ಭಾರತ ಜಾತ್ಯತೀತ ಆಗಿರಲು ಹಿಂದುಗಳೇ ಕಾರಣ, ಮುಸ್ಲಿಂ ಬಾಹುಳ್ಯ ಇದ್ದರೆ ಜಾತ್ಯತೀತ ಆಗಿರುತ್ತಿರಲಿಲ್ಲ ; ಕೆ.ಕೆ ಮಹಮ್ಮದ್

“ಮುಸ್ಲಿಮರು ಇನ್ನೂ ಎರಡು ಮಸೀದಿಗಳನ್ನು ಹಿಂದೂಗಳಿಗೆ ಬಿಟ್ಟು ಕೊಡಬೇಕು” ಕೋಜಿಕ್ಕೋಡ್ : ಅಯೋಧ್ಯೆ ರಾಮಮಂದಿರ ಮಾತ್ರ ಅಲ್ಲ.. ಮುಸ್ಲಿಮರು ಇನ್ನೂ ಎರಡು ಐತಿಹಾಸಿಕ ಸ್ಥಳಗಳನ್ನು ಹಿಂದೂಗಳಿಗೆ ಬಿಟ್ಟುಕೊಡಬೇಕಿದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಮಾಜಿ ಪ್ರಾದೇಶಿಕ ನಿರ್ದೇಶಕ ಕೆ.ಕೆ. ಮುಹಮ್ಮದ್ ಹೇಳಿದ್ದಾರೆ. ಕೇರಳದ ಕೋಝಿಕ್ಕೋಡ್ ನಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಕೆ.ಕೆ.ಮುಹಮ್ಮದ್, ‘ನನ್ನ ಪ್ರಕಾರ ಮುಸ್ಲಿಮರು ಇನ್ನೂ ಎರಡು ಐತಿಹಾಸಿಕ ಸ್ಥಳಗಳನ್ನು ಹಿಂದೂಗಳಿಗೆ ಬಿಟ್ಟುಕೊಡಬೇಕಾದೀತು ಎಂದು ನಾನು ಹಿಂದೆಯೇ ಹೇಳಿದ್ದೆ. ಶ್ರೀಕೃಷ್ಣನ ಜನ್ಮಸ್ಥಳ ಮಥುರಾ ಮತ್ತು […]
ಮಂಗಳೂರು: ತಾಯಿಗೆ ಹಲ್ಲೆಗೈದ ಮಗಳ ಮೇಲೆ ಬಿತ್ತು ಕೇಸ್..!

ಮಂಗಳೂರು: ಮೂಡುಶೆಡ್ಡೆ ಗ್ರಾಪಂನಲ್ಲಿ 65ರ ಹರೆಯದ ನಿರ್ಮಲಾ ಎಂಬವರಿಗೆ ಹಲ್ಲೆಗೈದ ಆಕೆಯ ಪುತ್ರಿ 35ರ ನೇತ್ರಾವತಿ ಎಂಬಾಕೆಯ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಿಂದೂ ಮಹಿಳಾ ಸಂರಕ್ಷಣಾ ವೇದಿಕೆಯ ವಿಭಾಗೀಯ ಅಧ್ಯಕ್ಷೆಯಾಗಿರುವ ರಮಿತಾ ಸೂರ್ಯವಂಶಿ ಎಂಬವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ನ.25ರಂದು ಮಧ್ಯಾಹ್ನ 1 ಗಂಟೆಗೆ ಮೂಡುಶೆಡ್ಡೆ ಗ್ರಾಪಂ ಎದುರು ತಾಯಿಗೆ ಮಗಳು ಹಲ್ಲೆ ನಡೆಸುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದುದು ನ.29ರ ಪೂ. 11ಕ್ಕೆ ತನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ […]
ಜಾರ್ಖಂಡ್‌ನಲ್ಲಿ ಜೆಎಂಎಂ, ಬಿಜೆಪಿ ಮೈತ್ರಿ ಸರ್ಕಾರ?

