Flash News

ಹಿಂದೂ ಬಾಲಕಿಯ ಹುಟ್ಟುಹಬ್ಬದ ಪಾರ್ಟಿಯಲ್ಲಿ ಮುಸ್ಲಿಂ ಯುವಕರ ಭಾಗಿ: ಬಜರಂಗದಳದ ಕಾರ್ಯಕರ್ತರಿಂದ ಥಳಿತ

ಲಖನೌ: ಇಲ್ಲಿನ ಬರೇಲಿ ಪಟ್ಟಣದಲ್ಲಿ ಕೆಫೆಯೊಂದರಲ್ಲಿ ಹಿಂದೂ ಬಾಲಕಿಯೊಬ್ಬಳು ಆಯೋಜಿಸಿದ್ದ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದ್ದ ಮುಸಲ್ಮಾನ ಯುವಕರ ಮೇಲೆ ಬಜರಂಗದಳದ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ.  ಶನಿವಾರ ರಾತ್ರಿ ವೇಳೆ ಸ್ಥಳೀಯ ನರ್ಸಿಂಗ್‌ ಕಾಲೇಜಿನ 8 ಮಂದಿ ಪಾರ್ಟಿ ನಡೆಸುತ್ತಿದ್ದರು. ಇದರಲ್ಲಿ ಇಬ್ಬರು ಮುಸಲ್ಮಾನ ಯುವಕರು ಭಾಗವಹಿಸಿದ್ದರು. ಈ ವೇಳೆ ಬಜರಂಗದಳದ ಡಜನ್‌ಗೂ ಅಧಿಕ ಮಂದಿ ನುಗ್ಗಿ ‘ಲವ್‌ ಜಿಹಾದ್‌‘ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಹಲ್ಲೆ ನಡೆಸಿದರು. ಈ ವೇಳೆ  ಯುವಕರನ್ನು ಬಿಟ್ಟುಬಿಡುವಂತೆ ಬಾಲಕಿಯು ಮನವಿ ಮಾಡಿಕೊಂಡರೂ ಹಲ್ಲೆ ಮುಂದುವರಿಸಿ, […]

ಕೋಗಿಲು ಬಡಾವಣೆಗೆ ಕೇರಳ ನಿಯೋಗ ಬಂದಿದ್ದು ರಾಜಕಾರಣ ಮಾಡಲು, ಹಣವನ್ನೇನು ಕೊಟ್ಟಿಲ್ಲ; ಸಚಿವ ಜಮೀರ್ ಕಿಡಿ

ಬೆಂಗಳೂರು: ನಗರದ ಕೋಗಿಲು ಬಡಾವಣೆಯಲ್ಲಿ ಸುಮಾರು 200 ಅಕ್ರಮ ನಿವಾಸಿಗಳ ಮನೆಗಳನ್ನು ತೆರವುಗೊಳಿಸಿದ ವಿಚಾರ ಇದೀಗ ಕರ್ನಾಟಕ ಮತ್ತು ಕೇರಳ ಸರ್ಕಾರಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ತೆರವುಗೊಂಡ ಸ್ಥಳಕ್ಕೆ ಕೇರಳ ಸರ್ಕಾರದ ನಿಯೋಗ ಭೇಟಿ ನೀಡಿರುವುದಕ್ಕೆ ವಸತಿ ಸಚಿವ ಜಮೀರ್ ಅಹಮದ್ ಖಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ಬಡವರ ಮೇಲೆ ಅಷ್ಟು ಪ್ರೀತಿ ಇದ್ದರೆ ಕೇರಳ ಸರ್ಕಾರವೇ ಅವರಿಗೆ ಹಣ ನೀಡಲಿ ಎಂದು ಟಾಂಗ್ ನೀಡಿದ್ದಾರೆ. ಸಚಿವ ಕೃಷ್ಣ ಬೈರೇಗೌಡ ಅವರು ಈ ಹಿಂದೆ ಹಲವು ಬಾರಿ […]

