Flash News

ಇಂಡಿಗೋ ಏರ್ಲೈನ್ಸ್ ದಿಢೀರ್ ಬಿಕ್ಕಟ್ಟಿಗೆ ಸಿಲುಕಲು ಕಾರಣ ಏನು?

ನವದೆಹಲಿ: ಭಾರತದ ಅತಿದೊಡ್ಡ ಏರ್​ಲೈನ್ಸ್ ಸಂಸ್ಥೆ ಎನಿಸಿರುವ ಮತ್ತು ಜಾಗತಿಕವಾಗಿಯೂ ದೈತ್ಯ ಏರ್​ಲೈನ್ ಕಂಪನಿಗಳಲ್ಲಿ ಒಂದೆನಿಸಿರುವ ಇಂಡಿಗೋ ಏರ್​ಲೈನ್ಸ್ ಕಳೆದ ಕೆಲ ದಿನಗಳಿಂದ ವಿಲವಿಲ ಒದ್ದಾಡುತ್ತಿದೆ. ದಿನವೂ ನೂರಾರು ಫ್ಲೈಟ್​ಗಳು ರದ್ದಾಗುತ್ತಿವೆ. ಫ್ಲೈಟ್ ತಪ್ಪಿರುವ ಸಾವಿರಾರು ಪ್ರಯಾಣಿಕರು ಹಿಡಿಶಾಪ ಹಾಕುತ್ತಿದ್ದಾರೆ. ಸರ್ಕಾರ ಕೂಡ ತನಿಖೆ ನಡೆಸತೊಡಗಿದೆ. ಉಗುರಿನಲ್ಲಿ ಹೋಗಬೇಕಾದ ಸಮಸ್ಯೆಗೆ ಕೊಡಲಿ ಎತ್ತಬೇಕಾದ ಸ್ಥಿತಿ ಬಂತೆಂದು ಹಲವು ಹೇಳತೊಡಗಿದ್ದಾರೆ. ಅಷ್ಟಕ್ಕೂ ಇಂಡಿಗೋ ಏರ್​ಲೈನ್ಸ್​ನ ಬಿಕ್ಕಟ್ಟಿಗೆ ಕಾರಣಗಳೇನು? ಇಂಡಿಗೋ ಏರ್​ಲೈನ್ಸ್​ನ ಬಿಕ್ಕಟ್ಟಿಗೆ ಕಾರಣಗಳೇನು?ಪೈಲಟ್​ಗಳ ಲಭ್ಯತೆ ಇಲ್ಲದೇ ಹೋಗಿದ್ದು ಇಂಡಿಗೋ […]

ಮಂಗಳೂರು | ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ: ಆರೋಪಿಯ ಬಂಧನ

ಸುರತ್ಕಲ್: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಯೊಬ್ಬನನ್ನು ಸುರತ್ಕಲ್ ಪೊಲೀಸರು ಬಂಧಿಸಿ ಪೋಕ್ಸೋ ಕೇಸು ದಾಖಲಿಸಿದ್ದಾರೆ. ಸುರತ್ಕಲ್ ಬಳಿಯ ಚೊಕ್ಕಬೆಟ್ಟು ಜುಮ್ಮಾ ಮಸೀದಿ ಬಳಿಯಿರುವ ಹನಿ ಫ್ಯಾಶನ್ ಶಾಪ್, ಜನರಲ್ ಸ್ಟೋರ್ ಅಂಗಡಿ ಮಾಲಕ ಮೊಹಮ್ಮದ್ ಇಸ್ಮಾಯಿಲ್ ಬಂಧಿತ ಆರೋಪಿ. 6ನೇ ತರಗತಿ ಬಾಲಕ ಶನಿವಾರ ಚಾಕೊಲೇಟ್ ಖರೀದಿಸಲು ಹೋದಾಗ ಅಂಗಡಿಯಲ್ಲಿರುವ ರೂಂವೊಂದರಲ್ಲಿ ಕೂಡಿ ಹಾಕಿ ಬಾಲಕನ ಕೈ-ಕಾಲನ್ನು ಹಗ್ಗದಿಂದ ಕಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ನೊಂದ ಬಾಲಕನ ತಾಯಿ ನೀಡಿದ ದೂರಿನ ಮೇರೆಗೆ […]

ನಮ್ಮನ್ನು ಗುಲಾಮರನ್ನಾಗಿಸಿ ಹಿಂದೂ ಧರ್ಮ ಸೃಷ್ಟಿಸಿದ್ದು ಬ್ರಾಹ್ಮಣರು: ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ

ಬೀದರ್: ಜಿಲ್ಲೆಯ ಬಸವಕಲ್ಯಾಣ ನಗರದಲ್ಲಿ ನಡೆದ ಸೂಫಿ-ಸಂತರ ಸಮಾವೇಶದಲ್ಲಿ ಭಾಗಿಯಾಗಿದ್ದ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಬಿ.ಜಿ ಕೋಲ್ಸೆ ಪಾಟೀಲ್ ಅವರು ನೀಡಿದ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಭಾನುವಾರ ರಾತ್ರಿ ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ವೇಳೆ ಮಾತನಾಡಿದ ಬಿ.ಜಿ ಕೋಲ್ಸೆ ಪಾಟೀಲ್, ಹಿಂದೂ ಅನ್ನುವುದು ಧರ್ಮವೇ ಅಲ್ಲ, ಅದು ಪರ್ಷಿಯನ್ ಪದ, ಅದರ ಅರ್ಥ ಬೈಗುಳ ಇದೆ. ಬ್ರಾಹ್ಮಣರು ಅವರ ಬುದ್ಧಿಯಿಂದ ನಮ್ಮನು ಗುಲಾಮರನ್ನಾಗಿಸಿ ಹಿಂದೂ ಧರ್ಮ […]

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು

ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ದುರಂತ ಅಂತ್ಯಕಂಡ ಘಟನೆ ಕೊಪ್ಪಳದ ಗಂಗಾವತಿಯಲ್ಲಿ ನಡೆದಿದೆ.ಮದುವೆಗೆ ಕೆಲ ದಿನಗಳು ಮಾತ್ರ ಬಾಕಿ ಇತ್ತು. ಮದುವೆಗೂ ಮುನ್ನ ಸಾಮಾನ್ಯವಾಗಿರುವ ಪ್ರೀ ವೆಡ್ಡಿಂಗ್ ಫೋಟೋ ಶೂಟಿಂಗ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿಯಾಗಿದೆ. ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಭಾವಿ ದಂಪತಿ ಮೃತಪಟ್ಟ ಘಟನೆ ಕೊಪ್ಪಳದ ಗಂಗಾವತಿಯ ದಾಸನಾಳ ಸಮೀಪದ ಬಂಡ್ರಾಳದ ವೆಂಕಟಗಿರಿ ಕ್ರಾಸ್ ಬಳಿ ನಡೆದಿದೆ. 26 ವರ್ಷದ ಕರಿಯಪ್ಪ ಮಡಿವಾಳ ಹಾಗೂ 19 ವರ್ಷದ ಕವಿತಾ ಪವಾಡೆಪ್ಪ ಪ್ರೀ […]

ತಾಯಿ ಅಂತ್ಯಸಂಸ್ಕಾರಕ್ಕೂ ಬರಲಿಲ್ಲ ಹಾದಿಯಾ!

ಹಾದಿಯಾ ಪ್ರಕರಣ ಏನು? ಆಕೆ ಈಗ ಹೇಗಿದ್ದಾಳೆ? ಕೊಟ್ಟಾಯಂ,: ಭಾರತದಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಕೇರಳದ ಅಖಿಲಾ ಅಶೋಕನ್ ಅಲಿಯಾಸ್ ಹಾದಿಯಾ ತಾಯಿ ಪೊನ್ನಮ್ಮ ಕೊನೆಯುಸಿರೆಳೆದಿದ್ದಾರೆ. ಮಗಳು ತನ್ನನ್ನು ಕೊನೆಗಾಲದಲ್ಲಾದರೂ ನೋಡೋಕೆ ಬಂದೇ ಬರುತ್ತಾಳೆ ಅಂತ ಪೊನ್ನಮ್ಮ ಕಾಯುತ್ತಾ ಇದ್ದಳು. ಆದರೆ ಆ ಹಿರಿ ಜೀವದ ಆಸೆ ಕೊನೆಗೂ ಈಡೇರಲೇ ಇಲ್ಲ. ತಾಯಿ ಎನ್ನುವ ಮಮಕಾರದಿಂದಲಾದರೂ ಹಾದಿಯಾ ಕೊನೆಗೂ ತಾಯಿಯನ್ನು ನೋಡಲು ಬರಲೇ ಇಲ್ಲ. ಮಗಳಿಗಾಗಿ ಕಾದು ಕಾದೇ ಹಾದಿಯಾ ತಾಯಿ ಪೊನ್ನಮ್ಮ, ಕಣ್ಣುಚ್ಚಿದ್ದಾರೆ. ಕೇರಳದಲ್ಲಿ ಭಾರಿ […]

