Flash News

‘ಕುಂಭ ಮೇಳದ ಹುಡುಗಿ’ ಮೊನಾಲಿಸಾಳನ್ನು ಮದುವೆಯಾದ ಹುಡುಗ ಯಾರು?

ತಿರುವನಂತಪುರ: ಮಹಾಕುಂಭಮೇಳದ ಮೂಲಕ ‘ಕುಂಭ ಮೇಳದ ಹುಡುಗಿ’ ಎಂದೇ ಖ್ಯಾತರಾಗಿದ್ದ 18 ವರ್ಷದ ಮೊನಾಲಿಸಾ ಭೋಸ್ಲೆ ಅವರು ತಮ್ಮ ಗೆಳೆಯ ಫರ್ಮಾನ್ ಖಾನ್ ಅವರೊಂದಿಗೆ ಕೇರಳದ ಪೂವಾರ್‌ನ ಅರುಮನೂರು ಶ್ರೀ ನೈನಾರ್ ದೇವ ದೇವಾಲಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ವರದಿಗಳ ಪ್ರಕಾರ, ಮಧ್ಯಪ್ರದೇಶದ ಇಂದೋರ್ ಮೂಲದ ಮೊನಾಲಿಸಾ ಮತ್ತು ಮಹಾರಾಷ್ಟ್ರದ ಫರ್ಮಾನ್ ಅವರು ಆರು ತಿಂಗಳ ಹಿಂದೆ ಫೇಸ್‌ಬುಕ್ ಮೂಲಕ ಪರಿಚಿತರಾಗಿದ್ದರು.ಇಬ್ಬರೂ ಭಿನ್ನ ಧರ್ಮೀಯರಾಗಿರುವುದರಿಂದ ಮೊನಾಲಿಸಾ ಅವರ ತಂದೆ ಜೈ ಸಿಂಗ್ ಭೋಸ್ಲೆ ಅವರಿಂದ ಮದುವೆಗೆ ತೀವ್ರ […]

ಫರ್ಮಾನ್ ಖಾನ್ ಜೊತೆ ಪ್ರೀತಿಗೆ ವಿರೋಧ; ಕೇರಳದಲ್ಲಿ ಆಶ್ರಯ ಪಡೆದ ಕುಂಭಮೇಳದ ಮೊನಾಲಿಸಾ!

ಕೇರಳ: ಪ್ರಯಾಗ್​ರಾಜ್​ನಲ್ಲಿ ನಡೆದ ಮಹಾಕುಂಭಮೇಳದಲ್ಲಿ ಕಾಣಿಸಿಕೊಂಡು ಫೇಮಸ್​ ಆಗಿದ್ದ ನಿಲಗಣ್ಣಿನ ಸುಂದರಿ ಮೊನಾಲಿಸಾ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ರುದ್ರಾಕ್ಷಿ ಮಣಿಗಳನ್ನು ಮಾರಿಕೊಂಡಿದ್ದ ಹುಡುಗಿ ರಾತ್ರೋರಾತ್ರಿ ಸೋಶಿಯಲ್​ ಮೀಡಿಯಾದಲ್ಲಿ ಸಂಚಲನ ಮೂಡಿಸಿ ಫೇಮಸ್​ ಆಗಿದ್ದ ಮೊನಾಲಿಸಾ ಭೋಸ್ಲೆ, ಕೇರಳದ ತಿರುವನಂತಪುರಂನ ಥಂಪನೂರು ಪೊಲೀಸ್ ಠಾಣೆಯಲ್ಲಿ ಆಶ್ರಯ ಪಡೆದಿದ್ದಾರೆ. ಮನೆಯವರು ಗೆಳೆಯ ಫರ್ಮಾನ್​ ಖಾನ್ ಜೊತೆಗಿನ ಪ್ರೀತಿ ವಿರೋಧಕ್ಕಾಗಿ ರಕ್ಷಣೆಗಾಗಿ ಕೇರಳಕ್ಕೆ ಬಂದು ಆಶ್ರಯ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕುಂಭಮೇಳದ ವೈರಲ್ ಬ್ಯೂಟಿ ಮೊನಾಲಿಸಾ ಭೋಸ್ಲೆ ತನ್ನ ಗೆಳೆಯ […]