ಕೋಗಿಲು ಗ್ರಾಮ ಅಕ್ರಮ ಎಂದು ನೀವೇ ಹೇಳಿದ್ರಿ. ಹಾಗಾದ್ರೆ, ಈಗೇಕೆ ಸಮರ್ಥಿಸುತ್ತಿದ್ದೀರಿ; ಸಿಟಿ ರವಿ

ಚಿಕ್ಕಮಗಳೂರು: ಮುಖ್ಯಮಂತ್ರಿ -ಉಪಮುಖ್ಯಮಂತ್ರಿಗಳೇ ನಿಮ್ಮ ರಾಜಕೀಯದ ಸ್ವಾರ್ಥ – ತೆವಲಿಗೆ ಕನ್ನಡಿಗರ ಸ್ವಾಭಿಮಾನವನ್ನ ಒತ್ತೆ ಇಟ್ಟು ಸಾಯಿಸಬೇಡಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕದಲ್ಲಿ ಕೇರಳ ದರ್ಬಾರ್ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಈ ವೇಳೆ ಮುಖ್ಯಮಂತ್ರಿಗಳೇ ನಿಮ್ಮ ರಾಜಕೀಯ ಸ್ವಾರ್ಥಕ್ಕೆ ಕರ್ನಾಟಕ-ಕನ್ನಡಿಗರ ಹಿತಾಸಕ್ತಿ-ಸ್ವಾಭಿಮಾನವನ್ನ ಒತ್ತೆ ಇಡಬೇಡಿ ಎಂದು ಸರ್ಕಾರಕ್ಕೆ ಕಿವಿ ಹಿಂಡಿದ್ದಾರೆ. ಮುಖ್ಯಮಂತ್ರಿಗಳೇ ಎಲ್ಲೋಯ್ತು ನಿಮ್ಮ ಸ್ವಾಭಿಮಾನ. ಸಿಎಂ-ಡಿಸಿಎಂ ಅವರೇ ಕೊಗಿಲು ಗ್ರಾಮ ಅಕ್ರಮ ಎಂದು ನೀವೇ ಹೇಳಿದ್ರಿ. […]

ಸೈಫುದ್ದೀನ್ ಕೊಲೆ ಪ್ರಕರಣ: ಮಹಿಳೆ ಸೇರಿ ಆರೋಪಿಗಳ ವಿರುದ್ಧ ಕೋಕಾ ಕುಣಿಕೆ!

ಉಡುಪಿ: ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡವೂರು ಎಂಬಲ್ಲಿ ಸೆ.27ರಂದು ನಡೆದ ಎಕೆಎಂಎಸ್ ಬಸ್ ಮಾಲಕ ಸೈಫ್ ಯಾನೆ ಸೈಯಿಪುದ್ದಿನ್ ಆತ್ರಾಡಿ ಕೊಲೆ ಪ್ರಕರಣದ ಆರು ಮಂದಿ ಆರೋಪಿಗಳ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯಿದೆ(ಸೆಕ್ಷನ್ ೩ ಕೋಕಾ ಆ್ಯಕ್ಟ್)ನಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಈ ಪ್ರಕರಣದ ಆರೋಪಿಗಳಾದ ಉಡುಪಿ ಮಿಷನ್ ಕಂಪೌಂಡ್ ಬಳಿ ನಿವಾಸಿ ಮಹಮದ್ ಫೈಸಲ್ ಖಾನ್, ಕರಂಬಳ್ಳಿಯ ಮೊಹಮದ್ ಶರೀಫ್, ಕೃಷ್ಣಾಪುರದ ಅಬ್ದುಲ್ ಶುಕುರ್, ಫೈಸಲ್ ಖಾನ್ ಪತ್ನಿ ರಿಧಾ […]

ಮಂಗಳೂರು | ತಂದೆ ಮತ್ತು ಅಪ್ರಾಪ್ತ ಮಗಳಿಗೆ ಸಂಘಪರಿವಾರದ ಕಾರ್ಯಕರ್ತರಿಂದ ಹಲ್ಲೆ: ಇಬ್ಬರು ವಶಕ್ಕೆ