ನವದೆಹಲಿ: ಬಿಹಾರದಲ್ಲಿ ಮರಳಿ ಅಧಿಕಾರಕ್ಕೆ ಏರಿದ ಬೆನ್ನಲ್ಲೇ ಜಾರ್ಖಂಡ್‌ನಲ್ಲೂ ಎನ್‌ಡಿಎ ಸರ್ಕಾರ ರಚನೆಯಾಗುತ್ತಾ ಎಂಬ ಪ್ರಶ್ನೆ ಎದ್ದಿದೆ. ಮುಖ್ಯಮಂತ್ರಿ ಹೇಮಂತ್ ಸೊರೆನ್ ಮತ್ತು ಅವರ ಪತ್ನಿ ಕಲ್ಪನಾ ಅವರು ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂಬ ವರದಿಗಳ ನಡುವೆ, ರಾಜ್ಯದಲ್ಲಿ ಅಧಿಕಾರ ಬದಲಾವಣೆಯಾಗಬಹುದು ಎಂಬ ಊಹಾಪೋಹಗಳು ಹರಡಿವೆ. ಹೇಮಂತ್ ಸೊರೆನ್ ಮತ್ತು ಕಲ್ಪನಾ ಸೊರೆನ್ ಕಳೆದ ಹಲವು ದಿನಗಳಿಂದ ದೆಹಲಿಯಲ್ಲಿದ್ದಾರೆ. ಅವರು ಇಂದು ದೆಹಲಿಯಿಂದ ರಾಂಚಿಗೆ ಹಿಂತಿರುಗುವ ಸಾಧ್ಯತೆಯಿದೆ. ಕಾಂಗ್ರೆಸ್‌ನ 16 ಶಾಸಕರಲ್ಲಿ ಕನಿಷ್ಠ ಎಂಟು ಮಂದಿ […]
ನದಿಗೆ ಬಿದ್ದ ಏಳು ಮಂದಿ ಇದ್ದ ಕಾರು: ಮಸೀದಿ ಮೈಕ್‌ನಿಂದ ಎಚ್ಚರಿಕೆ ಕೊಟ್ಟು ರಕ್ಷಿಸಿದ ಮೌಲಾನ..!

ತ್ರಿಪುರ: ಮಸೀದಿಯ ಮೈಕ್‌ನಿಂದ ಕೂಗಲಾದ ಘೋಷಣೆಯಿಂದ ಏಳು ಮಂದಿಯ ಜೀವ ಉಳಿದ ಮಾನವೀಯ ಘಟನೆ ತ್ರಿಪುರದಲ್ಲಿ ನಡೆದಿದೆ. ಏಳು ಮಂದಿ ಇದ್ದ ಕಾರು ಅಸ್ಸಾಂ ತ್ರಿಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ರಸ್ತೆ ಬದಿಯ ನದಿಗೆ ಉರುಳಿ ಬಿದ್ದಿದೆ. ಡಿಸೆಂಬರ್ 1ರ ಬೆಳಿಗ್ಗೆ 4ಗಂಟೆ. ಶ್ರೀ ಭೂಮಿ ಜಿಲ್ಲೆಯ ನೀಲಾಂಬಜಾರ್ ಎಂಬಲ್ಲಿಯ ಬಹದ್ದೂರ್ ಪುರ ಜುಮಾ ಮಸೀದಿಯ ಪಕ್ಕ ಈ ಘಟನೆ ನಡೆದಿದೆ. ಜುಮಾ ಮಸೀದಿಯ ಇಮಾಮ್ ಮತ್ತು ಮದರಸ ಟೀಚರ್ ಆಗಿರುವ ಮೌಲಾನ ಅಬ್ದುಲ್ ಬಾಸಿತ್ ಅವರಿಗೆ […]
ಒಂದೇ ಕಂಪನಿಯ ವಾಚ್ ಕಟ್ಟಿ ಸಿಎಂ-ಡಿಸಿಎಂ ಒಗ್ಗಟ್ಟು ಪ್ರದರ್ಶನ?: Cartier ವಾಚಿನ ಬೆಲೆ ಎಷ್ಟು ಗೊತ್ತಾ?

ಬೆಂಗಳೂರು: ಈ ಹಿಂದೆ 2016 ಮುಖ್ಯಮಂತ್ರಿಯಾಗಿದ್ದಾಗ ಹ್ಯೂಬ್ಲೋಟ್ ವಾಚಿನಿಂದ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ಮತ್ತೊಮ್ಮೆ ಕಾರ್ಟಿಯರ್ ವಾಚಿನಿಂದ ವಿವಾದಕ್ಕೆ ಸಿಲುಕಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನಡುವೆ ಸಿಎಂ ಪಟ್ಟಕ್ಕಾಗಿ ನಡೆಯುತ್ತಿರುವ ಹಗ್ಗಜಗ್ಗಾಟಕ್ಕೆ ತಾತ್ಕಾಲಿಕ ಬ್ರೇಕ್ ಹಾಕುವಲ್ಲಿ ಹೈಕಮಾಂಡ್ ಯಶಸ್ವಿಯಾಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಇಂದು ಎರಡನೇ ಬಾರಿ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡುವ ಮೂಲಕ ಮತ್ತೆ ಒಗ್ಗಟ್ಟು ಪ್ರದರ್ಶಿಸಿದ್ದಾರೆ. […]
ಚಿಕ್ಕಮಗಳೂರಲ್ಲಿ ಹೈ ಅಲರ್ಟ್: ಕೊಟ್ಟಿಗೆಹಾರದಲ್ಲಿ ಪ್ರತಾಪ್ ಸಿಂಹ ಕಾರು ತಪಾಸಣೆ

