ್ಧ ಬಂಧನ ವಾರಂಟ್ ಹೊರಡಿಸಿತ್ತು. ಅದರ ನಂತರ ಮಾಣಿಕ್​ರಾವ್ ಕೊಕಾಟೆ ಮಹತ್ವದ ನಿರ್ಧಾರವನ್ನು ತೆಗೆದುಕೊಂಡು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಾಸಿಕ್‌ನಲ್ಲಿ ನಡೆದ ಅಪಾರ್ಟ್‌ಮೆಂಟ್ ಹಗರಣ ಪ್ರಕರಣದಿಂದ ಮಾಣಿಕ್​ರಾವ್ ಕೊಕಾಟೆ ತೀವ್ರವಾಗಿ ಸಂಕಷ್ಟಕ್ಕೆ ಸಿಲುಕಿದ್ದರು. ಈ ಪ್ರಕರಣವು 1995ರ ಕಾಲದ್ದು. ಈ ಪ್ರಕರಣದಲ್ಲಿ ಕೊಕಾಟೆಗೆ ಎರಡು ವರ್ಷಗಳ ಶಿಕ್ಷೆ ವಿಧಿಸಲಾಗಿತ್ತು. ಅದರ ನಂತರ ನಾಸಿಕ್ ಸೆಷನ್ಸ್ […]

ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ರಾಯಚೂರಿಗೆ ಗಡೀಪಾರು; ಮತ್ತೊಮ್ಮೆ ನೋಟೀಸ್ ಜಾರಿ ಮಾಡಿದ ಪುತ್ತೂರು ವಿಭಾಗಾಧಿಕಾರಿ

ಧರ್ಮಸ್ಥಳ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿನ್ನಯ್ಯ ಅವರನ್ನು ಈಗಾಗಲೇ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಇದೀಗ ಅವರು 1 ಲಕ್ಷ ಬಾಂಡ್​​ ನೀಡಿ. ಜೈಲಿನಿಂದ ಹೊರ ಬಂದಿದ್ದಾರೆ. ಇದರ ಬೆನ್ನಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಮತ್ತೆ ಗಡಿಪಾರಿ ನೋಟಿಸ್​​ ಜಾರಿ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಮಹೇಶ್ ಶೆಟ್ಟಿ ಗಡಿಪಾರು ಮಾಡಲು ಆದೇಶ ನೀಡಲಾಗಿದೆ. ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಈ ಆದೇಶವನ್ನು ನೀಡಿದ್ದಾರೆ. ಮೊನ್ನೆಯಷ್ಟೇ ತಿಮರೋಡಿಗೆ ಗಡಿಪಾರು ನೋಟೀಸ್ […]

ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರು: ಬೆಳಗಾವಿ ಸರ್ಕ್ಯೂಟ್ ಹೌಸ್​​ಗೆ ದೌಡಾಯಿಸಿದ ನಾಯಕರು

ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆರೋಗ್ಯದಲ್ಲಿ ಏರುಪೇರು ಆಗಿದೆ. ಈ ಹಿನ್ನಲೆಯಲ್ಲಿ ಇಂದು (ಡಿಸೆಂಬರ್ 17) ವಿಧಾನಸಭೆ ಅಧಿವೇಶನದಲ್ಲಿ ಭಾಗಿಯಾಗದೇ ಬೆಳಗಾವಿಯ ಸರ್ಕ್ಯೂಟ್ ಹೌಸ್ ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇಂದು ಸಂಜೆ ನಿಗದಿಯಾಗಿದ್ದ ಯಾವುದೇ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿಲ್ಲ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಶಾಸಕರು, ಸಚಿವರುಗಳು ಸರ್ಕ್ಯೂಟ್ ಹೌಸ್​​ಗೆ ದೌಡಾಯಿಸಿ ಸಿಎಂ ಆರೋಗ್ಯ ವಿಚಾರಿಸಿದ್ದಾರೆ. ಬುಧವಾರ ಮಧ್ಯಾಹ್ನದ ಬಳಿಕ ಸಿಎಂ ಸಿದ್ದರಾಮಯ್ಯ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯಂತೆ ಅವರು ಅಧಿವೇಶನಕ್ಕೆ ಹೋಗದೆ […]

