Chikkamagaluru: ರಸ್ತೆ ಇಲ್ಲದೆ ಪರದಾಟ: ಮೃತದೇಹ ಕೊಂಡೊಯ್ಯಲು ನರಳಾಟ

ಚಿಕ್ಕಮಗಳೂರು: ಶೃಂಗೇರಿ ತಾಲೂಕಿನ ಸಂಕ್ಲಾಪುರ ಗ್ರಾಮದ ಜನರು ಸುಮಾರು 40 ವರ್ಷಗಳಿಂದ ನಿತ್ಯ ಸಂಚಾರ ಮಾಡಲು ಸರಿಯಾದ ರಸ್ತೆ ಇಲ್ಲದೇ ಪರದಾಡುವಂತಾಗಿದೆ. ಗ್ರಾಮದ ಸರ್ಫುಲ್ಲಾ (65) ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಅವರ ಮೃತದೇಹವನ್ನು ಮನೆಯಿಂದ ಮಸೀದಿಗೆ ಕೊಂಡೊಯ್ಯಲು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ರಸ್ತೆ ಇಲ್ಲದೆ ನರಳಾಡಬೇಕಾಯಿತು. ಕೊನೆಗೆ, ಗ್ರಾಮಸ್ಥರು ಮೃತದೇಹವನ್ನು ಗುಡ್ಡದ ದಾರಿಯಲ್ಲಿ ಕಷ್ಟಪಟ್ಟು ಹೊತ್ತು ತಂದರು. ಈ ರಸ್ತೆ ಸಮಸ್ಯೆ ಮಲೆನಾಡಿನ ಜನರ ಮೂಲಸೌಕರ್ಯಗಳ ಕೊರತೆಯನ್ನು ಎತ್ತಿ ಹಿಡಿದಿದೆ. ಗುಡ್ಡದ ಮೇಲಿರುವ 20-25 ಮನೆಗಳ ಈ ಗ್ರಾಮವು […]
ಸ್ಪೀಕರ್ ಯುಟಿ ಖಾದರ್ ಅವರಿಗೆ ʼಸಿಲ್ವರ್ ಎಲಿಫೆಂಟ್ʼ ರಾಷ್ಟ್ರೀಯ ಪ್ರಶಸ್ತಿ

ನವದೆಹಲಿ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನೀಡುವ ಸಿಲ್ವರ್ ಎಲಿಫೆಂಟ್ ರಾಷ್ಟ್ರೀಯ ಪ್ರಶಸ್ತಿಗೆ ವಿಧಾನಸಭಾ ಸ್ಪೀಕರ್ ಯುಟಿ ಖಾದರ್ ಅವರು ಆಯ್ಕೆಯಾಗಿದ್ದಾರೆ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಗೆ ನೀಡಿದ ಅಸಾಧಾರಣ ಕೊಡುಗೆಯನ್ನು ಗುರುತಿಸಿ ಸ್ಕೌಟ್ಸ್ ಮತ್ತು ಗೈಡ್ಸ್ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯಾದ ಸಿಲ್ವರ್ ಎಲಿಫೆಂಟ್ ಪ್ರಶಸ್ತಿಯನ್ನು ಯುಟಿ ಖಾದರ್ ಅವರಿಗೆ ನೀಡುತ್ತಿದ್ದೇವೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ ಸಮಿತಿಯು ತಿಳಿಸಿದೆ. ನವೆಂಬರ್ 28ರಂದು ಲಕ್ನೋದಲ್ಲಿ ನಡೆಯಲಿರುವ ಭಾರತ್ ಸ್ಕೌಟ್ಸ್ ಮತ್ತು […]
ಬಿಜೆಪಿಯ ರಾಷ್ಟ್ರೀಯತೆಯಿಂದ ಆಕರ್ಷಿತನಾಗಿ ಪಕ್ಷಕ್ಕೆ ಸೇರಿದ್ದೇನೆ: ಮುಸ್ಲಿಂ ಲೀಗ್ ನಾಯಕ ಬಿಜೆಪಿಗೆ ಸೇರ್ಪಡೆ