ಚಿಕ್ಕಮಗಳೂರು: ದತ್ತಪೀಠದಲ್ಲಿ ದತ್ತಜಯಂತಿ ಆಚರಣೆ ಹಾಗೂ ಶೋಭಾಯಾತ್ರೆಯ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಚಿಕ್ಕಮಗಳೂರು ಪ್ರವೇಶಿಸಿದ ಮಾಜಿ ಎಂಪಿ ಪ್ರತಾಪ್ ಸಿಂಹ ಅವರ ಕಾರನ್ನೂ ಸಹ ಪೊಲೀಸರು ಪರಿಶೀಲಿಸಿದ್ದಾರೆ. ಮಂಗಳೂರಿನಿಂದ ಬರುತ್ತಿದ್ದ ಪ್ರತಾಪ್ ಸಿಂಹ ಅವರ ಕಾರನ್ನು ಚಿಕ್ಕಮಗಳೂರು ಗಡಿ ಗ್ರಾಮ ಕೊಟ್ಟಿಗೆಹಾರದ ಬಳಿ ಪೊಲೀಸರು ತಡೆದು ತಪಾಸಣೆ ಮಾಡಿದ್ದಾರೆ. ಪಿಎಸ್ಐ ರೇಣುಕಾ ನೇತೃತ್ವದಲ್ಲಿ ತಪಾಸಣೆ ನಡೆದಿದೆ. ತಪಾಸಣೆಗೆ ಮಾಜಿ ಸಂಸದರು ಸ್ಪಂದಿಸಿದ್ದಾರೆ. ದತ್ತಜಯಂತಿ ಅಂಗವಾಗಿ 28 ಚೆಕ್ ಪೋಸ್ಟ್‌ಗನ್ನು ಪೊಲೀಸರು ನಿರ್ಮಿಸಿದ್ದಾರೆ. […]
ರಾಮೇಶ್ವರಂ ಕೆಫೆ ಊಟದಲ್ಲಿ ಹುಳ ಪತ್ತೆ: ಪ್ರಕರಣ ದಾಖಲು

ಬೆಂಗಳೂರು: ಕೆಂಪೇಗೌಡ ಏರ್‌ಪೋರ್ಟ್‌ನ ರಾಮೇಶ್ವರಂ ಕೆಫೆ ಊಟದಲ್ಲಿ ಹುಳ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಫೆ ಮಾಲೀಕ ಹಾಗೂ ಮ್ಯಾನೇಜರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪ್ರಕರಣದಿಂದ ತಪ್ಪಿಕೊಳ್ಳಲು ಯತ್ನಿಸಿದ್ದ ಕೆಫೆ ಮಾಲೀಕರಾದ ದಿವ್ಯಾ, ರಾಘವೇಂದ್ರ ರಾವ್ ಹಾಗೂ ಮ್ಯಾನೇಜರ್ ಸುಮಂತ್ ವಿರುದ್ಧ ಸುಳ್ಳು ದೂರು ನೀಡಿ, ಮಾನಹಾನಿ ಮಾಡಿದ ಆರೋಪದಡಿ ಎಫ್‌ಐಆರ್ ದಾಖಲಾಗಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿರುವ ರಾಮೇಶ್ವರಂ ಕೆಫೆಯ ಊಟದಲ್ಲಿ ಹುಳ ಪತ್ತೆಯಾಗಿತ್ತು. ಈ ಕುರಿತು ಯುವಕರು ವಿಡಿಯೋ ಮಾಡಿದ್ದರು. ಇದೇ ಸಮಯಕ್ಕೆ ಕೆಫೆಗೆ ಹಣಕ್ಕೆ ಬೇಡಿಕೆಯಿಟ್ಟಿದ್ದ […]
ದೈವಕ್ಕೆ ಅವಮಾನ: ಬಾಲಿವುಡ್ ನಟ ರಣ್ವೀರ್ ಸಿಂಗ್ ವಿರುದ್ಧ ದೂರು ದಾಖಲು