ಗಾಂಧಿ ಕುಟುಂಬ ರಾಜಕೀಯದಲ್ಲಿ ಅತ್ಯಂತ ಭ್ರಷ್ಟ ಕುಟುಂಬ: ಬಿಜೆಪಿ ವಕ್ತಾರ ಗೌರವ್ ಭಾಟಿಯಾ

ನವದೆಹಲಿ: ಗಾಂಧಿ ಕುಟುಂಬ ರಾಜಕೀಯದಲ್ಲಿ ಅತ್ಯಂತ ಭ್ರಷ್ಟ ಕುಟುಂಬ, ಸುಮಾರು 2,000 ಕೋಟಿ ರೂ. ಮೌಲ್ಯದ ಆಸ್ತಿಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಆರೋಪಿಸಿದ್ದಾರೆ. ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ನ್ಯಾಯಾಲಯದ ತೀರ್ಪನ್ನು ಕ್ಲೀನ್ ಚಿಟ್ ಎಂದು ಬಿಂಬಿಸುವ ಮೂಲಕ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದ್ದಾರೆ. ಈ ಆದೇಶವು ಆರೋಪಗಳ ಅರ್ಹತೆಯ ಮೇಲೆ ಅಲ್ಲ, ಕಾನೂನು ಮತ್ತು ತಾಂತ್ರಿಕ ಆಧಾರದ ಮೇಲೆ ನೀಡಲಾಗಿದೆ ಎಂದು ವಾದಿಸಿದ್ದಾರೆ. […]

ಮಂಗಳೂರು ಜೈಲಿನಲ್ಲಿ ಭರತ್ ಕುಮ್ಡೇಲ್’ಗೆ ಅವಾಚ್ಯವಾಗಿ ನಿಂದನೆ: ಕೈದಿಗಳ ಮಧ್ಯೆ ಗದ್ದಲ..!

ಮಂಗಳೂರು: ಮಂಗಳೂರು ಜೈಲಿನಲ್ಲಿ ಕೈದಿಗಳ ಮಧ್ಯೆ ವಾಗ್ವಾದ- ಸಂಘರ್ಷ- ಗದ್ದಲ ನಡೆದಿದ್ದು, ಸಿಸಿಬಿ ಪೊಲೀಸರು ರಾತ್ರೋರಾತ್ರಿ ದಾಳಿ ನಡೆಸಿ ಎಲ್ಲವನ್ನು ಸರಿಪಡಿಸಿದ್ದಾರೆ. ಸೋಮವಾರ ಸಂಜೆ ಕೋಕಾ ಆಕ್ಟಿನಡಿ ಬಂಧಿತನಾಗಿರುವ ಭರತ್ ಕುಮ್ಡೇಲ್ ಜೊತೆಗೆ ಮಾತನಾಡಲು ಸಂಬಂಧಿಕರು ಬಂದಿದ್ದರು. ಆತ ಮಾತನಾಡಲು ಹೊರಗಡೆ ಬಂದು ಹಿಂದೆ ತೆರಳುವ ಸಂದರ್ಭದಲ್ಲಿ ಎ ಬ್ಯಾರಕ್ ನಲ್ಲಿರುವ ಕೈದಿಗಳು ಅವಾಚ್ಯವಾಗಿ ನಿಂದಿಸಿದ್ದಾರೆ ಎನ್ನಲಾಗಿದೆ. ಆನಂತರ, ಈ ವಿಷಯ ತಿಳಿದ ಬಿ ಬ್ಯಾರಕಿನ ಹಿಂದು ಕೈದಿಗಳು ರಂಪ ಮಾಡಿದ್ದು ಎರಡೂ ಕಡೆಯಿಂದ ಅವಾಚ್ಯ ನಿಂದನೆ, […]