ಕಣ್ಣೂರು: ಮುಸ್ಲಿಂ ಲೀಗ್ ಸ್ಥಳೀಯ ನಾಯಕ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಲೀಗ್‌ನ ಪಾನೂರು ಪುರಸಭೆ ಸಮಿತಿ ಸದಸ್ಯ ಉಮ್ಮರ್ ಫಾರೂಕ್ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಬಿಜೆಪಿಯ ರಾಷ್ಟ್ರೀಯತೆಯಿಂದ ಆಕರ್ಷಿತರಾಗಿ ಅವರು ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ ಎಂಬುದು ವಿವರಣೆ. ಅವರು 40 ವರ್ಷಗಳ ಕಾಲ ಲೀಗ್‌ನ ಕಾರ್ಯಕರ್ತರಾಗಿದ್ದರು. ಪ್ರಸ್ತುತ, ಲೀಗ್ ಸ್ಥಳೀಯ ಮಟ್ಟದ ಪಕ್ಷವಾಗಿದ್ದು, ರಾಷ್ಟ್ರಮಟ್ಟಕ್ಕೆ ಏರಲು ಸಾಧ್ಯವಾಗಿಲ್ಲ. ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡಲು ಸಹ ಸಾಧ್ಯವಾಗುತ್ತಿಲ್ಲ. ಹೆಚ್ಚಿನ ಜನರು ಬಿಜೆಪಿಗೆ ಬರಬೇಕು ಎಂದು ಉಮ್ಮರ್ ಫಾರೂಕ್ ಹೇಳಿದರು. ಬಿಜೆಪಿ ಕಣ್ಣೂರು ದಕ್ಷಿಣ ಜಿಲ್ಲಾ […]
ಬಿಜೆಪಿ ಪಕ್ಷ ʼವೋಟ್ ಚೋರಿʼ ಮಾಡಿ ಅಧಿಕಾರದ ಗದ್ದುಗೆಗೇರಿದೆ: ಇನಾಯತ್ ಅಲಿ

ಸುರತ್ಕಲ್: ಯುವ ಕಾಂಗ್ರೆಸ್ ಮಂಗಳೂರು ಉತ್ತರ ವತಿಯಿಂದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ನೇತೃತ್ವದಲ್ಲಿ ದಿಲ್ಲಿಯಲ್ಲಿ ಇತ್ತೀಚಿಗೆ ನಡೆದ ವಿಧ್ವಂಸಕ ಕೃತ್ಯ ಮತ್ತು ʼವೋಟ್ ಚೋರಿʼ ವಿರುದ್ಧ ಬೃಹತ್ ಪಂಜಿನ ಮೆರವಣಿಗೆ ಬುಧವಾರ ಸಂಜೆ ಕೃಷ್ಣಾಪುರ ಕ್ರಾಸ್ ನಿಂದ ಸುರತ್ಕಲ್ ಪೇಟೆಯವರೆಗೆ ನಡೆಯಿತು. ಬಳಿಕ ನಡೆದ ಸಭೆಯಲ್ಲಿ ಮಾತಾಡಿದ ಇನಾಯತ್ ಅಲಿ ಅವರು, “ಬಿಜೆಪಿ ಪಕ್ಷ ದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ವಾಮಮಾರ್ಗವನ್ನು ಅನುಸರಿಸುತ್ತಿರುವುದು ಖಂಡನೀಯ. ಮತಗಳ್ಳತನ ಈಗಾಗಲೇ ಬಯಲಾಗಿದ್ದು, ಒಂದೇ ಹೆಸರಲ್ಲಿ ಹತ್ತಾರು […]
ರೈಲಿನಲ್ಲಿ ಯುವಕನೋರ್ವ ಖಾಸಗಿ ಭಾಗ ಮುಟ್ಟಿದ್ದ, ತಿರುಗಿ ನೋಡುವಷ್ಟರಲ್ಲಿ..: ಕರಾಳ ಘಟನೆ ತೆರದಿಟ್ಟ ನಟಿ ನಟಿ ಗಿರಿಜಾ ಓಕ್

ಮರಾಠಿ ನಟಿ ಗಿರಿಜಾ ಓಕ್ ಇತ್ತೀಚಿನ ತಮ್ಮ ಸಂದರ್ಶನದ ಮೂಲಕ ಕಳೆದ ಕೆಲವೊಂದು ದಿನಗಳಿಂದ ದೇಶಾದ್ಯಂತ ಸುದ್ದಿಯಲ್ಲಿದ್ದಾರೆ. ಆಕೆಯ ಸರಳತೆ, ಮಾತನಾಡುವ ಶೈಲಿ ಸಿನಿಮಾಗಳಿಗಿಂತ ಆಕೆಗೆ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟಿದೆ. ಈಗ ಮತ್ತೆ ಆಕೆಯ ಹೇಳಿಕೆಯೊಂದು ಸುದ್ದಿಯಲ್ಲಿದೆ. ಹಲವು ವರ್ಷಗಳ ಹಿಂದೆ ತಾವು ಲೋಕಲ್ ಟ್ರೈನ್ ನಲ್ಲಿ ಎದುರಿಸಿದ ಕರಾಳ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಲಲನ್ ಟಾಪ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಗಿರಿಜಾ ಓಕ್, ಸ್ಥಳೀಯ ರೈಲುಗಳಲ್ಲಿ ಜನರು ನಿಮ್ಮನ್ನು ದುರುದ್ದೇಶದಿಂದ ಮುಟ್ಟಿ ಓಡಿಹೋಗುತ್ತಾರೆ, ಉದ್ದೇಶಪೂರ್ವಕವಾಗಿ ನಿಮ್ಮ […]
ಹಾಸನ | ಮನೆಯಲ್ಲಿ ನಗ್ನವಾಗಿ ಒಂಟಿ ಮಹಿಳೆಯ ಶವ ಪತ್ತೆ: ಕೊಲೆ ಶಂಕೆ