ಬಾಲಿವುಡ್ ನಟ ರಣ್ವೀರ್ ಸಿಂಗ್ ಇತ್ತೀಚೆಗಷ್ಟೆ ಮುಕ್ತಾಯವಾದ ಗೋವಾ ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಕನ್ನಡದ ನಟ, ನಿರ್ದೇಶಕ ರಣ್ವೀರ್ ಸಿಂಗ್ ಅವರ ‘ಕಾಂತಾರ: ಚಾಪ್ಟರ್ 1’ ಸಿನಿಮಾವನ್ನು ಕೊಂಡಾಡುತ್ತಾ, ತುಸು ಅತಿರೇಕದ ವರ್ತನೆ ತೋರಿದರು. ರಿಷಬ್ ಶೆಟ್ಟಿಯ ನಟನೆಯನ್ನು ಹೊಗಳುತ್ತಾ, ಅನುಚಿತ ರೀತಿಯಲ್ಲಿ ದೈವದ ಅನುಕರಣೆ ಮಾಡಿದರು. ಅಷ್ಟು ಮಾತ್ರವೇ ಅಲ್ಲದೆ, ದೈವವನ್ನು ‘ಹೆಣ್ಣು ದೆವ್ವ’ ಎಂದು ಸಹ ಕರೆದರು. ರಣ್ವೀರ್ ಅವರ ಈ ನಡೆಗೆ ತೀವ್ರ ವಿರೋಧ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದೆ. ರಣ್ವೀರ್ ಸಿಂಗ್ ಅವರು ದೈವಕ್ಕೆ […]
First News ಕನ್ನಡ ಚಾನೆಲ್‌ಗೆ ಸೂಕ್ತ ಟ್ಯಾಗ್ ಲೈನ್ ನೀಡಿ iPhone 17 Pro ಗೆಲ್ಲಿ..!

ಬೆಂಗಳೂರು: ಲೋಕರ್ಪಣೆಗೊಂಡ ಕೆಲವೇ ದಿನಗಳಲ್ಲಿ ಕನ್ನಡ ಸುದ್ದಿ ಮಾಧ್ಯಮ ಜಗತ್ತಿನಲ್ಲಿ ವಿಭಿನ್ನ ಶೈಲಿಯ ಮೂಲಕ ಸದ್ದು ಮಾಡುತ್ತಿರುವ ಫಸ್ಟ್ ನ್ಯೂಸ್ ಕನ್ನಡ ಚಾನೆಲ್ ಗೆ ಟ್ಯಾಗ್ ಲೈನ್ ನೀಡಲು ನಿಮಗೊಂದು ಸುವರ್ಣಾವಕಾಶವಿದ್ದು, iPhone 17 PRO ಗೆಲ್ಲಬಹುದು. ಫಸ್ಟ್ ನ್ಯೂಸ್ ಜನರ ಚಾನೆಲ್ ಆಗಿದ್ದು, ನಿಮಗಾಗಿಯೇ ನಾವು ಅವಕಾಶಗಳನ್ನು ತೆರೆದಿಟ್ಟಿದ್ದೇವೆ. IPhone 17 pro ಗೆಲ್ಲಲು ಏನು ಮಾಡಬೇಕು?
ಚಿತ್ತಾಪುರ | ಭೀಮ ಪಥಸಂಚಲನ ಯಶಸ್ವಿ: 350ಕ್ಕೂ ಹೆಚ್ಚು ಜನ ಭಾಗಿ, ಪ್ರಿಯಾಂಕ ಖರ್ಗೆ ಪರ ಘೋಷಣೆ

ಕಲಬುರಗಿ: ಜಿಲ್ಲೆಯ ಚಿತ್ತಾಪುರ ಪಟ್ಟಣದಲ್ಲಿ ಸೋಮವಾರ ಮಧ್ಯಾಹ್ನ(ಡಿ1) ಪೂರ್ವ ನಿಯೋಜನೆಯಂತೆ ದಲಿತ ಪರ ಸಂಘಟನೆಗಳ ನೇತೃತ್ವದಲ್ಲಿ ‘ಭೀಮ ಪಥ ಸಂಚಲನ ಶಾಂತಿಯುತವಾಗಿ ಜರಗಿತು. ನೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕೋರ್ಟ್ ಮೆಟ್ಟಿಲು ಏರಿ ಆರ್ ಎಸ್ ಎಸ್ ನವರು ಇತ್ತೀಚಿಗೆ ಚಿತ್ತಾಪುರದಲ್ಲಿ ಪಥ ಸಂಚಲನೆ ನಡೆಸಿದ್ದರು. ಇದು ದೇಶದ ಗಮನವೂ ಸೆಳೆದಿತ್ತು. ಅದಕ್ಕೆ ವಿರುದ್ಧವಾಗಿ ದಲಿತ ಪರ ಸಂಘಟನೆಗಳು ಕೂಡ ಭೀಮ ಪಥ ಸಂಚಲನ ನಡೆಸುವುದಾಗಿ ತೊಡೆ ತಟ್ಟಿದವು. ಆದರೆ, ನ್ಯಾಯಲಯ ಬೇರೆ ಬೇರೆ ದಿನಾಂಕಗಳಂದು ಮಾಡಲು […]