Flash News

ದುಬೈ ಏರ್‌ಶೋ: HAL ನಿರ್ಮಿತ ‘ತೇಜಸ್‘ ಲಘು ಯುದ್ಧವಿಮಾನ ಪತನ; ಪೈಲಟ್ ಸಾವು

ದುಬೈ: ಇಲ್ಲಿನ ಅಲ್ ಮಕ್ತೌಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ ‘ದುಬೈ ಏರ್ ಶೋ 2025’ರಲ್ಲಿ ಭಾರತದ ‘ತೇಜಸ್‘ ಲಘು ಯುದ್ಧವಿಮಾನ ಪತನವಾಗಿದೆ. ಅಪಘಾತದಲ್ಲಿ ಪೈಲಟ್‌ ಮೃತಪಟ್ಟಿದ್ದಾರೆ. ಏರ್‌ಶೋನಲ್ಲಿ ‘ತೇಜಸ್‘ ಯುದ್ಧವಿಮಾನ ಪ್ರದರ್ಶನ ನಡೆಸುತ್ತಿದ್ದಾಗ ಪತನವಾಗಿದೆ. ಈ ಘಟನೆ ಶುಕ್ರವಾರ ಮಧ್ಯಾಹ್ನ 2:10ರ ಸುಮಾರಿಗೆ ನಡೆದಿದೆ ಎಂದು ವರದಿಯಾಗಿದೆ. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಜನಸಂದಣಿಯಲ್ಲಿದ್ದವರು ನೋಡನೋಡುತ್ತಿದ್ದಂತೆ ವಿಮಾನ ಪತನವಾಗಿದ್ದು ನಿಲ್ದಾಣದ ಮೇಲೆ ಕಪ್ಪು ಹೊಗೆ ಆವರಿಸಿಕೊಂಡಿದೆ. ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆಗಾಗಿ ಎಚ್‌ಎಎಲ್ ನಿರ್ಮಿಸಿದ […]

5 ವರ್ಷ ನಾನೇ ಸಿಎಂ ಅಂದಿದ್ದಾರೆ, ಅವರಿಗೆ ಶುಭ ಕೋರುತ್ತೇನೆ: ಡಿ.ಕೆ.ಶಿವಕುಮಾರ್‌

ಬೆಂಗಳೂರು: ‘ನನ್ನ ಬಳಿ ಯಾವ ಬಣವೂ ಇಲ್ಲ. ನಾನು ಯಾವುದೇ ಬಣದ ನಾಯಕನಲ್ಲ. ನಾನು 140 ಶಾಸಕರ ಅಧ್ಯಕ್ಷ. 140 ಶಾಸಕರೂ ನನಗೆ ಮುಖ್ಯ. ಗುಂಪುಗಾರಿಕೆ ನನ್ನ ರಕ್ತದಲ್ಲೇ ಇಲ್ಲ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟಪಡಿಸಿದರು. ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯಿಸಿದರು. ಕೆಲವು ಶಾಸಕರು, ಮಂತ್ರಿಗಳು ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ, ಮತ್ತೊಂದೆಡೆ ಡಿನ್ನರ್ ಮೀಟಿಂಗ್ ನಡೆಯುತ್ತಿದೆ ಎಂದು ಕೇಳಿದಾಗ, “ಯಾವ ಗುಂಪನ್ನು ದೆಹಲಿಗೆ […]

ಶಿವಮೊಗ್ಗದಲ್ಲಿ ವ್ಯಾಪಾರಿ​​ ಮೇಲೆ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್​​: ಹಿಂದೂ ಯುವಕ ಸೇರಿ ಮೂವರು ಅರೆಸ್ಟ್​​

ಹಲ್ಲೆ ಪ್ರಕರಣವನ್ನು ಕೋಮು ಸ್ವರೂಪ ನೀಡಿದ್ದ ಸಂಘಪರಿವಾರ ಶಿವಮೊಗ್ಗ: ಮನೆಯಿಂದ ಬಸ್ ನಿಲ್ದಾಣದತ್ತ ತೆರಳುತ್ತಿದ್ದ ಪಾತ್ರೆ ವ್ಯಾಪಾರಿ ಹರೀಶ್​​ ಮೇಲೆ ಜಾತಿ ಕೇಳಿ ಹಲ್ಲೆ ನಡೆಸಿದ ಆರೋಪ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದೆ. ಹರೀಶ್ ಮೇಲಿನ ಪ್ರಕರಣವು ಕೋಮು ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್, ಪ್ರಕರಣ ಸಂಬಂಧ ಎರಡು ತಂಡಗಳನ್ನು ರಚನೆ ಮಾಡಿ ಆರೋಪಿಗಳ ಪತ್ತೆಗೆ ಮುಂದಾಗಿದ್ದರು. ಘಟನೆ ಸಂಬಂಧ ಅರ್ಮಾನ (21), ನಿರಂಜನ್ (20) ಮತ್ತು ಓರ್ವ ಅಪ್ರಾಪ್ತ ಸೇರಿ ಮೂವರನ್ನು ಬಂಧಿಸಲಾಗಿದೆ. […]