ಮಂಗಳೂರು: ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮಳಲಿ ನಾರ್ಲಪದವು ರಸ್ತೆಯಲ್ಲಿ ಶನಿವಾರ ಬೆಳಿಗ್ಗೆ ಬೀಫ್ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ತಡೆದು ಹಲ್ಲೆ ನಡೆಸಿದ ಆರೋಪದ ಮೇಲೆ ಇಬ್ಬರು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆಯಲ್ಲಿ 11 ವರ್ಷದ ಬಾಲಕಿಯೊಬ್ಬಳು ಗಾಯಗೊಂಡಿದ್ದಾಳೆ. ಶನಿವಾರ ಬೆಳಿಗ್ಗೆ ಸುಮಾರು 10 ಗಂಟೆಯ ವೇಳೆಗೆ ಅಬ್ದುಲ್ ಸತ್ತಾರ್ ಮುಲ್ಲರ್ ಪಟ್ನ ಎಂಬುವವರು ತಮ್ಮ 11 ವರ್ಷದ ಮಗಳೊಂದಿಗೆ ಬೈಕ್‌ನಲ್ಲಿ ಸುಮಾರು 19 ಕೆಜಿ ದನದ ಮಾಂಸವನ್ನು ಯಾವುದೇ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದರು. ಮಳಲಿ […]

ನಮಾಜ್‌ ಮಾಡ್ತಿದ್ದ ಪ್ಯಾಲೆಸ್ತೀನ್‌ ವ್ಯಕ್ತಿಗೆ ವಾಹನ ಡಿಕ್ಕಿ ಹೊಡೆಸಿದ ಇಸ್ರೇಲ್ ಸೈನಿಕ

ಜೆರುಸಲೇಮ್: ರಸ್ತೆ ಬದಿಯಲ್ಲಿ ಕುಳಿತು ನಮಾಜ್‌ ಮಾಡುತ್ತಿದ್ದ ಪ್ಯಾಲೆಸ್ತೀನ್‌ ವ್ಯಕ್ತಿಗೆ ಇಸ್ರೇಲಿ ಸೈನಿಕನೊಬ್ಬ ವಾಹನದಿಂದ ಡಿಕ್ಕಿ ಹೊಡೆಸಿರುವ ಘಟನೆ ನಡೆದಿದೆ. ಈ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಆಕ್ರಮಿತ ಪಶ್ಚಿಮ ದಂಡೆಯಲ್ಲಿ ರಸ್ತೆಯ ಪಕ್ಕದಲ್ಲಿ ಪ್ರಾರ್ಥನೆ ಮಾಡುತ್ತಿದ್ದ ಪ್ಯಾಲೆಸ್ತೀನಿಯನ್ ವ್ಯಕ್ತಿಗೆ, ರೈಫಲ್ ಹಿಡಿದುಕೊಂಡು ಇಸ್ರೇಲಿ ಮೀಸಲು ಪಡೆಯ ಸೈನಿಕನೊಬ್ಬ ಎಟಿವಿ ವಾಹವನ್ನು ಡಿಕ್ಕಿ ಹೊಡೆದಿದ್ದಾನೆ ಎಂದು ಇಸ್ರೇಲ್ ಸೇನೆ ತಿಳಿಸಿದೆ. ಶಸ್ತ್ರಸಜ್ಜಿತ ಸೈನಿಕ ಪ್ಯಾಲೆಸ್ತೀನಿಯನ್ ವ್ಯಕ್ತಿಗೆ ವಾಹನದಿಂದ ಡಿಕ್ಕಿ ಹೊಡೆಸಿದ್ದಾರೆ. ನಂತರ ಇಲ್ಲಿಂದ ಹೊರಡುವಂತೆ ಸೂಚಿಸಿದ್ದಾನೆ. […]

