Flash News

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿದ ಚಳಿ: ಸಾಂಕ್ರಾಮಿಕ ರೋಗದ ಎಚ್ಚರ ಇರಲಿ

►’ಜಿಲ್ಲೆಯಲ್ಲಿ ಸರಾಸರಿ 2 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಇಳಿಕೆ’ ಮಂಗಳೂರು: ಕರಾವಳಿ ಭಾಗದಲ್ಲಿ ಬೆಳಗ್ಗಿನ ಜಾವ ಚಳಿಯ ಪ್ರಮಾಣದಲ್ಲಿ ಏರಿಕೆ ಉಂಟಾಗುತ್ತಿದೆ. ಇದರಿಂದ ವಾತಾವರಣ ತಂಪಾಗಿದ್ದು, ಸಾಂಕ್ರಾಮಿಕ ರೋಗಬಾಧೆ ಬಗ್ಗೆ ಎಚ್ಚರದಿಂದ ಇರಬೇಕಾದ ಅನಿವಾರ್ಯತೆ ಇದೆ. ಕಳೆದ ಕೆಲವು ದಿನಗಳ ಹಿಂದೆ ಸುರಿದ ಅಕಾಲಿಕ ಮಳೆಯ ಬಳಿಕ ಚಳಿ ಏರಿಕೆಯಾಗಿದ್ದು, ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶದಲ್ಲಿ ಸಾಕಷ್ಟು ಏರಿಳಿತ ಉಂಟಾಗುತ್ತಿದೆ. ಬೆಳಗ್ಗಿನ ಹೊತ್ತು ಬಿಸಿಲು ಕಾಣಿಸಿದ್ದರೂ ಕೂಡ ಮಧ್ಯಾಹ್ನದವರೆಗೆ ವಾತಾವರಣ ಸ್ವಲ್ಪ ಮಟ್ಟಿಗೆ ತಂಪಾಗಿರುತ್ತದೆ. ಬಳಿಕ ತುಸು […]

ಹೈವೇಗಳಲ್ಲಿ ರಾತ್ರಿ ವಾಹನ ಓಡಿಸೋವಾಗ ಎಚ್ಚರವಾಗಿರಿ: ಭಯ ಹುಟ್ಟಿಸುತ್ತೆ ಸರ್ಕಾರಿ ಅಂಕಿ-ಅಂಶಗಳು

►ಹೆದ್ದಾರಿ ದರೋಡೆ ನಿಯಂತ್ರಿಸುವುದೇ ದೊಡ್ಡ ಸವಾಲು ಬೆಂಗಳೂರು: ಹೆದ್ದಾರಿಯಲ್ಲಿ ರಾತ್ರಿ ಪ್ರಯಾಣ ಬಹಳ ಸುರಕ್ಷಿತ. ಘನ ವಾಹನಗಳು ಬಿಟ್ಟರೆ ಯಾವುದೇ ಟ್ರಾಫಿಕ್‌ ಕಿರಿಕಿರಿ ಇಲ್ಲದೇ ಸುಲಭವಾಗಿ ಗಮ್ಯ ಸ್ಥಳಗಳನ್ನು ತಲುಪಬಹುದು ಎನ್ನುವುದು ಹಲವರ ಲೆಕ್ಕಾಚಾರ. ಆದರೆ ರಾಜ್ಯದಲ್ಲಿ ರಾತ್ರಿ ಪ್ರಯಾಣ ಅಪಾಯಕಾರಿ ಎಂಬ ಸ್ಫೋಟಕ ವಿಚಾರ ಸರ್ಕಾರಿ ಅಂಕಿ ಸಂಖ್ಯೆಯಿಂದ ಬಹಿರಂಗವಾಗಿದೆ. ರಾಜ್ಯದಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಯಲ್ಲಿ ಸುಲಿಗೆ, ದರೋಡೆ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದ್ದರೂ ಸಂಖ್ಯೆ ಮಾತ್ರ ಆತಂಕ ಹುಟ್ಟಿಸಿದೆ. ಕಳೆದ 3 ವರ್ಷಗಳಲ್ಲಿ […]

