‘ಬ್ಯಾರಿ ಎಲ್ತ್‌ಗಾರ್ತಿಮಾರೊ ಕೂಟ’ ಮೂರನೇಯ ಸಮ್ಮಿಲನ

ಮಂಗಳೂರು: “ಒರ್ಮೆಪ್ಪಾಡ್-3,” ನವೆಂಬರ್ ತಿಂಗಳ 30 ಭಾನುವಾರದಂದು ಮಂಗಳೂರು ಅಶೋಕ ನಗರದ ಪ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿಯಲ್ಲಿ ನಡೆಯಿತು. ಈ ಕೂಟದ ನಿರ್ವಾಹಕಿ ಝುಲೈಕ ಮುಮ್ತಾಝ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಾ.ಜುವೇರಿಯಾ ಮುಫೀದ ಇವರ ಸಂಯೋಜನೆಯಲ್ಲಿ ನಡೆದ ಕವಿಗೋಷ್ಟೀಯಲ್ಲಿ ಕವತ್ರಿಯರಾದ ರಮೀಝ ಯಂ.ಬಿ, ರಹ್ಮತ್ ಪುತ್ತೂರು, ಹಸೀನ ಮಲ್ನಾಡ್, ಅಸ್ಮತ್ ವಗ್ಗ, ನಸೀಮ ಸಿಧ್ದಕಟ್ಟೆ, ನಸೀಬ ಗಡಿಯಾರ್, ಮುನೀರ ತೊಕೊಟ್ಟು, ಕಲಂದರ್ ಬೀವಿ, ಸಲ್ಮಾ ಮೈಕಾಲ, ಮುಝಾಹಿದ, ಸಾರ ಅಲಿ, ರೇಶ್ಮ ಎಸ್ ಐ, ಮರಿಯಂ ಇಸ್ಮಾಯಿಲ್ ಭಾಗವಹಿಸಿದರು.ಬಳಿಕ […]
ಬಾಬರಿ ಮಸೀದಿ ನಿರ್ಮಿಸುವ ಯೋಜನೆ ಘೋಷಿಸಿದ್ದ ತೃಣಮೂಲ ಕಾಂಗ್ರೆಸ್ ಶಾಸಕ ಸಸ್ಪೆಂಡ್

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಬಾಬರಿ ಮಸೀದಿ ನಿರ್ಮಿಸುವ ಯೋಜನೆ ಘೋಷಿಸಿದ್ದ ಶಾಸಕ ಹುಮಾಯೂನ್ ಕಬೀರ್‌ನನ್ನ ಆಡಳಿತರೂಢ ತೃಣಮೂಲ ಕಾಂಗ್ರೆಸ್ ಅಮಾನತುಗೊಳಿಸಿದೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಕಬೀರ್, ಬಾಬರಿ ಮಸೀದಿ ಕೆಡವಿದ ವಾರ್ಷಿಕೋತ್ಸವ ದಿನವಾದ ಡಿಸೆಂಬರ್ 6ರಂದೇ ಬೆಲ್ದಂಗಾದಲ್ಲಿ ಮಸೀದಿಗೆ ಅಡಿಪಾಯ ಹಾಕುವುದಾಗಿ ಘೋಷಿಸಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಟಿಎಂಸಿ ನಾಯಕ ಮತ್ತು ಕೋಲ್ಕತ್ತಾ ಮೇಯರ್ ಫಿರ್ಹಾದ್ ಹಕೀಮ್, ಕಬೀರ್ ಬಿಜೆಪಿ ಬೆಂಬಲದೊಂದಿಗೆ ಕೋಮುವಾದ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಪಕ್ಷವೂ ಈ ಹಿಂದೆ ಹಲವು ಬಾರಿ […]
YouTube ವಿಡಿಯೋ ನೋಡಿ ಕಳ್ಳತನ: ಪರಿಚಯಸ್ಥ ಉದ್ಯಮಿ ಮನೆಯಲ್ಲಿ 1.14 ಕೋಟಿ ರೂ. ದರೋಡೆ..!

