ಒಡಹುಟ್ಟಿದ ಸಹೋದರಿಗೆ ಮಗು ಕರುಣಿಸಿದ ಪಾಪಿ ಅಣ್ಣ ಅರೆಸ್ಟ್

ಕೊಪ್ಪಳ: ಇಲ್ಲಿನ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 17 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳಿಗೆ ಆಕೆಯ ಸಹೋದರನೇ ಮಗು ಕರಣಿಸಿದ್ದಾನೆ. ಕಳೆದ ವಾರ ತೀವ್ರ ಹೊಟ್ಟೆನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದ ಬಾಲಕಿಗೆ ವೈದ್ಯಕೀಯ ಪರೀಕ್ಷೆ ನಡೆಸಿದಾಗ, ಆಕೆ ಗರ್ಭಿಣಿಯಾಗಿರುವುದು ತಿಳಿದು ಬಂದಿತ್ತು. ಬಳಿಕ ಆಕೆ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಇಡೀ ಕುಟುಂಬಕ್ಕೆ, ಆ ಬಾಲಕಿ ತಾಯಿ ಆಗಿದ್ದಾಳೆ ಎಂಬ ವಿಷಯದಿಂದ ಆಘಾತವಾಗಿದೆ. ಆದರೆ, ಮಗುವಿಗೆ ಜನ್ಮ ನೀಡಿದ ನಂತರ, ಆ ಬಾಲಕಿ ನೀಡಿದ ಹೇಳಿಕೆಯು ಮತ್ತೊಂದು […]
ಬೆಳ್ತಂಗಡಿ: ಪಟ್ಟಣ ಪಂಚಾಯತ್ ನಾಮನಿರ್ದೇಶಕ ಸದಸ್ಯ ಬಶೀರ್ ನೇಣು ಬಿಗಿದು ಆತ್ಮಹತ್ಯೆ

ಬೆಳ್ತಂಗಡಿ: ರೆಂಕೆದಗುತ್ತು ನಿವಾಸಿ, ಪಟ್ಟಣ ಪಂಚಾಯತ್ ನಾಮನಿರ್ದೇಶನ ಸದಸ್ಯ. ಅಬ್ದುಲ್ ಬಶೀರ್ ರವರು ಅ6ರಂದು ಬೆಳಗ್ಗೆ ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೇಣು ಬಿಗಿದ ಸ್ಥಿತಿಯಲ್ಲಿ ಇವರ ಮೃತದೇಹ ಮನೆಯಲ್ಲಿ ಪತ್ತೆಯಾಗಿದೆ. ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಇವರು ಪತ್ನಿ, ಮೂರು ಮಕ್ಕಳನ್ನು ಅಗಲಿದ್ದಾರೆ. ಇವರ ಆತ್ಮಹತ್ಯೆಗೆ ಕಾರಣವೇನು ಎಂದು ತಿಳಿದು ಬಂದಿಲ್ಲ.
ಮಂಗಳೂರು: ಮದರಸದಿಂದ ಮನೆಗೆ ಹಿಂದಿರುಗುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿ ದಾಳಿ

ಬಜ್ಪೆ: ಮದರಸಕ್ಕೆ ಹೋಗಿ ಮನೆಗೆ ಹಿಂದಿರುಗುತ್ತಿದ್ದ 6 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ ಘಟನೆ ಬಜ್ಪೆ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೌಹಾರ್ದ ನಗರದಲ್ಲಿ ಇಂದು ನಡೆದಿದೆ. ಸೌಹಾರ್ದ ನಗರದ ನಿವಾಸಿ ಮುಹಮ್ಮದ್ ಅಝರ್ ಅವರ ಪುತ್ರ ಅಹಿಲ್ ಗಾಯಗೊಂಡ ಬಾಲಕ ಎಂದು ತಿಳಿದು ಬಂದಿದೆ. ಬೆಳಗ್ಗೆ ಮನೆಯ ಸಮೀಪದ ಮದರಸಕ್ಕೆ ತೆರಳಿ ವಾಪಸ್ ಮನೆಗೆ ಮರಳುವ ವೇಳೆ ಏಕಾಏಕಿ ಸುತ್ತುವರಿದ ಬೀದಿ ನಾಯಿಗಳು ಮಗುವಿನ ಕೆನ್ನೆ, ಕೈಗೆ ಕಚ್ಚಿ ಗಂಭೀರ ಗಾಯಗೊಳಿಸಿದೆ […]
ಕ್ರಾಂತಿ ಏನಿದ್ದರೂ 2028ಕ್ಕೆ; ನಾನು ಪಕ್ಷ ಹಾಕಿದ ಗೆರೆ ದಾಟುವುದಿಲ್ಲ: ಡಿಕೆಶಿ ಮಹತ್ವದ ಹೇಳಿಕೆ

