ನವೆಂಬರ್ 15ರಿಂದ ಧರ್ಮಸ್ಥಳ ಲಕ್ಷದೀಪೋತ್ಸವ ವೈಭವ

ಉಜಿರೆ: ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದ ಲಕ್ಷದೀಪೋತ್ಸವ ಕಾರ್ಯಕ್ರಮ ನ.15ರಿಂದ 19ರವರೆಗೆ ನಡೆಯಲಿವೆ. 18ರಂದು ಸಂಜೆ 5ರಿಂದ ಸರ್ವಧರ್ಮ ಸಮ್ಮೇಳನದ 93ನೇ ಅಧಿವೇಶನ ನಡೆಯಲಿದ್ದು, ರಾಜ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ ಸಚಿವ ಎಂ.ಬಿ.ಪಾಟೀಲ್ ಅಧಿವೇಶನ ಉದ್ಘಾಟಿಸುವರು. ಹರಿಹರಪುರದ ಸ್ವಯಂಪ್ರಕಾಶ್ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಪತ್ರಕರ್ತ ಎ.ಸೂರ್ಯಪ್ರಕಾಶ್ ಪಂಡಿತ್, ಅಂಕಣಕಾರ ತನ್ವೀರ್ ಅಹಮ್ಮದ್ ಉಲ್ಲಾ ಉಪನ್ಯಾಸ ನೀಡುವರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ 8.30ರಿಂದ ಚೆನ್ನೈನ ಶ್ರೀದೇವಿ ನೃತ್ಯಾಲಯದ ಕಲಾವಿದರಿಂದ ಭರತನಾಟ್ಯ ನೃತ್ಯ ಪ್ರದರ್ಶನವಿದೆ.ರಾತ್ರಿ […]
ಪತ್ನಿಯಿಂದ ಕಿರುಕುಳ ಆರೋಪ: ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ!

ಬೆಂಗಳೂರು: ಪತ್ನಿಯಿಂದ ಕಿರಕುಳ ತಾಳಲಾರದೇ ಬ್ಯಾಂಕ್ ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಗಿರಿನಗರದಲ್ಲಿ ನಡೆದಿದೆ. ಗಗನ್ ರಾವ್ ನೇಣಿಗೆ ಶರಣಾದ ಪತಿ. 8 ತಿಂಗಳ ಹಿಂದಷ್ಟೇ ಮೇಘನಾ ಜಾವ್ ಅವರೊಂದಿಗೆ ಗಗನ್ ರಾವ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬ್ಯಾಂಕ್ ಉದ್ಯೋಗಿಯಾಗಿದ್ದ ಗಗನ್ ಪತ್ನಿ ವಿರುದ್ಧ ಕಿರುಕುಳ ಆರೋಪ ಮಾಡಿ ನೇಣಿಗೆ ಶರಣಾಗಿದ್ದಾರೆ. ಈ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೇಘನಾ, ಗಗನ್ ಮೇಲೆ ಅನುಮಾನ ಪಡುತ್ತಿದ್ದಳಂತೆ. ಇದೇ ವಿಚಾರಕ್ಕೆ ಮನೆಯಲ್ಲಿ ಹಲವು ಬಾರಿ […]
ಹಜ್ ಒಪ್ಪಂದಕ್ಕೆ ಸಹಿ ಹಾಕಿದ ಭಾರತ ಮತ್ತು ಸೌದಿ ಅರೇಬಿಯಾ: 2026ಕ್ಕೆ 1.75 ಲಕ್ಷ ಯಾತ್ರಿಕರ ಕೋಟಾ ನಿಗದಿ

ಹೊಸದಿಲ್ಲಿ: ಭಾರತ ಮತ್ತು ಸೌದಿ ಅರೇಬಿಯಾದ ನಡುವೆ ಹಜ್ 2026ರ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಭಾರತಕ್ಕೆ ಒಟ್ಟು 1,75,025 ಯಾತ್ರಿಕರ ಕೋಟಾವನ್ನು ನಿಗದಿಪಡಿಸಲಾಗಿದೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ನ. 7ರಿಂದ 9ರವರೆಗೆ ಸೌದಿ ಅರೇಬಿಯಾಕ್ಕೆ ಅಧಿಕೃತ ಭೇಟಿ ನೀಡಿದ್ದ ರಿಜಿಜು ಅವರು ರವಿವಾರ ಜಿದ್ದಾದಲ್ಲಿ ಸೌದಿ ಹಜ್ ಮತ್ತು ಉಮ್ರಾ ಸಚಿವ ಡಾ. ತೌಫಿಕ್ ಬಿನ್ ಫೌಝಾ ವನ್ ಅಲ್ ರಬಿಯಾ […]
ನಾಮಹಾಕಿ ತಟ್ಟೆ ಹಿಡಿದಿಲ್ಲ, ಅವ್ರ ಶ್ರದ್ಧೆ ನೋಡಿ ಕಲೀರಿ: ಏರ್ಪೋಟ್ನಲ್ಲಿ ನಮಾಜ್ ಬಗ್ಗೆ ಮಾಜಿ ಸಚಿವ ಆಂಜನೇಯ ಹೇಳಿಕೆ