ಬೆಂಗಳೂರು: ಯೂಟ್ಯೂಬ್‍ನಲ್ಲಿ ವಿಡಿಯೋ ನೋಡಿ ಪರಿಚಯಸ್ಥ ಉದ್ಯಮಿಯೊಬ್ಬರ ಮನೆಯಲ್ಲಿ 1 ಕೋಟಿ ರೂ.ಗೂ ಅಧಿಕ ಹಣ ಹಾಗೂ ಚಿನ್ನಾಭರಣ ದೋಚಿದ್ದ ಇಬ್ಬರು ಆರೋಪಿಗಳನ್ನು ಹೆಬ್ಬಗೋಡಿ ಪೊಲೀಸರು ಗುರುವಾರ ಬಂಧನಕ್ಕೊಳಪಡಿಸಿದ್ದಾರೆ. ಚಿಕ್ಕಪೇಟೆಯಲ್ಲಿ ಬಟ್ಟೆ ಅಂಗಡಿ ಹೊಂದಿರುವ ಬೆಂಗಳೂರು ದಕ್ಷಿಣ ಜಿಲ್ಲೆಯ ವಿಘ್ನೇಶ್ವರ ನಗರದ ನಿವಾಸಿ ಎಚ್‌ಕೆ ಶ್ರೀನಿವಾಸಮೂರ್ತಿ (39) ಮತ್ತು ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿರುವ ಮಾಗಡಿ ಮುಖ್ಯ ರಸ್ತೆಯ ನಿವಾಸಿ ಬಿಎನ್ ಅರುಣ್ ಕುಮಾರ್ (39) ಬಂಧಿತರು. ಹುಲಿಮಂಗಲದ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವ ಉದ್ಯಮಿ ಸುನೀಲ್ ಕುಮಾರ್ ಆರ್ […]
ಸುಂದರವಾಗಿದ್ದಾರೆ ಎಂದು ಅಸೂಯೆ: ಮೂವರು ಬಾಲಕಿಯರನ್ನು ಕೊಂದ ಮಹಿಳೆ!

ಚಂಡೀಗಢ: ಸೌಂದರ್ಯವನ್ನು ಸಹಿಸಲಾಗದೇ ಹೊಟ್ಟೆಕಿಚ್ಚಿನಿಂದ ಮಹಿಳೆಯೊಬ್ಬರು ಮೂವರು ಹುಡುಗಿಯರನ್ನು ಕೊಂದಿರುವ ಪ್ರಕರಣವನ್ನು ಹರಿಯಾಣ ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ 32 ವರ್ಷದ ಪೂನಂ ಎಂಬ ಮಹಿಳೆಯನ್ನು ಬಂಧಿಸಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಮೂವರು ಬಾಲಕಿಯರ ಹತ್ಯೆ ಮಾಡಿದ್ದಾಳೆ. ಸುಂದರವಾಗಿದ್ದರು ಎಂಬ ಕಾರಣಕ್ಕೆ ಬಾಲಕಿಯರ ಮೇಲೆ ಪೂನಂ ದ್ವೇಷ ಬೆಳೆಸಿಕೊಂಡಿದ್ದಳು ಎಂದು ವರದಿ ತಿಳಿಸಿದೆ. ಹತ್ಯೆಯಾದ ಬಾಲಕಿಯರು ಮಹಿಳೆಯ ಸಂಬಂಧಿಕರೇ ಆಗಿದ್ದಾರೆ. ಇದಲ್ಲದೆ, ಪೂನಂ ತನ್ನ ಮೂರು ವರ್ಷದ ಮಗನನ್ನೂ ಕೊಂದಿದ್ದಾಳೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಆಕಸ್ಮಿಕ […]
ಮಂಡ್ಯ | ಹನುಮ ಮಾಲಾಧಾರಿಗಳಿಂದ ಜಾಮಿಯಾ ಮಸೀದಿ ಕಡೆ ನುಗ್ಗಲು ಯತ್ನ: ಪೊಲೀಸರಿಂದ ತಡೆ

ಮಸೀದಿ ಜಾಗ ನಮ್ಮದು ಎಂದ ಮಾಲಾಧಾರಿಗಳು; ಮಸೀದಿ ಮುಂದೆ ಭಜನೆ ಮಂಡ್ಯ : ಶ್ರೀರಂಗಪಟ್ಟಣದಲ್ಲಿ ಬುಧವಾರ ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ನಡೆಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಪಟ್ಟಣದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿ ಕಟ್ಟೆಚ್ಚರ ವಹಿಸಿತ್ತು. ಪಟ್ಟಣದ ಹೊರವಲಯದ ನಿಮಿಷಾಂಬ ದೇವಾಲಯದಿಂದ ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದವರೆಗೆ ನಡೆದ ಯಾತ್ರೆಯಲ್ಲಿ ಜಿಲ್ಲೆ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳ ನೂರಾರು ಮಂದಿ ಭಾಗವಹಿಸಿದ್ದರು. ಯಾತ್ರೆ ಉದ್ದಕ್ಕೂ ಹನುಮ ಮತ್ತು ಶ್ರೀರಾಮನ ಮೂರ್ತಿಗಳ ಮೆರವಣಿಗೆ ನಡೆಯಿತು. […]
ಬೆಳ್ತಂಗಡಿ | ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ: 3 ವರ್ಷದ ಮಗು ಮೃತ್ಯು