ನವದೆಹಲಿ: ರಾಜ್ಯ ರಾಜಕೀಯದಲ್ಲಿ “ನವೆಂಬರ್ ಕ್ರಾಂತಿ” ಭಾರಿ ಸದ್ದು ಮಾಡುತ್ತಿದೆ. ಆದರೆ ನಾಯಕತ್ವ ಬದಲಾವಣೆಯ ಈ ಕ್ರಾಂತಿಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು, 2028 ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಮರಳಿದಾಗ ಮಾತ್ರ ಕ್ರಾಂತಿ ಎಂದು ಗುರುವಾರ ಹೇಳಿದ್ದಾರೆ. ತಾವು ಪಕ್ಷದ “ಶಿಸ್ತಿನ ಸಿಪಾಯಿ” ಎಂದು ಹೇಳಿಕೊಂಡಿರುವ ರಾಜ್ಯ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಡಿಕೆ ಶಿವಕುಮಾರ್, ತಾವು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿದ್ದೇವೆ ಎಂದು ಹೇಳಿದರು. ಈ ತಿಂಗಳು […]
ಪುತ್ತೂರು | ಜಾನುವಾರು ಖರೀದಿಸಿದ ರಶೀದಿ ಎಂದು ಸುಳ್ಳು ದಾಖಲೆ ಪ್ರಸಾರ ಆರೋಪ: ಪ್ರಕರಣ ದಾಖಲು

ಪುತ್ತೂರು: ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಅ.ಕ್ರ: 115/2025. ಕಲಂ 132, 109, 303(2) r/w 3(5) ಭಾರತೀಯ ನ್ಯಾಯ ಸಂಹಿತೆ 2023. ಮತ್ತು ಕಲಂ 4, 5, 6, 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿ ಬಂಧಕ ಕಾಯ್ದೆ & ಸಂರಕ್ಷಣಾ ಕಾಯ್ದೆ 2020 ರಂತೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸದ್ರಿ ವಾಹನದಲ್ಲಿ ಸಾಗಿಸಲಾಗುತ್ತಿದ್ದ ಜಾನುವಾರುಗಳನ್ನು ಖರೀದಿ ಮಾಡಿರುವ ರಶೀದಿಗಳೆಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದ್ದ ದಾಖಲೆಗಳ ಬಗ್ಗೆ ವಿಚಾರಿಸಲಾಗಿ, ಚನ್ನರಾಯಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿರವರು […]
ಕೆಜಿಎಫ್ ಚಾಚಾ ಇನ್ನಿಲ್ಲ: ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದ ಹರೀಶ್ ರಾಯ್ ನಿಧನ!
ಕನ್ನಡ ಚಿತ್ರರಂಗದ ಬ್ಲಾಕ್ಬಸ್ಟರ್ ‘ಕೆಜಿಎಫ್’ ಮೂಲಕ ‘ಕೆಜಿಎಫ್ ಚಾಚಾ’ ಎಂದೇ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದ ನಟ ಹರೀಶ್ ರಾಯ್ (Harish Rai) ಕೊನೆಯುಸಿರೆಳೆದಿದ್ದಾರೆ. 2022ರಲ್ಲಿ ತಗುಲಿದ್ದ ಕ್ಯಾನ್ಸರ್ ಇತ್ತೀಚೆಗೆ ಉಲ್ಭಣಗೊಂಡಿತ್ತು. ನೆರವಿಗೆ ಕೋರಿದ್ದ ನಟನಿಗೆ ಸಹಾಯ ಹಸ್ತವೂ ಸಿಕ್ಕಿತ್ತು. ಆದ್ರಿಂದು ಬೆಳಗ್ಗೆ ಸುಮಾರು 11 ಗಂಟೆ ಹೊತ್ತಿಗೆ ಕೊನೆಯುಸಿರೆಳೆದಿದ್ದು, ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಸಂಭವಿಸಿದೆ. ಸ್ಯಾಂಡಲ್ವುಡ್ನ ಸೂಪರ್ ಹಿಟ್ ‘ಓಂ’ ಸಿನಿಮಾದಿಂದ ಲೈಮ್ಲೈಟ್ಗೆ ಬಂದ ನಟರುಗಳಲ್ಲಿ ಹರೀಶ್ ರಾಯ್ ಕೂಡಾ ಓರ್ವರು. ಈ ಸಿನಿಮಾ ಸಕ್ಸಸ್ ಬಳಿಕ […]
ಬೆಳಗಾವಿ: MES ಮುಖಂಡನ ಜೊತೆಗಿನ ಸೆಲ್ಫಿ ಸಂಕಷ್ಟ; CPI ಜೆ.ಎಂ ಕಾಲೆಮಿರ್ಚಿ ಎತ್ತಂಗಡಿ!

