Flash News

ಅಣ್ಣನನ್ನು ಕೊಂದು ಗರ್ಭಿಣಿ ಅತ್ತಿಗೆ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ 15 ವರ್ಷದ ಬಾಲಕ

ಜುನಾಗಢ: ಗುಜರಾತ್​ನ ಜುನಾಗಢದಲ್ಲಿ ಭಯಾನಕ ಘಟನೆ ವರದಿಯಾಗಿದೆ. 15 ವರ್ಷದ ಬಾಲಕನೊಬ್ಬ ಅಣ್ಣನನ್ನು ಕೊಂದು, ಗರ್ಭಿಣಿ ಅತ್ತಿಗೆ ಮೇಲೆ ಅತ್ಯಾಚಾರವೆಸಗಿರುವ ಘಟನೆ ಎಲ್ಲರನ್ನು ಬೆಚ್ಚಿಬೀಳಿಸಿದೆ. ಅಕ್ಟೋಬರ್ 16ರಂದು ಈ ಜೋಡಿ ಕೊಲೆ ನಡೆದಿದೆ. ಸುಮಾರು ಎರಡು ವಾರಗಳ ನಂತರ ಬಿಹಾರದಲ್ಲಿರುವ ಮಹಿಳೆಯ ಕುಟುಂಬವು ಅನುಮಾನ ವ್ಯಕ್ತಪಡಿಸಿದ ನಂತರ ಬೆಳಕಿಗೆ ಬಂದಿದೆ. ಆರೋಪಿ ತನ್ನ ಅಣ್ಣನ ನಡುವೆ ಜಗಳ ಮಾಡಿದ್ದ, ಕೋಪದಲ್ಲಿ ಅಣ್ಣನ ತಲೆಗೆ ಕಬ್ಬಿಣದ ರಾಡ್​​ನಿಂದ ಹೊಡೆದು ಹಲ್ಲೆ ನಡೆಸಿದ್ದಾನೆ. ಆತ ಕುಸಿದುಬಿದ್ದ ಬಳಿಕ, ಅತ್ತಿಗೆಯ ಮೇಲೆ […]

ಪಥಸಂಚಲನ ವಿಚಾರದಲ್ಲಿ ಉದ್ವೇಗದ ಹೇಳಿಕೆ ನೀಡಬೇಡಿ: ಬಿಜೆಪಿ ನಾಯಕರಿಗೆ RSS ಸೂಚನೆ!

ಬೆಂಗಳೂರು: ಆರ್‌ಎಸ್‌ಎಸ್‌ ಹಾಗೂ ರಾಜ್ಯ ಸರ್ಕಾರದ ಮಧ್ಯೆ ನಡೆಯುತ್ತಿರುವ ಜಟಾಪಟಿ ವಿಚಾರದಲ್ಲಿ ಉದ್ವೇಗದ ಹೇಳಿಕೆ ನೀಡಬೇಡಿ. ಪಥಸಂಚಲನ ವಿಚಾರಕ್ಕೂ ಪ್ರತಿಕ್ರಿಯಿಸಬೇಡಿ ಎಂದು ಸಂಘದ ಪ್ರಮುಖರು ಬಿಜೆಪಿ ನಾಯಕರಿಗೆ ಸೂಚನೆ ನೀಡಿದ್ದಾರೆ. RSS ವಿರೋಧಿಸುತ್ತಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರದ ಸಚಿವರ ಹೇಳಿಕೆಗಳಿಗೆ ಪ್ರತ್ಯುತ್ತರಿಸುವ ಭರದಲ್ಲಿ ಆತುರದ, ಉದ್ವೇಗದ ಹೇಳಿಕೆ ನೀಡಿ ಕಾಂಗ್ರೆಸ್ ಜಾಲದಲ್ಲಿ ಸಿಕ್ಕಿಬೀಳಬೇಡಿ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಬಿಜೆಪಿ ನಾಯಕರಿಗೆ ಸೂಚಿಸಿದೆ. ರಾಜ್ಯದಲ್ಲಿ ಆರೆಸ್ಸೆಸ್‌ ಪಥ ಸಂಚಲನದ ಹಿನ್ನೆಲೆಯಲ್ಲಿ ಎದ್ದಿರುವ ವಿವಾದ ಪಥ ಸಂಚಲನಕ್ಕೆ ಅನುಮತಿ […]