ದೇವಾಲಯಕ್ಕೂ ತಟ್ಟಿದ ಮಧ್ಯಪ್ರಾಚ್ಯ ಸಂಘರ್ಷ: ಅನ್ನಪ್ರಸಾದ ಸೇವೆ ತಾತ್ಕಾಲಿಕ ಸ್ಥಗಿತ

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ತಾರಕಕ್ಕೇರಿರುವ ಸಂಘರ್ಷದ ಪರಿಣಾಮ ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್​ಗಳ ತೀವ್ರ ಕೊರತೆ ಉಂಟಾಗಿದೆ. ಸದ್ಯ ಅದರ ಬಿಸಿ ಬೆಂಗಳೂರಿನ ಪ್ರಸಿದ್ಧ ಬನಶಂಕರಿ ದೇವಾಲಯಕ್ಕೂ ತಟ್ಟಿದೆ. ವಾಣಿಜ್ಯ ಬಳಕೆಯ ಸಿಲಿಂಡರ್ ಪೂರೈಕೆಯಲ್ಲಿ‌ ವ್ಯತ್ಯಯವಾಗುತ್ತಿರುವ ಹಿನ್ನೆಲೆಯಲ್ಲಿ, ನಿತ್ಯದ ಅನ್ನಪ್ರಸಾದ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ. ನಿತ್ಯವೂ ದೇವಾಲಯದಲ್ಲಿ 3-4 ಸಾವಿರ ಜನರಿಗೆ ಪ್ರಸಾದ ವಿತರಣೆ ಮಾಡಲಾಗುತ್ತಿತ್ತು. ಬೆಳಗ್ಗೆ ಹಾಗೂ ಸಂಜೆ ಪೊಂಗಲ್, ಪುಳಿಯೊಗರೆ, ರೈಸ್ ಬಾತ್ ಹಾಗೂ ಮಧ್ಯಾಹ್ನ ಅನ್ನ ಸಾಂಬರ್ ಹಾಗೂ ಸಂಜೆ ಸಹ ಪ್ರಸಾದ ನೀಡಲಾಗುತ್ತಿತ್ತು. ಪ್ರತಿನಿತ್ಯ […]

ಹೆಂಡತಿಯ ಕಾಮದಾಟಕ್ಕೆ ಅರ್ಚಕ ಬಲಿ; ಪತ್ನಿಯ ಪ್ಲ್ಯಾನ್‌ನಂತೆ ಪ್ರಿಯಕರನಿಂದ ಕೊಲೆ, ಲವ್ವರ್ಸ್‌ ಅರೆಸ್ಟ್

ಮಂಡ್ಯ: ಅರ್ಚಕ ಅನುಮಾನಾಸ್ಪದವಾಗಿ ಸಾವನ್ನಪಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ತನ್ನ ಕಾಮದಾಟಕ್ಕೆ ಅಡ್ಡಿಯಾಗಬಾರದೆಂದು ಪ್ರಿಯಕರನಿಂದಲೇ ಪತಿಯನ್ನು ಕೊಲೆ ಮಾಡಿಸಿರುವ ಘಟನೆ ಮಂಡ್ಯದ (Mandya) ಮರಳಗಾಲ ಬಳಿ ನಡೆದಿದೆ. ಮೃತ ಪತಿಯನ್ನು ಸಿದ್ದಲಿಂಗಪ್ಪ ಎಂದು ಗುರುತಿಸಲಾಗಿದ್ದು, ಅರ್ಚಕನಾಗಿ ಕೆಲಸ ಮಾಡುತ್ತಿದ್ದ. ಆರೋಪಿ ಪತ್ನಿ ಶಾಲಿನಿ ಹಾಗೂ ಪ್ರಿಯಕರನನ್ನು ಹರೀಶ್ ಎನ್ನಲಾಗಿದೆ. ಸಿದ್ದಲಿಂಗಪ್ಪ ಹಾಗೂ ಶಾಲಿನಿಗೆ ಎರಡು ಮಕ್ಕಳಿದ್ದವು ಎಂದು ತಿಳಿದುಬಂದಿದೆ ಮಾ.6ರಂದು ಈ ಕೃತ್ಯ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶಾಲಿನಿ ಹಾಗೂ ಅದೇ ಗ್ರಾಮದ ಹರೀಶ್ ಅಕ್ರಮ […]

