Belthangady | ವಿದ್ಯಾರ್ಥಿನಿ ಅಪಹರಣ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್: ಪೊಲೀಸರ ತನಿಖೆಯಲ್ಲಿ ಬಯಲಾಯ್ತು ಸುಳ್ಳಿನ ಪ್ರಹಸನ!

ಮಂಗಳೂರು; ಬೆಳ್ತಂಗಡಿಯಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಕಾಲೇಜು ಓದುತ್ತಿದ್ದ ಅಪ್ರಾಪ್ತ ಯುವತಿಯ ಅಪಹರಣ ಯತ್ನ ಪ್ರಕರಣ ಪೊಲೀಸರ ತನಿಖೆಯಲ್ಲಿ ಠುಸ್ ಆಗಿದೆ. ವಿದ್ಯಾರ್ಥಿನಿಯೇ ತನ್ನ ಕೈಗೆ ಬ್ಲೇಡ್ ನಲ್ಲಿ ಗೀಚಿಕೊಂಡು ಅಪಹರಣ ಪ್ರಹಸನದ ಕತೆ ಕಟ್ಟಿದ್ದಾಳೆಂದು ಪೊಲೀಸರು ಪತ್ತೆ ಮಾಡಿದ್ದಾರೆ. ಕಾಶಿಬೆಟ್ಟು ಸರ್ಕಾರಿ ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿನಿಯನ್ನು ಸ್ಕೂಟರ್ ತಡೆದು ಕಾರಿನಲ್ಲಿ ಬಂದಿದ್ದ ಮುಸುಕುಧಾರಿಗಳು ಸುದೆಮುಗೇರು ಎಂಬಲ್ಲಿ ಕಿಡ್ನಾಪ್ ಮಾಡಲು ಯತ್ನಿಸಿದ್ದಾರೆ, ಈ ವೇಳೆ ತನ್ನ ಕೈಗೆ ಚೂರಿಯಿಂದ ಹಲ್ಲೆ ಮಾಡಿದ್ದಾರೆಂದು ಯುವತಿ ದೂರಿದ್ದು ಬೆಳ್ತಂಗಡಿ ಸರ್ಕಾರಿ […]
ಎಪ್ಸ್ಟೀನ್ ಬಳಿ ಪತ್ತೆಯಾದ ಕಾಬಾದ ಪವಿತ್ರ ಬಟ್ಟೆ ‘ಕಿಸ್ವಾ’: ಆಕ್ರೋಶ ವ್ಯಕ್ತಪಡಿಸಿದ ಮುಸ್ಲಿಮರು

ವಾಷಿಂಗ್ಟನ್: ಲೈಂಗಿಕ ಅಪರಾಧಿ ಹಾಗೂ ಮಕ್ಕಳನ್ನು ಶೋಷಿಸಿದ ಜೆಫ್ರಿ ಎಪ್ಸ್ಟೀನ್‌ಗೆ ಸಂಬಂಧಿಸಿದ ಅಮೆರಿಕ ನ್ಯಾಯ ಇಲಾಖೆಯ ಇತ್ತೀಚಿನ ದಾಖಲೆಗಳ ಬಿಡುಗಡೆಯು ಜಾಗತಿಕ ಮುಸ್ಲಿಂ ಸಮುದಾಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಬಿಡುಗಡೆಯಾದ ಫೈಲ್‌ಗಳಲ್ಲಿ ಇರುವ ಚಿತ್ರವೊಂದರಲ್ಲಿ, ಎಪ್ಸ್ಟೀನ್ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಬಿಲಿಯನೇರ್ ಸುಲ್ತಾನ್ ಅಹ್ಮದ್ ಬಿನ್ ಸುಲಾಯೆಮ್ ಅವರನ್ನು ಭೇಟಿಯಾಗುವ ವೇಳೆ ಕಿಸ್ವಾ ಎಂದು ಕರೆಯಲ್ಪಡುವ ಕಾಬಾದ ಮೇಲೆ ಹಾಕುವ ಪವಿತ್ರ ಬಟ್ಟೆಯ ತುಣುಕನ್ನು ನೆಲದ ಮೇಲೆ ಇಟ್ಟಿರುವುದು ಕಾಣಿಸುತ್ತದೆ. ಚಿತ್ರದಲ್ಲಿ ಇಬ್ಬರೂ ಆ ಬಟ್ಟೆಯ ಮೇಲೆ […]
ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೇಲೆ ಸುಖಾಸುಮ್ಮನೆ ಕೇಸ್ ಹಾಕುವಂತಿಲ್ಲ: ಡಿಜಿಪಿ ಎಂ.ಎ. ಸಲೀಮ್ ಹೊಸ ಮಾರ್ಗಸೂಚಿ

