ಬಿಹಾರದಲ್ಲಿ NDA ಕ್ಲೀನ್ ಸ್ವೀಪ್ ; 190 ಕ್ಷೇತ್ರಗಳಲ್ಲಿ ಭಾರೀ ಮುನ್ನಡೆ: ಕಾಂಗ್ರೆಸ್- ಆರ್ ಜೆಡಿ ಧೂಳೀಪಟ

ನವದೆಹಲಿ: ಬಿಹಾರ ಚುನಾವಣೆಯ ಮತ ಎಣಿಕೆಯ ಎನ್‌ಡಿಎ ಮೈತ್ರಿಕೂಟ 190ಕ್ಕೂ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ ಕಾಂಗ್ರೆಸ್ ಡಬಲ್ ಡಿಜಿಟ್ ದಾಟಲು ಒದ್ದಾಡುತ್ತಿದೆ. ಬೆಳಗ್ಗೆ 11:15ರ ಟ್ರೆಂಡ್ ಪ್ರಕಾರ ಒಟ್ಟು 243 ಕ್ಷೇತ್ರಗಳಲ್ಲಿ ಎನ್‌ಡಿಎ 192, ಮಹಾಘಟಬಂಧನ್ 46, ಇತರರು 4 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದಾರೆ. ಪಕ್ಷವಾರು ಲೆಕ್ಕ ತೆಗೆದುಕೊಂಡರೆ ಬಿಜೆಪಿ 83, ಜೆಡಿಯು 80, ಆರ್‌ಜೆಡಿ 34, ಕಾಂಗ್ರೆಸ್ 5, ಇತರ ಪಕ್ಷಗಳು 41 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಬಿಹಾರದಲ್ಲಿ ನಾಮಪತ್ರ ಸಲ್ಲಿಕೆಯ ಮುಂಚಿನ ದಿನದವರೆಗೂ ಮಹಾಘಟಬಂಧನ್‌ನಲ್ಲಿ ಸೀಟು […]
ಮಂಗಳೂರು | ಮನೆಯ ಅಂಗಳದಲ್ಲಿ ವ್ಯಕ್ತಿಯ ಶವ ಪತ್ತೆ

ಉಳ್ಳಾಲ: ಕಣ್ಣಿನ ಗುಡ್ಡೆ ಕಿತ್ತೋದ ಸ್ಥಿತಿಯಲ್ಲಿ ಭೀಕರ ದಾಳಿಗೀಡಾಗಿ ಸಾವನ್ನಪ್ಪಿರುವ ವ್ಯಕ್ತಿಯೋರ್ವನ ಮೃತದೇಹವು ಉಳ್ಳಾಲ ಠಾಣೆಯ ಕುಂಪಲ ಬೈಪಾಸ್ ಎಂಬಲ್ಲಿನ ಮನೆಯೊಂದರ ಅಂಗಳದಲ್ಲಿ ಸಿಕ್ಕಿದ್ದು, ಕೊಲೆಯೋ ಅಥವಾ ಪ್ರಾಣಿ ದಾಳಿಯಿಂದ ಮೃತಪಟ್ಟಿದ್ದೋ ಎಂಬ ಬಗ್ಗೆ ಶಂಕೆ ಮೂಡಿದೆ. ಕುಂಪಲ ಮೂರುಕಟ್ಟೆ ನಿವಾಸಿ ದಯಾನಂದ ಗಟ್ಟಿ (53) ನಿಗೂಢವಾಗಿ ಸಾವನ್ನಪ್ಪಿರುವ ವ್ಯಕ್ತಿ. ಕುಂಪಲ ಬೈಪಾಸಿನ ಸಾಯಿ ಲಾಂಡ್ರಿಯ ಸಿಟೌಟ್ ನಲ್ಲಿ ನೋಟಿನ ಕಂತೆ ಬಿದ್ದಿದ್ದು ರಕ್ತ ಚೆಲ್ಲಿದೆ. ನೋಟಿನ ಕಂತೆಯ ಬಳಿಯೇ ದಯಾನಂದ್ ಅವರ ಒಂದು ಕಣ್ಣಿನ ಗುಡ್ಡೆ […]
ದೇಶದ ಅರ್ಧದಷ್ಟು ಜನರು ನನ್ನನ್ನು ಕೊಲ್ಲಲು ಬಯಸಿದ್ದರು: ನಟಿ ಅದಾ ಶರ್ಮಾ ಶಾಕಿಂಗ್ ಹೇಳಿಕೆ!