ನಾಚಿಕೆಯಾಗಬೇಕು…! ಟಿ20 ವಿಶ್ವಕಪ್ ಗೆಲ್ಲಿಸಿದ ಗೌತಮ್ ಗಂಭೀರ್ ಮೇಲೆ ಕಿಡಿಕಾರಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ!

ಅಹಮದಾಬಾದ್: ಟಿ20 ವಿಶ್ವಕಪ್ ಗೆದ್ದ ಖುಷಿಯಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಮತ್ತು ಐಸಿಸಿ ಅಧ್ಯಕ್ಷ ಜಯ್ ಶಾ ಟ್ರೋಫಿಯೊಂದಿಗೆ ಅಹಮದಾಬಾದ್‌ನ ಹನುಮಾನ್ ದೇವಸ್ಥಾನಕ್ಕೆ ಹೋಗಿದ್ದಕ್ಕೆ ಮಾಜಿ ಕ್ರಿಕೆಟಿಗ ಹಾಗೂ ತೃಣಮೂಲ ಕಾಂಗ್ರೆಸ್ ಸಂಸದ ಕೀರ್ತಿ ಆಜಾದ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ವಿಶ್ವಕಪ್ ಟ್ರೋಫಿಯನ್ನು ಒಂದು ನಿರ್ದಿಷ್ಟ ಧರ್ಮದ ಗೆಲುವು ಎಂದು ಬಿಂಬಿಸಬಾರದು ಎಂದು ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ವಿಶ್ವಕಪ್ ಮುಡಿಗೇರಿಸಿಕೊಂಡಿತ್ತು. […]

ಡಿಕೆಶಿ ಕೆಪಿಸಿಸಿ ಸಾರಥ್ಯಕ್ಕೆ 6 ವರ್ಷ: ಡಿಸಿಎಂ ಭೇಟಿಯಾಗಿ ಶುಭಕೋರಿದ ಇನಾಯತ್ ಅಲಿ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಅವರು ಮಾರ್ಚ್ 10 (ಇಂದು) 6 ವರ್ಷ ಪೂರೈಸಿದ್ದಾರೆ. ಈ ಹಿನ್ನೆಲೆ ಕೆಪಿಸಿಸಿ ಕಾರ್ಯದರ್ಶಿ ಇನಾಯತ್ ಅಲಿ ಡಿಸಿಎಂ ಭೇಟಿಯಾಗಿ ಶುಭಕೋರಿದ್ದಾರೆ‌. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಇನಾಯತ್ ಅಲಿ,ಕೆಪಿಸಿಸಿ ಅಧ್ಯಕ್ಷರಾಗಿ ಯಶಸ್ವಿ 6 ವರ್ಷ ಪೂರೈಸಿರುವ ಮಾನ್ಯ ಉಪ ಮುಖ್ಯಮಂತ್ರಿಗಳು, ನಮ್ಮ ನಾಯಕರಾದ ಸನ್ಮಾನ್ಯ ಶ್ರೀ DK Shivakumar ಅವರನ್ನು ಇಂದು ಭೇಟಿಯಾಗಿ ಶುಭಾಶಯ ಕೋರಲಾಯಿತು. ಪಕ್ಷ ಸಂಘಟನೆ, ಸೈದ್ಧಾಂತಿಕ ಬದ್ಧತೆಯೊಂದಿಗೆ ತಮ್ಮ ದಿಟ್ಟ ನಾಯಕತ್ವದ […]