ಹಳೆ ವಾಹನ ಹೊಂದಿರುವವರಿಗೆ ಶಾಕ್​​ ಕೊಟ್ಟ ರಾಜ್ಯ ಸರ್ಕಾರ: 15 ವರ್ಷ ಮೀರಿದ ವೆಹಿಕಲ್ಸ್​​ ಜಪ್ತಿ

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಏರಿಕೆಯಾಗುತ್ತಲೇ ಇದ್ದರೂ, ಹಳೆಯ ವಾಹನಗಳು ಮಾತ್ರ ಇನ್ನೂ ಸಂಚಾರ ನಿಲ್ಲಿಸಿಲ್ಲ. ಇವುಗಳಿಂದಲೇ ವಾಯುಮಾಲಿನ್ಯ ಹೆಚ್ಚಳವಾಗ್ತಿದೆ ಎಂಬ ಆರೋಪದ ನಡುವೆಯೂ ಕೋಟ್ಯಾಂತರ ವಾಹನಗಳು ರಸ್ತೆಯಲ್ಲಿ ಓಡಾಡುತ್ತಲೇ ಇವೆ. ಇಂತಹ ವಾಹನಗಳ ಮಾಲಿಕರಿಗೆ ರಾಜ್ಯ ಸಾರಿಗೆ ಸಚಿವರು ಶಾಕ್​​ ಕೊಟ್ಟಿದ್ದಾರೆ. 15 ವರ್ಷ ಮೀರಿದ ವಾಹನಗಳ ಜಪ್ತಿಗೆ ಸರ್ಕಾರ ಮುಂದಾಗಲಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ವಿಧಾನ ಪರಿಷತ್​​ನಲ್ಲಿ ತಿಳಿಸಿದ್ದಾರೆ. ವಾಹನವೊಂದನ್ನು 15 ವರ್ಷಗಳವರೆಗೆ ಸುಸ್ಥಿತಿಯಲ್ಲಿ ಇಟ್ಟುಕೊಂಡು ಓಡಿಸಬಹುದು. ಕೇಂದ್ರ ಸರ್ಕಾರದ ನೀತಿಯ […]

SIR: ಕಾಸರಗೋಡಿನಲ್ಲಿ 63,114 ಮತದಾರರು ಹೊರಕ್ಕೆ

ಕಾಸರಗೋಡು : ಬಿಹಾರ ನಂತರ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣಾ ಪ್ರಕ್ರಿಯೆ ಕೇರಳದಲ್ಲಿ ನಡೆಯುತ್ತಿದ್ದು, ಅಂತಿಮ ಹಂತದಲ್ಲಿದೆ. ಎಸ್‌ಐಆರ್‌ ಕಾರ್ಯವಿಧಾನಗಳು ಕೊನೆಗೊಳ್ಳಲು ಕೆಲವೇ ದಿನಗಳು ಬಾಕಿ ಇದೆ. ಇಲ್ಲಿವರೆಗೆ ಮತದಾರರ ಪಟ್ಟಿಯಿಂದ 25 ಲಕ್ಷಕ್ಕೂ ಹೆಚ್ಚು ಮತದಾರರು ಹೊರಗುಳಿದಿದ್ದು, ಸಿಪಿಎಂ, ಕಾಂಗ್ರೆಸ್‌ ಮತ್ತು ಮುಸ್ಲಿಂ ಲೀಗ್‌ ಸೇರಿದಂತೆ ವಿರೋಧ ಪಕ್ಷಗಳು ಚುನಾವಣಾ ಆಯೋಗಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿವೆ. ಪ್ರಸ್ತುತ ಕೇರಳದಲ್ಲಿ ಶೇ.99.96 ಎಸ್‌ಐಆರ್‌ ಅರ್ಜಿ ನಮೂನೆಗಳನ್ನು ಹಿಂತಿರುಗಿಸಲಾಗಿದೆ ಮತ್ತು ಶೇ.99.77 ಡಿಜಿಟಲೀಕರಣಗೊಳಿಸಲಾಗಿದೆ. ಇದರ ಪ್ರಕಾರ ಸುಮಾರು 25 […]