ಬಂಟ್ವಾಳ | ಅಬ್ದುಲ್‌ ರೆಹಮಾನ್ ಕೊಲೆ ಪ್ರಕರಣ: 14ನೇ ಆರೋಪಿಗೆ ಜಾಮೀನು

ಬಂಟ್ವಾಳ: ಕೊಳತ್ತಮಜಲು ಅಬ್ದುಲ್‌ ರೆಹಮಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 14ನೇ ಆರೋಪಿಗೆ ಜಾಮೀನು ಮಂಜೂರಾಗಿದೆ. ಕೊಲೆ ಆರೋಪಿಗಳಿಗೆ ಆಶ್ರಯ ನೀಡಿದ ಆರೋಪದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮೂಲದ ರವಿ ಸಂಜಯ್ ನನ್ನು ಪೊಲೀಸರು ಬಂಧಿಸಿದ್ದರು. ಇಂದು ನ್ಯಾಯಾಲಯ ಆರೋಪಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. 2 ಲಕ್ಷ ವೈಯಕ್ತಿಕ ಬಾಂಡ್ ಮತ್ತು ಇಬ್ಬರು ಶ್ಯೂರಿಟಿ ಜೊತೆ ಹಲವು ಷರತ್ತು ವಿಧಿಸಲಾಗಿದ್ದು, A14 ಆರೋಪಿಯು ಕೇಸ್ ಮುಗಿಯುವ ತನಕ ನಿರಂತರ ಕೋರ್ಟ್‌ಗೆ ಹಾಜರಾಗಬೇಕು, ಅಪರಾಧಗಳಲ್ಲಿ ಭಾಗಿಯಾಗಬಾರದು, ನ್ಯಾಯಾಲಯಕ್ಕೆ ಪಾಸ್‌ಪೋರ್ಟ್ […]

ಶೀಘ್ರವೇ ಪ್ರತ್ಯೇಕ ಸಚಿವಾಲಯ ಸ್ಥಾಪನೆ: NRI ನಿಯೋಗಕ್ಕೆ ಸಿಎಂ ಸಿದ್ದರಾಮಯ್ಯ ಭರವಸೆ

ಬೆಳಗಾವಿ: ಅನಿವಾಸಿ ಕನ್ನಡಿಗರ ಬಹುಕಾಲದ ಅತ್ಯಂತ ಪ್ರಮುಖ ಬೇಡಿಕೆಯಾಗಿರುವ ಪ್ರತ್ಯೇಕ ಸಚಿವಾಲಯವನ್ನು ಶೀಘ್ರವೇ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಖ್ಯಾತ ಅನಿವಾಸಿ ಉದ್ಯಮಿ ಡಾ.ರೋನಾಲ್ಡ್ ಕೊಲಾಸೊ ಅವರ ನೇತೃತ್ವದಲ್ಲಿ ರೂಪುಗೊಂಡ ಹತ್ತಕ್ಕೂ ಹೆಚ್ಚು ದೇಶಗಳ 45 ಮಂದಿ ಕನ್ನಡಿಗ ಪ್ರತಿನಿಧಿಗಳ NRI ನಿಯೋಗವು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಭೇಟಿ ಮಾಡಿ ಅನಿವಾಸಿ ಕನ್ನಡಿಗರ ಸಮಸ್ಯೆ ಹಾಗು ಪ್ರತ್ಯೇಕ ಸಚಿವಾಲಯ-ಇಲಾಖೆಯನ್ನು ಸ್ಥಾಪಿಸುವಂತೆ ಮನವಿ ಸಲ್ಲಿಸಿದ್ದು, […]

ಮಡಿಕೇರಿ | ಮಗು ಸೇರಿ ನಾಲ್ವರನ್ನು ಕೊಚ್ಚಿ ಕೊಂದ ದುರುಳನಿಗೆ ಶಾಕ್​​: ಮರಣ ದಂಡನೆ ಶಿಕ್ಷೆ, ಪ್ರಕರಣ ಏನು?

ಮಡಿಕೇರಿ: ತಾನು ಸಂಬಂಧ ಹೊಂದಿದ್ದ ಮಹಿಳೆ ಮೇಲೆ ಅನುಮಾನ ಮತ್ತು ಕಾಫಿ ಬೆಳೆಯ ಆಸೆಗೆ ಮಗು ಸೇರಿ ನಾಲ್ವರನ್ನು ಬರ್ಬರವಾಗಿ ಕೊಚ್ಚಿ ಕೊಂದಿದ್ದ ಆರೋಪಿಗೆ ವಿರಾಜಪೇಟೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿದೆ. ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಧೀಶ ಎಸ್. ನಟರಾಜ್, ಇದೊಂದು ಅಪರೂಪದಲ್ಲಿ ಅಪರೂಪದ ಪ್ರಕರಣ ಎಂದು ಪರಿಗಣಿಸಿ ಶಿಕ್ಷೆ ವಿಧಿಸಿದ್ದಾರೆ. ಘಟನೆ ನಡೆದು ಕೇವಲ 9 ತಿಂಗಳಲ್ಲಿ ವಿಚಾರಣೆ ಪೂರ್ಣಗೊಂಡು ಶಿಕ್ಷೆ ಘೋಷಣೆಯಾಗಿರುವುದು ಕೂಡ ಇಲ್ಲಿ ಗಮನಾರ್ಹ. […]