ಹಾವೇರಿ: ಬೆಂಗಳೂರಿನ ಏರ್ಪೋರ್ಟ್ನಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಮಾಡಿದ ವಿಡಿಯೋ ವೈರಲ್ ಆಗಿದ್ದು, ವಿಮಾನ ನಿಲ್ದಾಣವನ್ನೇ ಮಸೀದಿ ಮಾಡಿಕೊಳ್ಳಲು ಅನುಮತಿ ಕೊಟ್ಟವರು ಯಾರು ಎಂದು ಬಿಜೆಪಿಗರು ಪ್ರಶ್ನೆ ಮಾಡಿದ್ದಾರೆ. ಇತ್ತ ಮುಸ್ಲಿಮರ ಪ್ರಾರ್ಥನೆಯನ್ನ ಮಾಜಿ ಸಚಿವ ಆಂಜನೇಯ ಸಮರ್ಥಿಸಿಕೊಳ್ಳುವ ಭರದಲ್ಲಿ ಕೆಲ ಅಚ್ಚರಿಯ ಹೇಳಿಕೆ ನೀಡದ್ದಾರೆ. ಹಾವೇರಿಯಲ್ಲಿ ಮಾತಾಡಿದ ಮಾಜಿ ಸಚಿವ ಎಚ್ ಆಂಜನೇಯ ಏರ್ಪೋರ್ಟ್ನಲ್ಲಿ ನಮಾಜ್ ಮಾಡಿದ್ದಾರೆ ತಪ್ಪೇನು ಎಂದಿದ್ದಾರೆ. ಅವ್ರು ಮಾಡಿದ್ದು ಪ್ರಾರ್ಥನೆ, ಅವರೇನು ಕೋಲು ಹಿಡಿದುಕೊಂಡು ಹೋಗಿಲ್ಲ. ಪಾಪ ಅವರು ನಮಾಜ್ ಕೂಡ […]
ವಿಟ್ಲ | ತೋಡಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

ವಿಟ್ಲ: ವಿಟ್ಲ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಬಳಿಯ ಮೋರಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. ಮೃತಪಟ್ಟ ವ್ಯಕ್ತಿ ಸಮೀಪದ ಕೋಟಿಕೆರೆ ನಿವಾಸಿ ಮಂಜುನಾಥ್ (55) ಎಂದು ಗುರುತಿಸಲಾಗಿದೆ. ಅಡಿಕೆ ಗಾರ್ಬಲಲ್ಲಿ ಕೆಲಸ ಮಾಡುತ್ತಿದ್ದ ಈತ ರವಿವಾರ ರಾತ್ರಿ ಗಂಟೆ 9.30ರ ಅನಂತರ ನಾಪತ್ತೆಯಾಗಿದ್ದರು. ಬೆಳಗ್ಗೆ ಸಾರ್ವಜನಿಕರು ನಡೆದುಕೊಂಡು ಹೋಗುತ್ತಿದ್ದಾಗ ಮೋರಿಯ ಸ್ವಲ್ಪ ನೀರಿನಲ್ಲಿ ಶವ ತೇಲುತ್ತಿರುವುದು ಕಂಡು ಬಂದಿದೆ. ಆತನಿಗೆ ಕುಡಿತದ ಚಟವಿತ್ತೆನ್ನಲಾಗಿದೆ. ಆದರೆ ಆತ ಮೋರಿಗೆ ಬಿದ್ದು ಸಾವನ್ನಪ್ಪಿದ ಬಗ್ಗೆ ಖಚಿತ ಮಾಹಿತಿ ತಿಳಿದುಬಂದಿಲ್ಲ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್: ಸಿಎಂ, ಪ್ರಿಯಾಂಕ್ ಅನುಮತಿಸಿದರೇ ಎಂದ ಬಿಜೆಪಿ