ಬಂಟ್ವಾಳ: ಬಸ್ ನಲ್ಲಿ 20 ಲಕ್ಷ ರೂ. ಮೌಲ್ಯದ ಚಿನ್ನ ಕಳವು ಪ್ರಕರಣ: ಆರೋಪಿ ಬಂಧನ

ಬಂಟ್ವಾಳ: ಸುಮಾರು ಐದು ತಿಂಗಳ ಹಿಂದೆ ಬಸ್ ನಲ್ಲಿ ಬ್ಯಾಗ್‌ನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದ ಪ್ರಕರಣವನ್ನು ಭೇದಿಸುವಲ್ಲಿ ಬಂಟ್ವಾಳ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಮೂಲದ ಆರೋಪಿಯನ್ನು ಬಂಧಿಸಿ, ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಘಟನೆಯ ಹಿನ್ನೆಲೆ2025ರ ನವೆಂಬರ್ 19ರಂದು ಬ್ರಹ್ಮಾವರ ಮೂಲದ ದಂಪತಿಗಳು ದುರ್ಗಾಂಬಾ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ಕುದ್ರೆಬೆಟ್ಟು ಎಂಬಲ್ಲಿರುವ ‘ಸಮುದ್ರ ಹೋಟೆಲ್’ ಬಳಿ ಬಸ್ ನಿಂತಿದ್ದ ಸಂದರ್ಭದಲ್ಲಿ, ದಂಪತಿಗಳ ಬ್ಯಾಗ್‌ನಲ್ಲಿದ್ದ 180 ಗ್ರಾಂ ತೂಕದ […]

ದಾವಣಗೆರೆ ದಕ್ಷಿಣ ಕ್ಷೇತ್ರದ ಬಗ್ಗೆ ಮಾತಾಡಲು ಜಮೀರ್‌ ಯಾರು?: ಎಸ್‌.ಎಸ್.ಮಲ್ಲಿಕಾರ್ಜುನ್‌

ದಾವಣಗೆರೆ: ಶಾಮನೂರು ಶಿವಶಂಕರಪ್ಪ ನಿಧನದಿಂದ ತೆರವಾಗಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಘೋಷಣೆಗೂ ಮುನ್ನವೇ ಕಾಂಗ್ರೆಸ್‌ನಲ್ಲಿ ಆಕ್ರೋಶ ಭುಗಿಲೆದ್ದಿದ್ದು ಸಚಿವರಾದ ಜಮೀರ್ ಖಾನ್ ಮತ್ತು ಎಸ್‌.ಎಸ್.ಮಲ್ಲಿಕಾರ್ಜುನ್‌ ಮಾತಿನ ಕದನ ನಡೆದಿದೆ. ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ಕೊಡಬೇಕೆಂಬ ಸಚಿವ ಜಮಿರ್ ಖಾನ್ ಮಾತಿಗೆ ದಾವಣಗೆರೆಯಲ್ಲಿ ತಿರುಗೇಟು ನೀಡಿರುವ ಸಚಿವ ಮಲ್ಲಿಕಾರ್ಜುನ್, ಉಪಚುನಾವಣಾ ಸಮಿತಿಯ ಸಂಚಾಲಕ ಮಂಜುನಾಥ ಭಂಡಾರಿ ಅವರು ತೀರ್ಮಾನಿಸುತ್ತಾರೆ. ದಾವಣಗೆರೆ ಕ್ಷೇತ್ರದ ಬಗ್ಗೆ ನಿರ್ಧಾರ ಮಾಡಲು ಇವನ್ಯಾರು ಎಂದೆಲ್ಲ ಏಕವಚನದಲ್ಲೇ ಜಮೀರ್ ವಿರುದ್ಧ ಹರಿಹಾಯ್ದಿದ್ದಾರೆ. ಅಲ್ಪಸಂಖ್ಯಾತರು ನನ್ನನ್ನೇ […]