ನ್ಯಾಷನಲ್ ಹೆರಾಲ್ಡ್ ಪ್ರಕರಣ: ಡಿಕೆಶಿ ಆಪ್ತ ಇನಾಯತ್ ಅಲಿ ED ಸಂಕಟ, ನೋಟಿಸ್ ಜಾರಿ

ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಪ್ರಕರಣದಲ್ಲಿ ಈಡಿ ನೀಡಿರುವ ದೂರಿನ ಮೇರೆಗೆ ಆರ್ಥಿಕ ಅಪರಾಧ ವಿಭಾಗ-ದೆಹಲಿ ಪೋಲಿಸರಿಂದ ಅಕ್ಟೋಬರ್ 3ರಂದು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಮೇಲೆ ಪ್ರಕರಣ ದಾಖಲಾಗಿತ್ತು, ಅದೇ ಪ್ರಕರಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಡಿಕೆಶಿ ಆಪ್ತ ಇನಾಯತ್ ಅಲಿಗೂ EOW-ದೆಹಲಿ ಪೋಲಿಸ್ ತನಿಖೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ. ಇನಾಯತ್ ಅಲಿ ಪ್ರಕಾರ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಈಡಿ ಸಂಸ್ಥೆಯಿಂದ ಕಳೆದ ಹಲವು ವರ್ಷಗಳಿಂದ ಸತತವಾಗಿ ಇನಾಯತ್ ಅಲಿ ತನಿಖೆಗೊಳಪಟ್ಟಿದ್ದಾರೆ […]

ಅವಳಿ ಮಕ್ಕಳ ಹೆರಿಗೆ ವೇಳೆ 26 ರ ಹರೆಯದ ಪಾಕ್ ಟಿಕ್‌ಟಾಕ್ ತಾರೆ ಸಾವು

ಇಸ್ಲಾಮಾಬಾದ್: ಪಾಕಿಸ್ಥಾನ ಟಿಕ್‌ಟಾಕ್ ತಾರೆ ಮತ್ತು ಸಾಮಾಜಿಕ ಮಾಧ್ಯಮದ ಪ್ರಭಾವಿ ನಟಿ ಪ್ಯಾರಿ ಮರಿಯಮ್ ಹೆರಿಗೆಯ ಸಮಯದಲ್ಲಿ ಉಂಟಾದ ತೀವ್ರ ಸಮಸ್ಯೆಗಳಿಂದ 26 ನೇ ವಯಸ್ಸಿನಲ್ಲಿ ದುರಂತ ಸಾವನ್ನಪ್ಪಿದ್ದಾರೆ. ಮೃದು ಮಾತಿನ ವ್ಲಾಗ್‌ಗಳು ಮತ್ತು ಹೃದಯಸ್ಪರ್ಶಿ ಕಥೆಗಳ ಮೂಲಕ ಹೆಸರುವಾಸಿಯಾದ್ದ ಮರಿಯಮ್ ತನ್ನ ತಾಯ್ನಾಡಿನಲ್ಲಿ ಮಾತ್ರವಲ್ಲದೆ ಭಾರತ ಮತ್ತು ಇತರ ದೇಶಗಳಲ್ಲಿಯೂ ಅನೇಕ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದರು. ಪಾಕಿಸ್ಥಾನದ ಮಾಧ್ಯಮ ವರದಿಗಳ ಪ್ರಕಾರ, ಗುರುವಾರ(ಡಿ 4) ಲಾಹೋರ್‌ನಲ್ಲಿ ಮರಿಯಮ್‌ಗೆ ಅವಳಿ ಮಕ್ಕಳಿಗೆ ಹೆರಿಗೆಯಾದ ಸ್ವಲ್ಪ ಸಮಯದ ನಂತರ ಗಂಭೀರ […]

ಚಿಕ್ಕಮಗಳೂರು | ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ: ಬಜರಂಗದಳದ ಐವರು ಕಾರ್ಯಕರ್ತರ ಬಂಧನ

ಚಿಕ್ಕಮಗಳೂರು: ದತ್ತ ಜಯಂತಿ ಬ್ಯಾನರ್ ತೆರವು ವಿಚಾರವಾಗಿ ನಡೆದ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ, ಗ್ರಾಪಂ ಸದಸ್ಯರೊಬ್ಬರು ಬರ್ಬರವಾಗಿ ಹತ್ಯೆಯಾದ ಘಟನೆ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ಶುಕ್ರವಾರ ರಾತ್ರಿ 10:30ರ ಸುಮಾರಿಗೆ ನಡೆದಿದೆ. ಗಣೇಶ್ ಗೌಡ(38) ಕೊಲೆಯಾದವರು. ಇವರು ಸಖರಾಯಪಟ್ಟಣ ಗ್ರಾಪಂ ಸದಸ್ಯರಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಸಂಜಯ್, ಭೂಷಣ್, ಮಿಥುನ್ ಎಂಬವರು ಸೇರಿದಂತೆ ಬಿಜೆಪಿ, ಬಜರಂಗದಳದ ಐವರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಸಖರಾಯಪಟ್ಟಣದಲ್ಲಿ ಎರಡು ದಿನಗಳ ಹಿಂದೆ ದತ್ತ ಜಯಂತಿಯ ಬ್ಯಾನರ್ ತೆರವು ವಿಚಾರವಾಗಿ […]