ಬೆಳ್ತಂಗಡಿ: ಅಂಗಡಿಯಿಂದ ತಿಂಡಿ ತೆಗೆದುಕೊಂಡು ರಸ್ತೆ ದಾಟುತ್ತಿರುವ ಪುಟ್ಟ ಬಾಲಕನಿಗೆ ಕಾರು ಡಿಕ್ಕಿ ಹೊಡೆದು ಮೃತಪಟ್ಟಿರುವ ದಾರುಣ ಘಟನೆ ಇಂದು ಚಾರ್ಮಾಡಿಯಲ್ಲಿ ಸಂಭವಿಸಿದೆ. ಚಾರ್ಮಾಡಿ ಗ್ರಾಮ ಪಂಚಾಯತ್ ಸದಸ್ಯ ಬೀಟಿಗೆ ನಿವಾಸಿ ಸಿದ್ದಿಕ್ ಯು.ಪಿ. ಎಂಬವರ ಪುತ್ರ 3 ವರ್ಷದ ಮಹಮ್ಮದ್ ಹಝೀರಿನ್ ಮೃತ ಬಾಲಕ ಎಂದು ತಿಳಿದು ಬಂದಿದೆ. ಮೃತ ಬಾಲಕ ತನ್ನ ಮನೆಯ ಬಳಿಯ ಅಂಗಡಿಗೆ ತಿಂಡಿ ತರಲು ಹೋಗಿ, ಹಿಂದಿರುಗುವಾಗ ರಸ್ತೆ ದಾಟಲು ಪ್ರಯತ್ನಿಸುವ ವೇಳೆ ಕಾರು ಡಿಕ್ಕಿ ಹೊಡೆದಿದೆ.
ದಿತ್ವಾ ಚಂಡಮಾರುತ ಎಫೆಕ್ಟ್: ಕರಾವಳಿಗೆ ಯೆಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು: ದಿತ್ವಾ ಚಂಡಮಾರುತ ತಮಿಳುನಾಡು-ಪುದುಚೇರಿ ಕರಾವಳಿ ಸಮೀಪದಲ್ಲಿ ದುರ್ಬಲಗೊಂಡಿದ್ದರೂ ಕೂಡಾ ಕರ್ನಾಟಕದ ಹಲವು ಕರಾವಳಿ ಪ್ರದೇಶದಲ್ಲಿ ಮುನ್ನೆಚ್ಚರಿಕೆಯಾಗಿ 17 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ. ಉದ್ಯಾನನಗರಿಯಲ್ಲಿ ಶೀತಗಾಳಿ ಮುಂದುವರಿದಿದ್ದು, ಇನ್ನುಳಿದಂತೆ ದಿತ್ವಾ ಚಂಡಮಾರುತದ ಪರಿಣಾಮ ದಕ್ಷಿಣ ಒಳನಾಡು ಜಿಲ್ಲೆ ಹಾಗೂ ಕರಾವಳಿ ಪ್ರದೇಶದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕರಾವಳಿ ಜಿಲ್ಲೆಗಳು: ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ದಕ್ಷಿಣ ಒಳನಾಡು […]
ದೇವಸ್ಥಾನಕ್ಕೆ ಬಿಡದಿದ್ದರೆ ನಿಮ್ಮದೇ ದೇವಸ್ಥಾನ ಕಟ್ಟಿ ಎಂದಿದ್ದು ನಾರಾಯಣ ಗುರುಗಳು, ಆ ಕಾಲಕ್ಕೆ ಅದೊಂದು ದೊಡ್ಡ ಕ್ರಾಂತಿ: ಸಿಎಂ ಸಿದ್ದರಾಮಯ್ಯ