ಕೆಲಸದ ವಿಚಾರವಾಗಿ ಜಗಳ: ಪತಿಯಿಂದಲೇ ಪತ್ನಿ ಕೊಲೆ

ಬೆಂಗಳೂರು: ಕೆಲಸದ ವಿಚಾರವಾಗಿ ಜಗಳವಾಗಿ ಪತಿಯೇ ಪತ್ನಿಯನ್ನು ಹತ್ಯೆಗೈದಿರುವ ಘಟನೆ ಸಂಪಿಗೆಹಳ್ಳಿ ಅಗ್ರಹಾರ ಲೇಔಟ್‌ನಲ್ಲಿ ನಡೆದಿದೆ. ಆಯೇಷಾ ಸಿದ್ದಿಕಿ ಕೊಲೆಯಾದ ಪತ್ನಿ. ಸೈಯದ್ ಜಬಿ (47) ಕೊಲೆ ಮಾಡಿದ ಪತಿ. ಆಯೇಷಾ 3 ತಿಂಗಳ ಹಿಂದೆ ಸೈಯದ್‌ನನ್ನು ಮದುವೆಯಾಗಿದ್ದಳು. ಈ ಹಿಂದೆ ಮದುವೆಯಾಗಿ ಮೊದಲ ಗಂಡ ಮೃತಪಟ್ಟ ಬಳಿಕ ಆಯೇಷಾಗೆ 2ನೇ ಮದುವೆಯಾಗಿತ್ತು. 2ನೇ ಪತಿಗೂ ಡಿವೋರ್ಸ್ ನೀಡಿ ಸೈಯದ್ ಜೊತೆ ಆಯೇಷಾ ವಿವಾಹವಾಗಿತ್ತು. ಆಯೆಷಾ ಮಸಾಜ್ ಪಾರ್ಲರ್, ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಈ ಕೆಲಸ […]

ಜಮೀರ್​ ಅಹ್ಮದ್ Upcoming DCM: ಚಾಮರಾಜಪೇಟೆಯ ಬೀದಿಬೀದಿಯಲ್ಲಿ ರಾರಾಜಿಸುತ್ತಿದೆ​​ ಪೋಸ್ಟರ್​

ಕರ್ನಾಟಕದ ಕಾಂಗ್ರೆಸ್ ಸರ್ಕಾರದಲ್ಲಿ ಈಗಾಗಲೇ ನಾಯಕತ್ವ ಬದಲಾವಣೆ ವಿಚಾರ ಭಾರೀ ಚರ್ಚೆಯಲ್ಲಿದೆ. ಮುಖ್ಯಮಂತ್ರಿ ಬದಲಾವಣೆ ಚರ್ಚೆಗಳು ತೀವ್ರಗೊಂಡಿರುವ ನಡುವೆ ಇದೀಗ ಮತ್ತಷ್ಟು ಪೋಸ್ಟರ್​ಗಳು ಭಾರೀ ಸದ್ದು ಮಾಡುತ್ತಿದೆ. ಸಚಿವ ಜಮೀರ್ ಅಹ್ಮದ್ ಖಾನ್ ಉಪಮುಖ್ಯಮಂತ್ರಿ (ಡಿಸಿಎಂ) ಮಾಡುವ ಕೂಗು ಜೋರಾಗಿದೆ. ಅವರ ಬೆಂಬಲಿಗರು ಚಾಮರಾಜಪೇಟೆ ಮತ್ತು ಜೆಜೆ ನಗರದಲ್ಲಿ “ಜಮೀರ್ ಅಹ್ಮದ್ ನೆಕ್ಸ್ಟ್ ಡಿಸಿಎಂ” ಎಂಬ ಬ್ಯಾನರ್‌ಗಳನ್ನು ಹಾಕಿದ್ದಾರೆ. ಹೊಸ ವರ್ಷದ ಶುಭಾಶಯ ತಿಳಿಸುವ ಪೋಸ್ಟರ್‌ಗಳಲ್ಲಿ ಜಮೀರ್ ಅಹ್ಮದ್​​ರನ್ನು ಡಿಸಿಎಂ ಎಂದು ಬಿಂಬಿಸಲಾಗಿದೆ. ಇದು ರಾಜ್ಯ ರಾಜಕಾರಣದಲ್ಲಿ […]

