‘HR88 B8888’ ಭಾರತದ ಅತ್ಯಂತ ದುಬಾರಿ ಕಾರು ನೋಂದಣಿ ಸಂಖ್ಯೆ; ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ..!

ನವದೆಹಲಿ: ಹರ್ಯಾಣದಲ್ಲಿ ನೋಂದಣಿಯಾದ ಕಾರು ಒಂದರ ನೋಂದಣಿ ಸಂಖ್ಯೆ ಇದೀಗ ದಾಖಲೆ ನಿರ್ಮಿಸಿದ್ದು, ದೇಶದ ಅತ್ಯಂತ ದುಬಾರಿ ನೋಂದಣಿ ಸಂಖ್ಯೆ ಎಂಬ ಕೀರ್ತಿಗೆ ಭಾಜನವಾಗಿದೆ. ಪ್ರತೀಯೊಬ್ಬ ಕಾರು ಮಾಲೀಕರು ತಮ್ಮ ಕಾರಿನ ನೋಂದಣಿ ಸಂಖ್ಯೆ ವಿಶೇಷವಾಗಿರಬೇಕು ಎಂದು ಭಾವಿಸುತ್ತಾರೆ. ಅದರಲ್ಲೂ ಕೆಲ ಕಾರು ಮಾಲೀಕರು ತಮ್ಮ ಕಾರಿನ ಸಂಖ್ಯೆಯನ್ನೇ ಪ್ರತಿಷ್ಛೆಯನ್ನಾಗಿ ಸ್ವೀಕರಿಸಿ ಫ್ಯಾನ್ಸಿ ನಂಬರ್ ಗಳಿಗಾಗಿ ಕೋಟಿ ಕೋಟಿ ಹಣ ವ್ಯಯಿಸುತ್ತಾರೆ. ಇದೀಗ ಈ ಪಟ್ಟಿಗೆ ಮತ್ತೊಂದು ಸಂಖ್ಯೆ ಸೇರ್ಪಡೆಯಾಗಿದ್ದು, ಹರ್ಯಾಣದ ಈ ಸಂಖ್ಯೆ ಬರೊಬ್ಬರಿ 1.17 […]
Hassan | ಅಪ್ರಾಪ್ತೆಯ ಬೆನ್ನು ಬಿದ್ದು ಪ್ರೀತಿಸುವಂತೆ ಕಿರುಕುಳ: ಆಟೋ ಡ್ರೈವರ್ ಅರೆಸ್ಟ್

ಹಾಸನ: ಅಪ್ರಾಪ್ತ ಬಾಲಕಿಯ ಬೆನ್ನು ಬಿದ್ದು ಪ್ರೀತಿಸುವಂತೆ ಪ್ರತಿದಿನ ಕಿರುಕುಳ ನೀಡುತ್ತಿದ್ದ ಆಟೋ ಚಾಲಕನನ್ನು ಪೊಲೀಸರು ಬಂಧಿಸಿರುವ ಘಟನೆ ಹಾಸನ ಜಿಲ್ಲೆ ಬೇಲೂರು ಪಟ್ಟಣದಲ್ಲಿ ನಡೆದಿದೆ. ಮನು (27) ಬಂಧಿತ ಆಟೋ ಚಾಲಕ. ಶಾಲೆಗೆ ತೆರಳುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿ ಹಿಂದೆ ಬಿದ್ದಿದ್ದ ಮನು ಪ್ರೀತಿಸುವಂತೆ ವಿದ್ಯಾರ್ಥಿನಿಗೆ ಮಾನಸಿಕ ಹಿಂಸೆ ನೀಡುತ್ತಿದ್ದ. ಪ್ರೀತಿಸಲು ನಿರಾಕರಿಸಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ ರಸ್ತೆಯಲ್ಲಿ ವಿದ್ಯಾರ್ಥಿನಿಯ ಮೈಕೈ ಮುಟ್ಟಿ ಎಳೆದಾಡಿದ್ದ. ಆಟೋ ಚಾಲಕನ ಕಿರುಕುಳದಿಂದ ಬೇಸತ್ತಿದ್ದ ಅಪ್ರಾಪ್ತ ಬಾಲಕಿ ತಮ್ಮ ಪೋಷಕರ ಬಳಿ […]
ಯು.ಟಿ. ಖಾದರ್ ಗಿಂತ ನಾನು ಹಿರಿಯ, ನನಗೆ ಹಿಂದೆಯೇ ಸಚಿವ ಸ್ಥಾನ ಸಿಗಬೇಕಿತ್ತು: ಶಾಸಕ ಹ್ಯಾರಿಸ್

ಮಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ನಾನು ಹಿರಿಯನಾಗಿದ್ದು, ನನಗೆ ಈ ಹಿಂದೆಯೇ ಸಚಿವ ಸಂಪುಟದಲ್ಲಿ ಸ್ಥಾನ ಸಿಗಬೇಕಿತ್ತು, ಆದರೆ ಈವರೆಗೆ ದೊರತಿಲ್ಲ ಎಂದು ಶಾಸಕ ಎನ್.ಎ. ಹ್ಯಾರಿಸ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಂಗಳೂರಿನಲ್ಲಿ ಬುಧವಾರ ಮಾಧ್ಯಮದ ಜತೆ ಮಾತನಾಡಿದ ಅವರು, ಪಕ್ಷದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗಿಂತಲೂ ನಾನು ಹಿರಿಯ. ಆದರೂ ನಮ್ಮಿಬ್ಬರ ನಡುವೆ ಯಾವುದೇ ರಾಜಕೀಯವಿಲ್ಲ. ಅವರಿಗೂ ಸಚಿವ ಸ್ಥಾನ ಸಿಗಲಿ, ನನಗೂ ಸಿಗಲಿ. ಆಗ ಪಕ್ಷಕ್ಕೂ, ರಾಜ್ಯಕ್ಕೂ ಒಳ್ಳೆಯದಾಗುತ್ತದೆ ಎಂದು ಹೇಳಿದರು. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ […]
ಕೊಟ್ಟ ಮಾತು ಉಳಿಸಿಕೊಳ್ಳುವುದೇ ದೊಡ್ಡ ಶಕ್ತಿ; ಬೆಳ್ಳಂ ಬೆಳಗ್ಗೆಯೇ ಡಿಕೆಶಿ ಪೋಸ್ಟ್, ಏನಿದರ ಮರ್ಮ?

ಬೆಂಗಳೂರು: ರಾಜ್ಯ ಕಾಂಗ್ರೆಸ್ನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಅಧಿಕಾರ ಹಂಚಿಕೆ ವಿಚಾರ ಕೋಲಾಹಲವನ್ನೇ ಸೃಷ್ಟಿಸುತ್ತಿದೆ. ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ಕುರ್ಚಿ ಕಾದಾಟ ಹೈಕಮಾಂಡ್ಗೆ ದೊಡ್ಡ ತಲೆಬಿಸಿಯಾಗಿದೆ. ದೆಹಲಿ ಅಂಗಳದಲ್ಲಿ ಕರ್ನಾಟಕ ಪಾಲಿಟಿಕ್ಸ್ ಚರ್ಚೆ ಜೋರಾಗಿದೆ. ಇದರ ನಡುವೆಯೇ ಡಿಸಿಎಂ ಡಿಕೆ ಶಿವಕುಮಾರ್ ಬೆಳ್ಳಂ ಬೆಳಗ್ಗೆಯೇ ಟ್ವೀಟ್ ಬಾಂಬ್ ಸಿಡಿಸಿದ್ದಾರೆ. ಪವರ್ ಶೇರಿಂಗ್ ವಿಚಾರದ ಬಗ್ಗೆ ಹೈಕಮಾಂಡ್ನಲ್ಲಿ ಭಾರೀ ಚರ್ಚೆ ಆಗ್ತಿರುವಾಗಲೇ ಇಂದು (ನವೆಂಬರ್ 27) ಬೆಳ್ಳಂ ಬೆಳಗ್ಗೆಯೇ ಡಿಸಿಎಂ ಡಿಕೆ ಶಿವಕುಮಾರ್ ಟ್ವೀಟ್ […]
ಭಾರತದ ಸಿಇಸಿ ಜ್ಞಾನೇಶ್ ಕುಮಾರ್ ಗೆ ವಿಶ್ವ ಚುನಾವಣಾ ಸಂಸ್ಥೆಯ ಅಧ್ಯಕ್ಷ ಹುದ್ದೆ!

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು 2026 ರ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ಮತ್ತು ಚುನಾವಣಾ ಸಹಾಯ ಸಂಸ್ಥೆಯ (ಅಂತರರಾಷ್ಟ್ರೀಯ ಐಡಿಇಎ) ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಜ್ಞಾನೇಶ್ ಕುಮಾರ್ ಡಿಸೆಂಬರ್ 3 ರಂದು ಸ್ಟಾಕ್‌ಹೋಮ್‌ನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಐಡಿಇಎ ಸದಸ್ಯ ರಾಷ್ಟ್ರಗಳ ಮಂಡಳಿಯ ಸಭೆಯಲ್ಲಿ ಐಐಡಿಇಎ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅಧ್ಯಕ್ಷರಾಗಿ, ಅವರು 2026 ರ ಅವಧಿಯಲ್ಲಿ ಎಲ್ಲಾ ಮಂಡಳಿ ಸಭೆಗಳ ಅಧ್ಯಕ್ಷತೆ ವಹಿಸಲಿದ್ದಾರೆ. 1995 ರಲ್ಲಿ ಸ್ಥಾಪನೆಯಾದ ಅಂತರರಾಷ್ಟ್ರೀಯ […]
ರೊಟ್ಟಿಗುಡ್ಡೆ | ರಾಷ್ಟ್ರೀಯ ಹೆದ್ದಾರಿ ಸಮೀಪ ಚರಂಡಿ ಸಮಸ್ಯೆ: ಕ್ರಮಕ್ಕೆ ಗ್ರಾಮಸ್ಥರ ಒತ್ತಾಯ