ಬೆಳಗಾವಿ: ನಿಷೇಧದ ನಡುವೆಯೂ ಕನ್ನಡ ರಾಜ್ಯೋತ್ಸವ ದಿನದಂದು ಬೆಳಗಾವಿಯಲ್ಲಿ ಎಂಇಎಸ್ ಪುಂಡರು ಕರಾಳ ದಿನ ಎಂದು ಮೆರವಣಿಗೆ ಮಾಡಿದ್ದರು. ಈ ವೇಳೆ ಎಂಇಎಸ್ ಮುಖಂಡ ಶುಭಂ ಸೆಳಕೆ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ CPI ಅನ್ನು ಎತ್ತಂಗಡಿ ಮಾಡಲಾಗಿದೆ. ಎಂಇಎಸ್ ಮುಖಂಡ ಶುಭಂ ಸೆಳಕೆ ಜೊತೆ ಮಾಳಮಾರುತಿ ಠಾಣೆ ಸಿಪಿಐ ಜೆ.ಎಂ.ಕಾಲೆಮಿರ್ಚಿ ಸೆಲ್ಫಿ ಫೋಟೋ ತೆಗೆದುಕೊಂಡಿದ್ದರು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲೆ ಸಿಪಿಐ ವಿರುದ್ಧ ಕಠಿಣ ಕ್ರಮ ಜರಗಿಸುವಂತೆ ಆಗ್ರಹಗಳು ಕೇಳಿಬಂದಿದ್ದವು. ಇದೀಗ ಸಿಪಿಐ ಕಾಲೇಮಿರ್ಚಿಯನ್ನು ವರ್ಗಾವಣೆ […]
ಸರ್.. ನಿಮ್ಮ ಸ್ಕಿನ್‌ಕೇರ್ ಗುಟ್ಟೇನು?: ಕ್ರಿಕೆಟ್ ಆಟಗಾರ್ತಿ ಪ್ರಶ್ನೆಗೆ ಮೋದಿ ಹೇಳಿದ್ದೇನು?

ನವದೆಹಲಿ: ಐಸಿಸಿ ವಿಶ್ವಕಪ್ ಗೆದ್ದ ಮಹಿಳಾ ತಂಡದ ಜೊತೆ ಸಂವಾದದ ವೇಳೆ ಆಟಗಾರ್ತಿಯರು ಪ್ರಧಾನಿ ಮೋದಿ ಅವರಿಗೆ ಕೇಳಿದ ಪ್ರಶ್ನೆ ಗಮನ ಸೆಳೆದಿದೆ. ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಹರ್ಲೀನ್ ಡಿಯೋಲ್, ‘ಸರ್.. ನೀವು ತುಂಬಾ ಹೊಳೆಯುತ್ತೀರಿ. ನಿಮ್ಮ ತ್ವಚೆ ಆರೈಕೆಯ ದಿನಚರಿಯೇನು’ ಮೋದಿಗೆ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಆಕೆಯ ಅನಿರೀಕ್ಷಿತ ಪ್ರಶ್ನೆ ಪ್ರಧಾನಿ ಸೇರಿದಂತೆ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿತು. ಮೋದಿ ಇನ್ನೂ ಖುಷಿಯಿಂದ, ‘ನಾನು ಅದೆಲ್ಲದರ ಬಗ್ಗೆ ಯೋಚಿಸುವುದಿಲ್ಲ’ ಎಂದು ಉತ್ತರಿಸಿದರು. ತಂಡದ ಮತ್ತೊಬ್ಬ ಆಟಗಾರ್ತಿ, ‘ಸರ್, ದೇಶವಾಸಿಗಳ […]
ಇದು ರಾಜಕೀಯ ನಾಟಕದಂತೆ ಕಾಣುತ್ತಿದೆ: ರಾಹುಲ್ ಗಾಂಧಿ ಆರೋಪ ಸುಳ್ಳು ಎಂದ ಬ್ರೆಜಿಲ್ ಮಾಡೆಲ್

