Flash News

ಮೈಸೂರು ಅರಮನೆ ಬಳಿ ಸ್ಫೋಟ ಪ್ರಕರಣ; ಸಾವಿನ ಸಂಖ್ಯೆ 3ಕ್ಕೆ ಏರಿಕೆ, ಮೃತ ಸಲೀಂ ಮೇಲೆ ಹೆಚ್ಚಾದ ಅನುಮಾನ

ಮೈಸೂರು ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ನಿನ್ನೆ (ಡಿ.25) ಕ್ರಿಸ್ಮಸ್ ಹಬ್ಬದ ದಿನ ಸಂಭವಿಸಿದ ಬಲೂನ್ ವ್ಯಾಪಾರಿಯ ಹೀಲಿಯಂ ಸಿಲಿಂಡರ್ ಸ್ಫೋಟದಲ್ಲಿ ಸಾವಿನ ಸಂಖ್ಯೆ ಮೂರಕ್ಕೇರಿದೆ. ಗಂಭೀರವಾಗಿ ಗಾಯಗೊಂಡಿದ್ದ ಮಂಜುಳಾ ಸಾವಿನ ಬೆನ್ನಲ್ಲೇ ಬೆಂಗಳೂರಿನ ನಿವಾಸಿ ಲಕ್ಷ್ಮಿ ಕೂಡ ಮೃತಪಟ್ಟಿದ್ದಾರೆ. ಚಿಕಿತ್ಸೆ ಪಲಕಾರಿಯಾಗಿ ಲಕ್ಷ್ಮಿ ಮೈಸೂರಿನ ಕೆಆರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೂಲತಃ ಬೆಂಗಳೂರಿನ ನಿವಾಸಿಯಾಗಿರುವ ಲಕ್ಷ್ಮಿ ಕ್ರಿಸ್ಮಸ್ ಹಬ್ಬದ ಕಾರಣ ಕುಟುಂಬ ಸಮೇತ ಮೈಸೂರಿಗೆ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ಬಲೂನ್‌ಗೆ ಹೀಲಿಯಂ ತುಂಬಿಸುತ್ತಿದ್ದ ವೇಳೆ ವ್ಯಾಪಾರಿ […]

ಮಕ್ಕಾ ಮಸೀದಿಯ ಕಟ್ಟಡದಿಂದ ಜಿಗಿಯಲು ಯತ್ನಿಸಿದ ವ್ಯಕ್ತಿಯನ್ನು ರಕ್ಷಿಸಿದ ಭದ್ರತಾ ಸಿಬ್ಬಂದಿ

ಮಕ್ಕಾ: ವ್ಯಕ್ತಿಯೋರ್ವ ಮಸೀದಿಯ ಕಟ್ಟಡದ ಮೇಲಿನ ಮಹಡಿಯಿಂದ ಜಿಗಿಯಲು ಯತ್ನಿಸಿದ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ತನ್ನ ಜೀವದ ಹಂಗು ತೊರೆದು ರಕ್ಷಿಸಿದ ಘಟನೆ ವಿಶ್ವದ ಅತ್ಯಂತ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಸೌದಿ ಅರೇಬಿಯಾದ ಮಕ್ಕಾ ಮಸೀದಿಯಲ್ಲಿ ಗುರುವಾರ (ಡಿ.25) ನಡೆದಿದೆ. ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ ಗುರುವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು ವ್ಯಕ್ತಿಯೋರ್ವ ಮಸೀದಿ ಕಟ್ಟಡದ ಮೇಲಿನ ಮಹಡಿಯಿಂದ ಜಿಗಿಯಲು ಮುಂದಾಗಿದ್ದಾನೆ ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಆತನ ನೆಲಕ್ಕೆ ಬೀಳುವುದನ್ನು ತಪ್ಪಿಸಲು ಮುಂದಾಗಿದ್ದಾರೆ ಈ […]