ರೊಟ್ಟಿಗುಡ್ಡೆ: ತುಂಬೆ ಗ್ರಾಮದ ರೊಟ್ಟಿಗುಡ್ಡೆ ಬಳಿ ರಾಷ್ಟ್ರೀಯ ಹೆದ್ದಾರಿಯ ಚರಂಡಿ ಅವ್ಯವಸ್ಥೆಯಿಂದ ಸಾರ್ವಜನಿಕರು ಹಾಗೂ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರು, ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅವ್ಯವಸ್ಥೆ ನಿರ್ಮಾಣವಾಗಿದ್ದು, ಕಲುಷಿತ ನೀರು ಸರಗವಾಗಿ ಕೆಳಗೆ ಹಾದುಹೋಗುತ್ತದೆ. ಆದರೆ ಚರಂಡಿ ಇಲ್ಲದ ಕಾರಣ ಅಲ್ಲಿಯೇ ಉಳಿದು ಗಬ್ಬುನಾತ ಬೀರುತ್ತಿದೆ. ಕೊಳಚೆ ನೀರು ಚರಂಡಿ ಸೇರದೆ ಇರುವುದರಿಂದ ಸೊಳ್ಳೆಕಾಟ ಹೆಚ್ಚಾಗಿದೆ. ರಸ್ತೆಯ ಅಕ್ಕಪಕ್ಕ ನಿವಾಸಿಗಳು ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ಕಾಲಕಳೆಯುವಂತಾಗಿದೆ. […]
ಸಿಎಂ ಹುದ್ದೆಗಿಂತ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು ನನಗೆ ಮುಖ್ಯ: ಡಿ ಕೆ ಶಿವಕುಮಾರ್

ಬೆಂಗಳೂರು: ಸಿಎಂ ಹುದ್ದೆಗಿಂತ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು ಮುಖ್ಯ ನನಗೆ. ಈ ಹಿನ್ನೆಲೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರ ಜೊತೆ ಪಕ್ಷವನ್ನು 2028 ಹಾಗೂ 2029 ರ ಚುನಾವಣೆಯಲ್ಲಿ ಅಧಿಕಾರಕ್ಕೆ ತರುವ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು. ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಬುಧವಾರ ಪ್ರತಿಕ್ರಿಯೆ ನೀಡಿದರು. “ನಾನು ಪಕ್ಷದ ಅಧ್ಯಕ್ಷ, ಸತೀಶ್ ಜಾರಕಿಹೊಳಿ ಅವರು ಪಕ್ಷದ ಕಾರ್ಯಾಧ್ಯಕ್ಷರು. […]
ಮೂರು ಬಾರಿ ಪ್ರಧಾನಿಯಾದರೂ ಮೋದಿ ಇನ್ನೂ ಯಾಕೆ ಗೋಹತ್ಯೆಯನ್ನು ನಿಷೇಧ ಮಾಡಿಲ್ಲ: ವಿಶ್ವ ಗೋರಕ್ಷಾ ಮಹಾಪೀಠದ ದಯಾನಂದ ಸ್ವಾಮಿ ಕಿಡಿ

‘ಭಾರತ ಗೋಮಾಂಸ ರಫ್ತಿನಲ್ಲಿ ಎರಡನೇ ಸ್ಥಾನದಲ್ಲಿದೆ‘ ಉಡುಪಿ: ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರ ಸರಕಾರದ ಗೋಮಾಂಸ ರಫ್ತು ಹಾಗೂ ಗೋಹತ್ಯೆ ನಿಷೇಧ ಮಾಡದ ಬಗ್ಗೆ ಟೀಕಿಸಿದ್ದ ನರೇಂದ್ರ ಮೋದಿ, ಮೂರು ಬಾರಿ ಪ್ರಧಾನಿಯಾದರೂ ಇನ್ನೂ ಯಾಕೆ ಗೋಹತ್ಯೆಯನ್ನು ದೇಶದಲ್ಲಿ ನಿಷೇಧ ಮಾಡುತ್ತಿಲ್ಲ. ದುರಂತ ಅಂದರೆ ಮೋದಿ ಅವಧಿಯಲ್ಲಿ ಮೊದಲಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಗೋಮಾಂಸ ರಫ್ತು ಆಗುತ್ತಿದೆ. ಭಾರತ ಗೋಮಾಂಸ ರಫ್ತಿನಲ್ಲಿ ಇಡೀ ಜಗತ್ತಿನಲ್ಲಿಯೇ ಇಂದು ಎರಡನೇ ಸ್ಥಾನದಲ್ಲಿದೆ ಎಂದು ವಿಶ್ವಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ, ಬೆಂಗಳೂರು ವಿಶ್ವ ಗೋರಕ್ಷಾ […]
ಜೈಲಿನೊಳಗೆ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹತ್ಯೆ?: ಅಫ್ಘಾನ್ ಮಾಧ್ಯಮ ವರದಿ

