Flash News

SDPIಗೆ ಕಡಿವಾಣ ಹಾಕಿ: ಲೋಕಸಭೆಯಲ್ಲಿ ಬ್ರಿಜೇಶ್ ಚೌಟ ಆಗ್ರಹ

“SDPI, PFI ಜತೆಗೆ ಉತ್ತಮ ಸಂಬಂಧ ಹೊಂದಿದೆ” ನವದೆಹಲಿ: ಕೋಮು ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಎಸ್‌ಡಿಪಿಐಗೆ ಕಡಿವಾಣ ಹಾಕಬೇಕು ಎಂದು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್‌ ಚೌಟ ಶುಕ್ರವಾರ ಇಲ್ಲಿ ಆಗ್ರಹಿಸಿದರು. ಲೋಕಸಭೆಯಲ್ಲಿ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ’ಕೇಂದ್ರ ಗೃಹ ಸಚಿವಾಲಯವು ಪಿಎಫ್‌ಐ ಸಂಘಟನೆ ನಿಷೇಧಿಸಿದೆ. ಆದರೆ, ಪಿಎಫ್ಐ ಕಾರ್ಯಕರ್ತರು ಎಸ್‌ಡಿಪಿಐ ಕಾರ್ಯಕರ್ತರಂತೆ ನಟಿಸಿ ಚುನಾವಣಾ ರಾಜಕಾರಣಕ್ಕೆ ಧುಮುಕುತ್ತಿದ್ದಾರೆ. ಜತೆಗೆ, ರಾಷ್ಟ್ರೀಯ ಭದ್ರತೆಗೆ ಗಂಭೀರ ಬೆದರಿಕೆ ಒಡ್ಡುತ್ತಿದ್ದಾರೆ‘ ಎಂದು ದೂರಿದರು. ‘ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷವು ಇಂತಹ […]

ಸುಳ್ಯ| ಇಲಿ ಪಾಷಾಣ ಸೇವಿಸಿ ವಿದ್ಯಾರ್ಥಿನಿ ಮೃತ್ಯು

ಸುಳ್ಯ: ಮೂರು ದಿನಗಳ ಹಿಂದೆ ಇಲಿಪಾಷಾಣ ಸೇವಿಸಿ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಗುತ್ತಿಗಾರಿನ ಚಿಕ್ಕುಳಿಯಲ್ಲಿ ನಡೆದಿದೆ ಗುತ್ತಿಗಾರಿನ ಚಿಕ್ಕುಳಿ ಬಳಿಯ ನಿವಾಸಿ ಕುಕ್ಕೆ ಸುಬ್ರಹ್ಮಣ್ಯ ಪದವಿ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿನಿ ಪೂಜಾ (19) ಮೃತಪಟ್ಟ ಯುವತಿ ಎಂದು ಗುರುತಿಸಲಾಗಿದೆ. ಪೂಜಾ ಮೂರು ದಿನಗಳ ಹಿಂದೆ ಇಲಿಪಾಷಾಣ ಸೇವಿಸಿದ್ದರು. ಅಸ್ವಸ್ಥಗೊಂಡ ಆಕೆಯನ್ನು ಎರಡು ದಿನಗಳ ಹಿಂದೆ ಮಂಗಳೂರಿನ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಇಂಡಿಗೋ ವಿಮಾನಗಳ ಸಂಚಾರ ಸ್ಥಗಿತ: ಏರ್‌ಪೋರ್ಟ್‌ನಲ್ಲಿ ಮಗಳಿಗೆ ಸ್ಯಾನಿಟರಿ ಪ್ಯಾಡ್‌ಗಾಗಿ ಪರದಾಡಿದ ತಂದೆ

ನವದೆಹಲಿ: ದೇಶದಲ್ಲಿ ಇಂಡಿಗೋ ವಿಮಾನಗಳ ಸಂಚಾರ ಸ್ಥಗಿತದಿಂದಾಗಿ ಕೋಲಾಹಲವೇ ಎದ್ದಿದೆ. ಕೇವಲ 4 ದಿನಗಳಲ್ಲಿ 1300ಕ್ಕೂ ಹೆಚ್ಚು ವಿಮಾನಗಳ ಸಂಚಾರ ರದ್ದಾಗಿದೆ. ಇದು 20 ವರ್ಷಗಳಲ್ಲೇ ಅತ್ಯಂತ ಕಠಿಣಕರ ಪರಿಸ್ಥಿತಿ ಆಗಿದೆ. ದಿನಕ್ಕೆ ಬರೊಬ್ಬರಿ 2,200 ಹಾರಾಟವನ್ನು ಇಂಡಿಗೋ ನಡೆಸಲಿದ್ದು, ಇದರಲ್ಲಿ ಕೇವಲ 10% ರಷ್ಟು ಏರುಪೇರಾದರೆ 400-500 ವಿಮಾನಗಳ ಮೇಲೆ ಪರಿಣಾಮ ಬೀರಿ ಸಾವಿರಾರು ಪ್ರಯಾಣಿಕರು ಒದ್ದಾಡುವಂತಾಗುತ್ತೆ. ಇಡೀ ದೇಶಾದ್ಯಂತ ಇವತ್ತು ವಿಮಾನ ಸಂಚಾರದ ಪರಿಸ್ಥಿತಿ ತೀರಾ ಹದಗೆಟ್ಟಿದೆ. ದೆಹಲಿ ವಿಮಾನ ನಿಲ್ದಾಣದಲ್ಲಿ ನನ್ನ ಮಗಳಿಗೆ […]