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ ಮುಸ್ಲಿಂ ಪ್ರಯಾಣಿಕರು ನಮಾಜ್ ಮಾಡಿದ ವಿಡಿಯೊ ಎಲ್ಲೆಡೆ ಹರಿದಾಡುತ್ತಿದ್ದು, ಆಡಳತಾರೂಢ ಕಾಂಗ್ರೆಸ್ ಪಕ್ಷವನ್ನು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ. ‘ಇದಕ್ಕೆ ಹೇಗೆ ಅವಕಾಶ ನೀಡಲಾಯಿತು…?’ ಎಂದು ಬಿಜೆಪಿ ವಕ್ತಾರ ವಿಜಯ್ ಪ್ರಸಾದ್ ಅವರು ಕೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಐಟಿ ಹಾಗೂ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಇದಕ್ಕೆ ಅನುಮತಿ ನೀಡಿದ್ದಾರಾ? ಎಂದೂ ಪ್ರಶ್ನಿಸಿದ್ದಾರೆ. ಅತ್ಯಂತ ಭಿಗಿ ಭದ್ರತೆಯ ವಲಯದಲ್ಲಿ ಸಾಮೂಹಿಕ ನಮಾಜ್ ನಡೆಸಲು ಇವರು ಅನುಮತಿ […]
ನನ್ನ ಮಗ ನೋಡಬಾರದು: ತನ್ನ 400+ ಸೆಕ್ಸ್ ವಿಡಿಯೋಗಳನ್ನ ಡಿಲೀಟ್ ಮಾಡುವಂತೆ ಮಾಜಿ ನೀಲಿತಾರೆ ಮನವಿ

ವಾಷಿಂಗ್ಟನ್: ಬಹಳ ವರ್ಷಗಳ ಹಿಂದೆಯೇ ಸೆಕ್ಸ್ ಉದ್ಯಮಕ್ಕೆ ಗುಡ್‌ಬೈ ಹೇಳಿದ ಮಾಜಿ ನೀಲಿತಾರೆ ಲಾನಾ ರೋಡ್ಸ್ ತನ್ನ 400+ ಸೆಕ್ಸ್ ವಿಡಿಯೋಗಳನ್ನ ಪೋರ್ನ್ ಸೈಟ್‌ಗಳಿಂದ ಡಿಲೀಟ್ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಮಾಜಿ ನೀಲಿತಾರೆ ಲಾನಾ ರೋಡ್ಸ್, ಭಾವನಾತ್ಮಕ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ವಿವಿಧ ಪೋರ್ನ್ ವೆಬ್‌ಸೈಟ್‌ಗಳಲ್ಲಿರುವ ನನ್ನ 400+ ಸೆಕ್ಸ್ ವಿಡಿಯೋಗಳನ್ನ ಶಾಶ್ವತವಾಗಿ ಡಿಲೀಟ್ ಮಾಡುವಂತೆ ಕೇಳಿಕೊಂಡಿದ್ದಾರೆ. ಕಾರಣ ಏನು?ಪ್ರಮುಖವಾಗಿ ವಿಡಿಯೋಗಳನ್ನ ಡಿಲೀಟ್ ಮಾಡೋದಕ್ಕೆ ಲಾನಾ 2 ಕಾರಣಗಳನ್ನ ಮುಂದಿಟಟ್ಟಿದ್ದಾರೆ. ಮೊದಲನೆಯದಾಗಿ ತಾನು ಸೆಕ್ಸ್ ಉದ್ಯಮಕ್ಕೆ ಬಂದಾಗ ಇನ್ನೂ […]
ದೇಶ ನಡೆಯುತ್ತಿರುವುದು ಸಂವಿಧಾನದ ತಳಹದಿಯ ಮೇಲೆಯೇ ಹೊರತು ಮನುಸ್ಮೃತಿಯ ಪ್ರತಿಪಾದನೆಯಿಂದಲ್ಲ: ಬಿಕೆ ಹರಿಪ್ರಸಾದ್ ತಿರುಗೇಟು