ಬೆಂಗಳೂರು: ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗಳಲ್ಲಿ “ಪ್ರಾಥಮಿಕ ವಿಚಾರಣೆ ನಡೆಸದೆ ಏಕಾಏಕಿ” ಎಫ್‌ಐಆರ್ ದಾಖಲಿಸುವುದಕ್ಕೆ ರಾಜ್ಯ ಪೊಲೀಸ್ ಮಹಾನಿರ್ದೇಶಕ (DG & IGP) ಎಂ.ಎ. ಸಲೀಮ್ ಬ್ರೇಕ್ ಹಾಕಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಮತ್ತು ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳನ್ನು ಪಾಲಿಸುವ ಉದ್ದೇಶದಿಂದ ಫೆಬ್ರವರಿ 7 ರಂದು ಹೊಸ ಸುತ್ತೋಲೆಯನ್ನು ಹೊರಡಿಸಲಾಗಿದ್ದು, ರಾಜ್ಯದ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಹೊಸ ಮಾರ್ಗಸೂಚಿಯ ಪ್ರಕಾರ, ಸಾಮಾಜಿಕ ಮಾಧ್ಯಮಗಳಲ್ಲಿನ ಆಕ್ಷೇಪಾರ್ಹ ಪೋಸ್ಟ್‌ಗಳ ಬಗ್ಗೆ […]
ತುಳು, ಮಲಯಾಳಂ ಮಾತನಾಡುತ್ತಿದ್ದ ಪ್ರಖ್ಯಾತ ಇನ್‌ಫ್ಲುಯೆನ್ಸರ್ ಚಿನ್ನು ಪಾಪು ಸಾವಿಗೆ ಶರಣು!