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ: ಅಬ್ದುಲ್ ರಝಾಕ್

ಮಂಡ್ಯ: ಶ್ರೀರಂಗಪಟ್ಟಣದ ಐತಿಹಾಸಿಕ ಜಾಮಿಯಾ ಮಸೀದಿಯನ್ನು ದೇವಸ್ಥಾನದ ಮೇಲೆ ಕಟ್ಟಲಾಗಿದೆ ಎಂದು ಹೊರಗಿನವರು ಬಂದು ಸುಳ್ಳು ಹೇಳಿದ್ದಾರೆ. ಇವರು ಡಿಸೆಂಬರ್ 6 ಗೊತ್ತಾ, ಮಸೀದಿ ಕೆಡವಿಬಿಡುತ್ತೇವೆ ಎಂದರೆ, ನಾವು ಕೈಗೆ ಬಳೆ ಹಾಕಿಕೊಂಡು ಕೂತಿದ್ದೀವಾ? ಎಂದು ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ಖಾನ್ ಸವಾಲು ಹಾಕಿದ್ದಾರೆ. ಜೊತೆಗೆ, ಸಂಕೀರ್ತನ ಯಾತ್ರೆ ವೇಳೆ ಪ್ರಚೋದನಕಾರಿ ಭಾಷಣ ಮಾಡಿದವರ ಮೇಲೆ ಎಫ್‌ಐಆರ್ ಹಾಕುವಂತೆ ಪಟ್ಟು ಹಿಡಿದಿದ್ದಾರೆ. ಶುಕ್ರವಾರದ ನಮಾಜ್‌ಗಾಗಿ ಶ್ರೀರಂಗಪಟ್ಟಣಕ್ಕೆ ಬಂದಿದ್ದ ಅಬ್ದುಲ್ ರಜಾಕ್, ಜನದಟ್ಟಣೆ ಹೆಚ್ಚಾದ ಕಾರಣ ಪೊಲೀಸರ […]

ದ್ವೇಷ ಭಾಷಣ ವಿರೋಧಿ ಮಸೂದೆ | ಹಿಂದುತ್ವ ನಾಯಕರನ್ನು ಮುಗಿಸುವ ಷಡ್ಯಂತ್ರ: ಮುತಾಲಿಕ್ ಆರೋಪ

ದಾವಣಗೆರೆ: ರಾಜ್ಯ ಸರಕಾರ ದ್ವೇಷ ಭಾಷಣ, ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ ಕಾಯ್ದೆಯ ಮೂಲಕ ಹಿಂದೂಗಳನ್ನು ಗುರಿಯಾಗಿಸಿ ಹಿಂದುತ್ವ ಸಂಘಟನೆ, ನಾಯಕರನ್ನು ಮುಗಿಸುವ ಷಡ್ಯಂತ್ರ ನಡೆಸಿದೆ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಈ ಮಸೂದೆಯನ್ನು ಶ್ರೀರಾಮಸೇನೆ ಉಗ್ರವಾಗಿ ಖಂಡಿಸುತ್ತದೆ. ಸರಕಾರ ಕೇವಲ ಹಿಂದೂಗಳನ್ನು ಟಾರ್ಗೆಟ್ ಮಾಡಿ, ಮುಸ್ಲಿಮರ ಓಟ್ ಗಾಗಿ ಈ ಮಸೂದೆ ಜಾರಿಗೆ ತರಲು ಹೊರಟಿದೆ. ಗೋಹತ್ಯೆ ನಿಷೇಧ ಜಾರಿಯಲ್ಲಿದ್ದಾಗಲೂ ಹಲವೆಡೆ ಗೋಹತ್ಯೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ […]