ಹಾಸನ: ಬೇಲೂರು ಪಟ್ಟಣದ ಗಾಣಿಗರ ಬೀದಿಯ ಮನೆಯೊಂದರಲ್ಲಿ ನಗ್ನ ಸ್ಥಿತಿಯಲ್ಲಿ ಒಂಟಿ ಮಹಿಳೆಯ ಶವ ಪತ್ತೆಯಾಗಿದೆ. ಮೃತ ಮಹಿಳೆಯನ್ನು ಚಿಕ್ಕಮಗಳೂರಿನ ಮಲ್ಲೇನಹಳ್ಳಿ ಗ್ರಾಮದ ಸ್ಪಂದನ (34) ಎಂದು ಗುರುತಿಸಲಾಗಿದೆ. ಮಹಿಳೆ ಪತಿಯಿಂದ ದೂರಾಗಿ 8 ದಿನಗಳ ಹಿಂದೆ ಬೇಲೂರಿನಲ್ಲಿ ಬಾಡಿಗೆ ಮನೆಗೆ ಬಂದು ನೆಲೆಸಿದ್ದಳು. ಎರಡು ದಿನಗಳಿಂದ ಮನೆಯಲ್ಲಿ ಯಾರೂ ಇಲ್ಲದ್ದನ್ನ ಸ್ಥಳೀಯರು ಗಮನಿಸಿದಾಗ ಈ ಪ್ರಕರಣ ಬಯಲಾಗಿದೆ. ಮನೆಯ ಬಾಗಿಲು ತೆರೆದಿದ್ದರೂ ಯಾರ ಸುಳಿವು ಇಲ್ಲದೇ ಇದ್ದಿದ್ದರಿಂದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು […]
ಫರಂಗಿಪೇಟೆ | ರೈಲ್ವೆ ಇಲಾಖೆಯ ಅರ್ಧಂಬರ್ಧ ಕಾಮಗಾರಿ: ಸ್ಪೀಕರ್ ಯು.ಟಿ ಖಾದರ್ ಕರೆ ಬೆನ್ನಲ್ಲೇ ಇಲಾಖೆ ಸ್ಪಂದನೆ

ಫರಂಗಿಪೇಟೆ: ಅಮ್ಮೆಮ್ಮಾರ್- ಫರಂಗಿಪೇಟೆಯಲ್ಲಿ ರೈಲ್ವೆ ಕಾಮಗಾರಿ ಅರ್ಧಂಬರ್ಧ ಪೂರ್ಣಗೊಂಡಿದ್ದು, ಸ್ಪೀಕರ್ ಯು.ಟಿ ಖಾದರ್ ಕರೆ ಬೆನ್ನಲ್ಲೇ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಹಾರದ ಭರವಸೆ ನೀಡಿದ್ದಾರೆ. ಅಮ್ಮೆಮ್ಮಾರ್ ನಲ್ಲಿ ಸುಮಾರು 5 ಸಾವಿರ ಜನಸಂಖ್ಯೆ ಇದ್ದು, ಇಲ್ಲಿ ಹಲವು ವರ್ಷಗಳಿಂದ ರೈಲ್ವೆ ಅಂಡರ್ ಪಾಸ್ ಮಾಡಲಾಗಿದ್ದು, ಅದು ಕೂಡ ಅರ್ಧಂಬರ್ಧ ಮಾಡಲಾಗಿದೆ. ಅಲ್ಲಿ ಮೂಲ ಸೌಕರ್ಯ ಕೂಡ ಸರಿಯಾಗಿಲ್ಲ. ಇದರಿಂದ ಜನಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ರೈಲು ಹಾದು ಹೋಗಲು ಕನಿಷ್ಠ ಅರ್ಧಗಂಟೆ ಹಿಡಿಯುತ್ತದೆ. ರೈಲ್ವೆ ಇಲಾಖೆ […]
ಬಂಟ್ವಾಳ: ಟೆಕ್ಸ್ ಟೈಲ್ಸ್ ಮಾಲಿಕನಿಗೆ ಪತ್ನಿಯಿಂದಲೇ ಚೂರಿ ಇರಿತ!