ಅಡೂರು: ತುಳು ಹಾಗೂ ಮಲಯಾಳಂ ಭಾಷೆ ಮಾತನಾಡುತ್ತಿದ್ದ ಕಾಸರಗೋಡಿನ ಪ್ರಖ್ಯಾತ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆತ್ಮಹತ್ಯೆ ಮಾಡಿಕೊಡಿದ್ದಾರೆ. ಆಡೂರು ಮೂಲದ ಚಿನ್ನು ಪಾಪು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅವರಗೆ 24 ವರ್ಷ ವಯಸ್ಸಾಗಿತ್ತು. ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ. ಅವರನ್ನ ಆಸ್ಪತ್ರೆಗೆ ದಾಖಲು ಮಾಡುವ ವೇಳೆಗೆ ಅವರು ಸಾವು ಕಂಡಿರುವುದು ದೃಢವಾಗಿತ್ತು. ಘಟನೆಯ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇಂದು ಮಧ್ಯಾಹ್ನ ಈ ಘಟನೆ ನಡೆದಿದೆ. ಮೃತ ಮಹಿಳೆಯ ನಿಜವಾದ ಹೆಸರು […]
ಸಾವರ್ಕರ್‌ಗೆ ಭಾರತರತ್ನ ಕೊಟ್ರೆ ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದವರಿಗೆ ಮಾಡೋ ಅಪಮಾನ: ರಿಜ್ವಾನ್ ಅರ್ಷದ್
ಬೆಂಗಳೂರು : ಸಂಪುಟ ವಿಸ್ತರಣೆ ಆಗಲೇಬೇಕು. ಹೊಸಬರಿಗೆ ಅವಕಾಶ ಸಿಗಬೇಕು ಎಂದು ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಒತ್ತಾಯಿಸಿದ್ದಾರೆ. ಈ ಕುರಿತು ಬೆಂಗಳೂರಲ್ಲಿ ಮಾತನಾಡಿದ ಅವರು, ಸರ್ಕಾರ ಬಂದು ಮೂರು ವರ್ಷ ಆಗಿದೆ. ಬದಲಾವಣೆ ಒಳ್ಳೆಯದು ಎಂದಿದ್ದಾರೆ. ಸಿಎಂ ಬದಲಾವಣೆ, ಪವರ್ ಶೇರಿಂಗ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಈ ವಿಚಾರವಾಗಿ ಸಾಕಷ್ಟು ಚರ್ಚೆಗಳಾಗಿವೆ. ನಾನು ಮಾತನಾಡಿ ವಿವಾದ ದೊಡ್ಡದಾಗಿಸಲ್ಲ. ಸಿದ್ದರಾಮಯ್ಯ ನಮ್ಮ ಲೀಡರ್, ಅವರ ಕೆಲಸಗಳು ಪಕ್ಷಕ್ಕೆ ಬಲ ತಂದಿವೆ. ಅವರಿಗೆ ನಾನೊಬ್ಬ ಸಪೋರ್ಟ್ ಮಾಡಿದರೆ ಏನೂ […]
ಸಾವರ್ಕರ್‌ಗೆ ಮಾತ್ರವಲ್ಲ, ಗಾಂಧಿಯನ್ನು ಹತ್ಯೆಗೈದ ಗೋಡ್ಸೆಗೂ ಒಂದು ದಿನ ಬಿಜೆಪಿ ಭಾರತ ರತ್ನ ಕೊಡಿಸುತ್ತದೆ: ಓವೈಸಿ ಕಿಡಿ

ಮೆಹಬೂಬನಗರ (ತೆಲಂಗಾಣ): ವಿ.ಡಿ. ಸಾವರ್ಕರ್ ಅವರಿಗೆ ಭಾರತ ರತ್ನ ನೀಡಬೇಕೆಂಬ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಬೇಡಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ, ‘ಗಾಂಧಿಯನ್ನು ಹತ್ಯೆಗೈದ ಗೋಡ್ಸೆಗೂ ಒಂದು ದಿನ ಬಿಜೆಪಿ ಭಾರತ ರತ್ನ ಕೊಡಿಸುತ್ತದೆ’ ಎಂದಿದ್ದಾರೆ. ‘1857ರಲ್ಲಿ ಬ್ರಿಟಿಷರ ವಿರುದ್ಧ ನಡೆದ ಹೋರಾಟದಲ್ಲಿ ಹೈದರಾಬಾದ್‌ನ ಮಕ್ಕಾ ಮಸೀದಿಯ ಮೌಲ್ವಿ ಅಲ್ಲಾವುದ್ದೀನ್ ಅವರು ಬ್ರಿಟಿಷರ ವಿರುದ್ಧ ಹೋರಾಡಿದ್ದರು. ಅವರನ್ನು ಔರಂಗಾಬಾದ್‌ನಲ್ಲಿ ಸೆರೆ ಹಿಡಿಯಲಾಯಿತು. ನಿಜಾಮರಿಗೆ ಬ್ರಿಟಿಷರ ರಕ್ಷಣೆ ಇತ್ತು. ಆದರೆ ಮೌಲ್ವಿ ಅಲ್ಲಾವುದ್ದೀನ್ ಅವರನ್ನು […]
ತೇಜಸ್ವಿ ಸೂರ್ಯ ಬಂಧನ ಮಾಡಿಸಿದ ಸಿದ್ದರಾಮಯ್ಯ ಪುಕ್ಕಲ ಸಿಎಂ: ಪ್ರತಾಪ್ ಸಿಂಹ ಕಿಡಿ