ಉಪ ಮುಖ್ಯಮಂತ್ರಿಯಾಗಲು ನಾನು ಸಿದ್ಧ: ಜಮೀರ್‌ ಅಹ್ಮದ್‌ ಖಾನ್‌

ಹಾವೇರಿ: ಒಂದು ವೇಳೆ ಹೈಕಮಾಂಡ್ ನಿರ್ಧರಿಸಿದರೆ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ನಾನು ಸಿದ್ಧನಿದ್ದೇನೆ. ಸಚಿವ ಸ್ಥಾನ ತ್ಯಾಗಕ್ಕೂ ಸಿದ್ಧನಾಗಿದ್ದೇನೆ. ಇದ್ಯಾವುದೂ ಇಲ್ಲವೆಂದರೆ ಕೇವಲ ಕಾರ್ಯಕರ್ತನಾಗಿ ಪಕ್ಷದ ಕೆಲಸ ಮಾಡಲು ಸಿದ್ಧ ಎಂದು ವಸತಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿ, ನ.26ರಂದು ಸಿದ್ಧರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ, ಡಿಸಿಎಂ ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ಧಾರೆ, ಸತೀಶ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷರಾಗಲಿದ್ದಾರೆ ಎನ್ನುವುದು ಕೇವಲ ವದಂತಿ ಹೊರತು ವಾಸ್ತವ ಸಂಗತಿಗಳಲ್ಲ ಎಂದರು. […]

ಬೀಡಿ ಸಾಮ್ರಾಜ್ಯದ ಮಾಲೀಕನ ದುರಂತ ಅಂತ್ಯ: ತಂದೆಗೆ ಗುಂಡಿಕ್ಕಿದ ಮಗ

ಭಾರತದ ಪ್ರಸಿದ್ಧ ಬೀಡಿ ಬ್ರಾಂಡ್‌ ದಿನೇಶ್ ಬೀಡಿಯ ಸ್ಥಾಪಕ, ಬೀಡಿ ಉದ್ಯಮಿಯನ್ನು ಅವರ ಮಗನೇ ಗುಂಡಿಕ್ಕಿ ಹತ್ಯೆ ಮಾಡಿದಂತಹ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮಥುರಾದ ವೃಂದಾವನ ನಗರದಲ್ಲಿ ನಡೆದಿದೆ. ಮಗ ಮದ್ಯ ಸೇವಿಸುತ್ತಿದ್ದಿದ್ದಕ್ಕೆ ತಂದೆ ಆಕ್ಷೇಪಿಸಿದ್ದೇ ಈ ಕೊಲೆಗೆ ಕಾರಣ ಎಂದು ತಿಳಿದು ಬಂದಿದೆ. 68 ವರ್ಷದ ಉದ್ಯಮಿ ಸುರೇಶ್ ಚಂದ್ ಅಗರ್ವಾಲ್ ಹೀಗೆ ಮಗನ ಕೈಯಲ್ಲೇ ಕೊಲೆಯಾದ ಉದ್ಯಮಿ. ಅವರ 45 ವರ್ಷದ ಪ್ರಾಯದ ಮಗ ನರೇಶ್ ಕುಡಿದ ಮತ್ತಿನಲ್ಲೇ ತಂದೆಗೆ ಗುಂಡಿಟ್ಟಿದ್ದು, ಬಳಿಕ […]

ನಮ್ಮ ಮೇಲಿರುವ ಆರೋಪಗಳು ಸುಳ್ಳು ಎಂದ ದರ್ಶನ್ & ಗ್ಯಾಂಗ್‌: ಕೋರ್ಟ್‌ನಲ್ಲಿ ಇಂದು ಏನಾಯ್ತು?

