Flash News

ಬೆಂಗಳೂರಲ್ಲಿ ಹಾಡಹಗಲೇ ಮಹಾ ದರೋಡೆ; ನಡು ರಸ್ತೆಯಲ್ಲೇ 7 ಕೋಟಿ ದೋಚಿದ ಕಳ್ಳರು!

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ (ಇಂದು) ಮಧ್ಯಾಹ್ನ ಮಹಾ ದರೋಡೆ ನಡೆದಿದೆ. ಎಟಿಎಂಗೆ ಹಣ ಸಾಗಿಸುವ ವಾಹನವನ್ನು ರಸ್ತೆ ಮಧ್ಯೆದಲ್ಲೇ ಅಡ್ಡಗಟ್ಟಿದ ದರೋಡೆಕೋರರು ಕೋಟ್ಯಂತರ ರೂಪಾಯಿ ದರೋಡೆ ಮಾಡಿದೆ. ಬೆಂಗಳೂರಿನ ಜಯದೇವ ಡೈರಿ ಸರ್ಕಲ್ ಫ್ಲೈ ಓವರ್ ಮೇಲೆ (ಅಶೋಕ ಪಿಲ್ಲರ್‌ ಬಳಿ) ಈ ಘಟನೆ ನಡೆದಿದೆ. ವಾಹನದಲ್ಲಿದ್ದ 7 ಕೋಟಿ 11 ಲಕ್ಷ ರೂಪಾಯಿ ಹಣವನ್ನ ದೋಚಿ ದರೋಡೆಕೋರರು ಪರಾರಿಯಾಗಿದ್ದಾರೆ. ಸದ್ಯ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಸೌತ್ ಎಂಡ್ ಸರ್ಕಲ್ ಬಳಿಯ […]

ಮೋಸದಿಂದ ಚುನಾವಣೆ ಗೆಲ್ಲುವಂತಹ ಪ್ರಧಾನಿಯನ್ನು ಎಲ್ಲೂ ನೋಡಿಲ್ಲ: ಸಚಿವ ಸಂತೋಷ್ ಲಾಡ್

ಹುಬ್ಬಳ್ಳಿ: ಮೋಸದಿಂದ ಚುನಾವಣೆ ಗೆಲ್ಲುವಂತಹ ಪ್ರಧಾನಿಯನ್ನು ಎಲ್ಲೂ ನೋಡಿಲ್ಲ. ಬಿಜೆಪಿ ಮೋಸದಿಂದ ಬಿಹಾರ ಚುನಾವಣೆ ಗೆದ್ದಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಹಾರ ಚುನಾವಣೆ ವೇಳೆ ದೆಹಲಿಯಲ್ಲಿ ಬಾಂಬ್ ಬ್ಲಾಸ್ಟ್ ಆಗುತ್ತೆ. ದೆಹಲಿ ಸ್ಫೋಟ ಆದಾಗ ಪ್ರಧಾನಿ ಎಲ್ಲಿದ್ದರು. ದುರ್ಘಟನೆ ಸಂಭವಿಸಿದ ಕೂಡಲೇ ಮೋದಿ ವಾಪಸ್ ಬರಬಹುದಿತ್ತು. ಆದರೆ ಭೂತನ್ ರಾಜನ ಹುಟ್ಟುಹಬ್ಬ ಮುಗಿಸಿ ಬಂದಿದ್ದಾರೆ ಎಂದು ಟೀಕಿಸಿದರು. ಚುನಾವಣಾ ಆಯೋಗ ಬಿಜೆಪಿ ಅಣತಿಯಂತೆ ಕೆಲಸ ಮಾಡಿದೆ. ಪೋಸ್ಟಲ್ ಬ್ಯಾಲೆಟ್‌ನಲ್ಲಿ […]

Chikkamagaluru | ಪ್ರವಾಸಿಗರೇ ಗಮನಿಸಿ: ಮುಳ್ಳಯ್ಯನಗಿರಿ ತಪ್ಪಲು 4 ದಿನ ಬಂದ್

ಚಿಕ್ಕಮಗಳೂರು: ದತ್ತಪೀಠದಲ್ಲಿ ದತ್ತಜಯಂತಿ ಹಿನ್ನೆಲೆ ಡಿ.1ರಿಂದ 4ರವರೆಗೆ ಚಿಕ್ಕಮಗಳೂರುತಾಲೂಕಿನ ಮುಳ್ಳಯ್ಯನಗಿರಿ ಭಾಗಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿ, ಗಾಳಿಕೆರೆ ಮಾಣಿಕ್ಯಧಾರಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಡಿಸೆಂಬರ್ 2, 3 ಹಾಗೂ 4ರಂದು ದತ್ತಪೀಠದಲ್ಲಿ ದತ್ತಜಯಂತಿ ಸಂಭ್ರಮ ನಡೆಯಲಿದೆ. ವಿಶ್ವಹಿಂದೂ ಪರಿಷತ್, ಬಜರಂಗದಳದ ನೇತೃತ್ವದಲ್ಲಿ ದತ್ತಜಯಂತಿ ಸಂಭ್ರಮ ನಡೆಯಲಿದೆ. ಪ್ರವಾಸಿಗರಿಗೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ. ಡಿಸೆಂಬರ್ 5ರ ಬೆಳಗ್ಗೆ 10 ಗಂಟೆ ಬಳಿಕ ಮುಳ್ಳಯ್ಯನಗಿರಿ ಭಾಗ […]