ಉಳ್ಳಾಲ: ದಕ್ಷಿಣ ಕನ್ನಡ ಅಥವಾ ಉಡುಪಿ ಜಿಲ್ಲೆಯಲ್ಲಿ ಶಿವಗಿರಿ ಮಠದ ಶಾಖೆ ನಿರ್ಮಾಣಕ್ಕೆ ಐದು ಎಕರೆ ಜಮೀನು ನೀಡಬೇಕೆಂದು ಶಿವಗಿರಿ ಮಠದ ಪೀಠಾಧಿಪತಿ ಬ್ರಹ್ಮಶ್ರೀ ಸಚ್ಚಿದಾನಂದ ಸ್ವಾಮಿಯವರು ಪ್ರಸ್ತಾಪಿಸಿದ್ದು, ಸಂಬಂಧಪಟ್ಟವರು ಜಾಗ ಗುರುತಿಸಿದಲ್ಲಿ ಸರಕಾರದ ವತಿಯಿಂದ ಜಮೀನು ಮಂಜೂರು ಮಾಡಲಾಗುವುದೆಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ. ಶಿವಗಿರಿ ಮಠ ವರ್ಕಲ, ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ನಾರಾಯಣ ಗುರು ಅಧ್ಯಯನ ಪೀಠ ಆಶ್ರಯದಲ್ಲಿ ಬುಧವಾರ ಕೊಣಾಜೆಯ ಮಂಗಳೂರು ವಿವಿ ಕ್ಯಾಂಪಸ್ ಮೈದಾನದಲ್ಲಿ ನಡೆದ ಶತಮಾನದ ಮಹಾಪ್ರಸ್ಥಾನ ಮತ್ತು ಬ್ರಹ್ಮಶ್ರೀ […]
ಕಾಂಗ್ರೆಸ್ ಯುವ ಮುಖಂಡನಿಗೆ ಚಾಕು ಇರಿತ

ಚಾಮರಾಜನಗರ: ಕ್ಷುಲ್ಲಕ ವಿಚಾರಕ್ಕೆ ವ್ಯಕ್ತಿಯೋರ್ವ ಕಾಂಗ್ರೆಸ್ ಯುವ ಮುಖಂಡನಿಗೆ ಚಾಕುವಿನಿಂದ ಇರಿದಿರುವಂತಹ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ತೇರಂಬಳ್ಳಿಯಲ್ಲಿ ನಡೆದಿದೆ. ತೇರಂಬಳ್ಳಿ ಗ್ರಾಮದ ರಾಜಣ್ಣ ಎಂಬ ವ್ಯಕ್ತಿಯಿಂದ ಕೈ ಮುಖಂಡ ಸುನೀಲ್ಗೆ ಚಾಕು ಇರಿಯಲಾಗಿದೆ. ಅಗರ-ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಉಂಟಾಗಿದೆ. ಈ ವೇಳೆ ರಾಜಣ್ಣ ಎಂಬುವವರು ಸುನೀಲ್ಗೆ ಚಾಕುವಿನಿಂದ ಇರಿದಿದ್ದಾರೆ. ಚಾಕುವಿನಿಂದ ಇರಿದ ಹಿನ್ನಲೆ ರಕ್ತಸ್ರಾವ ಉಂಟಾಗಿ ಸುನೀಲ್ ಅಸ್ವಸ್ಥರಾಗಿದ್ದಾರೆ. ಕೂಡಲೇ ಗಾಯಾಳು ಸುನೀಲ್ನನ್ನು ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ […]
ಪೊಲಿಟಿಕಲ್ ಟ್ವಿಸ್ಟ್: ಕೇರಳದ ಮುನ್ನಾರ್ ಪಂಚಾಯತ್ ಎಲೆಕ್ಷನ್ ಗೆ ಬಿಜೆಪಿಯಿಂದ ‘ಸೋನಿಯಾ ಗಾಂಧಿ’ ಸ್ಪರ್ಧೆ

ಕೇರಳದ ಮುನ್ನಾರ್ ಪಂಚಾಯತ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸೋನಿಯಾ ಗಾಂಧಿ ಇತ್ತೀಚೆಗೆ ಸ್ಥಳೀಯರ ಗಮನ ಸೆಳೆದಿದ್ದಾರೆ. ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೆಸರು ಹೊಂದಿರುವ ಇವರ ರಾಜಕೀಯ ಹಾದಿ ಸಂಪೂರ್ಣವಾಗಿ ವಿಭಿನ್ನವಾದ ಮಾರ್ಗವಾಗಿದೆ. ಅವರ ತಂದೆ, ಹಿರಿಯ ಕಾಂಗ್ರೆಸ್ ನಾಯಕ ಮತ್ತು ನಲ್ಲತನ್ನಿ ಕಲ್ಲಾರ್‌ನ ಕಾರ್ಯಕರ್ತ ದಿವಂಗತ ದೂರ್ ರಾಜ್, ಸೋನಿಯಾ ಗಾಂಧಿ ಅವರ ಮೇಲಿನ ಅಭಿಮಾನದಿಂದ ತಮ್ಮ ಮಗಳಿಗೂ ಸೋನಿಯಾ ಗಾಂಧಿ ಎಂದು ಹೆಸರಿಟ್ಟರಂತೆ. ಸೋನಿಯಾ ಅವರ ಮದುವೆಯ ನಂತರ ಅವರ ರಾಜಕೀಯ ನಿಷ್ಠೆ […]