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆಗೆ ಸಂಬಂಧಿಸಿದಂತೆ ನಮ್ಮ ವಿರುದ್ಧ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿರುವ ಎಲ್ಲಾ ಆರೋಪಗಳು ಸುಳ್ಳು ಎಂದು ಕೋರ್ಟ್‌ ಮುಂದೆ ಆರೋಪಿಗಳು ನುಡಿದಿದ್ದಾರೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳ ವಿರುದ್ಧ ಇಂದು ಸೆಷನ್ಸ್‌ ಕೋರ್ಟ್‌ನಲ್ಲಿ ಆರೋಪ ನಿಗದಿ ಮಾಡಲಾಯಿತು. ಈ ವೇಳೆ ನ್ಯಾಯಾಧೀಶರು ಕೇಳಿದ ಪ್ರಶ್ನೆಗೆ ನಾವು ಹತ್ಯೆ ಮಾಡಿಲ್ಲ ಎಂದು ಆರೋಪಿಗಳು ಹೇಳಿದ್ದಾರೆ. ಕೋರ್ಟ್‌ ಒಳಗಡೆ ಆರೋಪಿಗಳನ್ನು ಅವರ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿರುವ ಆರೋಪಿ ಸಂಖ್ಯೆಗೆ ಅನುಗುಣವಾಗಿ ನಿಲ್ಲುವಂತೆ ಜಡ್ಜ್‌ ಸೂಚಿಸಿದರು. ಈ ಸೂಚನೆಯಂತೆ ಎ1 […]

ರಾಹುಲ್‌ ಗಾಂಧಿ, ತೇಜಸ್ವಿ ಯಾದವ್‌, ಅಖಿಲೇಶ್‌ ಯಾದವ್‌: ಮಹಾತ್ಮ ಗಾಂಧಿ ಹೇಳಿದ ಮೂರು ಮಂಗಗಳು ಎಂದ ಆದಿತ್ಯನಾಥ್‌!

ನವದೆಹಲಿ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೋಮವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಆರ್‌ಜೆಡಿಯ ತೇಜಸ್ವಿ ಯಾದವ್ ಮತ್ತು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನು “ಇಂಡಿಯಾ ಮೈತ್ರಿಕೂಟದ ಮೂರು ಮಂಗಗಳು” ಎಂದು ಕರೆದಿದ್ದಾರೆ. ದರ್ಭಾಂಗಾ ಜಿಲ್ಲೆಯ ಕಿಯೋಟಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಹಿರಿಯ ಬಿಜೆಪಿ ನಾಯಕ, “ಮೂರು ಹೊಸ ಮಂಗಗಳು” ಆಡಳಿತಾರೂಢ ಎನ್‌ಡಿಎ ಮಾಡುತ್ತಿರುವ ಎಲ್ಲಾ ಒಳ್ಳೆಯ ಕೆಲಸಗಳ ಬಗ್ಗೆ ನೋಡಲು ಸಾಧ್ಯವಾಗಲಿಲ್ಲ, ಕೇಳಲು ಇಷ್ಟವಿರಲಿಲ್ಲ ಮತ್ತು ಮಾತನಾಡಲು ಸಾಧ್ಯವಾಗುತ್ತಿಲ್ಲ […]