Udupi | ನೌಕಾ ಸೇನಾ ಹಡಗುಗಳ ಗೌಪ್ಯ ಮಾಹಿತಿ ಪಾಕಿಸ್ತಾನಕ್ಕೆ ಹಂಚಿದ ಇಬ್ಬರ ಬಂಧನ

ರೋಹಿತ್, ಸಂತ್ರಿ ಬಂಧಿತ ಆರೋಪಿಗಳು ಉಡುಪಿ: ಭಾರತದ ನೌಕಾ ಸೇನೆಗೆ ಸಂಬಂಧಪಟ್ಟ ಹಡಗುಗಳ ಗೌಪ್ಯ ಪಟ್ಟಿ, ಇತರ ಗೌಪ್ಯ ಮಾಹಿತಿಯನ್ನು ವಾಟ್ಸಪ್‌ ಮೂಲಕ ಅನಧಿಕೃತವಾಗಿ ಪಾಕಿಸ್ತಾನಕ್ಕೆ ಶೇ‌ರ್ ಮಾಡಿ, ಅಕ್ರಮ ಲಾಭ ಪಡೆದಿರುವ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಶಿಪ್ ಯಾರ್ಡ್‌ನ ಉದ್ಯೋಗಿಗಳಾದ ಉತ್ತರ ಪ್ರದೇಶ ಮೂಲದ ರೋಹಿತ್ ಮತ್ತು ಸಂತ್ರಿ ಬಂಧಿತರು. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾಗಿ ಪೊಲೀಸ್‌ ಅಧೀಕ್ಷಕ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ

ಫಾತಿಮಾ​ಗೆ ಒಲಿದ 2025ನೇ ಸಾಲಿನ ಮಿಸ್ ಯೂನಿವರ್ಸ್ ಕಿರೀಟ!

ಬ್ಯಾಂಕಾಕ್: ಮೆಕ್ಸಿಕೋ ಮೂಲದ 25 ವರ್ಷದ ಫಾತಿಮಾ ಬಾಷ್ ಅವರು 2025ನೇ ಸಾಲಿನ ಮಿಸ್ ಯೂನಿವರ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಗೆಲುವಿನ ಭಾವನಾತ್ಮಕ ಕ್ಷಣಗಳ ನಡುವೆ ಡೆನ್ಮಾರ್ಕ್​ ಮೂಲದ ಮಾಜಿ ಮಿಸ್ ಯೂನಿವರ್ಸ್​ ವಿಕ್ಟೋರಿಯಾ ಕೆಜೆರ್ ಥೀಲ್ವಿಗ್ ಅವರು ಫಾತಿಮಾ ಅವರಿಗೆ ಕಿರೀಟ ಧಾರಣೆ ಮಾಡಿದರು. ಮಿಸ್​ ಯೂನಿವರ್ಸ್​-2025ರ ಫೈನಲ್​ ಸ್ಪರ್ಧೆಯಲ್ಲಿ ಫಾತಿಮಾ ಬಾಷ್ ಪ್ರಥಮ ಸ್ಥಾನ ಪಡೆದರೆ, ಥೈಲ್ಯಾಂಡ್‌ನ ವೀಣಾ ಪ್ರವೀಣ್ ಸಿಂಗ್ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದರು. ಎರಡನೇ ರನ್ನರ್​ ಅಪ್​ ಸ್ಥಾನವನ್ನು ವೆನೆಜುವೆಲಾದ […]