ನವದೆಹಲಿ: ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಮತಗಳ್ಳತನ ಆರೋಪ ಮಾಡಿದ್ದ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪವನ್ನು ಸ್ವತಃ ಬ್ರೆಜಿಲಿಯನ್ ಮಾಡೆಲ್ ಅಲ್ಲಗಳೆದಿದ್ದಾರೆ. ಹರಿಯಾಣ ಚುನಾವಣೆಯಲ್ಲಿ ಭಾರೀ ಅಕ್ರಮ ನಡೆದಿದೆ. ಬ್ರೆಜಿಲ್ ರೂಪದರ್ಶಿ 22 ಕಡೆ ಮತ ಚಲಾಯಿಸಿದ್ದಾರೆ ಎಂದು ಸುದ್ದಿಗೋಷ್ಠಿ ನಡೆಸಿ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದರು. ಆರೋಪದ ಬಗ್ಗೆ ಬ್ರೆಜಿಲ್ ಮಾಡೆಲ್ ಲಾರಿಸಾ ಪ್ರತಿಕ್ರಿಯೆ ನೀಡಿದ್ದಾರೆ. ಅವರು ನನ್ನ ಹಳೆಯ ಫೋಟೊ ಬಳಸಿ ಸೀಮಾ ಮತ್ತು ಸರಸ್ವತಿ ಎಂದು ಕರೆಯುತ್ತಿದ್ದಾರೆ. ನಾನು ಬ್ರೆಜಿಲಿಯನ್.. […]
‘ಗ್ಯಾರೆಂಟಿ ಯೋಜನೆಗಳ’ ಭರವಸೆ ನೀಡಿ ನ್ಯೂಯಾರ್ಕ್ ಮೇಯರ್ ಚುನಾವಣೆ ಗೆದ್ದ ಜೊಹ್ರಾನ್ ಮಮ್ದಾನಿ

ನ್ಯೂಯಾರ್ಕ್ ನಗರದ ಮೇಯರ್ ಚುನಾವಣೆಯಲ್ಲಿ ಗೆಲವು ಸಾಧಿಸುವ ಮೂಲಕ ಜೊಹ್ರಾನ್ ಮಮ್ದಾನಿ ಅವರು ಹೊಸ ಇತಿಹಾಸ ರಚಿಸಿದ್ದಾರೆ. ಅನೇಕ ವಿರೋಧಗಳ ನಡುವೆಯೂ, ವಿಶ್ವದ ಅತ್ಯಂತ ಪ್ರತಿಷ್ಠಿತ ನಗರದ ಮೊದಲ ಮುಸ್ಲಿಂ, ವಲಸಿಗ ಅಭ್ಯರ್ಥಿಯಾಗಿ ಮಮ್ದಾನಿ ಜಯ ಸಾಧಿಸಿದ್ದಾರೆ. ಆದರೆ, ಅವರ ಗೆಲುವಿನಲ್ಲಿ ವಿಶೇಷವಾಗಿ ಎದ್ದು ಕಾಣುವ ಅಂಶವೆಂದರೆ, ಈ ಡೆಮಾಕ್ರಟಿಕ್ ಸಮಾಜವಾದಿ ನಾಯಕ ದೆಹಲಿಯ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರ ‘ಮಾದರಿ’ಯನ್ನು ಅಳವಡಿಸಿಕೊಂಡಿರುವುದು. ಹೌದು, ಅಮೆರಿಕದಂತಹ ಶ್ರೀಮಂತ ದೇಶದಲ್ಲೂ ಬಡವರ […]