ನೆಲ್ಯಾಡಿ ಮೂಲದ ಮಿನು ಜೋಸ್​ಗೆ ದುಬೈನಲ್ಲಿ “ಮಿಸೆಸ್ ಮಂಗಳೂರು ದಿವಾ 2025” ಕಿರೀಟ

ನೆಲ್ಯಾಡಿ: ಪ್ರಿಯಾ ಫ್ಯಾಶನ್ಸ್ ಸಂಸ್ಥೆಯ ಆಯೋಜನೆಯಲ್ಲಿ ಹಾಗೂ ಗೋಶನ್ ಈವೆಂಟ್ ಮೀಡಿಯಾ ಅವರ ಸಹಯೋಗದಲ್ಲಿ ದುಬೈನಲ್ಲಿ ನಡೆದ ಮಿಸೆಸ್​ ಮಂಗಳೂರು ದಿವಾ 2025 ಸ್ಪರ್ಧೆಯಲ್ಲಿ ಜಿಲ್ಲೆಯ ನೆಲ್ಯಾಡಿ ನಿವಾಸಿ, ಪ್ರಸ್ತುತ ದುಬೈಯಲ್ಲಿರುವ ಮಿನು ಜೋಸ್ ಅವರು ಈ ಬಾರಿಯ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಕೊಕ್ಕಡ ಸಮೀಪದ ಶಿಶಿಲದಲ್ಲಿ ಜನಿಸಿದ ಮಿನು ಜೋಸ್, ನೆಲ್ಯಾಡಿದ ಯುವಕನನ್ನು ವಿವಾಹವಾಗಿ ಪ್ರಸ್ತುತ ದುಬೈನಲ್ಲಿ ವಾಸವಾಗಿದ್ದಾರೆ. ಮಿನು ಜೋಸ್ ಅವರ ಪತಿ ಅನೂಪ್ ಜೋಸ್, ಮಗಳು ಐಝಲ್ ಎಲಿಜಬೆತ್. ಆಕರ್ಷಕ ವೇಷಭೂಷಣೆ, ಆತ್ಮವಿಶ್ವಾಸಭರಿತ ಪ್ರದರ್ಶನ […]

ಚಿಕನ್ ಫ್ರೈ ವಿಚಾರದಲ್ಲಿ ಶುರುವಾದ ಗಲಾಟೆ: ರಣರಂಗವಾಯ್ತು ಮದುವೆ ಮನೆ

ಉತ್ತರ ಪ್ರದೇಶ: ಮದುವೆ ಮನೆಯ ಊಟದಲ್ಲಿ ಚಿಕನ್ ಫ್ರೈ ಸರಿಯಾಗಿ ಸಿಗಲಿಲ್ಲ ಎಂಬ ಕಾರಣಕ್ಕೆ ಗಂಡಿನ ಕಡೆಯವರು ಜಗಳ ಶುರು ಮಾಡಿದ್ದು ಕೊನೆಗೆ ಕೋಳಿ ಜಗಳ ದೊಡ್ಡದಾಗಿ ಮದುವೆ ಮನೆ ಯುದ್ಧ ಭೂಮಿಯಾಗಿ ಮಾರ್ಪಟ್ಟ ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ನಡೆದಿದ್ದು ಇದೀಗ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಂದಹಾಗೆ ಎರಡು ದಿನಗಳ ಹಿಂದೆ ಉತ್ತರಪ್ರದೇಶದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಮೊದಲಿಗೆ ಹೆಣ್ಣಿನ ಕಡೆಯವರು ಗಂಡಿನ ಕಡೆಯವರಿಗೆ ಸರಿಯಾದ ಪ್ರಮಾಣದಲ್ಲಿ […]

ʻಕೊಹಿನೂರ್‌ ವಜ್ರ ಸೇರಿ ನಮ್ಮಿಂದ ಲೂಟಿ ಮಾಡಿದ್ದನ್ನು ಹಿಂದಿರುಗಿಸಿʼ; ಬ್ರಿಟಿಷ್ ಪ್ರವಾಸಿಗರ ಜೊತೆ ಕೇರಳ ಮಹಿಳೆಯರ ಕ್ಯಾತೆ