ಮುಂಬೈ: 2015ರಲ್ಲಿ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಮತ್ತು ಪವನ್ ಒಡೆಯರ್ ಕಾಂಬಿನೇಷನ್ನಲ್ಲಿ ‘ರಣವಿಕ್ರಮ’ ಸಿನಿಮಾ ತೆರೆಕಂಡಿತ್ತು. ಆ ಸಿನಿಮಾ ಮೂಲಕ ಕನ್ನಡಿಗರಿಗೂ ಪರಿಚಯವಾದ ನಟಿ ಯಾರೆಂದರೆ ಅವರೇ ಹಾಟ್ ಬ್ಯೂಟಿ ಅದಾ ಶರ್ಮಾ. ನೀಳ ಮೈಮಾಟ ಮತ್ತು ಹಾಲಿನ ಬಣ್ಣದ ಚೆಲುವೆಯನ್ನು ಅಷ್ಟೇ ಪ್ರೀತಿಯಿಂದ ನಮ್ಮ ಕನ್ನಡಿಗರು ಸ್ವಾಗತಿಸಿದರು. ಆ ಎರಡು ಸಿನಿಮಾಗಳ ಬಳಿಕ ಅದಾ ಅವರು ಮತ್ತೆ ಕನ್ನಡಕ್ಕೆ ವಾಪಾಸ್ಸಾಗಲೇ ಇಲ್ಲ. ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ತೊಡಗಿಸಿಕೊಂಡರಾದರೂ, ಬೆರಳಣಿಕೆ ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದಾರೆ. ಇದೀಗ […]
ಉಪ್ಪಿನಂಗಡಿ | ವಿದ್ಯಾರ್ಥಿನಿಯ ಸಾವಿನ ಬಗ್ಗೆ ಅನುಮಾನ: ಹೆತ್ತವರಿಂದ ಪೊಲೀಸರಿಗೆ ದೂರು

ಮಂಗಳೂರು: ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೀಟ ನಾಶಕ ಸೇವಿಸಿ ಆಸ್ಪತ್ರೆ ಸೇರಿದ್ದ ಬಾಲಕಿಯೊಬ್ಬಳು ಆಸ್ಪತ್ರೆ ಸೇರಿದ್ದ ಶಾಲಾ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಆಕೆಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಹೆತ್ತವರು ಪೊಲೀಸರಿಗೆ ದೂರು ನೀಡಿದ್ದಾರೆ. ಮೃತ ಬಾಲಕಿಗೆ ಕಡಬ ನಿವಾಸಿಯೊಬ್ಬನೊಂದಿಗೆ ಫೋನ್ ಸಂಪರ್ಕವಿತ್ತು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆಕೆಯ ತಂದೆ ತಿಳಿಸಿದ್ದಾರೆ. ಸ್ಥಳೀಯ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿದ್ದ ಆಕೆ ನ. 4ರಂದು ತಲೆನೋವು ಎಂದು ಕಾರಣ ನೀಡಿ ಶಾಲೆಗೆ ಹೋಗದೆ ಮನೆಯಲ್ಲಿದ್ದಳು. ಮನೆಯಿಂದ ಹೆತ್ತವರು […]
ಕರಾವಳಿಗೆ ಮತ್ತೊಂದು ವಿಮಾನ ನಿಲ್ದಾಣ । ಉಡುಪಿಯಲ್ಲಿ ಟೇಕಾಫ್’ಗೆ ಗ್ರೀನ್ ಸಿಗ್ನಲ್

ಉಡುಪಿಗೆ ಏರ್ ಪೋರ್ಟ್ ಬೇಕೆನ್ನುವ ಎರಡು ದಶಕಗಳ ಕನಸಿಗೆ ಈಗ ರೆಕ್ಕೆಪುಕ್ಕ ಮೂಡಿದೆ. ಪಡುಬಿದ್ರಿಯಲ್ಲಿ ಏರ್ ಪೋರ್ಟ್ ನಿರ್ಮಾಣಕ್ಕಾಗಿ ರಾಜ್ಯ ಸರಕಾರದ ಐಡಿಡಿ(ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ)ಗೆ ಉಡುಪಿ ಜಿಲ್ಲಾಡಳಿತ ಇತ್ತೀಚೆಗೆ ಪ್ರಸ್ತಾವನೆ ಸಲ್ಲಿಸಿದೆ. ಸಾಮಾನ್ಯ ನಾಗರಿಕರೂ ವಿಮಾನದಲ್ಲಿಪ್ರಯಾಣಿಸುವ ಕನಸು ಬಿತ್ತಿದ ಪ್ರಧಾನಿ ಮೋದಿ ಆಶಯದಂತೆ ಜಾರಿಗೆ ಬಂದ ಉಡಾನ್ 1(ಉಡೇ ದೇಶ್ ಕಾ ಆಮ್ ನಾಗರಿಕ್ ) ಬಳಿಕ ಉಡಾನ್ 2 ಯೋಜನೆಯಡಿ ವಿಮಾನ ನಿಲ್ದಾಣ ನಿರ್ಮಾಣದ ಚಿಂತನೆ ನಡೆದಿದೆ. 935 ಎಕರೆ ಭೂಮಿ ಲಭ್ಯವಿದ್ದು, 10 […]
ಪಥಸಂಚಲನಕ್ಕೆ ಹೈಕೋರ್ಟ್ ಅನುಮತಿ; RSSಗೆ ಈಗ ಸಂವಿಧಾನದ ಶಕ್ತಿ ಅರ್ಥವಾಗಿದೆ: ಪ್ರಿಯಾಂಕ್ ಖರ್ಗೆ ಗುಡುಗು