ಕಮ್ಯುನಿಸ್ಟ್, ಲೀಗ್ ಕೋಟೆಗೆ ನುಗ್ಗಿದ ಕೇಸರಿ: ತಿರುವನಂತಪುರಂ ಬಿಜೆಪಿಯ ಮೊದಲ ಮೇಯರ್ ಆಗಿ ವಿ.ವಿ. ರಾಜೇಶ್ ಆಯ್ಕೆ

ತಿರುವನಂತಪುರಂ: ಕೇರಳದ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಗಳಿಸಿತ್ತು. ಇದೀಗ ತಿರುವನಂತಪುರದ ಬಿಜೆಪಿಯ ಮೊದಲ ಮೇಯರ್ ಆಗಿ ವಿ.ವಿ. ರಾಜೇಶ್ ಆಯ್ಕೆಯಾಗಿದ್ದಾರೆ. ಇವರು ತಿರುವನಂತಪುರದ ಸ್ಥಳೀಯ ನಾಯಕರಾಗಿದ್ದು, ಬಿಜೆಪಿಯ ಕಾರ್ಯಕರ್ತರು ಮತ್ತು ಸಾರ್ವಜನಿಕರಲ್ಲಿ ಚಿರಪರಿಚಿತರಾಗಿದ್ದಾರೆ. ಮೇಯರ್ ಆಗಿ ಆಯ್ಕೆಯಾದ ನಂತರ ಮಾತನಾಡಿದ ಅವರು, “ನಾವು ಒಟ್ಟಿಗೆ ಮುಂದುವರಿಯುತ್ತೇವೆ. ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗುತ್ತೇವೆ. ಎಲ್ಲಾ 101 ವಾರ್ಡ್‌ಗಳಲ್ಲಿ ಅಭಿವೃದ್ಧಿಯನ್ನು ಜಾರಿಗೆ ತರಲಾಗುವುದು. ತಿರುವನಂತಪುರಂ ಅಭಿವೃದ್ಧಿ ಹೊಂದಿದ ನಗರವಾಗಿ ರೂಪಾಂತರಗೊಳ್ಳುತ್ತದೆ” ಎಂದು ಹೇಳಿದ್ದಾರೆ. ಬಿಜೆಪಿ ಕೇರಳದಲ್ಲಿ ತನ್ನ […]

ಬಾಂಗ್ಲಾದೇಶದಲ್ಲಿ ಹಿಂದೂ ಯುವಕನ ಹತ್ಯೆ: ನಟಿ ಜಾನ್ಹವಿ ಆಕ್ರೋಶ

ನೆರೆಯ ಬಾಂಗ್ಲಾದೇಶದಲ್ಲಿ ಹಿಂದು ಯುವಕ ದೀಪು ದಾಸ್ (Deepu Das) ಹತ್ಯೆ ಕುರಿತು ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಇದೀಗ ಕೆಲವು ಸಿನಿಮಾ ನಟಿಯರು ಸಹ ದೀಪಿ ದಾಸ್ ಹತ್ಯೆ ಕುರಿತು ಪೋಸ್ಟ್ ಹಂಚಿಕೊಂಡಿದ್ದು, ತೀವ್ರ ಆಕ್ರೋಶ ಹೊರಹಾಕಿದ್ದಾರೆ. ವಿಶೇಷವಾಗಿ ನಟಿ ಜಾನ್ಹವಿ ಕಪೂರ್, ದೀಪು ದಾಸ್ ಹತ್ಯೆಯ ಕುರಿತು ಪೋಸ್ಟ್ ಹಂಚಿಕೊಂಡಿದ್ದು, ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಮೌನ ವಹಿಸಿರುವುದನ್ನು ‘ಹಿಪಾಕ್ರಸಿ’ (ಬೂಟಾಟಿಕೆ) ಎಂದು ಕರೆದಿದ್ದಾರೆ. ಇನ್​​ಸ್ಟಾಗ್ರಾಂನಲ್ಲಿ ಈ ಬಗ್ಗೆ ಬರೆದುಕೊಂಡಿರುವ ನಟಿ ಜಾನ್ಹವಿ […]