ಕೊಯಮತ್ತೂರು: ʻಬ್ರಿಟಿಷರು ನಮ್ಮಿಂದ ಸಾಂಬಾರು ಪದಾರ್ಥಗಳು ಹಾಗೂ ಅತ್ಯಮೂಲ್ಯ ವಸ್ತುವಾದ ಕೊಹಿನೂರು ಡೈಮಂಡ್‌ ಲೂಟಿ ಮಾಡಿದ್ದೀರಾ ಅದನ್ನು ಎಂದು ಹಿಂದಿರುಗಿಸುವಿರುʼ ಎಂದು ಭಾರತಕ್ಕೆ ಪ್ರವಾಸಕ್ಕೆಂದು ಬಂದಿದ್ದ ಬ್ರಿಟಿಷ್‌ ಟೂರಿಸ್ಟ್‌ಗಳ ಜೊತೆ ಕೇರಳದ ಸ್ಥಳೀಯ ಮಹಿಳೆಯರು ಕ್ಯಾತೆ ತೆಗೆದ ವಿಡಿಯೋ ವೈರಲ್‌ ಆಗಿದೆ. ತನ್ನ ಸಂಗಾತಿಯೊಂದಿಗೆ ಏಷ್ಯಾದಾದ್ಯಂತ ಬ್ಯಾಕ್‌ಪ್ಯಾಕ್ ಪ್ರವಾಸದಲ್ಲಿರುವ ಬ್ರಿಟಿಷ್ ಪ್ರವಾಸಿ ಎಮ್ಮಾ ಎಂಬುವವರು, ಕೇರಳಕ್ಕೆ ತೆರಳಿದ್ದ ವೇಳೆ ತಮಗಾದ ಮುಜುಗರ ಪ್ರಕರಣವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಕೇರಳದ ಮಹಿಳೆಯರು ವಸಾಹತು ಶಾಹಿ ಸಮಯದಲ್ಲಾಗಿದ್ದ ಲೂಟಿ ಬಗ್ಗೆ ನೆನಪಿಸಿದರು […]

9 ವರ್ಷ ಕಿರಿಯವನ ಜೊತೆ ನಟಿ ಝರೀನ್ ಖಾನ್​ ಡೇಟಿಂಗ್..!

ತಮ್ಮ ಮೊದಲ ಚಿತ್ರದಿಂದಲೇ ಪ್ರೇಕ್ಷಕರ ಹೃದಯದಲ್ಲಿ ಮನೆ ಮಾಡಿದ ನಟಿ ಝರೀನ್ ಖಾನ್. ಅವರ ನಟನೆ ಮತ್ತು ನೋಟ ಎಲ್ಲರ ಹೃದಯದಲ್ಲಿ ಮನೆ ಮಾಡಿತು. ತಮ್ಮ ಮೊದಲ ಚಿತ್ರದಲ್ಲೇ ಭಾರಿ ಯಶಸ್ಸನ್ನು ಪಡೆದ ನಂತರ, ಅವರು ಅನೇಕ ಚಲನಚಿತ್ರಗಳಲ್ಲಿ ನಟಿಸಿದರು. ಝರೀನ್ ಖಾನ್ ತಮ್ಮ ಚಿತ್ರಗಳಿಗಿಂತ ಹೆಚ್ಚಾಗಿ ತಮ್ಮ ವೈಯಕ್ತಿಕ ಜೀವನಕ್ಕಾಗಿ ಸುದ್ದಿಯಲ್ಲಿದ್ದರು. ಈಗ ಅವರ ಹೆಸರು ಈಗ ಒಬ್ಬ ನಟನೊಂದಿಗೆ ತಳುಕು ಹಾಕಿಕೊಂಡಿದೆ. ಅವರು ಡೇಟ್ ಮಾಡುತ್ತಿರುವ ನಟ ಅವರಿಗಿಂತ 9 ವರ್ಷ ಕಿರಿಯ ಎಂದು […]