ಬೆಂಗಳೂರು: ರಾಜ್ಯದ ಗಮನ ಸೆಳೆದಿದ್ದ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರ್‌ಎಸ್ಎಸ್ ನಡೆಸಲು ಉದ್ದೇಶಿಸಿದ್ದ ಪಥಸಂಚಲನಕ್ಕೆ ಹೈಕೋರ್ಟ್ ಅನುಮತಿ ನೀಡಿರುವ ಕುರಿತು ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಆರ್‌ಎಸ್‌ಎಸ್‌ಗೆ ಈಗ ಸಂವಿಧಾನದ ಶಕ್ತಿ ಅರ್ಥವಾಗಿದೆ ಎಂದು ಗುಡುಗಿದ್ದಾರೆ. ‘ಯಾವ ಸಂಘಗಳೇ ಆಗಲಿ ಸಂವಿಧಾನದ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ನಿಯಮಗಳಿಗೆ ಅತೀತರಲ್ಲ. ಸಂವಿಧಾನಕ್ಕೆ ತಲೆಬಾಗಿದರೆ ಮಾತ್ರ ಬದುಕು ಸುಂದರ. ಸಂವಿಧಾನಕ್ಕೆ ಸವಾಲು ಹಾಕಿದರೆ ಬದುಕು ದುಸ್ಥರ. ಆರ್‌ಎಸ್‌ಎಸ್ ಎಂಬ ಸಂಘಟನೆಗೆ ಈ ಸತ್ಯದ ಅರಿವಾಗಿದೆ ಎಂದು ಭಾವಿಸಿದ್ದೇನೆ’ ಎಂದು […]
ಸಚಿವ ಸಂಪುಟದಲ್ಲಿ ಅವಕಾಶ ಸಿಗುವ ವಿಶ್ವಾಸ ಇದೆ: ಸಲೀಂ ಅಹ್ಮದ್

ವಿಜಯಪುರ: ರಾಜ್ಯ ಸಚಿವ ಸಂಪುಟದಲ್ಲಿ ಬದಲಾವಣೆ ಮಾಡಬೇಕು ಎಂಬ ಚಿಂತನೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ನನಗೆ ಅವಕಾಶ ಸಿಗುವ ವಿಶ್ವಾಸವಿದೆ. ಇದು ಹಕ್ಕೊತ್ತಾಯವಲ್ಲ, ಬದಲಿಗೆ ನಾವು ಮಾಡಿರುವ ಕೆಲಸಕ್ಕೆ ಪ್ರಮುಖ್ಯತೆ ಸಿಗಬೇಕು ಎಂದು ವಿಧಾನ ಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ (ನ.13) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಆಗುತ್ತಿದೆ. ಕೆಲ ಸಚಿವರನ್ನು ಪಕ್ಷದ ಕೆಲಸಕ್ಕೆ ನಿಯೋಜನೆ ಮಾಡಿ, […]
ಬೆಳ್ತಂಗಡಿ | ಜೈಲಿಂದ ಹೊರ ಬಂದ ಬೆನ್ನಲ್ಲೇ ಮತ್ತೆ ಕಳ್ಳತನ: ಇತ್ತೆ ಬರ್ಪೆ ಅಬೂಬಕ್ಕರ್ ಬಂಧನ