“ನೊಂದಣಿ ಇಲ್ಲದ ಸಂಘಟನೆಯ ನಾಯಕರು ಹೇಳಿದ ತಕ್ಷಣ ದೇಶ ಹಿಂದೂ ರಾಷ್ಟ್ರವಾಗಲು ಸಾಧ್ಯವಿಲ್ಲ” ಬೆಂಗಳೂರು: ಭಾರತ ಹಿಂದೂ ರಾಷ್ಟ್ರವೋ, ಜಾತ್ಯಾತೀತ ರಾಷ್ಟ್ರವೋ ಎನ್ನುವುದು ದೇಶದ ಸಂವಿಧಾನದಲ್ಲಿ ಸ್ಪಷ್ಟವಾಗಿದೆ. ನೊಂದಣಿ ಇಲ್ಲದ ಸಂಘಟನೆಯ ನಾಯಕರು ಹೇಳಿದ ತಕ್ಷಣ ದೇಶ ಹಿಂದೂ ರಾಷ್ಟ್ರವಾಗಲು ಸಾಧ್ಯವಿಲ್ಲ. ದೇಶ ನಡೆಯುತ್ತಿರುವುದು ಸಂವಿಧಾನದ ತಳಹದಿಯ ಮೇಲೆಯೇ ಹೊರತು ಮನುಸ್ಮೃತಿಯ ಪ್ರತಿಪಾದನೆಯ ಮೇಲಲ್ಲ ಎಂದು ವಿಧಾನ ಪರಿಷತ್ತಿನ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ತೀರುಗೇಟು ನೀಡಿದ್ದಾರೆ. ಭಾರತದಲ್ಲಿರುವವರೆಲ್ಲರೂ ಹಿಂದುಗಳಾದರೇ ಇದೇ ನೆಲದಲ್ಲಿ ವಾಸಿಸುತ್ತಿರುವ ಮುಸ್ಲಿಂ, ಕ್ರಿಶ್ಚಿಯನ್, ಜೈನ, […]
ಜನರು ಮನಸ್ಸು ಮಾಡಿದರೆ ಭಾರತ ನಾಳೆ ಬೆಳಗ್ಗೆ ಹಿಂದು ರಾಷ್ಟ್ರ ಆಗಲಿದೆ: ಮೋಹನ್ ಭಾಗವತ್

ಬೆಂಗಳೂರು: ದೇಶದ 140 ಕೋಟಿ ಜನರು ಮನಸ್ಸು ಮಾಡಿದರೆ ಭಾರತ ನಾಳೆ ಬೆಳಗ್ಗೆಯೆ ಹಿಂದು ರಾಷ್ಟ್ರ ಆಗುತ್ತದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಸರಸಂಘ ಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಹಲವು ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಮೋಹನ್ ಭಾಗವತ್ ತಮ್ಮ ಭಾಷಣದಲ್ಲಿ ಹಿಂದೂ ರಾಷ್ಟ್ರ ಪರಿಕಲ್ಪನೆ ಮತ್ತಷ್ಟು ಗಟ್ಟಿಗೊಳಿಸಿದ್ದಾರೆ. ಹಿಂದು ರಾಷ್ಟ್ರಕ್ಕೆ ಜನರು ಮನಸ್ಸು ಮಾಡಬೇಕು ಎಂದು ಹೇಳಿದ್ದಾರೆ. ಬಲಿಷ್ಠ ಭಾರತ ಕಟ್ಟುವುದು ಆರ್‌ಎಸ್ಎಸ್ ಗುರಿಯಾಗಿದೆ. ಇದಕ್ಕಾಗಿ ಅವರಿತ ಪ್ರಯತ್ನ ಮಾಡುತ್ತೇವೆ. ಬಲಿಷ್ಠ ಭಾರತ […]
ನ.9ರಂದು ದುಬೈ ಕರ್ನಾಟಕ ಸಂಘದಿಂದ “ದುಬೈ ಕರ್ನಾಟಕ ರಾಜ್ಯೋತ್ಸವ -2025”: ಸಮದ್ ಬಿರಾಲಿಗೆ “ದುಬೈ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ-2025”

ದುಬೈ : ಕರ್ನಾಟಕ ಸಂಘ ದುಬೈ ಆಯೋಜನೆಯ “ದುಬೈ ಕರ್ನಾಟಕ ರಾಜ್ಯೋತ್ಸವ -2025” ನವೆಂಬರ್ 9ರಂದು ನಗರದ ನ್ಯೂ ಡಾನ್ ಪ್ರೈವೇಟ್ ಸ್ಕೂಲ್ ಮುಹೇಸಿನ ಕಿಸೀಸ್ (ಮದೀನಾ ಮಾಲ್ ಹಿಂಬದಿಯಲ್ಲಿ) ನ ಸಭಾಂಗಣದಲ್ಲಿ ನಡೆಯಲಿದೆ. ಬೆಳಿಗ್ಗೆ ಹತ್ತು ಮೂವತ್ತರಿಂದ ಸಂಜೆಯ ವರೆಗೆ ಜರುಗುವ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು , ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು ಮತ್ತು ಜಾಗತಿಕ ವ್ಯಾಪಾರ ವೇದಿಕೆಯ ಅನಾವರಣಗಳು ನಡೆಯಲಿರುವುದು. ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಕರ್ನಾಟಕ […]