ನ.25ಕ್ಕೆ ಅಯೋಧ್ಯೆಗೆ ಮೋದಿ ಭೇಟಿ: ಮಸೀದಿಗಳ ಮೇಲೆ ನಿಗಾ ವಹಿಸಲು BJP ನಾಯಕರ ಆಗ್ರಹ

ಅಯೋಧ್ಯೆ: ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಪ್ರಬಲ ಸ್ಫೋಟ ಪ್ರಕರಣದ ಬೆನ್ನಲ್ಲೇ ನವೆಂಬರ್ 25ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಗೆ ಭೇಟಿ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದಾದ್ಯಂತ ಎಲ್ಲಾ ಮಸೀದಿಗಳನ್ನು ನಿಯಮಿತವಾಗಿ ತಪಾಸಣೆ ನಡೆಸುವಂತೆ ಮತ್ತು ಸಂದರ್ಶಕರ ವಿವರಗಳನ್ನು ಕಡ್ಡಾಯವಾಗಿ ದಾಖಲಿಸಬೇಕೆಂದು ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ. ನಗರದಲ್ಲಿರುವ ಎಲ್ಲಾ ಮದರಸಾಗಳು ಮತ್ತು ಮಸೀದಿಗಳಲ್ಲಿ ಶುಕ್ರವಾರದ ಸಾಮೂಹಿಕ ಪ್ರಾರ್ಥನೆಗಳನ್ನು (ನಮಾಜ್) ತಕ್ಷಣ ನಿಲ್ಲಿಸುವಂತೆ ಕೋರಿ ಬಿಜೆಪಿ ವಕ್ತಾರ ರಜನೀಶ್ ಸಿಂಗ್ ಪತ್ರ ಬರೆದಿದ್ದಾರೆ ಎಂದು ವರದಿಯಾಗಿದೆ. ಎಲ್ಲಾ ಮಸೀದಿಗಳಲ್ಲಿ […]

ಇನಾಯತ್ ಅಲಿ ಶಿಫಾರಸ್ಸು: 12 ಮಂದಿ ರೋಗಿಗಳಿಗೆ 9,26,824 ರೂ. ಪರಿಹಾರ ಧನ ಬಿಡುಗಡೆ

ಸುರತ್ಕಲ್ : ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ಶಿಫಾರಸ್ಸಿನ ಮೇರೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಒಟ್ಟು 12 ಮಂದಿ ರೋಗಿಗಳಿಗೆ 9,26,824 ರೂ. ಪರಿಹಾರ ಧನ ಬಿಡುಗಡೆಗೊಂಡಿದೆ. ಮಾರಕ ಬೋನ್ ಮ್ಯಾರೊ ಕ್ಯಾನ್ಸರ್ ರೋಗಕ್ಕೆ ತುತ್ತಾಗಿರುವ ಕೃಷ್ಣಾಪುರ ನಿವಾಸಿ 24 ವರ್ಷದ ಅಬೂಬಕರ್ ಫರ್ವೀಝ್ ಅವರಿಗೆ 4,00,000 ರೂ. ಹಾಗೂ ಇತರ 11 ಮಂದಿಗೆ ಪರಿಹಾರ ಬಿಡುಗಡೆಯಾಗಿದೆ ಎಂದು ಕೆಪಿಸಿಸಿ ಪ್ರಧಾನ‌ ಕಾರ್ಯದರ್ಶಿ ಇನಾಯತ್ ಅಲಿ ಅವರು ಪತ್ರಿಕಾ […]

ಹಿಂದೂ ಕುಟುಂಬಕ್ಕೆ ಬಹಿಷ್ಕಾರ: ಶವ ಎತ್ತಲೂ ಬರದ ಜನ, ಅಂತ್ಯಕ್ರಿಯೆ ನಡೆಸಿದ ಮುಸ್ಲಿಮರು!