ಬೆಳ್ತಂಗಡಿ: ಉಡುಪಿಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿ, ಇತ್ತೀಚೆಗಷ್ಟೇ ಜೈಲಿಂದ ಹೊರಬಂದಿದ್ದ ಇತ್ತ ಬರ್ಪೆ ಅಬೂಬಕರ್ ಮತ್ತೆ ಕಳ್ಳತನ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ. ಕುತ್ಲೂರಿನಲ್ಲಿ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಪ್ರಕರಣದ ವೇಣೂರು ಪೊಲೀಸರು ಇತ್ತೆ ಬರ್ಪೆ ಅಬೂಬಕರ್(71) ನನ್ನು ಅರೆಸ್ಟ್ ಮಾಡಿದ್ದಾರೆ. ನಾರವಿ ಗ್ರಾಮದ ಕುತ್ಲೂರಿನ ಮಂಜು ಶ್ರೀ ನಗರದ ಶಿಕ್ಷಕ ಅವಿನಾಶ್ ಎಂಬವರ ಮನೆಯಲ್ಲಿ ಅ.2 ರಿಂದ ಅ.6ರ ನಡುವೆ ಮನೆಯಲ್ಲಿ ಯಾರು ಇಲ್ಲದ ವೇಳೆ […]
ಬಿಹಾರದಲ್ಲಿ ಮುಸ್ಲಿಮರು, ಮಹಿಳೆಯರಿಂದ ದಾಖಲೆಯ ಮತದಾನ; ಇದರ ಲಾಭ ಯಾರಿಗೆ?

ಪಾಟ್ನಾ: 2025ರ ಬಿಹಾರ ವಿಧಾನಸಭಾ ಚುನಾವಣೆಗೆ ಎರಡು ಹಂತಗಳಲ್ಲಿ ನಡೆದ ಮತದಾನದಲ್ಲಿ ದಾಖಲೆಯ ಒಟ್ಟಾರೆ ಶೇ 66.91 ರಷ್ಟು ಮತ ಚಲಾವಣೆಯಾಗಿದ್ದು, ಇತಿಹಾಸದ ಪುಟಗಳಲ್ಲಿ ಸೇರಿದೆ. ದಾಖಲೆಯ ಮತದಾನವು ಬಿಜೆಪಿ-ಜೆಡಿಯು ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಅಥವಾ ವಿರೋಧ ಪಕ್ಷಗಳ ಇಂಡಿಯಾ ಬಣಕ್ಕೆ ಲಾಭವಾಗುತ್ತದೆಯೇ ಎಂಬ ಊಹಾಪೋಹಗಳಿಗೆ ಕಾರಣವಾಗಿದೆ. ಭಾರತೀಯ ಚುನಾವಣಾ ಆಯೋಗ (ECI) ಬಿಡುಗಡೆ ಮಾಡಿರುವ ಪರಿಷ್ಕೃತ ದತ್ತಾಂಶದ ಪ್ರಕಾರ, ಸದ್ಯದ ಚುನಾವಣೆಯಲ್ಲಿ ಶೇ 69.1 ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ […]
ದೆಹಲಿಯಲ್ಲಿ ಮತ್ತೊಂದು ಸ್ಫೋಟದ ಶಬ್ಧ: ಬೆಚ್ಚಿಬಿದ್ದ ಜನ; ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ದಳ ದೌಡು!

ದೆಹಲಿ: ಕೆಂಪು ಕೋಟೆ ಸ್ಫೋಟದ ಆಘಾತದಿಂದ ಇನ್ನೂ ದೆಹಲಿಯಲ್ಲಿ ಭೀತಿ ಕಡಿಮೆಯಾಗುವಷ್ಟರಲ್ಲಿ ಇದೀಗ ಮತ್ತೊಂದು ಸ್ಪೋಟದ ಶಬ್ಧ ಕೇಳಿಬಂದಿದೆ. ಇಂದು ಬೆಳ್ಳಂಬೆಳಗ್ಗೆ ಮತ್ತೊಂದು ಸ್ಫೋಟದ ಶಬ್ದ ಇಡೀ ರಾಜಧಾನಿಯನ್ನು ನಡುಗಿಸಿದೆ. ಗುರುವಾರ ಬೆಳಿಗ್ಗೆ 9:18 ಸುಮಾರಿಗೆ ಮಹಿಪಾಲ್ಪುರದ ರಾಡಿಸನ್ ಹೋಟೆಲ್ ಬಳಿ ಭಯಂಕರ ಸ್ಫೋಟದ ಶಬ್ದ ಕೇಳಿಸಿದೆ. ಅಗ್ನಿಶಾಮಕ ದಳಕ್ಕೆ ತಕ್ಷಣ ಕರೆ ಬಂದಿದ್ದು, ಪೊಲೀಸ್ ತಂಡಗಳು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿವೆ. ಈ ಘಟನೆ ಕೇವಲ ಮೂರು ದಿನಗಳ ಹಿಂದೆ ನಡೆದ ಕೆಂಪು ಕೋಟೆ ಸ್ಫೋಟದ […]