ಕೋಮುದ್ವೇಷದ ಗಾಳಿ ಸೋಕದ ಅಜಿಲಮೊಗರು ಉರೂಸ್; ಹಿಂದೂ- ಮುಸ್ಲಿಮ್ ಸೌಹಾರ್ದತೆಯ ತಾಣ

ಮಂಗಳೂರು: ಸರ್ವಧರ್ಮದವರು ಪಾಲ್ಗೊಳ್ಳುವ ಬಂಟ್ವಾಳ ತಾಲ್ಲೂಕಿನ ಅಜಿಲಮೊಗರು ಜುಮಾ ಮಸೀದಿಯ ಮಾಲಿದಾ ಉರುಸ್ ದಕ್ಷಿಣ ಕನ್ನಡದಲ್ಲಿ ಕೋಮು ಸೌಹಾರ್ದತೆಯನ್ನೇ ಮಾದರಿಯನ್ನಾಗಿ ತೋರಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಜಿಲಮೊಗರುವಿನಲ್ಲಿರುವ ಮಸೀದಿಯಲ್ಲಿ ಇತಿಹಾಸ ಪ್ರಸಿದ್ಧ ಹಝ್ರತ್ ಸಯ್ಯಿದ್ ಬಾಬಾ ಫಕ್ರುದ್ದೀನ್ ಔಲಿಯಾ (ರ.ಅ) ರವರ ಹೆಸರಿನಲ್ಲಿ ಪ್ರತಿ ವರ್ಷ ಆಚರಿಸಿಕೊಂಡು ಬರುತ್ತಿರುವ ಮಾಲಿದಾ ಉರೂಸ್ ಈ ಕೋಮುಸೌಹಾರ್ದತೆಗೆ ಉತ್ತಮ ಉದಾಹರಣೆ. ಕ್ರಿ.ಶ 13ನೇ ಶತಮಾನದಲ್ಲಿ ಇರಾನ್‌ನ ಪೂರ್ವಭಾಗ ಹಾಗೂ ಅಫಘಾನಿಸ್ತಾನದ ಪಶ್ಚಿಮ ಭಾಗದ ಸೀಸ್ತಾನ್ ಎಂಬಲ್ಲಿ ರಾಜನಾಗಿ […]

ಚಿಕ್ಕಮಗಳೂರು | ಬಜರಂಗದಳ ಕಾರ್ಯಕರ್ತರಿಂದ ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ

ಚಿಕ್ಕಮಗಳೂರು: ಎರಡು ಗುಂಪುಗಳ ಮಧ್ಯೆ ಜಗಳ ತಾರಕಕ್ಕೇರಿ ಗ್ರಾಮ ಪಂಚಾಯತ್‌ ಸದಸ್ಯ ಮೃತಪಟ್ಟ ಘಟನೆ ಚಿಕ್ಕಮಗಳೂರಿನ ಕಡೂರು ತಾಲೂಕಿನ ಸಖರಾಪಟ್ಟಣದ ಸಮೀಪದ ಕಲ್ಮುರುಡೇಶ್ಚರ ಮಠದ ಬಳಿ ನಡೆದಿದೆ. ಸಖರಾಯಪಟ್ಟಣದಲ್ಲಿ ದತ್ತ ಜಯಂತಿ ಬ್ಯಾನರ್ ತೆರವು ವಿಚಾರವಾಗಿ ಉಂಟಾದ ಗಲಾಟೆ ಕೊಲೆಯೊಂದಿಗೆ ಅಂತ್ಯವಾಗಿದೆ. ಗಣೇಶ್ ಗೌಡ (38ವ) ಮೃತ ದುರ್ದೈವಿ. ಗಣೇಶ್ ಮುಂದೆ ಬರಲಿರುವ ಜಿಲ್ಲಾ ಪಂಚಾಯತ್‌ ಚುನಾವಣೆಯಲ್ಲಿ ಸಖರಾಯಪಟ್ಟಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಕಳೆದ ರಾತ್ರಿ 10:30ರ ವೇಳೆ ಸಖರಾಯಪಟ್ಟಣ ಬಾರ್ ಬಳಿ ಎರಡು ಗುಂಪುಗಳ […]