ಹಳೇ ವಾಹನಗಳ ಮಾಲೀಕರಿಗೆ ಕೇಂದ್ರ ಶಾಕ್: FC ಶುಲ್ಕ ಭಾರೀ ಹೆಚ್ಚಳ

ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹಳೆಯ ವಾಹನಗಳ ಮಾಲೀಕರಿಗೆ ಶಾಕಿಂಗ್ ಸುದ್ದಿ ನೀಡಿದೆ. 2025ರ ಕೇಂದ್ರ ಮೋಟಾರು ವಾಹನಗಳ ಐದನೇ ತಿದ್ದುಪಡಿ ನಿಯಮಗಳ ಅಡಿಯಲ್ಲಿ ವಾಹನಗಳ ಫಿಟ್ನೆಸ್ ಪರೀಕ್ಷೆಯ ಶುಲ್ಕ ಪರಿಷ್ಕರಣೆ ಮಾಡಿದೆ. ಈ ಪರಿಷ್ಕರಣೆ ಶುಲ್ಕ ಯಾರಿಗೆಲ್ಲ ಅನ್ವಯವಾಗುತ್ತದೆ. ಮೊದಲಿದ್ದ ಶುಲ್ಕವೆಷ್ಟು? ಈಗಿನದ್ದು ಎಷ್ಟು? ಯಾವೆಲ್ಲ ವಾಹನಗಳಿಗೆ ಇದು ಅನ್ವಯವಾಗುತ್ತೆ ಎಂಬ ವಿವರ ಇಲ್ಲಿದೆ. ವಾಹನಗಳ ಫಿಟ್ನೆಸ್ ಪರೀಕ್ಷೆಯ ಶುಲ್ಕವನ್ನು ರಸ್ತೆ ಸಾರಿಗೆ ಸಚಿವಾಲಯವು ಪರಿಷ್ಕರಣೆ ಮಾಡಿದೆ. ವಾಹನಗಳ ವಯಸ್ಸಿನ ಆಧಾರದ […]

ಡಾಕ್ಟರ್‌, ಇಂಜಿನಿಯರ್‌ಗಳಿಂದ ದೇಶವಿರೋಧಿ ಕೃತ್ಯ: ದೆಹಲಿ ‍ಪೊಲೀಸರು

ನವದೆಹಲಿ: ‘ಇತ್ತೀಚೆಗಿನ ದಿನಗಳಲ್ಲಿ ವೈದ್ಯರು ಹಾಗೂ ಎಂಜಿನಿಯರ್‌ಗಳು ತಮ್ಮ ವೃತ್ತಿ ನಿಭಾಯಿಸುವುದನ್ನು ಬಿಟ್ಟು ದೇಶವಿರೋಧಿ ಕೃತ್ಯಗಳಲ್ಲಿ ತೊಡಗುವುದನ್ನು ಪ್ರವೃತ್ತಿಯಾಗಿಸಿಕೊಂಡಿದ್ದಾರೆ’ ಎಂದು ದೆಹಲಿ ‍ಪೊಲೀಸರು ಸುಪ್ರೀಂ ಕೋರ್ಟ್‌ನಲ್ಲಿ ಗುರುವಾರ ಹೇಳಿದ್ದಾರೆ. 2020ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ಸಾಮಾಜಿಕ ಕಾರ್ಯಕರ್ತರಾದ ಉಮರ್‌ ಖಾಲಿದ್‌, ಶರ್ಜೀಲ್ ಇಮಾಮ್‌ ಮತ್ತು ಇತರರು ಸಲ್ಲಿಸಿರುವ ಜಾಮೀನು ಅರ್ಜಿಗಳ ವಿಚಾರಣೆಯಲ್ಲಿ ದೆಹಲಿ ಪೊಲೀಸರ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌.ವಿ.ರಾಜು ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಪೌರತ್ವ ತಿದ್ಧುಪಡಿ ಕಾಯ್ದೆ ವಿರುದ್ಧ […]

