ಪಥಸಂಚಲನಕ್ಕೆ ಹೈಕೋರ್ಟ್ ಅನುಮತಿ; RSSಗೆ ಈಗ ಸಂವಿಧಾನದ ಶಕ್ತಿ ಅರ್ಥವಾಗಿದೆ: ಪ್ರಿಯಾಂಕ್ ಖರ್ಗೆ ಗುಡುಗು

ಬೆಂಗಳೂರು: ರಾಜ್ಯದ ಗಮನ ಸೆಳೆದಿದ್ದ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರ್‌ಎಸ್ಎಸ್ ನಡೆಸಲು ಉದ್ದೇಶಿಸಿದ್ದ ಪಥಸಂಚಲನಕ್ಕೆ ಹೈಕೋರ್ಟ್ ಅನುಮತಿ ನೀಡಿರುವ ಕುರಿತು ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಆರ್‌ಎಸ್‌ಎಸ್‌ಗೆ ಈಗ ಸಂವಿಧಾನದ ಶಕ್ತಿ ಅರ್ಥವಾಗಿದೆ ಎಂದು ಗುಡುಗಿದ್ದಾರೆ. ‘ಯಾವ ಸಂಘಗಳೇ ಆಗಲಿ ಸಂವಿಧಾನದ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ನಿಯಮಗಳಿಗೆ ಅತೀತರಲ್ಲ. ಸಂವಿಧಾನಕ್ಕೆ ತಲೆಬಾಗಿದರೆ ಮಾತ್ರ ಬದುಕು ಸುಂದರ. ಸಂವಿಧಾನಕ್ಕೆ ಸವಾಲು ಹಾಕಿದರೆ ಬದುಕು ದುಸ್ಥರ. ಆರ್‌ಎಸ್‌ಎಸ್ ಎಂಬ ಸಂಘಟನೆಗೆ ಈ ಸತ್ಯದ ಅರಿವಾಗಿದೆ ಎಂದು ಭಾವಿಸಿದ್ದೇನೆ’ ಎಂದು […]
ಸಚಿವ ಸಂಪುಟದಲ್ಲಿ ಅವಕಾಶ ಸಿಗುವ ವಿಶ್ವಾಸ ಇದೆ: ಸಲೀಂ ಅಹ್ಮದ್

ವಿಜಯಪುರ: ರಾಜ್ಯ ಸಚಿವ ಸಂಪುಟದಲ್ಲಿ ಬದಲಾವಣೆ ಮಾಡಬೇಕು ಎಂಬ ಚಿಂತನೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ನನಗೆ ಅವಕಾಶ ಸಿಗುವ ವಿಶ್ವಾಸವಿದೆ. ಇದು ಹಕ್ಕೊತ್ತಾಯವಲ್ಲ, ಬದಲಿಗೆ ನಾವು ಮಾಡಿರುವ ಕೆಲಸಕ್ಕೆ ಪ್ರಮುಖ್ಯತೆ ಸಿಗಬೇಕು ಎಂದು ವಿಧಾನ ಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ (ನ.13) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಆಗುತ್ತಿದೆ. ಕೆಲ ಸಚಿವರನ್ನು ಪಕ್ಷದ ಕೆಲಸಕ್ಕೆ ನಿಯೋಜನೆ ಮಾಡಿ, […]
ಬೆಳ್ತಂಗಡಿ | ಜೈಲಿಂದ ಹೊರ ಬಂದ ಬೆನ್ನಲ್ಲೇ ಮತ್ತೆ ಕಳ್ಳತನ: ಇತ್ತೆ ಬರ್ಪೆ ಅಬೂಬಕ್ಕರ್ ಬಂಧನ

ಬೆಳ್ತಂಗಡಿ: ಉಡುಪಿಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿ, ಇತ್ತೀಚೆಗಷ್ಟೇ ಜೈಲಿಂದ ಹೊರಬಂದಿದ್ದ ಇತ್ತ ಬರ್ಪೆ ಅಬೂಬಕರ್ ಮತ್ತೆ ಕಳ್ಳತನ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ. ಕುತ್ಲೂರಿನಲ್ಲಿ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಪ್ರಕರಣದ ವೇಣೂರು ಪೊಲೀಸರು ಇತ್ತೆ ಬರ್ಪೆ ಅಬೂಬಕರ್(71) ನನ್ನು ಅರೆಸ್ಟ್ ಮಾಡಿದ್ದಾರೆ. ನಾರವಿ ಗ್ರಾಮದ ಕುತ್ಲೂರಿನ ಮಂಜು ಶ್ರೀ ನಗರದ ಶಿಕ್ಷಕ ಅವಿನಾಶ್ ಎಂಬವರ ಮನೆಯಲ್ಲಿ ಅ.2 ರಿಂದ ಅ.6ರ ನಡುವೆ ಮನೆಯಲ್ಲಿ ಯಾರು ಇಲ್ಲದ ವೇಳೆ […]
ಬಿಹಾರದಲ್ಲಿ ಮುಸ್ಲಿಮರು, ಮಹಿಳೆಯರಿಂದ ದಾಖಲೆಯ ಮತದಾನ; ಇದರ ಲಾಭ ಯಾರಿಗೆ?

ಪಾಟ್ನಾ: 2025ರ ಬಿಹಾರ ವಿಧಾನಸಭಾ ಚುನಾವಣೆಗೆ ಎರಡು ಹಂತಗಳಲ್ಲಿ ನಡೆದ ಮತದಾನದಲ್ಲಿ ದಾಖಲೆಯ ಒಟ್ಟಾರೆ ಶೇ 66.91 ರಷ್ಟು ಮತ ಚಲಾವಣೆಯಾಗಿದ್ದು, ಇತಿಹಾಸದ ಪುಟಗಳಲ್ಲಿ ಸೇರಿದೆ. ದಾಖಲೆಯ ಮತದಾನವು ಬಿಜೆಪಿ-ಜೆಡಿಯು ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಅಥವಾ ವಿರೋಧ ಪಕ್ಷಗಳ ಇಂಡಿಯಾ ಬಣಕ್ಕೆ ಲಾಭವಾಗುತ್ತದೆಯೇ ಎಂಬ ಊಹಾಪೋಹಗಳಿಗೆ ಕಾರಣವಾಗಿದೆ. ಭಾರತೀಯ ಚುನಾವಣಾ ಆಯೋಗ (ECI) ಬಿಡುಗಡೆ ಮಾಡಿರುವ ಪರಿಷ್ಕೃತ ದತ್ತಾಂಶದ ಪ್ರಕಾರ, ಸದ್ಯದ ಚುನಾವಣೆಯಲ್ಲಿ ಶೇ 69.1 ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ […]
ದೆಹಲಿಯಲ್ಲಿ ಮತ್ತೊಂದು ಸ್ಫೋಟದ ಶಬ್ಧ: ಬೆಚ್ಚಿಬಿದ್ದ ಜನ; ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ದಳ ದೌಡು!

ದೆಹಲಿ: ಕೆಂಪು ಕೋಟೆ ಸ್ಫೋಟದ ಆಘಾತದಿಂದ ಇನ್ನೂ ದೆಹಲಿಯಲ್ಲಿ ಭೀತಿ ಕಡಿಮೆಯಾಗುವಷ್ಟರಲ್ಲಿ ಇದೀಗ ಮತ್ತೊಂದು ಸ್ಪೋಟದ ಶಬ್ಧ ಕೇಳಿಬಂದಿದೆ. ಇಂದು ಬೆಳ್ಳಂಬೆಳಗ್ಗೆ ಮತ್ತೊಂದು ಸ್ಫೋಟದ ಶಬ್ದ ಇಡೀ ರಾಜಧಾನಿಯನ್ನು ನಡುಗಿಸಿದೆ. ಗುರುವಾರ ಬೆಳಿಗ್ಗೆ 9:18 ಸುಮಾರಿಗೆ ಮಹಿಪಾಲ್ಪುರದ ರಾಡಿಸನ್ ಹೋಟೆಲ್ ಬಳಿ ಭಯಂಕರ ಸ್ಫೋಟದ ಶಬ್ದ ಕೇಳಿಸಿದೆ. ಅಗ್ನಿಶಾಮಕ ದಳಕ್ಕೆ ತಕ್ಷಣ ಕರೆ ಬಂದಿದ್ದು, ಪೊಲೀಸ್ ತಂಡಗಳು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿವೆ. ಈ ಘಟನೆ ಕೇವಲ ಮೂರು ದಿನಗಳ ಹಿಂದೆ ನಡೆದ ಕೆಂಪು ಕೋಟೆ ಸ್ಫೋಟದ […]
ಭಾರತೀಯ ನ್ಯೂಸ್ ಚಾನೆಲ್‌ಗಳಷ್ಟು ಕೆಟ್ಟ ಚಾನೆಲ್ ಜಗತ್ತಿನಲ್ಲಿಯೇ ಇಲ್ಲ: ಖ್ಯಾತ ಪತ್ರಕರ್ತ ಎನ್. ರಾಮ್

ನವದೆಹಲಿ: ಭಾರತದ ನ್ಯೂಸ್ ಚಾನೆಲ್‌ಗಳು ಜಗತ್ತಿನಲ್ಲಿಯೇ ಅತ್ಯಂತ ಕೆಟ್ಟ ನ್ಯೂಸ್ ಚಾನೆಲ್‌ಗಳಾಗಿವೆ ಎಂದು ದಿ ಹಿಂದೂ ಪತ್ರಿಕೆಯ ಮಾಜಿ ಸಂಪಾದಕ ಮತ್ತು ಖ್ಯಾತ ಪತ್ರಕರ್ತ ಎನ್. ರಾಮ್ ಹೇಳಿದ್ದಾರೆ. ದಿ ವಯರ್ ವೆಬ್ ಪೋರ್ಟಲ್‌ನಲ್ಲಿ ಕರಣ್ ಥಾಪರ್ ಜೊತೆ ನಡೆಸಿದ ಮಾತುಕತೆಯ ವೇಳೆ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಿಹಾರ ಚುನಾವಣೆಗೆ ಸಂಬಂಧಿಸಿ ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಾ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಅಥವಾ ಗೃಹ ಸಚಿವ ಬಿಹಾರದಲ್ಲಿ ಯಾವುದಾದರೂ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದರೆ […]
ಬಿಜೆಪಿಗೆ ಬಿಹಾರ ಚುನಾವಣೆ ಗೆಲ್ಲುವ ವಿಶ್ವಾಸ: 501 ಕೆಜಿ ಲಡ್ಡೂ ಆರ್ಡರ್ ಮಾಡಿದ ಕೇಸರಿ ಪಡೆ

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸುವ ನಿರೀಕ್ಷೆಯಲ್ಲಿರುವ ಭಾರತೀಯ ಜನತಾ ಪಕ್ಷ, ಶುಕ್ರವಾರದ ಫಲಿತಾಂಶಕ್ಕೂ ಮುಂಚಿತವಾಗಿ 501 ಕೆಜಿ ಲಡ್ಡನ್ನು ಆರ್ಡರ್ ಮಾಡಿದೆ. ಬಿಹಾರ ವಿಧಾನಸಭೆಗೆ ಎರಡು ಹಂತಗಳಲ್ಲಿ, ನವೆಂಬರ್ 6 ಮತ್ತು 11 ರಂದು ಮತದಾನ ನಡೆದಿದ್ದು, ನವೆಂಬರ್ 14 ರಂದು ಫಲಿತಾಂಶ ಪ್ರಕಟವಾಗಲಿದೆ. 1951 ರಿಂದೀಚೆಗೆ ಬಿಹಾರ ಇತಿಹಾಸದಲ್ಲಿಯೇ ಅತಿ ಹೆಚ್ಚು ಅಂದರೆ ಶೇ. 66.91 ರಷ್ಟು ಮತದಾನವನ್ನು ದಾಖಲಿಸಿದೆ. ಬಹುತೇಕ ಎಕ್ಸಿಟ್ ಪೋಲ್ ಗಳು ಎನ್‌ಡಿಎ ಸರ್ಕಾರಕ್ಕೆ ಸ್ಪಷ್ಟ ಜನಾದೇಶವನ್ನು […]
ಕಸಿ ಮಾಡಿಸಿದ್ದ ‘ಸ್ತನ’ ತೆಗೆಸಲು ಮುಂದಾದ ನಟಿ ಶೆರ್ಲಿನ್ ಚೋಪ್ರಾ

ಅಡಿಯಿಂದ ಮುಡಿಯವರೆಗೂ ದೇಹದ ಎಲ್ಲಾ ಭಾಗಗಳಿಗೂ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡೇ ಫೇಮಸ್ ಆಗ್ತಿರೋ ಒಂದಿಷ್ಟು ನಟಿಯರು ಇದ್ದಾರೆ. ಅದ್ರಲ್ಲೂ ಬಾಲಿವುಡ್ನಲ್ಲಿ ಬ್ಯೂಟಿಗಳು ಎಂದುಕರೆಸಿಕೊಳ್ಳುತ್ತಿರುವ ಬಹುತೇಕ ನಟಿಮಣಿಗಳದ್ದೂ ಇದೇ ಸ್ಥಿತಿ. ದೇಹದ ಒಂದಲ್ಲೊಂದು ಭಾಗಗಳಿಗೆ ಇವರು ಕತ್ತರಿ ಹಾಕಿಸಿಕೊಂಡವರೇ. ನಟಿ ಶ್ರೀದೇವಿಯ ಮೂಗಿನ ಸರ್ಜರಿಯಿಂದ ಹಿಡಿದು ನಟಿ ಶೆರ್ಲಿನ್ ಚೋಪ್ರಾ, ರಾಖಿ ಸಾವಂತ್ ರಂಥ ನಟಿಯರು ದೇಹದ ಭಾಗಕ್ಕೇ ಕತ್ತರಿ ಹಾಕಿಸಿಕೊಂಡವರೇ. ಇತ್ತೀಚೆಗೆ ಸೋಷಿಯಲ್ ಮೀಡಿಯಾ ಸ್ಟಾರ್ ಉರ್ಫಿ ಜಾವೇದ್, ಎರಡು ತಿಂಗಳ ಒಳಗೆ ನನಗೆ ದೊಡ್ಡ ಸ್ತನಗಳು […]
ಪುರಸೊತ್ತಿಲ್ಲದೆ ಮಕ್ಕಳನ್ನು ಹುಟ್ಟಿಸುವುದಷ್ಟೇ ಮುಸ್ಲಿಮರ ಕೆಲಸ: ಪ್ರತಾಪ್ ಸಿಂಹ ವಿವಾದಾತ್ಮಕ ಹೇಳಿಕೆ

ಮೈಸೂರು: ನವದೆಹಲಿಯ ಕೆಂಪುಕೋಟೆ ಬಳಿ ಐ20 ಕಾರು ಸ್ಫೋಟ ಪ್ರಕರಣ ಸಂಬಂಧ ಮೈಸೂರಿನಲ್ಲಿ ಬಿಜೆಪಿಯ ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ. ಮುಸ್ಲಿಂ ವಿದ್ಯಾವಂತರೇ ಭಯೋತ್ಪಾದಕರಾಗಿ ಬದಲಾಗುತ್ತಿರೋದು ಬಹಳ ಅಪಾಯಕಾರಿ. ಮುಸ್ಲಿಮರ ಸಮಸ್ಯೆ ಬಡತನ ಅಲ್ಲ, ಅವರ ಒಳಗಿನ ಧರ್ಮಾಂಧತೆ, ಅವರ ಮನಃಸ್ಥಿತಿಯೇ ಇಂತಹ ಘಟನೆಗಳಿಗೆ ಕಾರಣ. ಪುರಸೊತ್ತಿಲ್ಲದೆ ಮಕ್ಕಳನ್ನು ಹುಟ್ಟಿಸುವುದಷ್ಟೇ ಅವರ ಕೆಲಸ. ವಿದ್ಯಾವಂತ ಮುಸ್ಲಿಮರು ಉಗ್ರರಾದರೆ ಅವರನ್ನ ಪತ್ತೆ ಹಚ್ಚುವುದು ಹೇಗೆ? ಹಿಂದೂ ರಾಷ್ಟ್ರ ಆಗಲು ಬಿಡಲ್ಲ ಎಂದಿರುವ ಸಿಎಂ ಸಿದ್ದರಾಮಯ್ಯ, ಈ […]
ಬಿಹಾರ ಚುನಾವಣೆ ಸಮಯದಲ್ಲೇ ಏಕೆ ಸ್ಫೋಟ ನಡೆಯಿತು..?: ಸಚಿವ ಜಮೀರ್ ಪ್ರಶ್ನೆ

ಬೆಂಗಳೂರು: ದೆಹಲಿಯ ಕೆಂಪುಕೋಟೆ ಆವರಣದಲ್ಲಿ ನಡೆದ ಕಾರ್ ಬಾಂಬ್ ಸ್ಫೋಟದ ಕುರಿತು ಶಂಕೆ ವ್ಯಕ್ತಪಡಿಸಿರುವ ಕರ್ನಾಟಕದ ಅಲ್ಪ ಸಂಖ್ಯಾತ ಸಚಿವ ಬಿಝಡ್ ಜಮೀರ್ ಅಹ್ಮದ್ ಖಾನ್ ‘ಬಿಹಾರ ಚುನಾವಣೆಯ ಒಂದು ದಿನ ಮೊದಲು ಏಕೆ ಸ್ಫೋಟ ನಡೆಯಿತು’ ಎಂದು ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಜಮೀರ್, ‘ಇಸ್ಲಾಂ ಧರ್ಮದಲ್ಲಿ ಭಯೋತ್ಪಾದನೆಗೆ ಅವಕಾಶ ಇಲ್ಲ. ಹಾಗಾಗಿ ಭಯೋತ್ಪಾದಕರು ಮುಸ್ಲಿಮರಾಗಲು ಸಾಧ್ಯವಿಲ್ಲ ಎಂದರು. ಅಂತೆಯೇ ದೆಹಲಿ ಕಾರ್ ಸ್ಫೋಟ ಪ್ರಕರಣ ಹಾಗೂ ಉಗ್ರಗಾಮಿ ಚಟುವಟಿಕೆಯ ಆರೋಪದಲ್ಲಿ ಬಂಧಿತರಾಗಿರುವ ವೈದ್ಯರ ನೆಟ್‌ವರ್ಕ್ […]