MeToo ನಂತರ ಹೆಚ್ಚಾಯ್ತು ಕಿರುಕುಳ: ಗಾಯಕಿಯ ನಗ್ನ ಫೋಟೋ ವೈರಲ್

ದಕ್ಷಿಣ ಭಾರತದ ಜನಪ್ರಿಯ ಹಿನ್ನೆಲೆ ಗಾಯಕಿ ಮತ್ತು ಉದ್ಯಮಿ ಚಿನ್ಮಯಿ ಶ್ರೀಪಾದ ಅವರಿಗೆ ಯಾರೋ ಮಾರ್ಫ್ ಮಾಡಿದ ನಗ್ನ ಫೋಟೋ ಕಳುಹಿಸಿ ಬೆದರಿಕೆ ಹಾಕುತ್ತಿದ್ದು ಅವರು ಆಘಾತಕ್ಕೊಳಗಾಗಿದ್ದಾರೆ. ಇದಲ್ಲದೆ ದುಷ್ಕರ್ಮಿಗಳು ತಮ್ಮ ಮಕ್ಕಳನ್ನು ಕೊಲ್ಲುವುದಾಗಿಯೂ ಬೆದರಿಕೆ ಹಾಕಿದರು. ಡಿಸೆಂಬರ್ 10ರಂದು ಈ ಘಟನೆ ನಡೆದಿದ್ದು ಈ ವಿಷಯವನ್ನು ಚಿನ್ಮಯಿ ಶ್ರೀಪಾದರು ತಕ್ಷಣವೇ ಹೈದರಾಬಾದ್ ನಗರ ಪೊಲೀಸ್ ಆಯುಕ್ತ ವಿ.ಸಿ. ಸಜ್ಜನರ್ ಅವರ ಗಮನಕ್ಕೆ ತಂದಿದ್ದಾರೆ. ಅಲ್ಲದೇ ತಾವು ಎದುರಿಸುತ್ತಿರುವ ಆನ್‌ಲೈನ್ ನಿಂದನೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮಾತನಾಡಿದರು. […]

ಮದುವೆ ವಿಚಾರ ಮಾತಾಡೋಣ ಬಾ: ಬಿ.ಟೆಕ್ ವಿದ್ಯಾರ್ಥಿಯನ್ನು ಕರೆಸಿ ಬ್ಯಾಟ್‌ನಲ್ಲಿ ಬಡಿದು ಕೊಂದ ಗರ್ಲ್‌ಫ್ರೆಂಡ್‌ ಕುಟುಂಬ!

ಅಮರಾವತಿ: ಮದುವೆ ಬಗ್ಗೆ ಮಾತಾಡೋಣ ಬಾ ಎಂದು ಕರೆಸಿ ಯುವಕನನ್ನು ಪ್ರೇಯಸಿಯ ಕುಟುಂಬಸ್ಥರು ಬ್ಯಾಟ್‌ನಲ್ಲಿ ಹೊಡೆದು ಕೊಂದ ಘಟನೆ ತೆಲಂಗಾಣದಲ್ಲಿ ನಡೆದಿದೆ. ಹತ್ಯೆಯಾದ ಯುವಕನನ್ನು ಜ್ಯೋತಿ ಶ್ರವಣ್ ಸಾಯಿ ಎಂದು ಗುರುತಿಸಲಾಗಿದೆ. ಶ್ರವಣ್ ಸಾಯಿ ಸೇಂಟ್ ಪೀಟರ್ಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎರಡನೇ ವರ್ಷದ ಬಿ.ಟೆಕ್ ಓದುತ್ತಿದ್ದ ಎಂದು ತಿಳಿದುಬಂದಿದೆ. ಈತ ಶ್ರೀಜಾ (19) ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ಈ ಬಗ್ಗೆ ಯುವತಿಯ ಕುಟುಂಬಸ್ಥರು ಆತನಿಗೆ ಬೆದರಿಕೆ ಹಾಕಿ ಎಚ್ಚರಿಕೆ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಶ್ರವಣ್‌ನನ್ನು ಮನೆಗೆ […]

ಬಿಜೆಪಿ ಕಾರ್ಯಕರ್ತನೊಂದಿಗೆ ಮುಸ್ಲಿಂ ಲೀಗ್ ಅಭ್ಯರ್ಥಿ ಪರಾರಿ..!