ಈಗ ಖಜಾನೆ ಖಾಲಿಯಾಗಿದೆ ಎಂದು ಖಾಲಿ ಡಬ್ಬಿ ಹಿಡಿದು ತೇಜಸ್ವಿ ಸೂರ್ಯ ಸಾಂಕೇತಿಕವಾಗಿ ಪ್ರತಿಭಟನೆ ಮಾಡಿದ್ದಾರೆ. ಅವರನ್ನು ಬಂಧನ ಮಾಡುವ ಕೆಲಸವನ್ನು ಈ ಸರ್ಕಾರ ಮಾಡಿದೆ. ಅವರ ವೈಫಲ್ಯ ತೋರಿಸಿದವರನ್ನು ಯಾವ ರೀತಿ ಹತ್ತಿಕ್ಕುತ್ತಾರೆ ಎನ್ನುವುದಕ್ಕೆ ಇದೇ ಉದಾಹರಣೆ. ತೇಜಸ್ವಿ ಸೂರ್ಯ ಸಮಸ್ತ ಬೆಂಗಳೂರಿಗರ ಪರವಾಗಿ ಹೋರಾಟ ಮಾಡಿದ್ದಾರೆ ಎಂದರು. ಸಿದ್ದರಾಮಯ್ಯನವರು 17 ಬಜೆಟ್ ಮಂಡನೆ ಮಾಡಿ ವಿಶ್ವ ಪ್ರಖ್ಯಾತ ಅರ್ಥಶಾಸ್ತ್ರಜ್ಞರು ಆಗಿದ್ದಾರೆ. ಖಜಾನೆ ಖಾಲಿಯಾಗಿ ಅಭಿವೃದ್ಧಿ ಕೆಲಸಕ್ಕೆ ಹಣ ಕೊಡದ ಪರಿಸ್ಥಿತಿ ಇದೆ. ಬರೀ ಸಭೆ […]
ಮೆಟ್ರೊದಲ್ಲಿ Girlfriend ಜೊತೆ ಸಿಕ್ಕಿಬಿದ್ದ ಮಗ: ನಿಲ್ದಾಣದಲ್ಲೇ ನಿಶ್ಚಿತಾರ್ಥ ಮಾಡಿದ ತಾಯಿ

ನವದೆಹಲಿ: ದೆಹಲಿಯ ಮೆಟ್ರೋ ನಿಲ್ದಾಣದಲ್ಲಿ ಗೆಳತಿ ಜೊತೆಗೆ ಸಿಕ್ಕಿಬಿದ್ದ ಪುತ್ರನಿಗೆ ಆತನ ತಾಯಿ ನಿಲ್ದಾಣದಲ್ಲಿಯೇ ನಿಶ್ಚಿತಾರ್ಥ ಮಾಡಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ವೀಡಿಯೋದಲ್ಲಿ ಮೆಟ್ರೊ ನಿಲ್ದಾಣವೊಂದರಲ್ಲಿ ಗೆಳತಿ ಜೊತೆಗೆ ಪುತ್ರ ಕುಳಿತಿರುವುದನ್ನು ನೋಡಿದ ಯುವಕನ ತಾಯಿ, ಕೆಲ ಕ್ಷಣ ಆತನೊಂದಿಗೆ ದಬಾಯಿಸಿರುವುದು ಕಂಡು ಬಂದಿದೆ. ಬಳಿಕ ಕೂಡಲೇ ತಾವು ತಂದಿದ್ದ ಹೂ–ಹಣ್ಣು, ಸಿಹಿ ಮುಂತಾದವುಗಳನ್ನು ಯುವತಿಗೆ ಕೊಟ್ಟು ನಿಶ್ಚಿತಾರ್ಥ ಮಾಡಿಸಿದ್ದಾರೆ. ಈ ವೇಳೆ ಯುವಕ ಗೊಣಗುತ್ತಾ ಅಮ್ಮಾ ಏನಮ್ಮಾ ಇದು ಎಂದು […]
ವಿವಿಧ ಇಲಾಖೆಗಳಲ್ಲಿ ಯತೀಂದ್ರ ಸಿದ್ದರಾಮಯ್ಯ ಹಸ್ತಕ್ಷೇಪ: ಕೆಜೆ.ಜಾರ್ಜ್ ಬಳಿಕ ಶಾಸಕ ತನ್ವೀರ್ ಸೇಠ್ ಬಹಿರಂಗ ಅಸಮಾಧಾನ..!