ನವದೆಹಲಿ: ಟಿಎಂಸಿ ನಾಯಕರಿಂದ ಬಹಿಷ್ಕೃತರಾದ ಕುಟುಂಬದ ಸದಸ್ಯರೊಬ್ಬ ಸಾವು ಕಂಡಿದ್ದರಿಂದ, ಯಾವುದೇ ನೆರೆಹೊರೆಯವರು ಆ ವ್ಯಕ್ತಿಯ ಶವವನ್ನು ಹೂಳಲು ಮುಂದೆ ಬಂದಿರಲಿಲ್ಲ. ಈ ಹಂತದಲ್ಲಿ ನೆರೆಹೊರೆಯ ಮುಸ್ಲಿಂ ಸಮುದಾಯದ ಯುವಕರು ಮೃತದೇಹವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಅಂತ್ಯಕ್ರಿಯೆಗಾಗಿ ಸ್ಮಶಾನಕ್ಕೆ ಸಾಗಿಸಿದರು. ಮಾಲ್ಡಾದಲ್ಲಿ ನಡೆದ ಈ ಘಟನೆ ಹಿಂದೂ-ಮುಸ್ಲಿಂ ಐಕ್ಯತೆಗೆ ಒಂದು ಉತ್ತಮ ಉದಾಹರಣೆಯಾಗಿದೆ. ಪ್ರದೇಶದಲ್ಲಿ ಅಕ್ರಮ ಭೂಕಬಳಿಕೆ ವಿವಾದ ನಡೆಯುತ್ತಿದ್ದು, ಸ್ಥಳೀಯ ಟಿಎಂಸಿ ನಾಯಕರು ಬಹಳ ಹಿಂದಿನಿಂದಲೂ ಅತಿಕ್ರಮಣದಾರರಿಗೆ ಬೆಂಬಲ ನೀಡುತ್ತಿದ್ದರು. ಟಿಎಂಸಿ ನಾಯಕನ ಆದೇಶದ […]

2 ತಿಂಗಳ ಗೃಹಲಕ್ಷ್ಮಿ ಹಣ ಯಾವಾಗ ಬಿಡುಗಡೆ ಗೊತ್ತಾ?: ಲಕ್ಷ್ಮೀ ಹೆಬ್ಬಾಳ್ಕರ್ ಸ್ಫೋಟಕ ಹೇಳಿಕೆ

ತುಮಕೂರು: ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳ ಗೃಹಲಕ್ಷ್ಮಿ ಹಣವನ್ನು ಆದಷ್ಟು ಬೇಗ ಬಿಡುಗಡೆ ಮಾಡುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು. ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳ ಗೃಹಲಕ್ಷ್ಮಿ ಹಣ ಇನ್ನೂ ಬಿಡುಗಡೆಯಾಗಿಲ್ಲ. ಆದಷ್ಟು ಬೇಗ ಬಿಡುಗಡೆ ಮಾಡ್ತೀವಿ. ನಮ್ಮ ಗೃಹಲಕ್ಷ್ಮಿಯನ್ನು ಕಾಪಿ ಮಾಡಿಕೊಂಡು ಬಿಜೆಪಿ ಅವರು ಎಲ್ಲಾ ಕಡೆ ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ. ಕರ್ನಾಟಕವನ್ನು ರೋಲ್ ಮಾಡಲ್ ಮಾಡಿಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದರು […]

26 ದಾಳಿಗಳ ರೂವಾರಿ-ಟಾಪ್‌ ನಕ್ಸಲ್‌ ಕಮಾಂಡರ್‌ ಹಿಡ್ಮಾ ಎನ್‌ ಕೌಂಟರ್‌ ನಲ್ಲಿ ಹತ

ವಿಶಾಖಪಟ್ಟಣ: ಭದ್ರತಾ ಪಡೆ ಹಾಗೂ ನಾಗರಿಕರ ಮೇಲೆ ಕನಿಷ್ಠ 26 ದಾಳಿಗಳನ್ನು ನಡೆಸಿರುವ ಆರೋಪ ಹೊತ್ತಿದ್ದ ನಟೋರಿಯಸ್‌ ಮಾವೋವಾದಿ ಕಮಾಂಡರ್‌ ಮಡ್ವಿ ಹಿಡ್ಮಾ ಮಂಗಳವಾರ (ನ.18) ಪೊಲೀಸ್‌ ಎನ್‌ ಕೌಂಟರ್‌ ನಲ್ಲಿ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಅಲ್ಲುರಿ ಸೀತಾರಾಮರಾಜು ಜಿಲ್ಲೆಯಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ. ಆಂಧ್ರಪ್ರದೇಶ, ಛತ್ತೀಸ್‌ಗಢ ಮತ್ತು ತೆಲಂಗಾಣದ ತ್ರಿ-ಜಂಕ್ಷನ್ ಬಳಿಯ ಮಾರೆಡುಮಿಲ್ಲಿ ಅರಣ್ಯದಲ್ಲಿ ಮಾವೋವಾದಿಗಳು ಮತ್ತು ಆಂಧ್ರಪ್ರದೇಶ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿದೆ. ಮೂಲಗಳ ಪ್ರಕಾರ, ಕನಿಷ್ಠ ಆರು ನಕ್ಸಲೀಯರ ಮೃತದೇಹಗಳು ಪತ್ತೆಯಾಗಿದ್ದು, […]