ಮದುವೆ ವಯಸ್ಸು ತಲುಪದಿದ್ದರೂ ವಯಸ್ಕರು ಲಿವ್-ಇನ್ ಸಂಬಂಧದಲ್ಲಿರಬಹುದು: ರಾಜಸ್ಥಾನ ಹೈಕೋರ್ಟ್

ಜೈಪುರ: ಮದುವೆಯಾಗಲು ಕಾನೂನಾತ್ಮಕವಾಗಿ ನಿಗದಿಯಾಗಿರುವ ವಯಸ್ಸನ್ನು ತಲುಪದ ಇಬ್ಬರು ವಯಸ್ಕರು, ಸಹಮತದ ಆಧಾರದ ಮೇಲೆ ಸಹಜೀವನ ನಡೆಸಲು ಅರ್ಹರು ಎಂದು ಮಹತ್ವದ ತೀರ್ಪು ಪ್ರಕಟಿಸಿರುವ ರಾಜಸ್ಥಾನ ಹೈಕೋರ್ಟ್‌, ಅವರ ಸಾಂವಿಧಾನಿಕ ಹಕ್ಕನ್ನು ಮೊಟಕುಗೊಳಿಸಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದೆ. ಪರಸ್ಪರ ಒಪ್ಪಿಗೆಯ ಮೇರೆಗೆ ನಾವಿಬ್ಬರೂ ಒಟ್ಟಿಗೆ ವಾಸಿಸುತ್ತಿದ್ದೇವೆ. ನಮಗೆ ರಕ್ಷಣೆ ನೀಡಬೇಕು’ ಎಂದು ಕೋರಿ ಕೋಟಾದ 18ರ ಯುವತಿ ಹಾಗೂ 19ರ ಯುವಕ ಸಲ್ಲಿಸಿದ್ದ ಅರ್ಜಿಯ ಮೇಲ್ವಿಚಾರಣೆ ನಡೆಸಿದ ಬಳಿಕ ನ್ಯಾಯಮೂರ್ತಿ ಅನೂಪ್‌ ಧಂದ್‌ ಈ ತೀರ್ಪು […]

ತನಗಿಂತ ಅಂದವಾಗಿರುವ ಮಕ್ಕಳನ್ನು ಕೊಂದ ಪ್ರಕರಣಕ್ಕೆ ಟ್ವಿಸ್ಟ್: ಮಹಿಳೆಯ ಕುಟುಂಬ ಹೇಳಿದ್ದೇನು?

ಹರಿಯಾಣ, ಡಿಸೆಂಬರ್ 05: ಹರಿಯಾಣದಲ್ಲಿ ನಡೆದ ಮಕ್ಕಳ ಸರಣಿ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದೆ. ಮಹಿಳೆಯೊಬ್ಬಳು ತನಗಿಂತ ಅಂದವಾಗಿರುವ ಮಕ್ಕಳನ್ನು ಹತ್ಯೆ ಮಾಡಿದ್ದಳು. ಆಕೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಮಕ್ಕಳ ಕುಟುಂಬದವರ ಹೇಳಿಕೆ ಬೆಚ್ಚಿಬೀಳಿಸಿದೆ. ವಿಚಾರಣೆಯ ಸಮಯದಲ್ಲಿ ಮಹಿಳೆ ಹಲವಾರು ವರ್ಷಗಳಿಂದ ತನ್ನ ಕುಟುಂಬ ಮತ್ತು ಸಂಬಂಧಿಕರ ಸುಂದರ ಹುಡುಗಿಯರನ್ನು ಗುರಿಯಾಗಿಸಿಕೊಂಡು ಕೊಲೆ ಮಾಡುತ್ತಿದ್ದೆ ಎಂದು ಒಪ್ಪಿಕೊಂಡಿದ್ದಾಳೆ. ಅಲ್ಲದೇ, ಇಲ್ಲಿಯವರೆಗೆ ತನ್ನ ಸ್ವಂತ ಮಗ ಸೇರಿದಂತೆ ನಾಲ್ವರು ಮಕ್ಕಳನ್ನು ಕೊಂದಿದ್ದಾಗಿ ಬಾಯ್ಬಿಟ್ಟಿದ್ದಾಳೆ ಎಂದು […]

ವೇಣುಗೋಪಾಲ್ ಎದುರಲ್ಲಿ ಡಿಕೆ ಘೋಷಣೆ; ಪಕ್ಷದ ಶಿಸ್ತು ಉಲ್ಲಂಘನೆ, ಕಾರಣ ಕೇಳಿ ಕಾಂಗ್ರೆಸ್ ಮುಖಂಡ ಮಿಥುನ್ ರೈಗೆ ನೋಟಿಸ್ ಜಾರಿ