ಮೈಸೂರು: ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಹಸ್ತಕ್ಷೇಪ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಸಚಿವ ಕೆ.ಜೆ. ಜಾರ್ಜ್ ನಂತರ ಕಾಂಗ್ರೆಸ್ನ ಮತ್ತೊಬ್ಬ ನಾಯಕ ಅಸಮಾಧಾನ ಹೊರ ಹಾಕಿದ್ದಾರೆ. ಪೊಲೀಸ್ ಠಾಣೆ ಉದ್ಘಾಟನೆ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಮತ್ತು ನರಸಿಂಹರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಈ ಬಗ್ಗೆ ಗೃಹ ಸಚಿವ ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿ ಹೊರ ನಡೆಯಲು ಮುಂದಾದ ಘಟನೆ ನಡೆದಿದೆ. ಈ ವೇಳೆ ಸಚಿವ ಪರಮೇಶ್ವರ್ ತನ್ವೀರ್ಸೇಠ್ ಮನವೊಲಿಕೆ ಯತ್ನ ಮಾಡಿದ್ದು, ಜೊತೆಗೆ ಶಾಸಕ […]
ಬೆಳ್ತಂಗಡಿ | ಕಾಲೇಜು ತೆರಳುತ್ತಿದ್ದ ಅಪ್ರಾಪ್ತ ಯುವತಿಯ ಅಪಹರಣ ಯತ್ನ, ಓಮ್ನಿ ಕಾರಿನಲ್ಲಿ ಅಡ್ಡಗಟ್ಟಿ ಕಿಡ್ನಾಪ್ ಕೃತ್ಯ ವಿಫಲ

ಬೆಳ್ತಂಗಡಿ: ಶಾಲಾ ಬಾಲಕಿಯೊಬ್ಬಳನ್ನು ಮಾರುತಿ ಓಮ್ನಿ ಕಾರಿನಲ್ಲಿ ಬಂದ ಅಪರಿಚಿತ ತಂಡವೊಂದು ಅಪಹರಿಸಲು ಯತ್ನಿಸಿದ ಬೆಚ್ಚಿಬೀಳಿಸುವ ಘಟನೆ ಸೋಮವಾರ ಬೆಳಿಗ್ಗೆ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದುಷ್ಕರ್ಮಿಗಳ ಕೃತ್ಯವನ್ನು ಪ್ರತಿರೋಧಿಸಿದ ಬಾಲಕಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದ್ದು, ಅದೃಷ್ಟವಶಾತ್ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಇಲ್ಲಿನ 16 ವರ್ಷದ ಬಾಲಕಿಯು ಇಂದು ಬೆಳಿಗ್ಗೆ ಸುಮಾರು 8:30ರ ವೇಳೆಗೆ ಸ್ಕೂಟಿಯಲ್ಲಿ ಶಾಲೆಗೆ ತೆರಳುತ್ತಿದ್ದಳು. ಮನೆಯಿಂದ ಸುಮಾರು 300 ಮೀಟರ್ ಕ್ರಮಿಸುತ್ತಿದ್ದಂತೆ, ಮಾರುತಿ ಓಮ್ನಿ ವಾಹನದಲ್ಲಿ ಬಂದ ಮೂವರು ಅಪರಿಚಿತರು […]