“ ISI ಏಜೆಂಟ್‌ಗಳಾಗಿ ಮುಸಲ್ಮಾನರಿಗಿಂತ ಹಿಂದೂಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ”: ಅಜಿತ್‌ ದೋವಲ್ ಅಚ್ಚರಿ ಹೇಳಿಕೆ

ಕೆಂಪು ಕೋಟೆ ಬಳಿ ನವೆಂಬರ್ 10ರಂದು ಸ್ಪೋಟ ಸಂಭವಿಸಿ 13 ಜನರು ಸಾವನ್ನಪ್ಪಿದ ಬಳಿಕ, ದೇಶದಲ್ಲಿ ಇಡೀ ಮುಸ್ಲಿಂ ಸಮುದಾಯವನ್ನು ಭಯೋತ್ಪಾದಕರು ಎಂದು ಕಟಕಟೆಯಲ್ಲಿ ನಿಲ್ಲಿಸುವ ಪ್ರಯತ್ನಗಳು ಜೋರಾಗಿಯೇ ನಡೆಯುತ್ತಿದೆ. ಬಹುತೇಕ ಮುಖ್ಯವಾಹಿನಿ ಮಾಧ್ಯಮಗಳು ಕೂಡ ದೃಢೀಕರಿಸಿದ, ಕಪೋಲಕಲ್ಪಿತ ವರದಿಗಳನ್ನು ಪ್ರಕಟಿಸಿ ಜನರನ್ನು ಪ್ರಚೋದಿಸುವ ಮೂಲಕ ಈ ಪ್ರಯತ್ನಕ್ಕೆ ಏಣಿ ಇಟ್ಟು ಕೊಡುತ್ತಿವೆ. ಈ ನಡುವೆ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರ (ಎನ್‌ಎಸ್‌ಎ) ಅಜಿತ ದೋವಲ್ ಅವರು “ಭಾರತದಲ್ಲಿ ಐಎಸ್‌ಐ (ಪಾಕಿಸ್ತಾನದ ಗುಪ್ತಚರ ಏಜೆನ್ಸಿ) ಕಾರ್ಯಗಳಿಗಾಗಿ ಮುಸ್ಲಿಮರಿಗಿಂತ […]

ಮದುವೆಯಾದ ಒಂದೇ ವರ್ಷದಲ್ಲಿ ಮೂರನೇ ಗಂಡನನ್ನೂ ಬಿಟ್ಟ ಖ್ಯಾತ ನಟಿ

ಬಹುಭಾಷಾ ಖ್ಯಾತ ನಟಿಯೋರ್ವರು ಇದೀಗ ಮೂರನೇ ಮದುವೆಯಿಂದಲೂ ವಿಚ್ಛೇದನ ಪಡೆದು ಸುದ್ದಿಯಾಗಿದ್ದಾರೆ. ಮೋಹನ್‌ಲಾಲ್ ಜೊತೆ `ತನ್ಮಾತ್ರ’ ಚಿತ್ರದಲ್ಲಿ ನಟಿಸಿದ್ದ ಖ್ಯಾತ ಮಲಯಾಳಂ ನಟಿ ಮೀರಾ ವಸುದೇವನ್ ಇದೀಗ ಮೂರನೇ ಪತಿಯಿಂದ ದೂರಾಗಿರುವ ಅಧಿಕೃತ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಘೋಷಿಸಿದ್ದಾರೆ. 2024ರಲ್ಲಿ ಇವರು ಸಿನಿಮಾಟೋಗ್ರಾಫರ್ ವಿಪಿನ್ ಪುತಿಯಂಕಂ ಜೊತೆ ವಿವಾಹವಾಗಿದ್ದರು. 2025ರಲ್ಲೇ ವಿಚ್ಛೇದನ(Divorce) ಪಡೆದು ಈಗ ಸಿಂಗಲ್ ಆಗಿರುವುದಾಗಿ ಪೋಸ್ಟ್ ಹಾಕಿದ್ದಾರೆ. ಕನ್ನಡ ಹೊರತಾಗಿ ಮಲಯಾಳಂ, ಹಿಂದಿ, ತಮಿಳು, ತೆಲುಗು ಚಿತ್ರದಲ್ಲಿ ನಟಿಸಿದ್ದ ಮೀರಾ ವಸುದೇವನ್ 2005ರಲ್ಲಿ ವಿಶಾಲ್ […]