‘ಸಂಘ ಪರಿವಾರದ ಮುಸ್ಲಿಮ್ ವಿರೋಧಿ ರಾಜಕೀಯವನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರ ಕೂಡ ಮಾಡುತ್ತಿದೆ’: ಪಿಣರಾಯಿ ವಿಜಯನ್ ಕಿಡಿ

ಬೆಂಗಳೂರು: ಕರ್ನಾಟಕದ ರಾಜ್ಯ ಸರ್ಕಾರಕ್ಕೂ ಉತ್ತರ ಪ್ರದೇಶದ ಗಾಳಿ ಬಿಸಿದೆ. ಅಲ್ಲಿನ ಬುಲ್ಡೋಜರ್ ನೀತಿಯನ್ನು ಇಲ್ಲೂ ತರುವ ಕೆಲಸ ನಡೆಯುತ್ತಿದೆ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಾಂಗ್ರೆಸ್​​​ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಬೆಂಗಳೂರಿನ ಯಲಹಂಕದ ಕೋಗಿಲು ಗ್ರಾಮದ ಫಕೀರ್ ಕಾಲೋನಿ ಮತ್ತು ವಸೀಮ್ ಲೇಔಟ್‌ನಲ್ಲಿರುವ ಮುಸ್ಲಿಂ ವಸತಿಗಳನ್ನು ನೆಲಸಮ ಮಾಡಿರುವುದು ತುಂಬಾ ದುಃಖಕರ ವಿಚಾರ, ಅಲ್ಲಿ ಮುಸ್ಲಿಂ ಕುಟುಂಬಗಳು ಹಲವು ವರ್ಷಗಳಿಂದ ವಾಸಿಸುತ್ತಿದ್ದವು. ಇದೀಗ ಏಕಾಏಕಿ ಬಂದು ಮನೆಗಳನ್ನು ನೆಲಸಮ ಮಾಡಿದ್ರೆ ಅವರು ಎಲ್ಲಿಗೆ ಹೋಗಬೇಕು. […]

ಪುತ್ತೂರಿನ ವೈದ್ಯೆ ರಶ್ಮಾ ಎಂ. ಶೆಟ್ಟಿ ಮುಡಿಗೇರಿದ ಮಿಸೆಸ್ ಇಂಡಿಯಾ 2025 ಕಿರೀಟ

ಮಂಗಳೂರು : ಮುಲುಂಡ್‌ನ ಪ್ರಕೃತಿ ಚಿಕಿತ್ಸಕಿ ವೈದ್ಯೆ ಡಾ. ರಶ್ಮಾ ಮೋಹಿತ್ ಶೆಟ್ಟಿ ಅವರು ಡಿ. 18 ರಿಂದ ಡಿ 21 ವರಗೆ ನಡೆದ ಜೈಪುರದ ಜೈಬಾಗ್ ಪ್ಯಾಲೇಸ್‌ನಲ್ಲಿ ದೀಪಾಳಿ ಫಡ್ನಿಸ್ (ನ್ಯಾಷನಲ್ ಡೈರೆಕ್ಟರ್, ಮಿಸೆಸ್ ಇಂಡಿಯಾ) ಅವರ ಆಯೋಜನೆಯಲ್ಲಿ ನಡೆದ ಭವ್ಯ ಅಂತಿಮ ಸ್ಪರ್ಧೆಯಲ್ಲಿ ಮಿಸೆಸ್ ಇಂಡಿಯಾ – ಸೀಸನ್ 15 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಮಿಸೆಸ್ ಇಂಡಿಯಾ ಭಾರತದಲ್ಲಿನ ಅತ್ಯಂತ ಪ್ರತಿಷ್ಠಿತ ಹಾಗೂ ದೀರ್ಘಕಾಲದಿಂದ ನಡೆದ ಸೌಂದರ್ಯ ಸ್ಪರ್ಧೆಗಳಲ್ಲಿ ಒಂದಾಗಿದೆ. ದೇಶದ ವಿವಿಧ ಭಾಗಗಳಿಂದ ಆಯ್ಕೆಯಾದ […]