Flash News

ಮೌಲಾನಾರು 4 ಪತ್ನಿಯರು, 19 ಮಕ್ಕಳನ್ನು ಹೊಂದಿರುವಾಗ ಹಿಂದೂಗಳು ಕನಿಷ್ಠ 4 ಮಕ್ಕಳನ್ನು ಮಾಡಿಕೊಳ್ಳಬೇಕು: BJP ನಾಯಕಿ !

ನವದೆಹಲಿ: ಬಿಜೆಪಿ ನಾಯಕಿ ನವನೀತ್ ರಾಣಾ ಅವರು ದೇಶದ ಹಿಂದೂ ಜನರಲ್ಲಿ ವಿಶೇಷ ಮನವಿಯೊಂದನ್ನು ಮಾಡಿಕೊಂಡಿದ್ದಾರೆ. ದೇಶದ ಜನಸಂಖ್ಯಾ ರಚನೆಯು ಪಾಕಿಸ್ತಾನದಂತೆ ಬದಲಾಗದಿರಲು ಹಿಂದೂಗಳು ಕನಿಷ್ಠ ಮೂರರಿಂದ ನಾಲ್ಕು ಮಕ್ಕಳನ್ನು ಹೊಂದುವಂತೆ ಕೇಳಿಕೊಂಡಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡುತ್ತಿರುವ ಸಂದರ್ಭದಲ್ಲಿ ನವನೀತ್ ರಾಣಾ, ಕೆಲವರು ನಮ್ಮ ದೇಶದಲ್ಲಿ ಬಹು ಪತ್ನಿಯರು ಮತ್ತು ಹಲವಾರು ಮಕ್ಕಳನ್ನು ಹೊಂದಿದ್ದಾರೆ, ಇದರಿಂದಾಗಿ ಅವರ ಜನಸಂಖ್ಯೆಯು ಬೆಳೆಯುತ್ತಾ ಹೋಗುತ್ತಿದೆ, ಅವರನ್ನು ಸೋಲಿಸಲು, ಹಿಂದೂಸ್ತಾನವನ್ನು ರಕ್ಷಿಸಲು ಹಿಂದೂಗಳು ಕನಿಷ್ಠ ಮೂರರಿಂದ ನಾಲ್ಕು ಮಕ್ಕಳನ್ನು ಹೊಂದಬೇಕೆಂದು ಒತ್ತಾಯಿಸಿದರು. […]

ಚಿತ್ರದುರ್ಗ ದುರಂತ: ಮದುವೆ ಫಿಕ್ಸ್ ಆಗಿದ್ದ ಜೀವದ ಗೆಳತಿಯರಿಬ್ಬರ ಕೊನೆಯ ಪ್ರಯಾಣ!

ಓದಿದ್ದೂ ಜೊತೆಯಲ್ಲೇ ಜೀವ ಹೋಗಿದ್ದೂ ಒಟ್ಟಿಗೆ! ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಸಮೀಪ ಸಂಭವಿಸಿದ ಭೀಕರ ಬಸ್ ಅಪಘಾತ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದು, ಈ ದುರಂತದಲ್ಲಿ ಲಾರಿ ಡ್ರೈವರ್ ಸೇರಿ ಒಟ್ಟು 6 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಮೂಲದ ನವ್ಯ ಹಾಗೂ ಮಾನಸ ಅವರ ಪೋಷಕರ ನೋವಿನ ಕಥೆ ಕರುಳು ಹಿಂಡುವಂತಿದೆ. ಜೀವದ ಗೆಳತಿಯರಿಬ್ಬರು ಸಿಗಂದೂರಿಗೆ ಪ್ರಯಾಣಿಸುತ್ತಿದ್ದರು. ಮಾನಸ ಮತ್ತು ನವ್ಯ ಎಂಬ ಇಬ್ಬರಿಗೂ ಮದುವೆ ನಿಶ್ಚಯವಾಗಿತ್ತು. ಈಗ ಇಬ್ಬರ ದುರ್ಮರಣ […]

ಹಿಂದೂ ಯುವಕನನ್ನು ಮದುವೆ ಮಾಡಿಕೊಂಡಿದ್ದಕ್ಕೆ ದ್ವೇಷ: ಮೊಮ್ಮಗಳ 40 ದಿನದ ಶಿಶುವನ್ನೇ ಕೊಂದಳೇ ಅಜ್ಜಿ?