ಬಂಟ್ವಾಳ: ಟೆಕ್ಸ್ ಟೈಲ್ಸ್ ಮಾಲಿಕನಿಗೆ ಪತ್ನಿಯೇ ಚೂರಿಯಿಂದ ಇರಿದಿರುವ ಘಟನೆ ಬಿ.ಸಿ.ರೋಡ್ ಕೆ.ಎಸ್.ಆರ್.ಟಿಸಿ ಬಸ್ ನಿಲ್ದಾಣ ಬಳಿ ನಡೆದಿದೆ. ಪತಿ ಕೃಷ್ಣ ಪ್ರಸಾದ್ ಗಾಯಗೊಂಡಿದ್ದು, ಪತ್ನಿಯನ್ನು ಬಂಧಿಸಲಾಗಿದೆ. ಹಲವು ದಿನಗಳಿಂದ ಪತಿ ಹತ್ಯೆಗೆ ಕಾದು ಕುಳಿತಿದ್ದ ಪತ್ನಿ ಜ್ಯೋತಿ ಕಾದುಕುಳಿತಿದ್ದಳು ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ
ಮಂಗಳೂರು: ಸುಖಾನಂದ್ ಶೆಟ್ಟಿ ಕೊಲೆ ಪ್ರಕರಣ, 19 ವರ್ಷಗಳ ಬಳಿಕ ಆರೋಪಿಯ ಬಂಧನ

ಮಂಗಳೂರು: 2006ರ ಡಿಸೆಂಬರ್ 1ರಂದು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಬಳಿ ನಡೆದಿದ್ದ ಸುಖಾನಂದ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಆಶ್ರಯ ನೀಡಿ ತಲೆಮರೆಸಿಕೊಂಡಿದ್ದ ಮುಖ್ಯ ಆರೋಪಿ ಅಬ್ದುಲ್ ಸಲಾಂ ಅಡ್ಡೂರು (ಕಿನ್ನಿಗೊಳಿ ನಿವಾಸಿ) ಅವರನ್ನು 19 ವರ್ಷಗಳ ಬಳಿಕ ಮಂಗಳೂರು ಪೊಲೀಸರು ಬಂಧಿಸಿದ್ದಾರೆ. 01.12.2006ರಂದು ಪ್ರಮುಖ ಆರೋಪಿ ಕಬೀರ್ ಮತ್ತು ಸಹಚರರು ಸುಖಾನಂದ್ ಶೆಟ್ಟಿ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದರು. ಕೊಲೆ ನಂತರ ಕಬೀರ್‌ಗೆ ಅಡ್ಡೂರು ಸಹೋದರರಾದ ಲತೀಫ್ (ಅಡ್ಡೂರು ಲತೀಫ್) ಹಾಗೂ ಅಬ್ದುಲ್ […]
ಮಂಗಳೂರಿನಲ್ಲಿ ನೀರಿಲ್ಲ: ಖಾಸಗಿಯವರ ಬಿಲ್ಡಿಂಗ್ ಕಾಮಗಾರಿ ವೇಳೆ ಭಾರೀ ಎಡವಟ್ಟು..!

► ನಗರದ ವಸತಿ ಸಮುಚ್ಛಯ, ಹೊಟೇಲ್, ಆಸ್ಪತ್ರೆಗಳಲ್ಲಿ ನೀರಿನ ಅಭಾವ ಮಂಗಳೂರು,: ನಗರದ ವಿವಿಧ ಪ್ರದೇಶಗಳಿಗೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್ ಲೈನ್ ಪಡೀಲ್- ಕಣ್ಣೂರು ಬಳಿ ಕಾಮಗಾರಿ ವೇಳೆ ಹಾನಿಗೊಳಗಾದ ಪರಿಣಾಮ ಸೋಮವಾರ ಮತ್ತು ಮಂಗಳವಾರ ನೀರು ಪೂರೈಕೆ ಸ್ಥಗಿತವಾಗಿತ್ತು. ಇದರಿಂದ ನಗರದಲ್ಲಿ ನೀರಿನ ಸಮಸ್ಯೆ ತಲೆದೋರಿದ್ದು, ಜನರು ಪರದಾಡುವಂತಾಗಿದೆ. ಕಳೆದ ಬಾರಿ NRC ವಿರುದ್ಧ ನಡೆದ ಪ್ರತಿಭಟನೆಗೆ ಬಳಕೆಯಾಗಿದ್ದ ಮೈದಾನದಲ್ಲಿ ಖಾಸಗಿಯವರು ಕಟ್ಟಡ ನಿರ್ಮಾಣದಲ್ಲಿ ತೊಡಗಿದ್ದಾರೆ. ಇದಕ್ಕಾಗಿ ಭಾರೀ ಪ್ರಮಾಣದಲ್ಲಿ ಹೆದ್ದಾರಿಗೆ ಸಂಪರ್ಕಕ್ಕಾಗಿ […]