ಮಗುವಿನ ಕತ್ತು ಹಿಸುಕಿ ದಂಪತಿ ಆತ್ಮಹತ್ಯೆ: ಪವಾಡಸದೃಶ ರೀತಿಯಲ್ಲಿ ಬದುಕುಳಿದ 2 ವರ್ಷ ಪಾಪು

ಮಂಡ್ಯ: ಕೌಟುಂಬಿಕ ಕಲಹಕ್ಕೆ 2 ವರ್ಷದ ಮಗುವನ್ನು ಕತ್ತು ಹಿಸುಕಿ, ಬಳಿಕ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ (Suicide) ಶರಣಾಗಿದ್ದಾರೆ. ಆದರೆ ಅಸ್ವಸ್ಥಗೊಂಡಿದ್ದ ಮಗು ಅದೃಷ್ಟವಶಾತ್ ಪವಾಡದಂತೆ ಬದುಕುಳಿದಿದ್ದು, ಇದೀಗ ತಂದೆ ತಾಯಿ ಇಲ್ಲದೇ ಅನಾಥವಾಗಿದೆ. ಈ ಹೃದಯ ವಿದ್ರಾವಕ ಘಟನೆ ಮಂಡ್ಯದ (Mandya) ಕೆ.ಆರ್.ಪೇಟೆ (KR Pete) ಪಟ್ಟಣದಲ್ಲಿ ನಡೆದಿದೆ. ಹೊಸಕೋಟೆ ಗ್ರಾಮದ ದರ್ಶನ್, ದಿವ್ಯಶ್ರೀ ಆತ್ಮಹತ್ಯೆ ಮಾಡಿಕೊಂಡ ದಂಪತಿ. ಹೊಸಕೋಟೆ ಗ್ರಾಮದ ದರ್ಶನ್, ದಿವ್ಯಶ್ರೀ ಕಳೆದ ಮೂರು ವರ್ಷದ‌ ಹಿಂದೆ ವಿವಾಹವಾಗಿದ್ದರು. ಈ ದಂಪತಿಗೆ ಎರಡು ವರ್ಷದ ಮಗುವಿನೊಂದಿಗೆ ಮಂಡ್ಯದ ಕೆ.ಆರ್.ಪೇಟೆಯ ಜಯನಗರ […]

‘ಮುಸ್ಲಿಮರು ಅಥವಾ ಕ್ರೈಸ್ತರು ನಮ್ಮನ್ನು ಸೋಲಿಸಿದ್ದಲ್ಲ, ಹಿಂದೂಗಳೇ, RSS ನ್ನು ಮುಗಿಸುತ್ತೇವೆ ಎಂದು ಅಂದುಕೊಂಡರೆ ಅದು ಭ್ರಮೆ’: ಅನಂತ ಕುಮಾರ್ ಹೆಗಡೆ

ಭಟ್ಕಳ: ಕಳೆದ ಲೋಕಸಭೆ ಚುನಾವಣೆ ಟಿಕೆಟ್ ಕೈತಪ್ಪಿದ ನಂತರ ಸಾರ್ವಜನಿಕ ಜೀವನದಿಂದ ದೂರ ಉಳಿದಿದ್ದರು ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ. ಇದೀಗ ಮತ್ತೆ ರಾಜ್ಯ ರಾಜಕೀಯದಲ್ಲಿ ಸಕ್ರಿಯರಾಗುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ನಿನ್ನೆ ಭಟ್ಕಳದ ಸಾರ್ವಜನಿಕ ವೇದಿಕೆಯಲ್ಲಿ ನಡೆದ ‘ಹಿಂದೂ ಸಂಗಮ’ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ತಮ್ಮ ಹಿಂದುತ್ವ ಶೈಲಿಯಲ್ಲಿಯೇ ಮಾತನಾಡಿದ ಅನಂತ ಕುಮಾರ್ ಹೆಗಡೆ ಶೇಕಡಾ 90ರಷ್ಟು ಋಷಿಗಳು ಬ್ರಾಹ್ಮಣರಲ್ಲ. ವಾಲ್ಮೀಕಿ, ವಿಶ್ವಾಮಿತ್ರ ಬ್ರಾಹ್ಮಣರಲ್ಲ. ಈ ದೇಶದಲ್ಲಿ ಜಾತಿಗೆ ಎಂದಿಗೂ ಬೆಲೆಯಿರಲಿಲ್ಲ, ಯೋಗ್ಯತೆಗೆ ಮಾತ್ರ […]