ತಲಶ್ಶೇರಿ: ಚೋಕ್ಲಿ ಪಂಚಾಯತ್‌ನ ಒಂಬತ್ತನೇ ವಾರ್ಡ್ ಕಂಜರತೀನ್‌ಕೀಝುವಿನಿಂದ ನಾಪತ್ತೆಯಾಗಿದ್ದ ಯುಡಿಎಫ್ ಅಭ್ಯರ್ಥಿ ಮತ್ತು ಮುಸ್ಲಿಂ ಲೀಗ್ ಕಾರ್ಯಕರ್ತೆ ಟಿಪಿ ಅರುವ (29) ಬಿಜೆಪಿ ಕಾರ್ಯಕರ್ತನೊಂದಿಗೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾದರು. ಮಹಿಳೆ ತನ್ನ ಸ್ವಂತ ಇಚ್ಛೆಯಿಂದ ಹೋಗಿದ್ದಾಳೆಂದು ಹೇಳಿದ ನಂತರ ಮ್ಯಾಜಿಸ್ಟ್ರೇಟ್ ಯುವಕನೊಂದಿಗೆ ಮಹಿಳೆಯನ್ನು ಬಿಡುಗಡೆ ಮಾಡಿದರು. ಮಹಿಳೆಯ ಕಣ್ಮರೆ ಘಟನೆಯನ್ನು ವಾರ್ಡ್‌ನಲ್ಲಿ ಮತಗಳನ್ನು ವಿಭಜಿಸಲು ಸಿಪಿಎಂ ನಡೆಸಿದ ನಾಟಕ ಎಂದು ಯುಡಿಎಫ್ ಬಣ್ಣಿಸಿದೆ. ಸಿಪಿಎಂ ಅಭ್ಯರ್ಥಿಯನ್ನು ಮರೆಮಾಡಿರಬಹುದು ಎಂಬ ಆರೋಪವಿತ್ತು. ಆದಾಗ್ಯೂ, ಎಲ್‌ಡಿಎಫ್ ನಾಯಕರು ಈ ವಿಷಯದ […]

ಮೋದಿ ನಂತರ ಬಿಜೆಪಿಯ ಪ್ರಧಾನ ಮಂತ್ರಿ ಅಭ್ಯರ್ಥಿ ಯಾರು?: RSS ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು?

ಚೆನ್ನೈ: ಬಿಜೆಪಿಯಲ್ಲಿ ಪ್ರಧಾನ ಮಂತ್ರಿ ಹುದ್ದೆಗೆ ನರೇಂದ್ರ ಮೋದಿ ಅವರ ಉತ್ತರಾಧಿಕಾರಿ ಯಾರು ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುತ್ತದೆ. ಆದರೆ ಆ ಬಗ್ಗೆ ಮಾತನಾಡಲು ನಿರಾಕರಿಸಿರುವ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಈ ವಿಷಯದ ಬಗ್ಗೆ ಪ್ರಧಾನಿ ಮತ್ತು ಬಿಜೆಪಿ ಚರ್ಚಿಸಿ ನಿರ್ಧರಿಸಬೇಕು ಎಂದು ಹೇಳಿದ್ದಾರೆ. ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಭಾಗವತ್ ಈ ಹೇಳಿಕೆ ನೀಡಿರುವುದು ಸುದ್ದಿಯಾಗಿದೆ. RSS 100 years: ಚೆನ್ನೈಯಲ್ಲಿ ನಡೆದ ಸಾಗಾ ಆಫ್ ಆರ್‌ಎಸ್‌ಎಸ್ ಎನ್ವಿಶಿನಿಂಗ್ ದಿ ವೇ […]

ಮೋದಿ ತಮ್ಮ ಕೆಲಸದ ಅರ್ಧ ಭಾಗ ವಿದೇಶದಲ್ಲಿ ಕಳೆಯುತ್ತಾರೆ: ಪ್ರಿಯಾಂಕಾ ಗಾಂಧಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕೆಲಸದ ಅರ್ಧ ಭಾಗ ವಿದೇಶದಲ್ಲೇ ಕಳೆಯುತ್ತಾರೆ ಎಂದು ಬುಧವಾರ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಟೀಕಿಸಿದ್ದಾರೆ. ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ವಿದೇಶ ಪ್ರವಾಸಕ್ಕೆ ಕಿಡಿ ಕಾರಿದ್ದ ಬಿಜೆಪಿ ವಿರುದ್ಧ ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದರು. ರಾಹುಲ್‌ ಗಾಂಧಿ ಪ್ರಶ್ನೆಗಳಿಗೆ ಉತ್ತರ ಸಿಗದಾಗ ಬಿಜೆಪಿ ನಾಯಕರು ಇಂತಹ ಆರೋಪಗಳನ್ನು ಮಾಡುತ್ತಾರೆ ಎಂದು ಲೇವಡಿ ಮಾಡಿದ್ದಾರೆ. ಕಾಂಗ್ರೆಸ್‌ ನಾಯಕ ಗೌರವ್‌ ಗೊಗೊಯ್‌ ಮಾತನಾಡಿ, ಚುನಾವಣಾ ಅಕ್ರಮಗಳ ಕುರಿತು […]