ಮಂಗಳೂರು: ಎಐಸಿಸಿ ಸೆಕ್ರಟರಿ ಕೆ.ಸಿ ವೇಣುಗೋಪಾಲ್ ಮೊನ್ನೆ ಮಂಗಳೂರಿಗೆ ಬಂದಿದ್ದಾಗ ಕಾಂಗ್ರೆಸ್ ಮುಖಂಡ ಮಿಥುನ್ ರೈ ನೇತೃತ್ವದಲ್ಲಿ ಡಿಕೆ ಡಿಕೆ ಎಂದು ಘೋಷಣೆ ಕೂಗಿ ಮುಜುಗರ ಸೃಷ್ಟಿಸಿದ ಘಟನೆ ನಡೆದಿದ್ದು, ಈ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಕಾರಣ ಕೇಳಿ ಮಿಥುನ್ ರೈಗೆ ನೋಟಿಸ್ ಜಾರಿ ಮಾಡಿದೆ. ಡಿ.3ರಂದು ಮಂಗಳೂರಿನಲ್ಲಿ ನಡೆದ ಗಾಂಧಿ- ಗುರು ಸಂವಾದ ಶತಾಬ್ದಿ ಕಾರ್ಯಕ್ರಮಕ್ಕೆ ಕೆಸಿ ವೇಣುಗೋಪಾಲ್ ಆಗಮಿಸಿದ್ದರು. ಈ ವೇಳೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಹೊರ ಬರುತ್ತಿದ್ದಂತೆ ಕಾಂಗ್ರೆಸ್ ಮುಖಂಡ ಮಿಥುನ್ ರೈ […]

ಮುಸ್ಲಿಮರು ಈಶ್ವರ ಅಲ್ಹಾ ತೇರೇ ನಾಮ್ ಅಂತ ಎಲ್ಲೂ ಹೇಳಿಲ್ಲ: ಸಿ.ಟಿ ರವಿ

ಚಿಕ್ಕಮಗಳೂರು: ಮುಸ್ಲಿಮರು ಎಲ್ಲೂ ಈಶ್ವರ ಅಲ್ಹಾ ತೇರೇ ನಾಮ್ ಅಂತ ಹೇಳಿಲ್ಲ, ನಾನಂತೂ ಹೇಳಿದ್ದನ್ನು ಕೇಳಿಲ್ಲ. ಮಸೀದಿಗಳಲ್ಲೂ ಹೇಳಿಕೊಟ್ಟಿಲ್ಲ. ಮದ್ರಾಸಗಳಲ್ಲಿ ಹೇಳಿಕೊಟ್ಟಿದ್ರೆ ಭಯೋತ್ಪಾದಕರುಗಳೇ ಇರುತ್ತಿರಲಿಲ್ಲ ಎಂದು ಎಂಎಲ್‌ಸಿ ಸಿ.ಟಿ ರವಿ ಹೇಳಿದರು. ದತ್ತಪೀಠದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಹಿಂದೂಗಳು ರಾಮ್ ರಹೀಮ್ ಒಂದೇ ಎಂದು ಹೇಳ್ತಿದ್ದೀವಿ, ಮುಸ್ಲಿಮರು ಹೇಳ್ತಿಲ್ಲ. ರಾಮ್ ರಹೀಮ್ ಒಂದೇ ಎಂದು ಅವರು ಹೇಳಿಕೊಟ್ಟಿದ್ರೆ ಜಗಳಗಳು ಆಗ್ತಿರಲಿಲ್ಲ. ನಾವು ಅಲ್ಹಾ ದೇವ್ರು ಅನ್ನೋಕೆ ತೊಂದರೆ ಇಲ್ಲ. ನಮ್ಮ ಪರಂಪರೆ ಅದಕ್ಕೆ ಅವಕಾಶ […]

ಕೋಮು ದ್ವೇಷ: ಕಲ್ಲಡ್ಕ ಪ್ರಭಾಕರ ಭಟ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಪುತ್ತೂರು: ಕೋಮು ದ್ವೇಷ ಪ್ರಚೋದಿಸುವ, ಮಹಿಳೆಯರ ಘನತೆಗೆ ಧಕ್ಕೆ ಉಂಟು ಮಾಡುವ ಭಾಷಣ ಮಾಡಿದ ಆರೋಪದಲ್ಲಿ ತನ್ನ ವಿರುದ್ಧ ಸಂಪ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ನಿರೀಕ್ಷಣಾ ಜಾಮೀನು ಕೋರಿ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಡಾ.ಪ್ರಭಾಕರ ಭಟ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಮಂಗಳವಾರ ನಡೆಯಿತು. ಪ್ರಕರಣದ ದೂರುದಾರರಾದ ಮಹಿಳಾ ಹೋರಾಟಗಾರ್ತಿ ಈಶ್ವರಿ ಪದ್ಮುಂಜ ಅವರು ಪ್ರಾಸಿಕ್ಯೂಶನ್ ಜತೆ ವಾದ ಮಂಡನೆಗೆ ಅವಕಾಶ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ […]