ಉಳ್ಳಾಲ: ವಿದ್ಯಾರ್ಥಿ ನಾಪತ್ತೆ

ಮಂಗಳೂರು: ಪಿ.ಎ ಕಾಲೇಜಿನ ವಿದ್ಯಾರ್ಥಿ ಮೊಹಮ್ಮದ್ ಶಾಮೀಲ್ ದಿನಾಂಕ: 17-04-2018ರಂದು ನಾಪತ್ತೆಯಾಗಿದ್ದಾನೆ. ದಿನಾಂಕ 18–04-2018 ರಂದು ಶ್ರೀ ಅಬ್ದುಲ್ ಶರೀಪ್ (58) ವರ್ಷ, ವಾಸ: ಪ್ರಾಂಶುಪಾಲರು ಪಿ.ಎ ಕಾಲೇಜು ನಡುಪದವು ಕೈರಂಗಳ ಗ್ರಾಮ ಉಳ್ಳಾಲ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ ರವರು ನೀಡಿದ ದೂರಿನ ಸಾರಂಶವೇನೆಂದರೆ ಪಿರ್ಯಾದಿದಾರರು ಕಾರ್ಯನಿರ್ವಹಿಸುತ್ತಿರುವ ಪಿ,ಎ ಕಾಲೇಜಿನ ವಿದ್ಯಾರ್ಥಿಯಾದ ಮೊಹಮ್ಮದ್ ಶಾಮೀಲ್ ಪ್ರಾಯ 21 ವರ್ಷ ತಂದೆ: ಸಲೀಂ ಕೆ,ಎಮ್ ವಾಸ:16/37 ಬೈತುಲ್ ಆಯಿಶಾ ಪಚ್ಚಕಾಡ್ ಕಾಸರಗೋಡು ಪೊಸ್ಟ , ಎಂಬವರು ಸುಮಾರು […]
ಕೆಂಪು ಕೋಟೆಯ ಬಳಿ ಆಗಿದ್ದೇನು?: ಸಿಸಿ ಟಿವಿ ವೀಡಿಯೋದಲ್ಲಿ ಸೆರೆ

ನವದೆಹಲಿ: ಕೆಂಪು ಕೋಟೆಯ ಬಳಿ ಸೋಮವಾರ ನಡೆದ ಕಾರು ಸ್ಪೋಟದ ಸಮಯದ ಸಿಸಿಟಿವಿ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸ್ಪೋಟಕ್ಕೂ ಮುನ್ನ ಟ್ರಾಫಿಕ್ ಸಿಗ್ನಲ್ ಬಳಿ ವಾಹನ ದಟ್ಟನೆಯನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ. ಸೋಮವಾರ ಸಂಜೆ 6.50ರ ಸುಮಾರಿಗೆ ಘಟನೆ ಜರುಗಿದ್ದು, ಸಿಸಿಟಿವಿ ದೃಷ್ಯಾವಳಿಗಳು ಘಟನೆ ನಡೆದ ಸಮಯವನ್ನು ಖಾತರಿಪಡಿಸಿವೆ. ಘಟನೆಯ ವೇಳೆ ಒಮ್ಮೆಗೆ ಬೆಂಕಿ ಹೊತ್ತಿಕೊಂಡಿದ್ದು, ಜನರು ಭಯಭೀತರಾಗಿ ಜೀವ ಭಯದಿಂದ ಗಾಬರಿಗೊಳಗಾಗಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಸ್ಪೋಟಗೊಂಡ ಕಾರನ್ನು ಫರಿದಾಬಾದ್‌ನ ಅಲ್ –ಫಲಾಹ್ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ […]
ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ಮಾಯಗಾತಿ: ಲಾಡ್ಜ್‌ಗೆ ಹೋಗಿ ಹಣ, ಚಿನ್ನ ಕಳೆದುಕೊಂಡ ಯುವಕ!

ಬೆಂಗಳೂರು: ಡೇಟಿಂಗ್ ಆ್ಯಪ್ ಮುಖಾಂತರ ಪರಿಚಯವಾದ ಯುವಕನನ್ನು ಯುವತಿಯೊಬ್ಬಳು ಲಾಡ್ಜ್‌ಗೆ ಕರೆದೊಯ್ದು ಪ್ರಜ್ಞೆ ತಪ್ಪಿಸಿ ಆತನ ಬಳಿ ಇದ್ದ 58 ಗ್ರಾಂ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾದ ಘಟನೆ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತಮಿಳುನಾಡಿನ ಅವಿನಾಶ್ ಕುಮಾರ್ ವಂಚನೆಗೊಳಗಾದವ. ಈತ ನೀಡಿದ ದೂರಿನ ಮೇರೆಗೆ ಕವಿಪ್ರಿಯಾ ಎಂಬಾಕೆಯ ವಿರುದ್ಧ ಕಳ್ಳತನ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಶೋಧಕಾರ್ಯ ನಡೆಸುತ್ತಿದ್ದಾರೆ. ಮದ್ಯ ಪಾರ್ಟಿ ಮಾಡಿದ್ದ ಜೋಡಿ: ಪೀಣ್ಯದ ನಾಗಸಂದ್ರದ ಪಿಜಿ(ಪೇಯಿಂಗ್ ಗೆಸ್ಟ್)ಯೊಂದರಲ್ಲಿ ವಾಸವಾಗಿದ್ದ ಅವಿನಾಶ್, ನಗರದ […]
ಸ್ಕ್ಯಾನಿಂಗ್‌ಗೆ ಬಂದ ಹೆಣ್ಮಕ್ಕಳಿಗೆ ಲೈಂಗಿಕ ಕಿರುಕುಳ: ಖಾಸಗಿ ಅಂಗ ಮುಟ್ಟಿ ಕೌರ್ಯ ಮೆರೆದಿದ್ದ ರೆಡಿಯಾಲಜಿಸ್ಟ್ ವಿರುದ್ಧ FIR

ಆನೇಕಲ್: ಸ್ಕ್ಯಾನಿಂಗ್‌ಗೆ ಬಂದ ಹೆಣ್ಣು ಮಕ್ಕಳ ಖಾಸಗಿ ಅಂಗ ಮುಟ್ಟಿ ರೆಡಿಯಾಲಜಿಸ್ಟ್ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್‌ನಲ್ಲಿ ನಡೆದಿದೆ. ಆನೇಕಲ್ ಪಟ್ಟಣದ ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ರೆಡಿಯಾಲಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ ಜಯಕುಮಾರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇತ್ತೀಚಿಗೆ ಮಹಿಳೆಯೋರ್ವರು ಹೊಟ್ಟೆ ನೋವೆಂದು ಪತಿಯೊಂದಿಗೆ ಸ್ಕ್ಯಾನಿಂಗ್ ಸೆಂಟರ್‌ಗೆ ಆಗಮಿಸಿದ್ದರು. ಈ ವೇಳೆ ಸ್ಕ್ಯಾನಿಂಗ್ ಮಾಡುವಾಗ ಮೈಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಜೊತೆಗೆ ಖಾಸಗಿ ಅಂಗಗಳಿಗೆ ಕೈ ಹಾಕಿ, ಕಾಮಾಂಧ ಡಾಕ್ಟರ್ ವಿಕೃತಿ […]
ಜನಪ್ರಿಯ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ | ಪಿಸಿಯೋಥರಪಿ ಮತ್ತು ಅಲೈಡ್ ಹೆಲ್ತ್ ಸೈನ್ಸ್ ಕಾಲೇಜು ಉದ್ಘಾಟನೆ

ಮಂಗಳೂರು: ಜನಪ್ರಿಯ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಇದರ ಪಿಸಿಯೋಥರಪಿ ಮತ್ತು ಅಲೈಡ್ ಹೆಲ್ತ್ ಸೈನ್ಸ್ ಕಾಲೇಜು ಇದರ ಪ್ರಥಮ ಮಂಗಳೂರು ಘಟಕದ ಉದ್ಘಾಟನೆಯನ್ನು ಕನಚೂರು ಹೆಲ್ತ್ ಸೈನ್ಸ್ ಅಡ್ವೈಸರಿ ಕೌನ್ಸಿಲ್ ಇದರ ಚೇರ್ಮೇನ್ ಡಾ ಮುಹಮ್ಮದ್ ಇಸ್ಮಾಯಿಲ್ ಹೆಜಮಾಡಿ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತಾಡಿದ ಅವರು ಜನಪ್ರಿಯ ಇನ್ಸ್ಟಿಟ್ಯೂಟ್ ಚೇರ್ಮೇನ್ ಬಶೀರ್, ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಬೆಳೆದವರು, ಸಮಾಜಕ್ಕೆ ಅವರ ಸೇವೆ ಶ್ಲಾಘನೀಯ ಎಂದು ಹೇಳಿದರು. ಪಡೀಲ್ ನಲ್ಲಿರುವ ಜನಪ್ರಿಯ ಮಲ್ಟಿಸ್ಪೆಷಲಿಟಿ ಆಸ್ಪತ್ರೆಯಲ್ಲಿ ನಡೆದ ಉದ್ಘಾಟನಾ […]
ಸುರತ್ಕಲ್–ಬಿ.ಸಿ.ರೋಡ್ ಹೆದ್ದಾರಿ ಎನ್‌ಎಚ್‌ಎಐಗೆ: ಸಂಸದ ಕ್ಯಾ.ಬ್ರಿಜೇಶ್ ಚೌಟ

ಮಂಗಳೂರು: ಸುರತ್ಕಲ್–ಮಂಗಳೂರು– ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯು ಪ್ರಸ್ತುತ ನವಮಂಗಳೂರು ಬಂದರು ರಸ್ತೆ ಕಂಪನಿ ಅಧೀನದಲ್ಲಿದ್ದು, ಇದರ ನಿರ್ವಹಣೆಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಅನುದಾನ ಒದಗಿಸುತ್ತಿಲ್ಲ. ಈ ಹೆದ್ದಾರಿ ಶೀಘ್ರವೇ ಎನ್‌ಎಚ್‌ಎಐಗೆ ಹಸ್ತಾಂತರವಾಗಲಿದ್ದು, ನಿರ್ವಹಣೆ ಸಮಸ್ಯೆಗೆ ಮುಕ್ತಿ ಸಿಗಲಿದೆ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ತಿಳಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಅಭಿವೃದ್ಧಿ ಸಮನ್ವಯ ಸಮಿತಿ ಮತ್ತು ಉಸ್ತುವಾರಿ (ದಿಶಾ) ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಈ ಹೆದ್ದಾರಿಯ ಬ್ಲ್ಯಾಕ್ ಸ್ಪಾಟ್‌ಗಳನ್ನು ಸರಿಪಡಿಸಿ ಚತುಷ್ಫಥವನ್ನಾಗಿ […]
ಉಳ್ಳಾಲ ದರ್ಗಾ ಕಮಿಟಿಯಲ್ಲಿ ಭ್ರಷ್ಟಾಚಾರ ಆರೋಪ: ಅಧ್ಯಕ್ಷ ಬಿಜಿ ಹನೀಫ್ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ಸದಸ್ಯರ ಆಗ್ರಹ

ಮಂಗಳೂರು: ಉಳ್ಳಾಲದ ಸಯ್ಯದ್ ಮದನಿ ದರ್ಗಾದಲ್ಲಿ ಮತ್ತೆ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ಎರಡು ವರ್ಷಗಳ ಹಿಂದೆ ಆಡಳಿತಕ್ಕೆ ಬಂದು ಅಧ್ಯಕ್ಷರಾಗಿರುವ ಬಿ.ಜಿ ಹನೀಫ್ ಹಾಜಿ ಮತ್ತು ಪದಾಧಿಕಾರಿಗಳು ಸ್ವಜನ ಪಕ್ಷಪಾತ ಮತ್ತು ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಇದರ ಬಗ್ಗೆ ವಕ್ಫ್ ಇಲಾಖೆಗೆ ದೂರಿತ್ತರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದರ್ಗಾ ಕಮಿಟಿಯ ಸದಸ್ಯರೇ ದೂರಿದ್ದಾರೆ. ಸುದ್ದಿಗೋಷ್ಟಿ ನಡೆಸಿದ ಅವರು, ವಕ್ಫ್ ಇಲಾಖೆಗೆ ಸೇರಿದ ಉಳ್ಳಾಲದ ಸಯ್ಯದ್ ಮದನಿ ದರ್ಗಾ ಮತ್ತು ಜುಮಾ ಮಸೀದಿಯ ಆಡಳಿತದಲ್ಲಿ ಭಾರೀ ಅವ್ಯವಹಾರ ಆಗುತ್ತಿದ್ದು, […]
ಮಂಗಳೂರು | ದೆಹಲಿ ಸ್ಫೋಟ ಬೆನ್ನಲ್ಲೆ ದ.ಕ ಪೊಲೀಸರು ಅಲರ್ಟ್: ಆಯಕಟ್ಟಿನ ಜಾಗಗಳಲ್ಲಿ ತಪಾಸಣೆ, ಪ್ರವಾಸಿ ತಾಣಗಳಲ್ಲಿ ಬಿಗು ಭದ್ರತೆ

ಮಂಗಳೂರು: ರಾಜಧಾನಿ ದೆಹಲಿಯಲ್ಲಿ ನಡೆದ ಕಾರು ಸ್ಫೋಟ ಘಟನೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆ ಅಲರ್ಟ್ ಆಗಿದ್ದು, ಹೆಚ್ಚುವರಿ ತಪಾಸಣೆಗೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರಂತೆ, ಜಿಲ್ಲೆಯಾದ್ಯಂತ ರಾತ್ರಿ ವೇಳೆ ಪೊಲೀಸ್ ಅಧಿಕಾರಿಗಳು ಕಟ್ಟುನಿಟ್ಟಾದ ಗಸ್ತು ನಿರ್ವಹಿಸುವಂತೆ ಇಲಾಖೆಯಿಂದ ಸ್ಪಷ್ಟ ಸೂಚನೆ ನೀಡಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಅಧಿಕಾರಿ/ಸಿಬ್ಬಂದಿಗಳನ್ನು picketing point ಕರ್ತವ್ಯದಲ್ಲಿ ವಹಿಸಲಾಗುತ್ತದೆ. ನಿಯೋಜಿಸಲಾಗಿದೆ. ಜಿಲ್ಲೆಯ ಮುಖ್ಯ ಸ್ಥಳಗಳಲ್ಲಿ ನಾಕಾಬಂದಿಗಳನ್ನು ಅಳವಡಿಸಿ ಕಟ್ಟುನಿಟ್ಟಾಗಿ ತಪಾಸಣೆ ನಡೆಸಲಾಗುತ್ತಿದೆ. ಜಿಲ್ಲೆಯ ಪ್ರವಾಸಿ ತಾಣಗಳು, ಧಾರ್ಮಿಕ ಸ್ಥಳಗಳು, ಮುಖ್ಯ ಸರ್ಕಾರಿ […]
ಮಂಗಳೂರು, ಪುತ್ತೂರಿನಲ್ಲಿ ವಾಹನ ಖರೀದಿಯಲ್ಲಿ ಭರ್ಜರಿ ಹೆಚ್ಚಳ: ಕಾರಣ ಏನು ಗೊತ್ತಾ?

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ವಾಹನ ಖರೀದಿಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ದಸರಾದಿಂದ ಆರಂಭಗೊಂಡ ವಾಹನ ಮಾರಾಟ ದೀಪಾವಳಿಯ ಸಮಯದಲ್ಲಿ ಗರಿಷ್ಠ ಮಟ್ಟವನ್ನು ತಲುಪಿದ್ದು, ಈಗಲೂ ಖರೀದಿ ಮುಂದುವರಿಸಿದೆ. ಜಿಎಸ್‌ಟಿ ದರಗಳಲ್ಲಿನ ಕಡಿತ ಮತ್ತು ಹಬ್ಬದ ಆಕರ್ಷಕ ಕೊಡುಗೆಗಳು ಗ್ರಾಹಕರನ್ನು ಶೋರೂಂಗಳತ್ತ ಆಕರ್ಷಿಸಿವೆ. ಹೊಸ ವರ್ಷದವರೆಗೂ ವಾಹನ ಖರೀದಿ ಮುಂದುವರಿಯುವ ನಿರೀಕ್ಷೆ ಹೊಂದಿದೆ. ಮಂಗಳೂರು, ಉಡುಪಿ, ಪುತ್ತೂರು ಮತ್ತು ಬಂಟ್ವಾಳ ಪ್ರದೇಶಗಳಲ್ಲಿ ಖರೀದಿಸಿದ ವಾಹನಗಳನ್ನು ನೋಂದಾಯಿಸಲಾಗಿದೆ. ಆದರೆ ಹಲವಾರು ನೋಂದಣಿಗಳು ಇನ್ನೂ ಪ್ರಕ್ರಿಯೆಯಲ್ಲಿವೆ. ಡೀಲರ್‌ಶಿಪ್‌ಗಳ […]
Exit Polls: ಬಿಹಾರದಲ್ಲಿ ಯಾರಿಗೆ ಬಹುಮತ: ಯಾವ ಸಮೀಕ್ಷೆ ಏನು ಹೇಳುತ್ತೆ?

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆ 2ನೇ ಹಂತದ ಮತದಾನ ಇಂದು ಮುಕ್ತಾಯವಾಗಿದ್ದು, ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗಿದೆ. ಬಿಹಾರದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ)ಕ್ಕೆ ಸ್ಪಷ್ಟ ಬಹುಮತ ಸಿಗಲಿದೆ ಎಂದು ಎಕ್ಸಿಟ್ ಪೋಲ್ ಭವಿಷ್ಯ ನುಡಿದಿವೆ. ರಾಜ್ಯದಲ್ಲಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರಕ್ಕೆ ದಾರಿ ಮಾಡಿಕೊಟ್ಟಿದೆ. ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನ್ ಬಣವು ಎನ್‌ಡಿಎಗಿಂತ ಹಿಂದುಳಿದಿದೆ ಎಂದು ಸಮೀಕ್ಷೆಗಳು ತಿಳಿಸಿವೆ. ಯಾವ ಸಮೀಕ್ಷೆ ಏನು ಹೇಳುತ್ತೆ? ಪೀಪಲ್ಸ್ ಪಲ್ಸ್ಎನ್‌ಡಿಎ 133-159 ಸ್ಥಾನಮಹಾಘಟಬಂಧನ್ 75-101 ಪೀಪಲ್ಸ್ ಇನ್‌ಸೈಟ್‌ಬಿಜೆಪಿ 68-72ಜೆಡಿ(ಯು) 55-60ಆರ್‌ಜೆಡಿ […]