ಕೇರಳ | 21 ವರ್ಷದ ದಿಯಾ ನೂತನ ಪಾಲಾ ಪುರಸಭೆಯ ಅಧ್ಯಕ್ಷೆ

ಕೊಟ್ಟಾಯಂ: ಪಾಲಾ ಪುರಸಭೆಯ ಅಧ್ಯಕ್ಷೆಯಾಗಿ ದಿಯಾ ಪುಲಿಕಾಕಂಡಮ್ ಅಧಿಕಾರ ವಹಿಸಿಕೊಂಡಿದ್ದಾರೆ. 21 ವರ್ಷದ ಈಕೆ ದೇಶದ ಅತ್ಯಂತ ಕಿರಿಯ ಪುರಸಭೆಯ ಅಧ್ಯಕ್ಷೆ. ಪುಲಿಕಾಕಂಡಮ್ ಕುಟುಂಬದ ಮೂವರು ಸದಸ್ಯರು ಪಾಲಾ ಪುರಸಭೆಯನ್ನು ಸ್ವತಂತ್ರ ಅಭ್ಯರ್ಥಿಗಳಾಗಿ ಗೆದ್ದಿದ್ದಾರೆ. ಒಂದು ವಾರಕ್ಕೂ ಹೆಚ್ಚು ಕಾಲ ನಡೆದ ಚರ್ಚೆಯ ನಂತರ, ಕುಟುಂಬವು ಯುಡಿಎಫ್ ಅನ್ನು ಬೆಂಬಲಿಸಲು ನಿರ್ಧರಿಸಿದೆ. ಚರ್ಚೆಯ ಸಮಯದಲ್ಲಿ ಕುಟುಂಬವು ಮಂಡಿಸಿದ ಅಂಶಗಳನ್ನು ಪುಲಿಕಾಕಂಡಮ್ ಕುಟುಂಬ ಒಪ್ಪಿಕೊಂಡ ನಂತರ ಯುಡಿಎಫ್ ಸಕಾರಾತ್ಮಕ ನಿರ್ಧಾರವನ್ನು ತೆಗೆದುಕೊಂಡಿತು. ಯಾ ಬಿನು ಪುಲಿಕಾಕಂಡಮ್ ಮೊದಲ ಅವಧಿಗೆ […]

ಮದುವೆಯಾಗು ಎಂದಿದ್ದಕ್ಕೆ ಕತ್ತು ಸೀಳಿ ಕೊಂದ ಪ್ರಿಯಕರ: ನರ್ಸ್​ ಮನೆಯಲ್ಲಿ ಹರಿದಿದ್ದು ರಕ್ತದೋಕುಳಿ!

ಬೆಂಗಳೂರು: ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನ ಮನೆಯೊಂದರಲ್ಲಿ ಒಂಟಿಯಾಗಿದ್ದ ಸ್ಟಾಫ್ ನರ್ಸ್ ಅನ್ನು ಭೀಕರವಾಗಿ ಹತ್ಯೆಗೈದ ಘಟನೆ ಡಿಸೆಂಬರ್ 24ರ ರಾತ್ರಿ ನಡೆದಿದೆ. ಆಕೆ ಬಾಡಿಗೆ ಮನೆಯಲ್ಲಿ ಒಂಟಿಯಾಗಿದ್ದ ಸಂದರ್ಭದಲ್ಲಿ ಮನೆಯೊಳಗೆ ಪ್ರವೇಶಿದ ಆಕೆಯ ಪ್ರಿಯಕರ, ಕತ್ತುಕುಯ್ದು ಆಕೆಯ ಹತ್ಯೆ ಮಾಡಿರುವುದು ತಿಳಿದುಬಂದಿದೆ. ಮಾಹಿತಿ ಸಿಕ್ಕ ಕೂಡಲೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಮದುವೆಯಾಗದೇ ಒಂಟಿಯಾಗಿದ್ದ ಸ್ಟಾಫ್ ನರ್ಸ್39 ವರ್ಷವಾದರೂ ಮದುವೆಯಾಗದೆ ಒಂಟಿಯಾಗಿದ್ದ ಮಮತಾ, ಜಯದೇವ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಸೇವೆ […]

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಇನ್​ಸ್ಟಾದಲ್ಲಿ ಪರಿಚಿತರಾದ ಯುವತಿಯರು!

ಪಾಟ್ನಾ (ಬಿಹಾರ): ಇಲ್ಲಿನ ದೇವಸ್ಥಾನವೊಂದರಲ್ಲಿ ಯುವತಿಯರಿಬ್ಬರು ಸಲಿಂಗ ವಿವಾಹವಾಗಿದ್ದಾರೆ. ಇದರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ತಾವು ಪರಸ್ಪರ ಒಪ್ಪಿಯೇ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಅವರು ಹೇಳಿಕೊಂಡಿದ್ದಾರೆ. ಮಾಧೇಪುರ ಜಿಲ್ಲೆಯ ನಿವಾಸಿಗಳಾದ ಈ ಯುವತಿಯರು ತ್ರಿವೇಣಿಗಂಜ್ ಮುನ್ಸಿಪಲ್ ಕೌನ್ಸಿಲ್ ಪ್ರದೇಶದ ಮಾಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿದ್ದರು. ಇದೀಗ, ಅವರ ಬಂಧಕ್ಕೆ ವಿವಾಹದ ನಂಟು ಬೆಸೆದಿದ್ದಾರೆ. ಈ ಬಗ್ಗೆ ಪರ-ವಿರೋಧ ಚರ್ಚೆಗಳು ಶುರುವಾಗಿವೆ. ಇನ್​​ಸ್ಟಾ ಮೂಲಕ ಪರಿಚಯ: ಈ ಇಬ್ಬರು […]

ಮೈಸೂರು ಸಿಲಿಂಡರ್‌ ಸ್ಫೋಟಕ್ಕೆ NIA ಎಂಟ್ರಿ: ಸಲೀಂ ಹಿನ್ನೆಲೆ ಕೆದಕಲು ಮುಂದಾದ ಟೀಮ್

ಮೈಸೂರು: ಹೀಲಿಯಂ ಸಿಲಿಂಡರ್‌ ಸ್ಫೋಟ ಪ್ರಕರಣಕ್ಕೆ ಈಗ ರಾಷ್ಟ್ರೀಯ ತನಿಖೆ (NIA) ದಳ ಎಂಟ್ರಿಯಾಗಿದೆ. ಇಂದು ಮೈಸೂರಿಗೆ ಎನ್‌ಎಐ ಅಧಿಕಾರಿಗಳು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿ ಪೊಲೀಸರ ಜೊತೆ ತನಿಖೆಯ ಮಾಹಿತಿ ಪಡೆಯಲಿದ್ದಾರೆ. ಸಾಧಾರಣವಾಗಿ ಹೀಲಿಯಂ ಸ್ಫೋಟವಾಗುವುದಿಲ್ಲ. ಹೀಗಿದ್ದರೂ ಅರಮನೆಯ ಆವರಣದಲ್ಲೇ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಹಲವಾರು ಅನುಮಾನಗಳು ಈಗ ವ್ಯಕ್ತವಾಗಿದೆ. ಸ್ಫೋಟದ ತೀವ್ರತೆಗೆ ಅಂಬಾವಿಲಾಸ ಅರಮನೆ ಮುಂಭಾಗದ ಜಯಮಾರ್ತಾಂಡ ದ್ವಾರದ ಬಳಿ ಬಲೂನ್‌ ಮಾರುತ್ತಿದ್ದ ಸಲೀಂ (40) ಮೃತಪಟ್ಟಿದ್ದು, ಮೃತದೇಹ ಛಿದ್ರ-ಛಿದ್ರವಾಗಿದೆ. ಆರಂಭದಲ್ಲಿ ಮೃತ ಸಲೀಂ ಕೋಲ್ಕತ್ತಾದ […]

40 ಲಕ್ಷ ರೂ ವೆಚ್ಚದ ಅದ್ಧೂರಿ ಮದುವೆ.. ಹನಿಮೂನ್ ಅರ್ಧಕ್ಕೇ ಮೊಟಕು, ನವವಿವಾಹಿತೆ ಆತ್ಮಹತ್ಯೆ! ಆಗಿದ್ದೇನು?

ಬೆಂಗಳೂರು: ನವವಿವಾಹಿತ ಮಹಿಳೆಯೊಬ್ಬರು ಹನಿಮೂನ್ ಮೊಟಕುಗೊಳಿಸಿ ಮನೆಗೆ ವಾಪಸ್ ಆಗಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ಹೌದು.. ಅದ್ಧೂರಿಯಾಗಿ ವಿವಾಹವಾಗಿ ಹನಿಮೂನ್ ಗೆ ಹೋಗಿದ್ದ 26 ವರ್ಷದ ಮಹಿಳೆಯೊಬ್ಬರು ದಿಢೀರ್ ಮನೆಗೆ ವಾಪಸ್ ಆಗಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಬಾಗಲಗುಂಟೆ ಬಳಿಯ ಬಾಬಣ್ಣ ಲೇಔಟ್‍ನಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಐಶ್ವರ್ಯಾ ಅವರು ಒಂದು ತಿಂಗಳ ಹಿಂದೆ ಬಾಬಣ್ಣ ಲೇಔಟ್‍ ನಿವಾಸಿ ಲಿಖಿತ್ ಅವರನ್ನು ಮದುವೆ ಆಗಿದ್ದರು. ಐಶ್ವರ್ಯಾ ಅವರು ಎಂಬಿಎ […]

ನರ್ಸ್ ಬಟ್ಟೆ ಬದಲಿಸುವಾಗ ಕದ್ದುಮುಚ್ಚಿ ವಿಡಿಯೋ: ಕಾಮುಕ ಸಿಬ್ಬಂದಿ ಅರೆಸ್ಟ್

ಬೆಂಗಳೂರು: ಆಸ್ಪತ್ರೆಯಲ್ಲಿ ನರ್ಸ್ ಬಟ್ಟೆ ಬದಲಿಸುವಾಗ ಕದ್ದುಮುಚ್ಚಿ ವಿಡಿಯೋ ಮಾಡಿಕೊಳ್ಳುತ್ತಿದ್ದ ಅಲ್ಲಿನ ಸಿಬ್ಬಂದಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತ ಆರೋಪಿಯನ್ನು ಸುವೆಂದು ಮೊಹಂತ ಎಂದು ಗುರುತಿಸಲಾಗಿದೆ. ಕಳೆದ ಒಂದು ವರ್ಷದಿಂದ ನಾಗರಭಾವಿಯ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ. ಆಪರೇಷನ್ ಥಿಯೇಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸುವುದನ್ನ ನರ್ಸ್ ಒಬ್ಬರು ಗಮನಿಸಿದ್ದರು. ಬಳಿಕ ಈ ಕುರಿತು ಆಸ್ಪತ್ರೆಯ ವೈದ್ಯರ ಗಮನಕ್ಕೆ ತಂದಿದ್ದರು. ಅದರಂತೆ ಆಸ್ಪತ್ರೆಯ ಹಿರಿಯ ವೈದ್ಯ ಚೇತನ್ ಆರೋಪಿಯ ವಿರುದ್ಧ ದೂರು […]