ರಾವಲ್ಪಿಂಡಿ: ಜೈಲಿನಲ್ಲಿರುವ ಪಾಕಿಸ್ಥಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಸಾವಿನ ಬಗ್ಗೆ ಪರಿಶೀಲಿಸದ ಹೇಳಿಕೆಗಳು ಸಾಮಾಜಿಕ ಮಾಧ್ಯಮದಲ್ಲಿ ಬುಧವಾರ ಟ್ರೆಂಡ್ ಆಗಿವೆ. ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ “ಕೊಲೆಯಾಗಿದ್ದಾರೆ” ಎಂದು ಮೂಲಗಳಿಂದ ಮಾಹಿತಿ ಇದೆ ಎಂದು ಅಫ್ಘಾನ್ ಟೈಮ್ಸ್ ಎಂಬ ನ್ಯೂಸ್ ಹ್ಯಾಂಡಲ್ ಹೇಳಿಕೊಂಡ ನಂತರ ವದಂತಿಗಳು ಪ್ರಾರಂಭವಾಗಿವೆ. ಆಧಾರರಹಿತ ಮತ್ತು ಪರಿಶೀಲಿಸದ ಈ ಹೇಳಿಕೆಗಳನ್ನು ಯಾವುದೇ ವಿಶ್ವಾಸಾರ್ಹ ಸಂಸ್ಥೆ ಅಥವಾ ಇಲಾಖೆ ಇದುವರೆಗೆ ದೃಢೀಕರಿಸಿಲ್ಲ. ಪಾಕಿಸ್ಥಾನದ ಮಾಜಿ ಪ್ರಧಾನಿಯನ್ನು ಏಕಾಂತ […]
ಬ್ಯಾಸ್ಕೆಟ್‌ಬಾಲ್ ಕಂಬ ಬಿದ್ದು ರಾಷ್ಟ್ರೀಯ ಆಟಗಾರ ಮೃತ್ಯು; ವಿಡಿಯೋ ವೈರಲ್

ಚಂಡೀಗಢ: ಹರಿಯಾಣದ ರೋಹ್ಟಕ್‌ನಲ್ಲಿ ಬ್ಯಾಸ್ಕೆಟ್‌ಬಾಲ್ ಅಭ್ಯಾಸದ ಸಮಯದಲ್ಲಿ ಕಬ್ಬಿಣದ ಕಂಬ ಬಿದ್ದು 16 ವರ್ಷದ ರಾಷ್ಟ್ರೀಯ ಮಟ್ಟದ ಆಟಗಾರನೊಬ್ಬ ಸಾವನ್ನಪ್ಪಿದ ಘಟನೆ ಮಂಗಳವಾರ ನಡೆದಿದೆ. ಮೃತ ಆಟಗಾರ ಹಾರ್ದಿಕ್(16) ಎಂದು ಗುರುತಿಸಲಾಗಿದೆ. ಈತ ಬೆಳಿಗ್ಗೆ 10 ಗಂಟೆ ಸುಮಾರಿಗೆ ಲಖನ್ ಮಜ್ರಾ ಗ್ರಾಮದ ಕ್ರೀಡಾ ಮೈದಾನದಲ್ಲಿ ಬ್ಯಾಸ್ಕೆಟ್‌ಬಾಲ್ ಅಂಕಣದಲ್ಲಿ ಅಭ್ಯಾಸ ಮಾಡುತ್ತಿದ್ದ. ಈ ವೇಳೆ ಬ್ಯಾಸ್ಕೆಟ್ ಕಂಬದಿಂದ ನೇತಾಡಲು ಪ್ರಯತ್ನಿಸಿದರು. ಆದರೆ, ಕಂಬ ಅವನ ಮೇಲೆ ಬಿದ್ದು ನೇರವಾಗಿ ಅವನ ಎದೆಯ ಮೇಲೆ ಬಿದ್ದಿತು. ಈ ಘಟನೆ […]