‘ನಿಮ್ಮನ್ನು ಮರೆಯಬಹುದು, ಶಾರುಖ್​ನಲ್ಲ’; ವಿವೇಕ್ ಹೇಳಿಕೆಗೆ ಫ್ಯಾನ್ಸ್ ತಿರುಗೇಟು

ಮುಂಬೈ: ಮುಂದಿನ ಕೆಲವು ದಶಕಗಳಲ್ಲಿ ಶಾರುಖ್ ಖಾನ್ ಅವರ ಹೆಸರು ಅಳಿಸಿ ಹೋಗಬಹುದು. ರಾಜ್​ ಕಪೂರ್ ಅವರಂತಹ ಹೀರೋಗಳು ಯಾರು ಎಂಬುದೇ ತಿಳಿಯುವುದಿಲ್ಲ ಎಂದು ವಿವೇಕ್ ಓಬೆರಾಯ್ ಅಭಿಪ್ರಾಯ ಹೊರಹಾಕಿದ್ದಾರೆ. ‘1960ರ ಸಿನಿಮಾದ ಬಗ್ಗೆ ಕೇಳಿದರೆ ಇಂದು ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಬಹುಶಃ 2050ರಲ್ಲಿ, ಜನರು ಶಾರುಖ್ ಖಾನ್ ಯಾರು ಎಂದು ಕೇಳಬಹುದು’ ಎಂದು ಅವರು ಹೇಳಿದ್ದಾರೆ. ಇದನ್ನು ಅನೇಕರು ಒಪ್ಪಿಕೊಂಡಿದ್ದಾರೆ. ಇನ್ನೂ ಕೆಲವರು ಇದನ್ನು ಅಲ್ಲಗಳೆದಿದ್ದಾರೆ. ಇನ್ನು 100 ವರ್ಷಗಳು ಕಳೆದರೂ ಶಾರುಖ್ ಖಾನ್ ಹೆಸರು ಮನದಲ್ಲಿ […]

Chikmagaluru | ಬಾಲಕಿಯನ್ನು ಪೋಷಕರ ಎದುರೇ ಹೊತ್ತೊಯ್ದ ಚಿರತೆ: ಕಾಡಂಚಲ್ಲಿ ಶವ ಪತ್ತೆ

ಚಿಕ್ಕಮಗಳೂರು: ಚಿರತೆ ದಾಳಿಯಿಂದ 5 ವರ್ಷದ ಸಾವನ್ನಪ್ಪಿರುವುದು ಕಡೂರು ತಾಲೂಕಿನ ನವಿಲೇಕಲ್ ಗುಡ್ಡದಲ್ಲಿ ನಡೆದಿದೆ. ಚಿರತೆ ದಾಳಿಯಿಂದ ಸಾವನ್ನಪ್ಪಿದ ಬಾಲಕಿಯನ್ನು ಸಾನ್ವಿ (5) ಎಂದು ಗುರುತಿಸಲಾಗಿದೆ. ಮನೆಯ ಹಿಂದೆ ಕೊಟ್ಟಿಗೆಯಲ್ಲಿ ಮಗುವಿನ ಮೇಲೆ ಚಿರತೆ ದಾಳಿ ಮಾಡಿದೆ. ಈ ವೇಳೆ ಮಗು ಚೀರಾಟ ಕೇಳಿ ಪೋಷಕರು ಬಂದಿದ್ದಾರೆ. ಅವರ ಎದರುರಲ್ಲೇ ಚಿರತೆ ಮಗುವನ್ನು ಕಾಡಿಗೆ ಹೊತ್ತೊಯ್ದಿದೆ ಸ್ಥಳಿಯರು ಹುಡುಕಾಡಿದಾಗ ಕಾಡಂಚಿನಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ. ಬೀರೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ

ರೋಚಕ ಘಟ್ಟ ತಲುಪಿದ ‘ಸಿಎಂ ಬದಲಾವಣೆ’ ಚರ್ಚೆ: ಡಿಕೆಶಿ ಪರ ಶಾಸಕರು ದಿಢೀರ್ ದೆಹಲಿ ಯಾತ್ರೆ; ಹೈಕಮಾಂಡ್ ಮುಂದೆ ಶಕ್ತಿ ಪ್ರದರ್ಶನಕ್ಕೆ ಸಜ್ಜು!

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ರೋಚಕ ಘಟ್ಟ ತಲುಪಿದ್ದು, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬೆಂಬಲಿತ ಓರ್ವ ಸಚಿವರು ಹಾಗೂ ಕೆಲವು ಶಾಸಕರು ಗುರುವಾರ ದಿಢೀರ್ ದೆಹಲಿ ಯಾತ್ರೆ ಕೈಗೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಅಧಿಕಾರ ಹಂಚಿಕೆ ವಿಚಾರ ಕಾಂಗ್ರೆಸ್ ನಲ್ಲಿ ಭುಗಿಲೆದಿದ್ದು, ಡಿಕೆ ಶಿವಕುಮಾರ್ ಪರವಾಗಿರುವ ಶಾಸಕರು ದೆಹಲಿಗೆ ತೆರಳಿದ್ದು, ಹೈಕಮಾಂಡ್ ಮುಂದೆ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ ಎಂದು ಮೂಲಗಳು ಹೇಳಿವೆ. ಇನ್ನೂ ಎರಡೂವರೆ ವರ್ಷಗಳ ಕಾಲ […]