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ಪಟ್ಟಣದಲ್ಲಿ 40 ದಿನದ ನವಜಾತ ಗಂಡು ಶಿಶು ಸಾವಿನ ಪ್ರಕರಣ ಇದೀಗ ತೀವ್ರ ಅನುಮಾನಗಳಿಗೆ ಕಾರಣವಾಗಿದೆ. ಈ ಘಟನೆಯಲ್ಲಿ ಮರ್ಯಾದೆ ಹತ್ಯೆ ಶಂಕೆ ವ್ಯಕ್ತವಾಗಿದ್ದು, ಶಿಶುವಿನ ಸಾವಿನಲ್ಲಿ ಅಜ್ಜಿಯ ಕೈವಾಡವಿರಬಹುದೆಂಬ ಆರೋಪ ಕೇಳಿಬಂದಿದೆ. ಅಪ್ರಾಪ್ತ ಮೊಮ್ಮಗಳು ಹಿಂದೂ ಯುವಕನನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದಕ್ಕೆ ದ್ವೇಷ ಹೊಂದಿದ್ದ ಅನ್ಯಕೋಮಿಗೆ ಸೇರಿದ ಅಜ್ಜಿ, ಮೊಮ್ಮಗಳ 40 ದಿನದ ನವಜಾತ ಶಿಶುವನ್ನು ಕೊಂದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಪ್ರೀತಿಸಿ ಮದುವೆಯಾದ ದಂಪತಿಗೆ ಜನಸಿದ್ದ ಗಂಡು ಮಗು ಡಿಸೆಂಬರ್ […]

ಚಿತ್ರದುರ್ಗ | ‘ಎದುರಿನಿಂದ ಅತಿ ವೇಗದಲ್ಲಿ ಟ್ರಕ್ ಬರುವುದು ಕಂಡಿತು’, ಬಸ್ ಚಾಲಕ ರಫೀಕ್

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ಭೀಕರ ಬಸ್ ಅಪಘಾತ ಹೇಗಾಯಿತು ಎಂದು ಖಾಸಗಿ ಬಸ್‌ನ ಚಾಲಕ ಮಾತನಾಡಿದ್ದಾರೆ. ಅತಿ ವೇಗದ ಟ್ರಕ್ ವಿರುದ್ಧ ದಿಕ್ಕಿನಿಂದ ಬರುತ್ತಿರುವುದನ್ನು ನೋಡಿ ನನಗೆ ಬಸ್ಸನ್ನು ನಿಯಂತ್ರಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ. ಇಂದು ನಸುಕಿನ ಜಾವ 2 ಗಂಟೆಗೆ ಹಿರಿಯೂರು ಬಳಿ ವೇಗವಾಗಿ ಬಂದ ಕಂಟೇನರ್ ಟ್ರಕ್ ಖಾಸಗಿ ಐಷಾರಾಮಿ ಸ್ಲೀಪರ್ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡು ಕನಿಷ್ಠ ಒಂಬತ್ತು ಜನರು ಮೃತಪಟ್ಟಿದ್ದಾರೆ […]

ವಿದ್ಯಾರ್ಥಿಗಳ ಸಂಖ್ಯೆ ಕುಸಿತ: ಮಂಗಳೂರಿನ ಈ ಎಲ್ಲ ಕಾಲೇಜುಗಳು ಕ್ಲೋಸ್​​

ಮಂಗಳೂರು: ಖಾಸಗಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿತ ಹಿನ್ನೆಲೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 22 ಖಾಸಗಿ ಕಾಲೇಜುಗಳನ್ನು ಮುಚ್ಚಲು ಮಂಗಳೂರು ವಿಶ್ವವಿದ್ಯಾಲಯದ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ನಿಗದಿತ ಸಂಖ್ಯೆಯಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ಆಗದ ಕಾರಣ, ಮುಂದಿನ ಶೈಕ್ಷಣಿಕ ವರ್ಷದಿಂದ‌ ಈ ಕಾಲೇಜುಗಳು ಬಂದ್​​ ಆಗಲಿವೆ. ಪ್ರಸಕ್ತ ವರ್ಷದಲ್ಲಿ ಪ್ರವೇಶಾತಿ ಪಡೆದಿರುವ ವಿದ್ಯಾರ್ಥಿಗಳಿಗೆ ಕೋರ್ಸ್ ಪೂರ್ಣಗೊಳಿಸಲು ಅವಕಾಶ ಇರಲಿದೆ. ಮುಚ್ಚಲಿರುವ ಕಾಲೇಜುಗಳು:ಆಬಾ ವುಮೆನ್ಸ್ ಪ್ರಥಮ ದರ್ಜೆ ಕಾಲೇಜು ಸುರತ್ಕಲ್ಅಂಜುಮನ್ ಪ್ರಥಮ ದರ್ಜೆ ಕಾಲೇಜು, […]

ಕ್ರೈಸ್ತ ಬಾಹುಳ್ಯದಲ್ಲಿ ಗೆದ್ದ ಬಿಜೆಪಿ: ವಾಸ್ತವ ಮರೆಮಾಚಿದ ಕಮಲ! ಆ ವಾರ್ಡ್‌ನ ಅಸಲಿಯತ್ತೇ ಬೇರೆ ಇದೆ!

ಐ‌.ಎಂ.ಕೆ. ಕಿನ್ನಿಗೋಳಿ ಕಿನ್ನಿಗೋಳಿ ಹಾಗೂ ಬಜಪೆ ಪಟ್ಟಣ ಪಂಚಾಯತ್‌ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಎರಡು ಕಡೆಗಳಲ್ಲೂ ಬಿಜೆಪಿ ಸ್ಪಷ್ಟ ಬಹುಮತ ಪಡೆದಿದೆ. ಕಿನ್ನಿಗೋಳಿ ಪಟ್ಟಣ ಪಂಚಾಯತ್‌ನ ವಾರ್ಡ್‌ವೊಂದರ ಕುರಿತಂತೆ ಬಿಜೆಪಿ ಭಾರೀ ಪೋಸ್ಟ್‌ಗಳನ್ನು ಹಾಕುತ್ತಿದ್ದು, ಶೇಕಡಾ 70-80 ರಷ್ಟು ಕ್ರೈಸ್ತ ಮತದಾರರಿರುವ ವಾರ್ಡ್‌ನಲ್ಲಿ ಬಿಜೆಪಿ ಜಯಭೇರಿ ಗಳಿಸಿದ್ದಾಗಿ ಬಿಂಬಿಸುತ್ತಿದೆ. ಫಲಿತಾಂಶದ ದಿನದವರೆಗೂ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಸುಲಭವಾಗಿ ಗೆಲ್ಲುತ್ತದೆ ಅನ್ನೋ ಲೆಕ್ಕಚಾರ ಕೊನೆಯ ಕ್ಷಣದಲ್ಲಿ ಬದಲಾಗಿದೆ. ಅಂತಿಮವಾಗಿ, ಕಿನ್ನಿಗೋಳಿ ಗ್ರಾಮ ಪಂಚಾಯತ್‌ ಇರುವ ಸಮಯದಲ್ಲಿ ಒಂದು ಬಾರಿಯೂ […]

ದ್ವೇಷ ಭಾಷಣ ವಿಧೇಯಕಕ್ಕೆ ಅಂಕಿತ ಬೇಡ: ರಾಜ್ಯಪಾಲರಿಗೆ ಕೆ.ಎಸ್‌.ಈಶ್ವರಪ್ಪ ಮನವಿ

ವಿಜಯಪುರ: ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ-2025ಕ್ಕೆ ರಾಜ್ಯಪಾಲರು ಯಾವುದೇ ಕಾರಣಕ್ಕೂ ಅಂಕಿತ ಹಾಕಬಾರದು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಮನವಿ ಮಾಡಿದರು. ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಧೇಯಕದ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಅಘೋಷಿತ ತುರ್ತು ಪರಿಸ್ಥಿತಿ ಹೇರಲು ಹವಣಿಸುತ್ತಿದೆ ಎಂದು ಆರೋಪಿಸಿದರು. ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದ ಪರಿಣಾಮ ಅಂದು ದೇಶದಲ್ಲಿ ಕಾಂಗ್ರೆಸ್ ನೆಲಕಚ್ಚಿತು. ಈಗ ಹಿಂದೂ ನಾಯಕರನ್ನು ಹತ್ತಿಕ್ಕಲು ತಂದಿರುವ ಕರಾಳ ಶಾಸನದಿಂದ […]

ರಾಜ್ಯದಲ್ಲಿ 1 ಕೋಟಿ ಮುಸ್ಲಿಂ ಜನಸಂಖ್ಯೆ ಇದ್ದರೂ ಕೇವಲ 10 ಜನ ಶಾಸಕರಿದ್ದಾರೆ: ಮಹೇಶ್ವರಾನಂದ ಸ್ವಾಮೀಜಿ ಬೇಸರ

ಬಾಗಲಕೋಟೆ: ದೇಶದ ಮೂವತ್ತು ಕೋಟಿ ಮುಸ್ಲಿಮರನ್ನ ಬಿಟ್ಟು ಭವಿಷ್ಯದ ಭಾರತ ನಿರ್ಮಾಣ ಸಾಧ್ಯವಿಲ್ಲ. ರಾಜ್ಯದಲ್ಲಿ ಒಂದು ಕೋಟಿ ಜನ ಮುಸ್ಲಿಂ ಜನಸಂಖ್ಯೆ ಇದ್ದರೂ ಕೇವಲ 10 ಜನ ಶಾಸಕರಿದ್ದಾರೆ. ಮುಸಲ್ಮಾನರು ಚುನಾವಣೆಯಲ್ಲಿ ಸೋಲುವುದಿಲ್ಲ, ಅವರನ್ನು ಸೋಲಿಸಲಾಗುತ್ತೆ ಎಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಮಹೇಶ್ವರಾನಂದ ಸ್ವಾಮೀಜಿ ಹೇಳಿದ್ದಾರೆ. ರಾಜ್ಯದಲ್ಲಿ ಲಿಂಗಾಯತರು ಕೇವಲ 66 ಲಕ್ಷ ಜನ ಇದ್ದಾರೆ. ಆದರೆ ಅವರ ಸಮುದಾಯದ 59 ಜನ ಶಾಸಕರಿದ್ದಾರೆ. 60 ಲಕ್ಷ ಜನಸಂಖ್ಯೆಯಿರುವ ಒಕ್ಕಲಿಗರ 46 ಜನ ಎಂಎಲ್​​ಎಗಳಿದ್ದಾರೆ. 15 ಲಕ್ಷ […]

ಸಚಿವ ಜಮೀರ್ ಅಹ್ಮದ್ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಲೋಕಾಯುಕ್ತ ಶಾಕ್: 10 ಕಡೆ ದಾಳಿ

ಬೆಂಗಳೂರು: ಸಚಿವ ಜಮೀರ್ ಅಹ್ಮದ್ ಖಾನ್ ಆಪ್ತ ಕಾರ್ಯದರ್ಶಿ ಸರ್ದಾರ್ ಸರ್ಫರಾಜ್ ಖಾನ್ ನಿವಾಸ ಸೇರಿದಂತೆ ಹತ್ತು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪ ಸಂಬಂಧ ಈ ದಾಳಿ ನಡೆದಿದೆ. ಬೆಂಗಳೂರಿನ ಹಲಸೂರು ನಿವಾಸ, ಇತರ ಆರು ಮನೆಗಳು ಸೇರಿದಂತೆ ಒಟ್ಟು ಏಳು ಮನೆಗಳು, ಕೊಡಗಿನಲ್ಲಿರುವ ಎರಡು ಕಾಫಿ ಎಸ್ಟೇಟ್‌ಗಳು ಮತ್ತು ಹೆಚ್.ಡಿ.ಕೋಟೆಯಲ್ಲಿನ ಒಂದು ರೆಸಾರ್ಟ್ ಮೇಲೆ ಏಕಕಾಲಕ್ಕೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಸರ್ದಾರ್ ಸರ್ಫರಾಜ್ ಖಾನ್ […]

Mangalore: ಅಂತರ ಕಾಯ್ದುಕೊಳ್ಳಿ, EMI ಬಾಕಿ ಇದೆ; ಕಾರಿನ ಹಿಂಬದಿಯ ಬರಹ ವೈರಲ್

ಮಂಗಳೂರು: ಆಟೋ, ಬೈಕ್ ಸೇರಿದಂತೆ ಕಾರಿನ ಹಿಂಭಾಗದಲ್ಲಿ ಪ್ರೀತಿ ಪಾತ್ರದ ಹೆಸರು, ಕೆಲವರು ತಂದೆ ತಾಯಿಯ ಆಶೀರ್ವಾದ, ಕೈಕೊಟ್ಟ ಪ್ರೇಮಿಯ ನೆನಪಿನಲ್ಲಿ ಕೆಲ ಸಾಲುಗಳನ್ನು ಬರೆದಿರುವುದನ್ನು ನೋಡಿರುತ್ತಿರುತ್ತೀರಿ. ಇಂತಹ ಸಾಲುಗಳನ್ನು ನೋಡಿದಾಗ ತುಟಿಯಂಚಿನಲ್ಲಿ ಸದ್ದಿಲ್ಲದೇ ನಗು ಮೂಡುತ್ತದೆ. ಇದೀಗ ಇಂತಹದ್ದೇ ಕಾರಿನ ಹಿಂಭಾಗದಲ್ಲಿ ಬರೆದ ಸಾಲುಗಳು ನೆಟ್ಟಿಗರ ಗಮನ ಸೆಳೆಯುತ್ತಿದೆ. ಮಂಗಳೂರಿನ ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿ ಚಲಿಸುತ್ತಿರುವ ಮಾರುತಿ ಸುಜುಕಿ ಆಲ್ಟೋ ಕಾರ್‌ನ ಹಿಂಭಾಗದಲ್ಲಿ ಬರೆದ ಸಾಲುಗಳು ಉಳಿದ ವಾಹನ ಸವಾರರಿಗೆ ಎಚ್ಚರಿಕೆ ನೀಡಿದ್ದಂತಿದೆ. ಈ ವಿಡಿಯೋ […]